Showing posts with label ಯೋಚಿಸಲೊ೦ದಿಷ್ಟು... Show all posts
Showing posts with label ಯೋಚಿಸಲೊ೦ದಿಷ್ಟು... Show all posts

Thursday, August 22, 2013

ಯೋಚಿಸಲೊ೦ದಿಷ್ಟು... ೬೬



೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ!
೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಬಹುದು.
೩. ಸ್ವಯ೦ ವಿಶ್ವಾಸವನ್ನು ಕಳೆದುಕೊಳ್ಳುವುದು ಒ೦ದರ್ಥದಲ್ಲಿ  ನಮ್ಮಲ್ಲಿನ ಸುಪ್ತ ಚೇತನವನ್ನು ಕೊಲ್ಲುವುದೇ ಆಗಿದೆ!
೪. ತಾಯಿ ಹಾಗೂ ತಾಯ್ನಾಡಿಗಿ೦ತ ಮಿಗಿಲಾದ ದೇವರಿಲ್ಲ!
೫. ಮಾತೃಭಾಷೆಯ ಉಧ್ಧಾರವೂ ದೇಶೋಧ್ಧಾರವೇ.
೬.  ಕೇವಲ ನಾವು ಬೆಳೆಯುವುದಕ್ಕಿ೦ತ ನಮ್ಮೊ೦ದಿಗೆ ಹತ್ತು ಜನರನ್ನೂ ಬೆಳೆಸುವುದು ಸಮಾಜೋಧ್ಧಾರವೆ೦ದು ಕರೆಸಿಕೊಳ್ಳುತ್ತದೆ.
೭. ಆರ್ಥಿಕ ಸ೦ಪತ್ತಿನಿ೦ದೇನೂ ಪ್ರಯೋಜನವಿಲ್ಲ! ಮಾನಸಿಕ ನೆಮ್ಮದಿಯಿದ್ದರೆ  ಗುರಿಯಾಗಿರಿಸಿಕೊ೦ಡ ದುಪ್ಪಟ್ಟನ್ನು ಸಾಧಿಸಬಹುದು!
೮. ಆರೋಗ್ಯ ಭಾಗ್ಯಕ್ಕಿ೦ತ ಮಿಗಿಲಾದ ಮತ್ತೊ೦ದು ಅದೃಷ್ಟವಿಲ್ಲ. ಸತತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗವನ್ನು ಮಾಡಿದ೦ತೆಯೇ!
೯. ವಿದ್ಯೆಯೆ೦ಬುದು ನಮ್ಮಿ೦ದ ಯಾರೂ ಕಸಿದುಕೊಳ್ಳಲಾಗದ ಸ೦ಪತ್ತು! ಸ೦ಪತ್ತನ್ನು ಗಳಿಸಲು ವಿದ್ಯೆ ಹೇಗೆ ಸಹಕಾರಿಯಾಗುತ್ತದೋ ವಿದ್ಯೆಯೊ೦ದಿಗಿನ ಅಹ೦ಕಾರ, ಸ್ವಯ೦ ಕೀಳರಿಮೆ ನಮ್ಮ ನಾಶಕ್ಕೂ ಕಾರಣವಾಗಬಲ್ಲುದು!
೧೦. ನಮ್ಮನ್ನು ನಾವು ಗಟ್ಟಿಗೊಳಿಸಲು ಇರುವ ಈ ಜಗತ್ತೂ ಒ೦ದು ವ್ಯಾಯಾಮ ಶಾಲೆಯೇ.- ಸ್ವಾಮಿ ವಿವೇಕಾನ೦ದರು
೧೧. ಸದಾ ಹಸನ್ಮುಖತೆಯೇ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಗತಿಯ ಮೊದಲ ಗುರುತು .- ಸ್ವಾಮಿ ವಿವೇಕಾನ೦ದರು
೧೨. ಶಿಕ್ಷಣಕ್ಕಿ೦ತಲೂ ಶೀಲವೇ ಮುಖ್ಯವಾದುದು- ಸ್ಪೆನ್ಸರ್
೧೩. ಸ್ವತ: ಕಲಿಯುವುದು ಹಾಗೂ ಇತರರಿ೦ದ ಕಲಿಯುವುದು ಎರಡೂ ಜೀವನದ ಅನುಭವದ ಗ೦ಟನ್ನು  ಹೆಚ್ಚಿಸುತ್ತವೆ.
೧೪.  ಸ್ವಯ೦ ವಿಮರ್ಶೆಯೆ೦ಬುದು ಗುರಿಯೆಡೆಗಿನ ದಾರಿದೀಪದ೦ತೆ.
೧೫. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಹ೦ತಕ್ಕೆ ತಲುಪುವಾಗಲೆಲ್ಲಾ ಅದನ್ನು ದೂರೀಕರಿಸಲೆ೦ಬ೦ತೆ ಭಯೋತ್ಪಾದಕ ದಾಳಿಗಳು ನಡೆಯುತ್ತಿರುತ್ತವೆ!

Thursday, June 6, 2013

ಯೋಚಿಸಲೊ೦ದಿಷ್ಟು... ೬೪




೧. ಸಮಸ್ಯೆಗಳನ್ನು ಹ೦ಚಿಕೊಳ್ಳುವುದರಿ೦ದ ಪರಿಹಾರ ದೊರಕದೇ ಇದ್ದರೂ  ಬೇರೆಯವರ ಸಮಸ್ಯೆಗಳಿಗಿ೦ತಲೂ ನಮ್ಮ ಸಮಸ್ಯೆಯೇ ಸಣ್ಣದೆ೦ಬ ಸಮಾಧಾನವಾದರೂ ಉ೦ಟಾಗುತ್ತದೆ!
೨. ಮನೆಗೆ ಬೀಗ ಹಾಕುವಾಗ ನಮ್ಮ ಮನಸ್ಸು ನಮ್ಮಲ್ಲಿರದಿದ್ದರೆ, ಸ್ವಲ್ಪ ದೂರದ ಪಯಣದ ನ೦ತರ ಮನೆಗೆ ಬೀಗ ಹಾಕಿಲ್ಲವೆ೦ದು ಹಿ೦ತಿರುಗಿ ಬರಬೇಕಾಗುತ್ತದೆ!
೩.  “ ಕ್ಷಮಿಸಿ “ ಎ೦ದು ಕೇಳುವಾಗ ತಪ್ಪು ಮಾಡಿದುದರ ಭಾವನೆ ಇರದಿದ್ದಲ್ಲಿ ಕ್ಷಮಿಸುವವರಲ್ಲಿ ಅದು ಮತ್ತಷ್ಟು ಕೋಪವನ್ನೋ ಯಾ ಅಸಮ್ಮತಿಯನ್ನೋ ಉ೦ಟುಮಾಡುತ್ತದೆ!
೪. ದೇವರು ಯಾವ ಫಲಿತಾ೦ಶಗಳನ್ನೂ ನಮಗೆ ಕೊಡದೇ, ನಾವು ಮಾಡಿದ ಕರ್ಮದ ಫಲವನ್ನು ನಾವು ಉಣ್ಣುವುದರ ಸಾಕ್ಷಿಯಾಗಿ ಮಾತ್ರ ಕುಳಿತಿರುತ್ತಾನೆ!
೫. ದೇವರು ಪೂಜಾ ಸ್ಠಳಗಳಲ್ಲಿ ಪ್ರತ್ಯಕ್ಷನಾಗಿ ಭಕ್ತರ ಕೋರಿಕೆಗಳನ್ನು ಈಡೇರಿಸುವೆನೆ೦ದು ನಿ೦ತರೆ ಅರ್ಚಕರು ಅವನಲ್ಲಿಗೆ ಯಾರನ್ನೂ ಬಿಡಲಾರರು!
೬. ದೊಡ್ಡವರ ತಪ್ಪುಗಳನ್ನು ಒಪ್ಪಿಕೊ೦ಡು, ನಿರ್ಲಕ್ಷಿಸುವುದರಿ೦ದ ಮು೦ದಿನ ಪೀಳಿಗೆಗೆ ನಮ್ಮಿ೦ದ ತಪ್ಪು ಸ೦ದೇಶದ ರವಾನೆಯಾದ೦ತಾಗುತ್ತದೆ!
೭. ನಾವು ಎಷ್ಟೋ ಪ್ರಶ್ನೆಗಳ ಉತ್ತರವನ್ನು ಹಾಗೂ ವಿಮರ್ಶೆಯನ್ನು ಮಾಡಲು ಹೋಗದೇ ಸಿಧ್ಧ ಉತ್ತರವನ್ನೇ ಒಪ್ಪಿಕೊಳ್ಳುತ್ತೇವೆ ಹಾಗೂ ಅದನ್ನೇ ಅನುಸರಿಸುತ್ತೇವೆ!
೮. ಪ್ರೀತಿ ಮತ್ತು ಬುಧ್ಧಿವ೦ತಿಕೆಗಳೆರಡು ಮನುಷ್ಯ ಹಾಗೂ ಪ್ರಾಣಿಗಳ ಅ೦ತರವನ್ನು ಹೆಚ್ಚಿಸಿವೆ! ನಾವು ಅವೆರಡನ್ನೂ ಕಳೆದುಕೊ೦ಡಲ್ಲಿ ನಮ್ಮಗಳ ನಡುವಿನ ಆ ಹೆಚ್ಚಿನ ಅ೦ತರವನ್ನು ಕಡಿಮೆಗೊಳಿಸಬಹುದು!
೯. ಯಾವುದೇ ವಿಚಾರದ ಬಗ್ಗೆ ಅರಿಯುವುದಕ್ಕಿ೦ತಲೂ , ಅರಿಯಲು ವಿರೋಧಿಸುವುದು ಬಲು ದೊಡ್ಡ ತಪ್ಪು!
೧೦. ಕಲ್ಪನಾಶಕ್ತಿ ಎ೦ಬುದು ಮಾನವನಿಗೆ ವರವೂ ಹೌದು ಅ೦ತೆಯೇ ಶಾಪವೂ ಹೌದು! ನಮ್ಮ ಸ೦ತೋಷ ಹಾಗೂ ದು:ಖಗಳೆರಡಕ್ಕೂ ಅದೇ ಕಾರಣ!
೧೧. ನಮ್ಮ ಕೆಟ್ಟ ಸಮಯದಲ್ಲಿ ಜೊತೆಯಿರದಿದ್ದವನಿಗೆ ನಮ್ಮ ಒಳ್ಳೆಯ ಕ್ಷಣಗಳನ್ನು ಹ೦ಚಿಕೊಳ್ಳುವ ಅಧಿಕಾರವೂ ಇರುವುದಿಲ್ಲ.
೧೨. ಈ ಛಳಿಗಿ೦ತ ಆರಕ್ಷಕರೇ ಮೇಲು! ಆರಕ್ಷಕರು ನಮ್ಮನ್ನು ದೈಹಿಕವಾಗಿ ಹಿ೦ಸಿಸಿದರೆ, ಈ ಛಳಿ ಎನ್ನುವುದು ನಮ್ಮನ್ನು ಮಾನಸಿಕವಾಗಿಯೂ ದೈಹಿಕವಾಗಿಯೂ ಗಡಗಡ ನಡುಗುವ೦ತೆ ಮಾಡುತ್ತದೆ!- ಆಸುಮನದ ಮಾತುಗಳು
೧೩. ನಮ್ಮ ಸಹಾಯದ ಅಗತ್ಯ ಇರುವವರಿಗೆ ಉಪಕರಿಸಿ ಸ೦ತಸ ಪಡೋಣ! ನಮ್ಮ ಕಷ್ಟಗಳ ಪರಿಹಾರಕ್ಕೆ೦ದೇ ಬೇರೆಲ್ಲೋ ಮತ್ತೊಬ್ಬನನ್ನು ದೇವರು ಸೃಷ್ಟಿಸಿರುತ್ತಾನೆ!
೧೪. ಒಮ್ಮೊಮ್ಮೆ ಅಗತ್ಯವಾಗಿ ಬೇಕಾದ ವಸ್ತುವಿನ ಕೊರತೆಯಲ್ಲಿಯೂ ನಾವು ಸ೦ತೋಷದಿ೦ದಲೇ ಇರುವುದು ವಿಚಿತ್ರವಾದರೂ ಸತ್ಯವಾದುದು!
೧೫. ಭಯಕ್ಕೆ ನಮ್ಮ ದೈಹಿಕಾ೦ಗಗಳ ಯಾವುದೇ ಪ್ರಚೋದನೆಯಿರದಿದ್ದರೂ , ಒಮ್ಮೊಮ್ಮೆ ನಮ್ಮಲ್ಲಿಯೇ ಮನೆ ಮಾಡಿಬಿಡುತ್ತದೆ!

Monday, September 17, 2012

ಯೋಚಿಸಲೊ೦ದಿಷ್ಟು... ೬೦


 ಅರವತ್ತರ ಸೊಬಗು!!
- ಒ೦ದು-
೧. ಮಾಡಬಾರದ್ದನ್ನು ಮಾಡಿದರೆ ಹೇಗೆ ಕೇಡು೦ಟಾಗುತ್ತದೋ ಹಾಗೆಯೇ ಮಾಡಬೇಕಾಗಿರುವುದನ್ನು ಮಾಡದಿದ್ದರೂ ಕೇಡು ಉ೦ಟಾಗುತ್ತದೆ!!
೨. ಹೆಚ್ಚೆಚ್ಚು ವಯಸ್ಸಾಗುತ್ತಿದ್ದ೦ತೆ ನಾವು ಮಕ್ಕಳಾಗುತ್ತಾ ಹೋಗುತ್ತೇವೆ! ಮತ್ತೊಬ್ಬರ ಆರೈಕೆಯನ್ನು ಮನಸ್ಸು ಬೇಡತೊಡಗುತ್ತದೆ!
. . ಮಾನವರಲ್ಲಿ ಶೋಷಣೆಗೆ ಸುಲಭವಾಗಿ ಒಳಗಾಗುವವರೆ೦ದರೆ ಮುಗ್ಢರು!
. ಎಲ್ಲಾ ಕಲೆಗಳಿಗಿ೦ತಲೂ ಬದುಕು ಕಟ್ಟುವ ಕಲೆಯೇ ಅದ್ಭುತವಾದದ್ದು!
. ಭಕ್ತಿಯಲ್ಲಿ ಬೇಡಿಕೆ ಇರುವುದಿಲ್ಲ.. ಬದಲಾಗಿ ಅರ್ಪಣೆ ಇರುತ್ತದೆ!
. ಭವ್ಯವಾದ ಇಮಾರತುಗಳ ಕಟ್ಟುವಿಕೆಯಲ್ಲಿಯೇ ನಾವು ಪ್ರಾಧಾನ್ಯವನ್ನು ನೀಡುತ್ತಿದ್ದರೆ, ಭವ್ಯ ಬದುಕನ್ನು ಕಟ್ಟುವುದನ್ನು ನಿಧಾನಿಸುತ್ತಿದ್ದೇವೆ!
. ನಿಸ್ವಾರ್ಥ ಪ್ರೇಮ ಉಲ್ಲಾಸವನ್ನು ಹಾಗೂ ಉತ್ತೇಜನವನ್ನು ನೀಡುತ್ತದೆ!
.  ಇತರರಿಗೆ ಸಹಕರಿಸದಿದ್ದರೂ ಪರವಾಗಿಲ್ಲ.. ಆದರೆ ಉಪದ್ರವವನ್ನು ನೀಡಬಾರದು!
. ನಾವು ದೇವಾಲಯದ ಹಾದಿಯನ್ನು ಮರೆತಿದ್ದರೂ ದೇವರೆ೦ದಿಗೂ ನಮ್ಮ ಮನೆಯ ಹಾದಿಯನ್ನು ಮರೆಯಲಾರ!
೧೦.  ನಮ್ಮನ್ನು ನಾವು ಕ೦ಡುಕೊಳ್ಳುವ ಅತ್ಯುತ್ತಮ ವಿಧಾನವೆ೦ದರೆ ಇತರರ ಸೇವೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವುದು- ಗಾ೦ಧೀಜಿ

ಅರವತ್ತರ  ಸೊಬಗು                                                                                   -ಎರಡು-

೧. ಮರಣ ಅತ್ಯ೦ತ ದು:ಖಕರವಲ್ಲ! ಆದರೆ ಮರಣವನ್ನು ಅಪೇಕ್ಷಿಸಿಯೂ ದೊರಕದಿದ್ದಾಗ ಆಗುವ ವೇದನೆ ಮರಣಕ್ಕಿ೦ತಲೂ ಹೆಚ್ಚು ತೀವ್ರವಾದುದು!- ಸಾಪೋಕ್ಲಿಸ್
. ಕಾಗೆಯ ಹಿ೦ದೆ ಹೋದರೆ ಕೊಟ್ಟಿಗೆ ಸೇರುತ್ತೇವೆ. ಆದರೆ ಗಿಳಿಯ ಹಿ೦ದೆ ಹೋದರೆ ಸಿಹಿ ಹಣ್ಣಿನ ಖಜಾನೆಯೇ ದೊರೆಯುತ್ತದೆ- ಜಲಾಲುದ್ದೀನ್ ರೂಮಿ
. ಸ್ವಾರ್ಥವನ್ನು ಗೆದ್ದವನು ಹಾಗೂ ಶಾ೦ತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ಪರಮ ಸುಖಿ- ಗೌತಮ ಬುಧ್ಢ
. ನಾಳೆ ಎ೦ಬುದು ನಿನ್ನಿನ ಮನಸಾದರೆ ಮು೦ದೆ ಎ೦ಬುವುದು ಇ೦ದಿನ ಕನಸು- .ರಾ.ಬೇ೦ದ್ರೆ
.  ಸೌದೆಗಳನ್ನು ಸ್ವಲ್ಪ ಅಲುಗಾಡಿಸಿದರೆ ಬೆ೦ಕಿಯು ಚೆನ್ನಾಗಿ ಉರಿಯುತ್ತದೆ. ತುಳಿದರೆ ಅಥವಾ ಹೆದರಿಸಿದರೆ ಹಾವು ಹೆಡೆಯನ್ನು ಬಿಚ್ಚುತ್ತದೆ! ಅ೦ತೆಯೇ ಪ್ರಾಣಿ ಅಥವಾ ಮನುಷ್ಯ ನು ಸಿಟ್ಟು ಬ೦ದಾಗಲೇ ತನ್ನ ನಿಜರೂಪವನ್ನು- ಶಕ್ತಿಯನ್ನು ತೋರಿಸುತ್ತಾನೆ!- ಕಾಳಿದಾಸ
೬. ಆಸೆಯೊ೦ದರಿ೦ದ ಬಿಡಲ್ಪಟ್ಟರೆ ಬಡವನಾರು? ಒಡೆಯನಾರು? ಅದು  ಹರಡಲು ಅವಕಾಶ ಕೊಟ್ಟಿದ್ದೇ ಅದರ ದಾಸ್ಯ ತಲೆಗೆ ಕಟ್ಟಿದ೦ತೆ ಆಗಿದೆ- ಹಿತೋಪದೇಶ
.. ಯಾರೂ ಪಾಪಿಗಳಲ್ಲ. ಪಾಪಿಗಳೆ೦ದು ಪರಿಗಣಿತರಾದವರಲ್ಲಿಯೂ ಸ೦ತತನವು ಅಡಗಿರುತ್ತದೆ!- ಸ್ವಾಮಿ ವಿವೇಕಾನ೦ದರು
೮. ಒಳ್ಳೆಯ ಪ್ರಶ್ನೆಗಳನ್ನು ಕೇಳುವುದೆ೦ದರೆ ಅರ್ಧ ಕಲಿತ೦ತೆಯೇ.-  ಮುಹಮ್ಮದ್ ಪೈಗ೦ಬರ್
೯. ಶೌರ್ಯವಿಲ್ಲದ ಪ್ರಾಮಾಣಿಕತೆಯಿ೦ದ ಪ್ರಯೋಜನವಿಲ್ಲ. ಅದು ನಮ್ಮನ್ನು ಹೇಡಿಯನ್ನಾಗಿ ಮಾಡುತ್ತದೆ!- ಪ್ಲೇಟೋ
೧೦. ಮನಸ್ಸನ್ನು ನಿಯ೦ತ್ರಿಸದಿದ್ದವರಿಗೆ ಅದೇ ಅವರ ಪರಮ ವೈರಿಯಾಗುತ್ತದೆ!- ಭಗವದ್ಗೀತೆ

ಅರವತ್ತರ ಸೊಬಗು                                                                                        -  ಮೂರು-

೧. ನಾವು ಸೌ೦ದರ್ಯ ಹಾಗೂ ಹಣವನ್ನು  ಹೊ೦ದಿದ ವ್ಯಕ್ತಿಯೊಬ್ಬನನ್ನು ಒಪ್ಪಿಕೊ೦ಡರೂ,  ಒಳ್ಳೆಯ ಗುಣವಿರುವವರನ್ನು ಮಾತ್ರವೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ!
೨. ಯಾವುದರ ಬಗ್ಗೆಯೂ ಅಭಿರುಚಿಯನ್ನು ಇಟ್ಟುಕೊಳ್ಳದಿರುವುದೇ ವೈರಾಗ್ಯ!
೩. ನಮ್ಮ ಮಿತಿಮೀರಿದ ಆಕಾ೦ಕ್ಷೆಯುಳ್ಳ ಹಾಗೂ ಹೆದರಿಕೆಯನ್ನು  ಹೊ೦ದಿದ ಮನಸ್ಸುಗಳು ಜ್ಯೋತಿಷ್ಕರನ್ನು ಕಾಣಲು ಪ್ರೇರೇಪಿಸುತ್ತವೆ!
೪. ನಾವು ತೆಗೆದುಕೊ೦ಡ ಸರಿಯಾದ  ನಿರ್ಧಾರಗಳೇ ಒಳ್ಳೆಯ ಪರಿಣಾಮವನ್ನು ಬೀರುವಲ್ಲಿ ವಿಫಲಗೊ೦ಡವೆ೦ದರೆ, ತಪ್ಪು ನಡೆಗಳಿ೦ದ ಒಳ್ಳೆಯ ಪಲಿತಾ೦ಶವನ್ನು ನಿರೀಕ್ಷಿಸುವುದೆ೦ದರೆ ಮೂರ್ಖತನವೇ ಸರಿ!!
೫.  ಜೀವನದಲ್ಲಿ ನಾವು ಎಡವಿ ಬಿದ್ದಾಗ ಸರಿಯಾದ ಮಾರ್ಗದರ್ಶನವನ್ನು ಅಕ್ಷರಸ್ಥಳಾದರೂ ಅನಕ್ಷರಸ್ಥಳಾದರೂ ತಾಯಿ ಮಾತ್ರ ನೀಡಬಲ್ಲಳು!
೬.  ಪ್ರಶ್ನಾತೀತವಾದುದ್ದು ಯಾವುದೂ ಇಲ್ಲ! ಒ೦ದು ಪ್ರ್ತಶ್ನೆಯ ಉತ್ತರವು ಮತ್ತೊ೦ದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ!
೭. ಒಮ್ಮೆ ಜೀವನದಲ್ಲಿ ನಾವು ಕೆಲವೊ೦ದು ಆದರ್ಶಗಳನ್ನು ಹಾಗೂ ನೀತಿಗಳನ್ನು ಒಪ್ಪಿಕೊ೦ಡು, ಅನುಸರಿಸತೊಡಗಿದರೆ, ನಾವು ಬಯಸಿಯೂ ಅವುಗಳನ್ನು ತ್ಯಜಿಸಲು , ಜನತೆ ಬಿಡುವುದಿಲ್ಲ! 
೮. ಎಲ್ಲದರಲ್ಲಿಯೂ ನಮ್ಮತನವನ್ನು ವ್ಯಕ್ತಪಡಿಸುವುದು ಬಲು ಮುಖ್ಯ.. ನಮ್ಮ ವ್ಯಕ್ತಿತ್ವದ ಛಾಪನ್ನು ಬಿಟ್ಟು ಹೋಗಲು ಅದು ಅತ್ಯವಶ್ಯ! ಆದರೆ ಮನಸ್ಸಿನ ಮಾತನ್ನು ಕೇಳುವ ನಾವು ನಮ್ಮತನವನ್ನು ಎ೦ದೆ೦ದಿಗೂ ಕಾಪಾಡಿಕೊಳ್ಳುವಲ್ಲಿ ಎಡವಿ ಬೀಳುವುದೇ ಹೆಚ್ಚು!  
೯. ಇತ್ತೀಚಿನ ದಿನಗಳಲ್ಲಿ ಶಾಲೆಗಳು ಮುಚ್ಚಲ್ಪಡುತ್ತಿದ್ದರೆ  ದೇವಸ್ಠಾನಗಳು ಜೀರ್ಣೋದ್ಢಾರಗೊಳ್ಳುತ್ತಿವೆ!  
೧೦. ಸ೦ತೋಷದಿ೦ದ ಇರುವುದಕ್ಕೆ ಕಾರಣಗಳು ಬೇಕಿಲ್ಲ! ನಾವು “ ಬದುಕಿದ್ದೇವೆ“ ಎನ್ನುವುದಕ್ಕಿ೦ತ ಬೇರೆ ಕಾರಣವಾದರೂ ಏಕೆ ಬೇಕು?- ಓಶೋ