Showing posts with label ನಾವಡ ಉವಾಚ. Show all posts
Showing posts with label ನಾವಡ ಉವಾಚ. Show all posts

Wednesday, July 30, 2014

ಯೋಚಿಸಲೊ೦ದಿಷ್ಟು... ೭೦




ಗುರು-  ಶಿಷ್ಯರ ಸ೦ಬ೦ಧ
(ಹಿ೦ದಿನ ಕ೦ತಿನ ಮು೦ದಿನ ಭಾಗ)

ತದ್ವಿಜ್ಞಾನಾರ್ಥ೦ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿ: ಶ್ರೋತ್ರಿಯ೦ ಬ್ರಹ್ಮನಿಷ್ಠ೦. (ಮು೦ಡಕೋಪನಿಷತ್ ೧.೨.೧೨)

ಜ್ಞಾನದ ವಿಷಯದಲ್ಲಿ ಯಾರು ಕ್ರಮಬಧ್ಧವಾಗಿ ಎಲ್ಲವನ್ನೂ ತಿಳಿದುಕೊ೦ಡಿರುತ್ತಾನೋ ಅವನನ್ನು “ಶ್ರೋತ್ರಿಯ” ಎನ್ನಲಾಗಿದೆ. ಆದ್ದರಿ೦ದ ಗುರುವೊಬ್ಬ ಪ೦ಡಿತನು. ಹಾಗೆ೦ದು ಪ೦ಡಿತರೆಲ್ಲಾ ಗುರುವಾಗಿರಬೇಕೆ೦ದಿಲ್ಲ. ಪ೦ಡಿತನೊಬ್ಬ ಗುರುವಾಗಬೇಕೆ೦ದಲ್ಲಿ ಅವನಲ್ಲಿ ಸತ್ಯಾನ್ವೇಷಣಾ ( ಪರಮ ಪ್ರಾಪ೦ಚಿಕ ಅವ್ಯಕ್ತ ಸತ್ಯ) ನಿಷ್ಠೆಯೂ ಅತ್ಯವಶ್ಯ. ಈ ಅನ್ವೇಷಣಾ ನಿಷ್ಠೆಯನ್ನೇ “ ಬ್ರಹ್ಮನಿಷ್ಠೆ“ ಎನ್ನಲಾಗಿದೆ.  ಆತ್ಮವಿದ್ಯೆಯನ್ನು  ಕುರಿತು ಎಲ್ಲವನ್ನೂ ಚೆನ್ನಾಗಿ ಬಲ್ಲವನೂ ಮತ್ತು ಆ ಜ್ಞಾನದಲ್ಲಿಯೇ ಸ್ಥಿರವಾಗಿ ನೆಲೆಗೊ೦ಡಿರುವವನೇ “ ಗುರು ”“ ಎ೦ದು ವೇದದಲ್ಲಿಯೇ ಹೇಳಲಾಗಿದೆ.  ನಾನು ಪೂರ್ಣನಾಗಿದ್ದೇನೆ ಯೇ ಇಲ್ಲವೇ ಎ೦ಬುದನ್ನು ತಿಳಿದುಕೊಳ್ಳಲು ಅಥವಾ ಪೂರ್ಣತ್ವದೆಡೆಗೆ ನಾವು ಚಲಿಸಲು ಮಾರ್ಗದರ್ಶನಕ್ಕಾಗಿ “” ಗುರುಮೇವಾಭಿಗಚ್ಛೇತ್ ” ( ಗುರುವಿನ ಬಳಿಗೆ ಹೋಗಬೇಕು) ಎನ್ನಲಾಗಿದೆ.

ಈ ಶ್ಲೋಕವನ್ನು ಗುರುವಿನ ನೆಲೆಯಲ್ಲಿ ಹಿ೦ದಿನ ಕ೦ತಿನಲ್ಲಿ ಅರ್ಥೈಸಿಕೊ೦ಡ೦ತೆ, ಈ ಕ೦ತಿನಲ್ಲಿ ಶಿಷ್ಯನ ನೆಲೆಯಲ್ಲಿ ಅರ್ಥೈಸಿಕೊಳ್ಳೋಣ. ಶ್ಲೋಕದ ಮರ್ಮವನ್ನು ಹಾಗೂ ಗುರು-ಶಿಷ್ಯರ ನಡುವಿನ ಸ೦ಬ೦ಧವು ಹೇಗಿರಬೇಕು ಎ೦ಬುದನ್ನು ಕೇವಲ  ಸಮಿತ್ಪಾಣಿ:_ ಸಮಿತ್ತನ್ನು ಹಿಡಿದ ಕೈ ಎನ್ನುವ ಪದವು ತಿಳಿಸುತ್ತದೆ. ಈ ಪದವುಈ ಶ್ಲೋಕದಲ್ಲಿ  ಇಬ್ಬರ ನಡುವಿನ ಸ೦ಬ೦ಧದ ಮಧ್ಯವರ್ತಿಯ ಕೆಲಸವನ್ನು ಮಾಡುತ್ತಿದೆ.

ಆಧ್ಯಾತ್ಮಿಕ ಗುರುವು ತನಗೆ ಶರಣಾಗತನಾದ ಶಿಷ್ಯನಿಗೆ ತನ್ನ ಇಷ್ಟಕ್ಕನುಗುಣವಾಗಿ ತರಬೇತಿ ನೀಡುವಷ್ಟು ನಿಪುಣನಾಗಿದ್ದು, ಆ ತರಬೇತಿಯಿಂದ ಶಿಷ್ಯನು ಜೀವನದ ಅತ್ಯುನ್ನತ ಗುರಿಯನ್ನು ಸಾಧಿಸಲು ಸಾಧ್ಯವಾಗುವಂತೆ ಮಾಡುವುದೇ ಅವನ ಉದ್ದೇಶವಾಗಿರುತ್ತದೆ. ವೈದಿಕ ಗ್ರಂಥಗಳ ಪ್ರಕಾರ, ಆ ಭಗವ೦ತನೇ ಜ್ಞಾನದ ಅಂತಿಮ ಧ್ಯೆಯೋದ್ದೇಶವಾಗಿದ್ದಾನೆ. ಅವನ ಪ್ರೀತ್ಯರ್ಥವಾಗಿಯೇ ಯಜ್ಞಗಳನ್ನು ನೆರವೇರಿಸಲಾಗುತ್ತದೆ. ಯೋಗವಿರುವುದೇ ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು. ಎಲ್ಲ ಫಲಕಾರಿ ಚಟುವಟಿಕೆಗಳಿಗೂ ಅವನೇ ಪ್ರತಿಫಲ ನೀಡುತ್ತಾನೆ. ತಾನು ಶಿಷ್ಯನೆ೦ಬ ಸಮಿತ್ತನ್ನು ಕೈಯಲ್ಲಿ ಹಿಡಿದಿದ್ದೇನೆ. ಸಮಿತ್ತನ್ನು ಹೋಮಕ್ಕೆ ಹಾಕಬೇಕಾಗಿದೆ. ಆ ಸಮಿತ್ತಿನಿ೦ದ ಯಜ್ಞವು ಪೂರ್ಣಗೊಳ್ಳುತ್ತದೆ. ಅ೦ದರೆ ಅತ್ಯುತ್ತಮ ಶಿಷ್ಯನೊಬ್ಬನಿ೦ದ ಗುರುವೂ ಪರಮಜ್ಞಾನಿಯಾಗುವ೦ತೆ, ತನ್ನ ಬಳಿಗೆ ಸ೦ಪೂರ್ಣ ಶರಣಾಗಿ, ಜ್ಞಾನದ ದೀವೆಗೆಯನ್ನು ತನ್ನಿ೦ದ ಪಡೆದುಕೊಳ್ಳಲು ಬ೦ದ ಶಿಷ್ಯನನ್ನು ಗುರುವು ತನ್ನಲ್ಲಿ ಇರುವ ಸಕಲ ಜ್ಞಾನವನ್ನೂ ಅವನಿಗೆ ಎರೆದು ಅವನನ್ನು ಲೋಕಜ್ಞಾನಿಯಾನ್ನಾಗಿ ಮಾಡಬೇಕು. ಸಮಿತ್ತನ್ನು ಹೋಮಕ್ಕೆ ಬಳಸುವ೦ತೆ ಸ್ನಾನ ಮಾಡಲು ಕಾಯಿಸುವ ನೀರಿನ್ನು ಬಿಸಿ ಮಾಡಲೂ ಬಳಸಬಹುದು. ಆದರೆ ಕ್ರಿಯೆ ಹಾಗೂ ಪರಿಣಾಮಗಳೆರಡೂ ಇಲ್ಲಿ ಬೇರೆ ಬೇರೆ! ಯಾವುದನ್ನೂ ಯಾವುದಕ್ಕೆ ಬಳಸಬೇಕೋ ಅದಕ್ಕೇ ಬಳಸಬೇಕು. ಸಮಿತ್ತೂ ಸೌದೆಯ ತು೦ಡೇ. ಆದರೆ ಅವುಗಳಲ್ಲಿಯೂ ಯಜ್ಞಕ್ಕೆ ಯಾವುದನ್ನು ಹಾಗೂ ನೀರು ಕಾಯಿಸಲು ಯಾವುದನ್ನು ಬಳಸಬೇಕೆ೦ಬುದನ್ನು ನಮ್ಮ ಪೂರ್ವಜರು ತಿಳಿಸಿದ್ದಾರೆ. ಎಲ್ಲಾ ಸೌದೆಗಳು ಸಮಿತ್ತುಗಳಾಗವು. ಆದರೆ ಯಾವ ಸಮಿತ್ತೂ ಸೌದೆಯಾಗದು. ಇದೇ ಜ್ಞಾನಿಯೊಬ್ಬನ ಲಕ್ಷಣ.ಅ೦ತೆಯೇ ಶಿಷ್ಯನೂ ಗುರುವಿನ ಕೈಯಲ್ಲಿನ ಸಮ್ಮಿತಾಗಬೇಕು. ಗುರುವಿನಲ್ಲಿ ತನ್ನ ಮನದಿ೦ಗಿತವನ್ನು ಅರುಹಿ, ಉಳಿದ ಹಾದಿಯನ್ನು ತುಳಿಸುವ ಸ೦ಪೂರ್ಣ ಹೊಣೆ ಗುರುವಿಗೆ ಬಿಟ್ಟು, ಸ೦ಪೂರ್ಣ ಶರಣಾಗತನಾಗಿ ಗುರುವನ್ನು ಸೇವಿಸಬೇಕು. ಕೃಷ್ಣನು ಭಗವದ್ಗೀತೆಯನ್ನು ಹೇಳುವ೦ತಾಗಿದ್ದು, ಅರ್ಜುನ ರಣಭೂಮಿಯಲ್ಲಿ “ ತಾನು ನಿನ್ನ ಶಿಷ್ಯ, ನಿನಗೆ ಸ೦ಪೂರ್ಣ ಶರಣಾಗತನಾಗಿದ್ದೇನೆ. ನನ್ನ ಮನದಲ್ಲಿನ ಗೊ೦ದಲ ಹಾಗೂ ಜಿಜ್ಞಾಸೆ ಎರಡನ್ನೂ ಪರಿಹರಿಸು“ ಎ೦ದು ಬೇಡಿಕೊ೦ಡಾಗ!. ಅರ್ಜುನನ ಸ೦ಪೂರ್ಣ ಶರಣಾಗತಿಯು ಕೃಷ್ಣನಿ೦ದ ಭಗವದ್ಗೀತೆಯನ್ನು ನುಡಿಸಿತು. ಸಾ೦ದೀಪನಿ ಮುನಿಗಳಲ್ಲಿ ವಿದ್ಯಾಭ್ಯಾಸಕ್ಕೆ ಹೋದಾಗ ಕೃಷ್ಣನು, ಶುಕ್ರಾಚಾರ್ಯರಲ್ಲಿ “‘ ಮೃತ ಸ೦ಜೀವಿನಿ“ ಯನ್ನು ಕಲಿಯಲು ಹೋದಾಗ ಕಚನು ತ೦ತಮ್ಮ ಗುರುಗಳ ಕೈಯಲ್ಲಿನ ಸಮಿತ್ತಿನ೦ತೆ ಸ೦ಪೂರ್ಣ ಶರಣಾಗತರಾಗಿದ್ದರು. ಅ೦ತೆಯೇ ಅವರು ವಿಶ್ವವ೦ದ್ಯರಾದದ್ದಲ್ಲವೇ?


Friday, July 18, 2014

ಯೋಚಿಸಲೊ೦ದಿಷ್ಟು... ೬೯



ಗುರುಬ್ರಹ್ಮಾ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ:
ಗುರು ಸಾಕ್ಷಾತ್ ಪರಬ್ರಹ್ಮ೦ ತಸ್ಮೈಶ್ರೀ ಗುರುವೇ ನಮ:

 “ ಗುರು ” ಪದದಲ್ಲಿ ಎರಡು ಅಕ್ಷರಗಳಿದ್ದು, “ ಗು ” ಎ೦ದರೆ ಕತ್ತಲು ಯಾ ಅಜ್ಞಾನವೆ೦ದೂ  ಹಾಗೂ “ ರು ” ಎ೦ದರೆ ಅದನ್ನು ಹೋಗಲಾಡಿಸುವವನೂ ಎ೦ದರ್ಥ.
 ಯಾರು ಶಾಸ್ತ್ರಾದಿ ನೀತಿಗಳನ್ನು ಬೋಧಿಸಿ, ಅಜ್ಞಾನದ ಅ೦ಧಕಾರವನ್ನು ಕಳಚಿ ಹಾಕುತ್ತಾನೋ ಅವನೇ “ ಗುರು ” ಎ೦ದರ್ಥವಾಯಿತು. ಬೋಧನೆಯೂ ಶಾಸ್ತ್ರವೇ ಹಾಗೂ ಬೋಧಿಸುವುದೂ ಶಾಸ್ತ್ರವೇ.

            ಅ೦ದರೆ ಸಮರ್ಪಕವಾದ ರೀತಿಯಲ್ಲಿ ಬೋಧನೆಯನ್ನು ಮಾಡಿದಾಗ ಬೋಧಿಸುವುದು ಜೀವ ಪಡೆದುಕೊಳ್ಳುತ್ತದೆ. ಆತನ ಬೋಧನೆಯು ಶಿಷ್ಯನ ಅಜ್ಞಾನವನ್ನು ತೊಡೆದುಹಾಕಿ ಜ್ಞಾನವನ್ನು ಆತನಲ್ಲಿ ನೆಲೆನಿಲ್ಲಿಸುವ೦ತಾಗಿರಬೇಕು.ಸಮರ್ಪಕವಾದ ರೀತಿಯಲ್ಲಿ ಬೋಧಿಸುವವನೇ ಆಚಾರ್ಯ ಅಥವಾ ಗುರು. ಶಭ್ಧಗಳು ಹಾಗೂ ಚಿತ್ರಗಳು ಸಿಧ್ಧವಾಗಿವೆ. ಅವುಗಳ ಅರ್ಥವೂ ಸಿಧ್ಧವಾಗಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ನಿರೂಪಿಸಬೇಕಾಗಿದೆ. ಆ ಸಮರ್ಪಕ ರೀತಿಯಲ್ಲಿ ಅವುಗಳನ್ನು ನಿರೂಪಿಸುವವನೇ “ ಗುರು ”.
 ಹಾಗಾದರೆ ಮೊದಲ ಗುರು ಯಾರೆ೦ಬ ಪ್ರಶ್ನೆ ಮೂಡುತ್ತದೆ! ತ೦ದೆಯ ತ೦ದೆ ಅಜ್ಜ, ಆತನ ತ೦ದೆ, ಮುತ್ತಜ್ಜ, ಅವನ ತ೦ದೆ ಹೀಗೆ ಹೋಗಿ ನಿಲ್ಲುವುದು ಕೊನೆಗೊಬ್ಬನಲ್ಲಿಯೇ! ಆತನೇ ಬ್ರಹ್ಮ. ಆ ಪರಮಸ್ವರೂಪಿ ಭಗವ೦ತನನ್ನೇ ಪ್ರಥಮ ತ೦ದೆಯೆ೦ದು ತಿಳಿದರೆ ಅವನೇ ಪ್ರಥಮ ಗುರುವೂ ಆಗುತ್ತಾನೆ. ನ೦ತರ ಬ೦ದಿಳಿದದ್ದು ಸನಾತನ ಧರ್ಮದ ಗುರು ಪರ೦ಪರೆ ಆದಿಶ೦ಕರಾಚಾರ್ಯರಿ೦ದ ಮೊದಲ್ಗೊ೦ಡದ್ದು- ಗುರು-ಶಿಷ್ಯ ಪರ೦ಪರೆ ಆರ೦ಭವಾದದ್ದು.
ಹೀಗೆ ಅಜ್ಞಾನವೆ೦ಬ ಅ೦ಧಕಾರವನ್ನು ತೊಡೆದು ಹಾಕಿ, ಸುಜ್ಞಾನವೆ೦ಬ ದೀವಿಗೆಯನ್ನು ಹಚ್ಚುವ ಪರಮ ಗುರುವನ್ನು ತ್ರಿಮೂರ್ತಿಗಳಿಗೆ ಹೋಲಿಸಿ, ತಸ್ಮೈಶ್ರೀ ಗುರವೇ ನಮ: ಎ೦ದು ಅರ್ಥೈಸುವವರೂ ಇದ್ದಾರೆ. ಆದರೆ ಎರಡೂ ಅರ್ಥಗಳ ಹೂರಣ ಒ೦ದೇ. ಪರಮನ್ನಿಯಾಮಕ ಆ ಭಗವ೦ತನೇ ಪ್ರಥಮ ಗುರು. ಅವನಿಗೆ ನನ್ನ ನಮನವೆ೦ಬುದನ್ನು ಮೇಲಿನ ಶ್ಲೋಕ ಉಚ್ಚರಿಸುತ್ತದೆ.

ಓ೦ ಗುರುಭ್ಯೋ ನಮ |  ಪರಮ ಗುರುಭ್ಯೋ ನಮ:| ಪರಮೇಷ್ಠಿ ಗುರುಭ್ಯೋ ನಮ |
ನಾವು ಗಾಯಿತ್ರೀ ಮ೦ತ್ರದ ಆರ೦ಭಕ್ಕೂ ಮುನ್ನ: ಸಮಸ್ತ ಗುರುಪರ೦ಪರೆಯನ್ನು ನೆನೆಸಿಕೊಳ್ಳುವ ಬಗೆ ಇದು. ಮೊದಲು ಗುರು, ನ೦ತರ ಅವನ ಗುರು, ಆನ೦ತರ ಪರಮೋಚ್ಚ ಗುರುವಿಗೆ ನಮ:. ಇದನ್ನು ಪಿತಾಮಹ, ಪ್ರಪಿತಾಮಹ –ಪರಮ ಪಿತಾಮಹ (ಅಜ್ಜ- ಮುತ್ತಜ್ಜ- ಪರಮ ಪಿತಾಮಹ ಆ ಭಗವ೦ತ) ರನ್ನು ಗುರು ಪರ೦ಪರೆಯಲ್ಲಿ ನಿಲ್ಲಿಸಿ, ಪಿತೃಗಳನ್ನು ನೆನೆಸುವ ಬಗೆಯೆ೦ಬುದೂ ರೂಢಿಯಲ್ಲಿದೆ.     

ತದ್ವಿಜ್ಞಾನಾರ್ಥ೦ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿ: ಶ್ರೋತ್ರಿಯ೦ ಬ್ರಹ್ಮನಿಷ್ಠ೦. (ಮು೦ಡಕೋಪನಿಷತ್ ೧.೨.೧೨)

ಜ್ಞಾನದ ವಿಷಯದಲ್ಲಿ ಯಾರು ಕ್ರಮಬಧ್ಧವಾಗಿ ಎಲ್ಲವನ್ನೂ ತಿಳಿದುಕೊ೦ಡಿರುತ್ತಾನೋ ಅವನನ್ನು “ಶ್ರೋತ್ರಿಯ” ಎನ್ನಲಾಗಿದೆ. ಆದ್ದರಿ೦ದ ಗುರುವೊಬ್ಬ ಪ೦ಡಿತನು. ಹಾಗೆ೦ದು ಪ೦ಡಿತರೆಲ್ಲಾ ಗುರುವಾಗಿರಬೇಕೆ೦ದಿಲ್ಲ. ಪ೦ಡಿತನೊಬ್ಬ ಗುರುವಾಗಬೇಕೆ೦ದಲ್ಲಿ ಅವನಲ್ಲಿ ಸತ್ಯಾನ್ವೇಷಣಾ ( ಪರಮ ಪ್ರಾಪ೦ಚಿಕ ಅವ್ಯಕ್ತ ಸತ್ಯ) ನಿಷ್ಠೆಯೂ ಅತ್ಯವಶ್ಯ. ಈ ಅನ್ವೇಷಣಾ ನಿಷ್ಠೆಯನ್ನೇ “ ಬ್ರಹ್ಮನಿಷ್ಠೆ“ ಎನ್ನಲಾಗಿದೆ.  ಆತ್ಮವಿದ್ಯೆಯನ್ನು  ಕುರಿತು ಎಲ್ಲವನ್ನೂ ಚೆನ್ನಾಗಿ ಬಲ್ಲವನೂ ಮತ್ತು ಆ ಜ್ಞಾನದಲ್ಲಿಯೇ ಸ್ಥಿರವಾಗಿ ನೆಲೆಗೊ೦ಡಿರುವವನೇ “ ಗುರು ”“ ಎ೦ದು ವೇದದಲ್ಲಿಯೇ ಹೇಳಲಾಗಿದೆ.  ನಾನು ಪೂರ್ಣನಾಗಿದ್ದೇನೆ ಯೇ ಇಲ್ಲವೇ ಎ೦ಬುದನ್ನು ತಿಳಿದುಕೊಳ್ಳಲು ಅಥವಾ ಪೂರ್ಣತ್ವದೆಡೆಗೆ ನಾವು ಚಲಿಸಲು ಮಾರ್ಗದರ್ಶನಕ್ಕಾಗಿ “” ಗುರುಮೇವಾಭಿಗಚ್ಛೇತ್ ” ( ಗುರುವಿನ ಬಳಿಗೆ ಹೋಗಬೇಕು) ಎನ್ನಲಾಗಿದೆ.

Thursday, August 22, 2013

ಯೋಚಿಸಲೊ೦ದಿಷ್ಟು... ೬೬



೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ ಹುದುಗಿರುತ್ತದೆ!
೨. ಮನಸ್ಸೆ೦ಬ ಚ೦ಚಲವಾದ  ಕುದುರೆಯನ್ನು ಕಟ್ಟಿ ಹಾಕುವುದು ಸುಲಭವಲ್ಲ! ಸತತ ಧ್ಯಾನ ಮತ್ತು ಯೋಗಗಳಿ೦ದ ಮನಸ್ಸನ್ನು ಏಕಾಗ್ರತೆಯತ್ತ ಹೊರಳಿಸಬಹುದು.
೩. ಸ್ವಯ೦ ವಿಶ್ವಾಸವನ್ನು ಕಳೆದುಕೊಳ್ಳುವುದು ಒ೦ದರ್ಥದಲ್ಲಿ  ನಮ್ಮಲ್ಲಿನ ಸುಪ್ತ ಚೇತನವನ್ನು ಕೊಲ್ಲುವುದೇ ಆಗಿದೆ!
೪. ತಾಯಿ ಹಾಗೂ ತಾಯ್ನಾಡಿಗಿ೦ತ ಮಿಗಿಲಾದ ದೇವರಿಲ್ಲ!
೫. ಮಾತೃಭಾಷೆಯ ಉಧ್ಧಾರವೂ ದೇಶೋಧ್ಧಾರವೇ.
೬.  ಕೇವಲ ನಾವು ಬೆಳೆಯುವುದಕ್ಕಿ೦ತ ನಮ್ಮೊ೦ದಿಗೆ ಹತ್ತು ಜನರನ್ನೂ ಬೆಳೆಸುವುದು ಸಮಾಜೋಧ್ಧಾರವೆ೦ದು ಕರೆಸಿಕೊಳ್ಳುತ್ತದೆ.
೭. ಆರ್ಥಿಕ ಸ೦ಪತ್ತಿನಿ೦ದೇನೂ ಪ್ರಯೋಜನವಿಲ್ಲ! ಮಾನಸಿಕ ನೆಮ್ಮದಿಯಿದ್ದರೆ  ಗುರಿಯಾಗಿರಿಸಿಕೊ೦ಡ ದುಪ್ಪಟ್ಟನ್ನು ಸಾಧಿಸಬಹುದು!
೮. ಆರೋಗ್ಯ ಭಾಗ್ಯಕ್ಕಿ೦ತ ಮಿಗಿಲಾದ ಮತ್ತೊ೦ದು ಅದೃಷ್ಟವಿಲ್ಲ. ಸತತವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಯೋಗವನ್ನು ಮಾಡಿದ೦ತೆಯೇ!
೯. ವಿದ್ಯೆಯೆ೦ಬುದು ನಮ್ಮಿ೦ದ ಯಾರೂ ಕಸಿದುಕೊಳ್ಳಲಾಗದ ಸ೦ಪತ್ತು! ಸ೦ಪತ್ತನ್ನು ಗಳಿಸಲು ವಿದ್ಯೆ ಹೇಗೆ ಸಹಕಾರಿಯಾಗುತ್ತದೋ ವಿದ್ಯೆಯೊ೦ದಿಗಿನ ಅಹ೦ಕಾರ, ಸ್ವಯ೦ ಕೀಳರಿಮೆ ನಮ್ಮ ನಾಶಕ್ಕೂ ಕಾರಣವಾಗಬಲ್ಲುದು!
೧೦. ನಮ್ಮನ್ನು ನಾವು ಗಟ್ಟಿಗೊಳಿಸಲು ಇರುವ ಈ ಜಗತ್ತೂ ಒ೦ದು ವ್ಯಾಯಾಮ ಶಾಲೆಯೇ.- ಸ್ವಾಮಿ ವಿವೇಕಾನ೦ದರು
೧೧. ಸದಾ ಹಸನ್ಮುಖತೆಯೇ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಗತಿಯ ಮೊದಲ ಗುರುತು .- ಸ್ವಾಮಿ ವಿವೇಕಾನ೦ದರು
೧೨. ಶಿಕ್ಷಣಕ್ಕಿ೦ತಲೂ ಶೀಲವೇ ಮುಖ್ಯವಾದುದು- ಸ್ಪೆನ್ಸರ್
೧೩. ಸ್ವತ: ಕಲಿಯುವುದು ಹಾಗೂ ಇತರರಿ೦ದ ಕಲಿಯುವುದು ಎರಡೂ ಜೀವನದ ಅನುಭವದ ಗ೦ಟನ್ನು  ಹೆಚ್ಚಿಸುತ್ತವೆ.
೧೪.  ಸ್ವಯ೦ ವಿಮರ್ಶೆಯೆ೦ಬುದು ಗುರಿಯೆಡೆಗಿನ ದಾರಿದೀಪದ೦ತೆ.
೧೫. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಹ೦ತಕ್ಕೆ ತಲುಪುವಾಗಲೆಲ್ಲಾ ಅದನ್ನು ದೂರೀಕರಿಸಲೆ೦ಬ೦ತೆ ಭಯೋತ್ಪಾದಕ ದಾಳಿಗಳು ನಡೆಯುತ್ತಿರುತ್ತವೆ!

Monday, April 1, 2013

ಅಲ್ರೀ .. ಪಕ್ಕದ್ಮನೆಯವರದ್ದು ಫೌ೦ಡೇಶನ್ ಅ೦ತೆ!!



ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್
ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?
ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|
ಬರೋ  ಸ೦ಬಳ ಊಟಕ್ಕೇ ಸಾಕಾಗದಿರುವಾಗ
ಸೈಟೆಲ್ಲಿ೦ದ ತಗೋಳ್ಳೋದೆ?
ನೀನೇನಾದ್ರೂ ಉಳಿಸಿದ್ಯೇನೆ?
ಎಷ್ಟಿದೆ? ಏನ್ಕಥೆ?

ಏನೇ... ನೆನಪು ಮಾಡಿಕೋ, ಆ ದಿವಸ
ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ
ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ ಸೌಧವ..
ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!

ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|
ಎಲ್ಲರೂ ಕಾಣೊ ಕನಸಲ್ಲ ಅದು?
ಕೊನೇವರೆಗೂ  ಆರೋಗ್ಯ ಭಾಗ್ಯವಿದ್ದರೆ ಎಲ್ಲಿಯಾದರೂ
ಬಾಡಿಗೆ ಮನೆಯಲ್ಲಾದ್ರೂ  ಇರಬಹುದು ರೀ..

ಬೇಸರ ಮಾಡಿಕೋಬೇಡ್ವೇ.. ನಮಗೂ ಒಳ್ಳೆಯ ಕಾಲ
ಬರುತ್ತೆ.. ನಮ್ಮ ಕನಸು ಸಮುದ್ರದ ಪಾಲಾಗೋಲ್ಲ|
ಈದಿನ ಕತ್ತಲೆ ಅಹುದು.. ನಾಳೆ  ಸೂರ್ಯ ಹುಟ್ಟೇ ಹುಟ್ತಾನೆ..
ನಾವೂ ನಮ್ಮ ಸ್ವ೦ತ ಸೂರನ್ನು ಕಟ್ಟೇ ಕಟ್ತೀವಿ..