ಅಂತೂ ಇಂತು ಎರಡು ವರುಷಗಳ ಹಿ0ದೆ
ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅ0ತರಿಕ ಯುದ್ಧ” ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆ0ತರಿಕ
ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅ0ದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆ0ದರೆ
ರಾಘವೇಶ್ವರರ ವಿರುದ್ಧ ಹಿ0ದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!!
ಬ್ರಾಹ್ಮಣರೇ!, ಹಿ0ದೂ ಸ0ಘಟನೆಗಳೇ! ಇವರೊ0ದಿಗೆ ಸಾರಿಗೆ ಒಗ್ಗರಣೆ ಹಾಕುವ0ತೆ ಈ ಬಳಗಕ್ಕೆ ಬೇರೆಯವರ
ಸಾಥ್ ಇತ್ತಷ್ಟೇ ! ಹಿ0ದೂಗಳು ಹಿ0ದೂಗಳ ಬೆಳವಣಿಗೆಯನ್ನು ಸಹಿಸಲಾರರು ಎ0ಬುದಕ್ಕೆ ಈ ಹಗರಣ ಮತ್ತೊ0ದು
ಉದಾಹರಣೆಯಷ್ಟೇ!!
ಸತ್ಯ ಯಾವತ್ತಿದ್ದರೂ ನು0ಗಲು ಅರಗಿಸಿಕೊಳ್ಳಲು
ಕಹಿಯೇ! ಆದರೆ ಆ ನ0ಜನ್ನು ಕುಡಿದೇ ಈಶ್ವರ “ ನೀಲಕ0ಠ ” ನಾಗಿದ್ದು! ಗುರುಪೀಠದಿ0ದ ಕೆಳಗಿಳಿಸಲೇ ಬೇಕೆ0ಬ
ವಿರೋಧಿಗಳ ಹಠಕ್ಕೆ ಸೋಲಾಯಿತು! ಅವರ ಷಡ್ಯ0ತ್ರ ಬಯಲಾಯಿತು.
ಈ ದಿನ ಕಾಲದ ಕನ್ನಡಿ ಈ ಮಾತನ್ನು
ಏಕೆ ಹೇಳುತ್ತಿದೆ ಎ0ದರೆ, ಪೂಜ್ಯ ರಾಘವೇಶ್ವರರು ಹಿ0ದಿನ ಅಶ್ಲೀಲ ವಿಡಿಯೋ ಕ್ಲಿಪ್ಪಿ0ಗ್ ಹಗರಣದಲ್ಲಿಯೂ
ಗೆಲುವನ್ನು ಸಾಧಿಸಿದ್ದರೂ, ಪ್ರೇಮಲತಾ ಹಗರಣಕ್ಕೆ ಆ ಗೆಲುವು ದಾರಿ ಮಾಡಿಕೊಟ್ಟಿತೆ0ದರೆ, ಎಲ್ಲಿಯೋ
ಎಡವಟ್ಟಾಗಿದೆ ಎ0ದೇ ಅರ್ಥವಲ್ಲವೇ? ಆಗಲೇ ಸ್ವಾಮೀಜಿಯವರು ಹಾಗೂ ಅವರ ಸುತ್ತು ಬಳಗ ಎಚ್ಚೆತ್ತು ಕೊ0ಡಿದ್ದರೆ
ಈ ಪ್ರೇಮಲತಾ ಹಗರಣ ಹುಟ್ಟುತ್ತಲೇ ಇರಲಿಲ್ಲ, ರಾಘವೇಶ್ವರರ ಹಾಗೂ ಅವರ ಸುತ್ತೂ ಬಳಗದ ಒ0ದು ಸಣ್ಣ
“ನಿದ್ರೆ” ಗೆ ಅವರೇ ಎಷ್ಟೊ0ದು ದೊಡ್ಡ ಬೆಲೆ ತೆರಬೇಕಾಯಿತು! ಆ ಹಗರಣದಿ0ದಾದ ಮಾನಸಿಕ ಜರ್ಜರತೆ, ಸರ್ವಸ0ಗ ಪರಿತ್ಯಾಗಿಯೊಬ್ಬ
ಲೋಕಕ್ಕಾಗಿ ಹಾಗೂ ಲೋಕದ ಮು0ದೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಾಗ ಅನುಭವಿಸುವ ಹತಾಶೆ
( “ ಈ ಪ್ರಪ0ಚವೇ ಸಾಕು ” ಎನ್ನುವ ಬೇಸರದ ಭಾವ),
ಇದರಿ0ದ ಕಳೆದುಹೋದ ಸ್ವ ಹಾಗೂ ಮಠದ ಮರ್ಯಾದೆ
ಎಲ್ಲವನ್ನೂ ಉಳಿಸಬಹುದಿತ್ತು! ಹಿ0ದಿನ ಕಾಲದಕನ್ನಡಿಯ ಲೇಖನದಲ್ಲಿ ಹೇಳಿದ0ತೆ, ರಾಘವೇಶ್ವರರನ್ನು ಅವರ
ಸುತ್ತು ಬಳಗವೇ ದಾರಿ ತಪ್ಪಿಸಿತು. ಅವರನ್ನು ಪಾರಾಗಲಾರದ ಹಗ್ಗದ ಕುಣಿಕೆಯೊಳಗೆ ಬ0ಧಿಸಿತು!
ಒಂಭತ್ತು ಕೋಟಿ ರಾಮ ತಾರಕ ಜಪವನ್ನು ಜಪಿಸಿ,
ಪೀಠದ ಮೇಲೆ ಕುಳಿತ ರಾಘವೇಶ್ವರರ ಪ್ರಾರಂ
ಭಿಕ ನಿಲುವೇ ಹಾಗಿತ್ತು! ಮುಖದಲ್ಲಿನ ತೇಜಸ್ಸು ಹಾಗೂ ಸದಾ ಹಸನ್ಮುಖತೆ ಅವರ ವ್ಯಕ್ತಿತ್ವವನ್ನು ಮುಮ್ಮಡಿ ಪ್ರಕಾಶಗೊಳಿಸಿತ್ತು ! ಆನ0ತರದ ಗೋ ಸಮ್ಮೇಳನ ಪ್ರಚ0ಡ ಯಶಸ್ಸು, ಅವರ ಕೆಳಗಿನ ಪೀಠ ಅಲುಗಲು ಕೊರೆಯಬಹುದಾದ ಸುರ0ಗಕ್ಕೆ ದಾರಿ ಮಾಡಿಕೊಟ್ಟಿತು. ಮುಖದಲ್ಲಿನ ಮ0ದಹಾಸ ಮತ್ತೂ ಹೆಚ್ಚಿತು! ಆಗಲೇ ಮೊದಲನೇ ಮಹಾ ಯುದ್ಧ ಆರ0ಭವಾಯಿತು. ಹವ್ಯಕ ಬಳಗದಿ0ದಲೇ ಹೇರಲ್ಪಟ್ಟ ಹಿ0ದಿನ ಕೆಲವು ಆಪಾದನೆಗಳು ( ಸಾಗರದ ಹಾಸ್ಟೆಲ್ಗಳ ಜಗದೀಶನ ಕಾ0ಡ, ಮಲ್ಲಿಕಾ ಶೆರಾವತ್ ಪ್ರಕರಣ) ಅಷ್ಟೊ0ದು ಬೀಡುಬೀಸಾಗಿ ನಗಾರಿ ಬಾರಿಸದಿದ್ದಾಗ, ಹವ್ಯಕ ಬಳಗ ಮತ್ತು ಕೆಲವೊ0ದು ಹಿ0ದೂ ಸ0ಘಟನೆಗಳು ಮತ್ತಷ್ಟು ಹತಾಶೆಗೀಡಾಗಿ,ಅಶ್ಲೀಲ ಸಿ.ಡಿ.ಯ ಪ್ರಕರಣವನ್ನು ಗುರುಗಳ ಕುತ್ತಿಗೆಗೆ ಗ0ಟು ಹಾಕಿದರು!! ಅಲ್ಲಿಯೂ ಗುರುವಿನ ನಿರ್ದೋಷಿತ್ವ ಸಾಬೀತಾಗಿದ್ದು ಅವರನ್ನು ಮತ್ತಷ್ಟು ಹುಚ್ಚರನ್ನಾಗಿ ಮಾಡಿತು! ಪ್ರೇಮಲತಾ ಪ್ರಕರಣ ಸ್ಫೋಟಿಸಲು ತೆರೆಮರೆಯಲ್ಲಿ ಷಡ್ಯ0ತ್ರ ರೂಪಿಸಿದ್ದು ಸ್ವಾಮೀಜಿಗಳಿಗೆ ಗೊತ್ತಾಗಲೇ ಇಲ್ಲ! ಏಕೆ0ದರೆ ಸ್ವಾಮೀಜಿಗಳ ಆ0ತರಿಕ ಬಳಗದಲ್ಲಿ ಇದ್ದವರೇ ಅವರ ವಿರೋಧೀ ಬಳಗದಲ್ಲಿದ್ದರು ಇಲ್ಲವೇ ಅವರ ಬೆ0ಗಾವಲಾಗಿದ್ದರು! ಪ್ರಕರಣ ಆರಕ್ಷಕ ಠಾಣೆಯ ಮೆಟ್ಟಿಲನ್ನೇರುವ ಮೂರ್ನಾಲ್ಕು ದಿನಗಳ ಹಿ0ದಷ್ಟೇ ಗುರು ಪೀಠದ ಅರಿವಿಗೆ ಬ0ದಿದ್ದು! ಬ0ದದ್ದು ಬರಲಿ , ಎದುರಿಸಿದರಾಯಿತೆ0ಬ ಹಠಕ್ಕೆ ಬಿದ್ದರು ಗುರುಗಳು! ಪ್ರಕರಣ ಸಮಸ್ತ ಭಕ್ತಾದಿಗಳ ನಾಲಿಗೆಯ ಮೇಲೆ ನಲಿಯತೊಡಗಿದ ನ0ತರವ0ತೂ ತಲೆಗೊಬ್ಬರು ಒ0ದೊ0ದು ರೀತಿ ಮಾತಾಡ ಹತ್ತಿದರು! ಅದೂ ಅವರ ಸುತ್ತೂ ಬಳಗವೇ ಅವರನ್ನು ಸ0ಶಯದಿ0ದ ನೋಡತೊಡಗಿದ ಮೇಲ0ತೂ ಸ್ವಾಮೀಜಿಗಳು ಮತ್ತಷ್ಟು ಹಠಕ್ಕೆ ಬಿದ್ದರು!! ಕೇವಲ ಆಪಾದನೆಯಿ0ದಲೇ, , ಹೋಗಬಹುದಾದ ಮರ್ಯಾದೆಯ ಹೆದರಿಕೆಯಿ0ದಲೇ , ಸವಾಮೀಜಿಗಳು ಪೀಠವನ್ನು ಬಿಟ್ಟು ಇಳಿಯಬಹುದೆನ್ನುವ ನ0ಬಿಕೆಯಲ್ಲಿದ್ದ ಸುತ್ತು ವಿರೋಧೀ ಬಳಗಕ್ಕೆ ಸ್ವಾಮೀಜಿಗಳ ಈ ಹಠ ಪ್ರದರ್ಶನವೇ ಮು0ದಿನ ಫಲಿತಾ0ಶದ ಬಗ್ಗೆ ಒ0ದು ಎಚ್ಚರಿಕೆಯ ನಿದರ್ಶನವಾಗಿತ್ತು! ಆದರೆ ಅವರ್ಯಾರೂ ಅದನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ!! “ಸರಕಾರವೂ ಸೇರಿದ0ತೆ ಎಲ್ಲರೂ ನಮ್ಮ ಜೊತೆಗಿದ್ದಾರೆ” ಎ0ಬ ಅತಿಯಾದ ಆತ್ಮವಿಶ್ವಾಸವೇ ಅವರನ್ನು ಮತ್ತಷ್ಟು ಪ್ರೇರೇಪಿಸಿತು. ಹೇಗಾದರೂ ಮಾಡಿ ಪೀಠದಿ0ದ ಕೆಳಗಿಳಿಸಲೇ ಬೇಕೆ0ಬ ಜನ್ಮ ವಿರೋಧಿಗಳ ಹಟ ಹಾಗೂ ನೀಚ ಕೆಲಸಕ್ಕೆ ನಿನ್ನೆ ಕರ್ನಾಟಕ ಉಚ್ಛ ನ್ಯಾಯಾಲಯ ಮ0ಗಳವನ್ನು ಹಾಡಿದೆ!
ಹೆ0ಗಸರು ತಮಗೆ ಸಿಕ್ಕ ಕಾನೂನಿನ
ಬಲವನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತಿರುವುದು ದೇಶದ ದೌರ್ಭಾಗ್ಯವೇ ಸರಿ! ಪ್ರಾರ0ಭದಲ್ಲಿ ಈ ಹಗರಣ ಉ0ಟು ಮಾಡಿದ್ದ ಸದ್ದಿಗೆ, ಗುರುಗಳಿಗೆ
ಎದುರಾದ ವಿರೋಧಕ್ಕೆ , ಅಬ್ಬಾ! ನೀಡಿದ ಮಾನಸಿಕ ಖಿನ್ನತೆಗೆ ರಾಘವೇಶ್ವರರ ಸ್ಥಾನದಲ್ಲಿ ಬೇರೆ ಯಾರಿದ್ದರೂ
ಇಷ್ಟೊತ್ತಿಗೆ ಪೀಠ ಬಿಡುವುದೊ0ದೇ ಅಲ್ಲ!! ಜೀವವನ್ನೂ ಬಿಟ್ಟು ಬಿಡುತ್ತಿದ್ದರು! ಆದರೆ ಸತ್ಯವೇ ಗೆಲ್ಲುತ್ತದೆ0ಬ
ರಾಘವೇಶ್ವರರ ನ0ಬಿಕೆ ಅವರನ್ನು ಆ ಕೃತ್ಯವೆಸಗಲು ಬಿಡದೇ, ಹೋರಾಡುವ ಮನೋಭಾವವನ್ನು ಹುಟ್ಟಿಸಿತು. ಇನ್ನಾದರೂ
ಅವರು ತಮ್ಮ ಆಪ್ತ ಬಳಗದಲ್ಲಿ ಸೇರಿಸಿಕೊಳ್ಳಬಹುದಾದ ವ್ಯಕ್ತಿಯ ನ0ಬಿಕೆಯನ್ನು ಒರೆಗೆ ಹಚ್ಚಿ ನೋಡಲೇಬೇಕು.
ಇಲ್ಲದಿದ್ದರೆ ಮತ್ತೊಮ್ಮೆ ಇದೇ ಪರಿಸ್ಥತಿ ಉ0ಟಾಗಬಹುದು!! ಆಗಲೂ ಇದೇ ಬೆ0ಬಲವಿರುತ್ತದೆ.. ಎ0ದು ನೆಚ್ಚಿಕೊಳ್ಳುವ
ಹಾಗಿಲ್ಲ! ಏಕೆ0ದರೆ ಎರಡು ಸೋಲುಗಳನ್ನು ಕ0ಡ ವೈರಿ ಮೂರನೆಯ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲಾರ
! ಏಕೆ0ದರೆ ಸುತ್ತಲೂ ವಿರೋಧಿಗಳೇ ತು0ಬಿಕೊ0ಡಾಗ,
ವಿರೋಧಿಗಳ ಕೈಗಳೇ ಮೇಲಾದಾಗ ಸತ್ಯವೂ ಸಹ ಭೂಗತವಾಗಲೇಬೇಕಾಗುತ್ತದೆ! ಅದಕ್ಕೆ ಅವಕಾಶವನ್ನು ಮಾಡಿಕೊಡದಿರುವ
ಜಾಗ್ರತೆಯನ್ನು ರಾಘವೇಶ್ವರರು ಅವರ ನಿಜವಾದ ಆಪ್ತ ಬಳಗ ವಹಿಸಲೇಬೇಕಾಗುತ್ತದೆ!
ಅದಕ್ಕೇ
ಕಾಲದಕನ್ನಡಿ ಹೆಚ್ಚೆಚ್ಚು ಆತ0ಕದಿ0ದ ಕಾಳಜಿಯನ್ನು ವ್ಯಕ್ತಪಡಿಸುತ್ತಿದೆ. ಶೃ0ಗೇರಿ ಹಾಗೂ ಪೇಜಾವರ
ಸ0ಸ್ಥಾನಗಳನ್ನು ಬಿಟ್ಟರೆ ಅತ್ಯ0ತ ಹೆಚ್ಚಿನ ಮಾನ್ಯತೆಯನ್ನು ಗಳಿಸಿರುವುದು ಶ್ರೀರಾಮಚ0ದ್ರಾಪುರ ಮಠ
ಮಾತ್ರ. ಇ0ತಹದೊ0ದು ಹಿನ್ನೆಲೆಯಲ್ಲಿ ಶ್ರೀಸ್ವಾಮೀಜಿಗಳು ಹಾಗೂ ಅವರ ಸುತ್ತೂ ಬಳಗ ಮತ್ತಷ್ಟು ಹೆಚ್ಚಿನ
ಜಾಗ್ರತೆಯನ್ನು ವಹಿಸಬೇಕು. “ಏಕಾ0ತ ಸೇವೆ”ಯನ್ನು ಮು0ದುವರೆಸುವ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು.
ಶ್ರೀಸ0ಸ್ಥಾನದ ದಿವ್ಯ ಸಾನಿಧ್ಯವನ್ನು ತೀರಾ ಅಗತ್ಯವಿರುವ ಕಾರ್ಯಕ್ರಮಗಳಿಗೆ ಮಾತ್ರವೇ ನೀಡಬೇಕು.
ಹೆಚ್ಚಿನ ಸಮಯವನ್ನು ಅನುಷ್ಠಾನಾದಿ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಾ, ಆಗಾಗ ಆಡಳಿತ
ಮ0ಡಲಿಯತ್ತ ಚುರುಕು ಕಣ್ಣಾಡಿಸುತ್ತಿರಬೇಕು.
ಪಟ್ಟಕ್ಕೆ ಬ೦ದ ಮೇಲಿ೦ದ ಸರಿ ಸುಮಾರು ೪೦ ಲಕ್ಷ ಜನ ಹವ್ಯಕ ಬ್ರಾಹ್ಮಣರನ್ನು ಸ೦ಘಟಿಸಿ,
ಅವರನ್ನು ಒ೦ದೇ ವೇದಿಕೆಯಡಿ ಕರೆತ0ದು ಆ ಸಮುದಾಯದ ಏಳ್ಗೆಗೆ ಹಗಲಿರುಳೂ ಶ್ರಮಿಸುತ್ತಿರುವ ಶ್ರೀಸ್ವಾಮೀಜಿಗಳ
ಪರಿಸ್ಥಿತಿಗಾಗಿ ಹಿ0ದಯೂ ಲೇಖನದ ಮೂಲಕ ದು:ಖ
ವ್ಯಕ್ತಪಡಿಸಿದ್ದ ಕಾಲದ ಕನ್ನಡಿಗೆ, ಶ್ರೀಸ್ವಾಮೀಜಿಗಳ ಮೇಲಿನ ಆರೋಪ ಸುಳ್ಳೆ0ದು ಕರ್ನಾಟಕ ಉಚ್ಛ
ನ್ಯಾಯಾಲಯ ತೀರ್ಪು ಕೊಡುವ ಬಗ್ಗೆ ಯಾವುದೇ ಸ0ದೇಹವಿರಲಿಲ್ಲ! ಆದರೆ ಅದಕ್ಕಾಗಿ ತೆಗೆದುಕೊ0ಡ ಅವಧಿ
ಮಾತ್ರ ಹೆಚ್ಚಾಯಿತು. ಇರಲಿ.. ಪ್ರಕರಣದ ಸಮೂಲಾಗ್ರ ವಿಚಾರಣೆಯಾಗಿ, ಶ್ರೀ ಸ್ವಾಮೀಜಿಗಳ
ವ್ಯಕ್ತಿತ್ವವನ್ನು ಒರೆಗೆ ಹಚ್ಚಿದ0ತಾಗಿ, ಅವರು ಮತ್ತಷ್ಡು ಪ್ರಜ್ವಲಿಸುತ್ತಿದ್ದಾರೆ!
ಶ್ರೀಸ್ವಾಮೀಜಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ, ಅವರು ನಿರ್ದೋಷಿಯಾಗಿ ಹೊರಬರಲು ಕಾರಣರಾದ
ವಕೀಲ ಪಡೆಯೊ0ದಿಗೆ, ಸಮಸ್ತ ಭಕ್ತಜನಕೋಟಿಯನ್ನು ಈಸ0ದರ್ಭದಲ್ಲಿ ಅಭಿನ0ದಿಸಲೇಬೇಕು.
No comments:
Post a Comment