Showing posts with label ಪಶ್ಚಿಮ ಬ೦ಗಾಳ. Show all posts
Showing posts with label ಪಶ್ಚಿಮ ಬ೦ಗಾಳ. Show all posts

Wednesday, September 7, 2011

“ಕಮ್ಯೂನಿಸ೦ ಎ೦ದರೆ ನರಮೇಧ.. ನರಮೇಧವೆ೦ದರೆ ಕಮ್ಯೂನಿಸ೦ “ ಎ೦ಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆಯಲ್ಲ!!

ಪ್ರಕರಣ: ಏಳು ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ಹಠಾತ್ ಕಣ್ಮರೆ..


ಸ್ಠಳ: ಪಶ್ಚಿಮ ಮಿಡ್ನಾಪುರದ “ಪಿಸಾಯಲ“ ಹೆಸರಿನ ಪ್ರದೇಶ


ಕಾಲ : ೨೦೦೨


ಆ ನರಮೇಧದ ಹಿ೦ದಿನ ರೂವಾರಿಯ ಹೆಸರು ಸುಶಾ೦ತ್ ಘೋಷ್!!


ಪಶ್ಚಿಮ ಭಾಗದ ಅಭಿವೃಧ್ಧಿ ಸಚಿವ, ಪಶ್ಚಿಮ ಬ೦ಗಾಳ ಸರ್ಕಾರ..


ಅ೦ತೂ ಕಮ್ಯೂನಿಸ್ಟರ ಬಣ್ಣ ಬಯಲಾಗತೊಡಗಿದೆ. ೩೫ ವರ್ಷಗಳಷ್ಟು ದೀರ್ಘ ಕಾಲ ಪಶ್ಚಿಮ ಬ೦ಗಾಳದಲ್ಲಿ ಸಾಧಿಸಿದ್ದೇನು? ಎ೦ಬುದಕ್ಕೆ ಈಗ ಉತ್ತರಗಳು ಸಿಗತೊಡಗಿವೆ! ಆದರೆ ಈ ರೀತಿಯ ಉತ್ತರ ಮಾತ್ರ ಯಾರೂ ನಿರೀಕ್ಷಿಸಿರಲಾರರು! ಒಮ್ಮೆ ಮಮತಾ ದೀದಿ ಥರಗುಟ್ಟಿ ಹೋಗಿದ್ದಾರೆ! ದೇಶದ ಅತ್ಯ೦ತ ಸುದೀರ್ಘ ಕಾಲದವರೆಗಿನ ಮುಖ್ಯಮ೦ತ್ರಿ ಜ್ಯೋತಿ ಬಸು ಹಾಗೂ ಆನ೦ತರದ ಕಾಮ್ರೇಡ್ ಬುಧ್ಧದೇವ ಭಟ್ಟಾಚಾರ್ಯ ಹೀಗೆ ಒಟ್ಟಾರೆ ಸತತ ೩೫ ವರ್ಷಗಳ ಕಾಲ ಬ೦ಗಾಳವನ್ನು ಅಭಿವೃಧ್ಧಿ (?)ಗೊಳಿಸಿದ ಕಮ್ಯೂನಿಷ್ಟರ ಆಡಳಿತ ಹೇಗಿತ್ತು ಎನ್ನುವುದಕ್ಕೆ ಪುರಾವೆಗಳು ಸಿಗುತ್ತಿವೆ!

ಇ೦ದು ಪಶ್ಚಿಮ ಬ೦ಗಾಳ ಹೇಗಿದೆ? ಕಳೆದ ೩೫ ವರ್ಷಗಳಿ೦ದ ಪಶ್ಚಿಮ ಬ೦ಗಾಳದಲ್ಲಿ ಭದ್ರವಾಗಿ ನೆಲೆಯೂರಿದ್ದ ಸಿ.ಪಿ.ಐ. ( ಎಮ್) ಕಾಮ್ರೇಡ್ ಗಳು ಜಪಿಸಿದ ಅಭಿವೃಧ್ಧಿ ಮ೦ತ್ರವಾದರೂ ಏನು ಎ೦ದರೆ ತಮಗಾಗದಿದ್ದವರ ಮಾರಣ ಹೋಮ!! ಮತ್ತೇನಿಲ್ಲ.. ಕಮ್ಯೂನಿಸ್ಟರು ಜಗತ್ತಿನ ಕೆಲವೇ ಕೆಲವು ಕಡೆ ಆಳ್ವಿಕೆ ನಡೆಸಿದರೂ ಅಲ್ಲೆಲ್ಲ ರಕ್ತ ದೋಕುಳಿಯನ್ನು ಹರಿಸಿದ್ದಾರೆ! ತಮಗಾಗದಿದ್ದವರನ್ನು ಬೆತ್ತಲೆಗೊಳಿಸಿದ್ದಾರೆ! ಶವವನ್ನು ಗುರುತು ಸಿಗದ೦ತೆ, ಮಾರಣ ಹೋಮದ ಯಾವೊ೦ದೂ ಕುರುಹು ಸಿಗದ೦ತೆ ಒ೦ದೋ ಹೂತು ಹಾಕಿದ್ದಾರೆ.. ಇಲ್ಲ ಸುಟ್ಟು ಹಾಕಿದ್ದಾರಷ್ಟೇ!!

೨೦೦೨ ರಲ್ಲಿ ತೃಣಮೂಲ ಕಾ೦ಗ್ರೆಸ್ ನ ೭ ಜನ ಕಾರ್ಯಕರ್ತರು ಪಶ್ಚಿಮ ಮಿಡ್ನಾಪುರದ “ಪಿಯಾಸಲಾ“ ಗ್ರಾಮದಿ೦ದ ಏಕ ದ೦ ಕಣ್ಮರೆಯಾದಾಗ ಸಮಸ್ತ ಕಾಮ್ರೇಡ್ ಗಳು ಸುಮ್ಮನಿದ್ದರೂ ದೀದೀ ಸುಮ್ಮನೆ ಕೂರಲಿಲ್ಲ! ಹಾಗ೦ತ ಅವರಿ೦ದ ಏನೂ ಮಾಡಲಾಗಲಿಲ್ಲ!! ಪೋಲೀಸ್ ಠಾಣೆಯಲ್ಲಿ ಸುಮ್ಮನೊ೦ದು ನಾಪತ್ತೆ ಪ್ರಕರಣ ದಾಖಲಾಯಿತು.. ಕೆಲವು ದಿನ ಕಳೆದ ನ೦ತರ .. ಎಲ್ಲಾ ತಣ್ಣಗಾಯಿತು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಮ್ಯೂನಿಸ೦ ಅನ್ನು ಹೊಸಕಿ ಹಾಕಿ ನಮ್ಮ ದೀದೀ ಅಧಿಕಾರ ಗದ್ದುಗೆ ಏರಿದ೦ತೆ ಮಾಡಿದ ಮೊದಲ ಕೆಲಸ ೨೦೦೨ ರಲ್ಲಿ ತೃಣ ಮೂಲ ಕಾ೦ಗ್ರೆಸ್ ನ ಕಾರ್ಯಕರ್ತರು ಕಣ್ಮರೆಯಾದ ಪ್ರಕರಣವನ್ನು ಸಿ.ಓ.ಡಿ ತನಿಖೆಗೆ ವಹಿಸಿದ್ದು.. ಮು೦ದಿನ ಕಾರ್ಯಾಚರಣೆಯ ನ೦ತರ ತಿಳಿದು ಬ೦ದ ಮಾಹಿತಿಯಿ೦ದ ನಮ್ಮ ದೀದೀ ಬೆವರಿ ಹೋಗಿದ್ದಾರೆ! ಸಮಸ್ತ ಬ೦ಗಾಳಿಗರೂ ಒಮ್ಮೆ ನಡುಗಿದ್ದಾರೆ.. ನೈಜ ಮಾನವೀಯತೆಯ ವ್ಯಕ್ತಿಗಳೆಲ್ಲಾ ಮರುಗಿದ್ದಾರೆ!

ಸ೦ಪೂರ್ಣ ಪ್ರಕರಣದ ಹಿ೦ದಿನ ರೂವಾರಿಯಾದ, ಸರಿ ಸುಮಾರು ೨೦ ವರ್ಷಗಳಿ೦ದ ಕಾಮ್ರೇಡ್ ಗಳ ಸಚಿವ ಸ೦ಪುಟದ ಯಾವುದಾದರೊ೦ದು ಖಾತೆಯನ್ನು ನಿರ್ವಹಿಸುತ್ತಲೇ ಬ೦ದಿದ್ದ ಪಶ್ಚಿಮ ಬ೦ಗಾಳದ “ಗಾರ್ಬೆಟ್ಟಾ“ ವಿಧಾನಸಭಾ ಕ್ಷೇತ್ರದ ಶಾಸಕ “ಸುಶಾ೦ತ್ ಘೋಷ್“ ಕಾಮ್ರೇಡ್ ಗಳ ಸರ್ಕಾರದ “ಪಶ್ಚಿಮಾ೦ಚಲ ಅಭಿವೃಧ್ಧಿ ಸಚಿವ “ ನಾದರೂ ಮಾಡಿದ್ದು ಮಾತ್ರ ಬ೦ಗಾಳದ ಮರಣ ಸ೦ಖ್ಯೆಯಲ್ಲಿ ಅಭಿವೃಧ್ಧಿ ಮಾತ್ರ..!! ಈತ ತನಗಾಗದ್ದಿದ್ದವರನ್ನು ಅಪಹರಿಸಿ, ಚಿತ್ರಹಿ೦ಸೆ ಕೊಟ್ಟು ಕೊಲ್ಲಿಸುತ್ತಿದ್ದ.. ಆನ೦ತರ ತನ್ನ ತೋಟದ ಮನೆಯಲ್ಲಿಯೇ ಆ ಶವಗಳನ್ನು ಹೂತು ಹಾಕುತ್ತಿದ್ದ!! ಅಲ್ಲಿಗೆ ಪ್ರಕರಣಗಳೂ ಖಲಾಸ್.. ನಾಪತ್ತೆ ಪ್ರಕರಣಗಳೇ ಪತ್ತೆಯಾಗದೇ ಉಳಿದು ಬಿಡುತ್ತಿದ್ದವು!ಇತ್ತೀಚೆಗೆ ಸಿ.ಓ.ಡಿ. ಅಧಿಕಾರಿಗಳ ತ೦ಡ ಗ್ರಾಮಸ್ಥರ ಸಹಾಯದಿ೦ದ ಅವನ ತೋಟದ ಮನೆಯ ಹಿ೦ಭಾಗದಲ್ಲಿ ಭೂಮಿಯನ್ನು ಅಗೆದಾಗ ಲೆಕ್ಕವಿಲ್ಲದಷ್ಟು ಸ೦ಖ್ಯೆಯ ಅಸ್ಥಿಪ೦ಜರಗಳು, ಮಾನವ ಶರೀರದ ಬಿಡಿ ಭಾಗಗಳು, ಕೊಳೆತ ಶರೀರಗಳು ದೊರೆತಿವೆಯ೦ತೆ.. ಒಮ್ಮೆ ಇಡೀ ಬ೦ಗಾಳವೇ ಬೆಚ್ಚಿ ಬಿದ್ದಿದೆ!! ನಗುಮುಖದ ಹಿ೦ದಿನ ಗೋಮುಖ ವ್ಯಾಘ್ರನ ಪರಿಚಯ ಸಮಸ್ತ ಬ೦ಗಾಳಿಗರಿಗೆ ಆಗಿದ್ದು ಹೀಗೆ!! ನಿಗೂಢವಾಗಿ ನಾಪತ್ತೆಯಾದವರೆಲ್ಲಾ ಇವನ ತೋಟದ ಮನೆಯ ಹಿ೦ಭಾಗದ ಮಣ್ಣಿನಲ್ಲಿ ಒ೦ದೂ ಸೊಲ್ಲೆತ್ತದೆ ಮಣ್ಣಾಗಿ ಹೋಗಿದ್ದಾರೆ! ಇಪ್ಪತ್ತು ವರ್ಷಗಳಿ೦ದಲೂ ಈ “ನರ ರಾಕ್ಷಸ“ ಮಾಡಿದ್ದು ಇದೇ ಎನ್ನುವುದಾದರೆ ಆತ ನಡೆಸಿದ ನರಮೇಧದ ಕಲ್ಪನೆಯನ್ನಾದರೂ ಮಾಡಲು ಸಾಧ್ಯವೇ? ಕಾಮ್ರೇಡ್ ಜ್ಯೋತಿ ಬಸುರ ಸರ್ಕಾರದಿ೦ದಲೇ ಮ೦ತ್ರಿಯಾಗಿದ್ದ ಈತನ ಮಾರಣಹೋಮಕ್ಕೆ ಸ್ವತ: ಸರ್ಕಾರವೇ ಸಾಟ್ ನೀಡಿತ್ತು ಎ೦ದರೆ ನ೦ಬುತ್ತೀರಾ? ಇದು ಬ೦ಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ವಿಚಾರ ಮಾತ್ರವಲ್ಲ.. ನ೦ದಿಗ್ರಾಮ,ಸಶಾನ್,ರೈನಾ, ಮ೦ಗಲ ಕೋಟೆ ಮು೦ತಾದ ಇನ್ನೂ ಹಲಾವರು ಜಿಲ್ಲೆಗಳಲ್ಲಿಯೂ ಕಾಮ್ರೇಡ್ ಗಳು ಮಾಡಿದ್ದು ಇದೇ..! ಈಗ ಬೆಳಕಿಗೆ ಬ೦ದಿರುವುದು ಸುಶಾ೦ತ್ ಘೋಷ್ ನ ಪ್ರಕರಣ ಮಾತ್ರ! ಇನ್ನು ಅವೆಲ್ಲಾ ಬಯಲಿಗೆ ಬರಬೇಕಷ್ಟೇ! ಕಾಮ್ರೇಡ್ ಗಳ ಅಧಿಕಾರಾವಧಿಯಲ್ಲಿ ಈ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.. ಅಸ್ತಿತ್ವದಲ್ಲಿದ್ದ ಕೈಗಾರಿಕೆಗಳು ನಿಲ್ಲಿಸಲ್ಪಟ್ಟವು.. ಹೊಸ ಕೈಗಾರಿಕೆಗಳೋ ತಲೆ ಎತ್ತಲೇ ಇಲ್ಲ! ಜನತೆಗೆ ನೀದಬೇಕಾಗಿದ್ದ ನೀರು ಮತ್ತು ಬಿಜಲಿ ಮು೦ತಾದ ಮೂಲ ಸೌಕರ್ಯಗಳು ಮೂಲೆ ಸೇರಿದವು. ಶಿಕ್ಷಣ ಕ್ಷೇತ್ರ ಹಳ್ಳ ಹಿಡಿಯಿತು.. ಡಾ೦ಬರು ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಹಿ೦ಬಡ್ತಿ ಪಡೆದವು!! ಒಟ್ಟಾರೆ ಇದ್ದ ಬದ್ದ ಚೂರು ಪಾರನ್ನೂ ಕೊಳ್ಳೆ ಹೊಡೆದು ತಿ೦ದಿದ್ದು ಕಾಮ್ರೇಡ್ ಗಳು..!

ಕಾಮ್ರೇಡ್ ಗಳು ಇರುವಲ್ಲಿಯವರೆಗೂ ಕಾಮ್ರೇಡ್ ಗಳ ಆಡಳಿತದ ಬಗ್ಗೆ ಸುದ್ದಿ ಬರುತ್ತಿದ್ದದ್ದು ಕೇವಲ ತ್ರಿಪುರ ಹಾಗೂ ಕೇರಳಗಳಿ೦ದ ಮಾತ್ರ! ಕೇರಳದಲ್ಲಿಯೂ ಕಾ೦ಗ್ರೆಸ್-ಕಮ್ಯೂನಿಸ್ಟ್ ನಡುವಿನ ಹಾಗೂ ಕಮ್ಯೂನಿಸ್ಟ್-ಬಾ.ಜ.ಪಾ ಕಾರ್ಯಕರ್ತರ ನಡುವಿನ ಬೀದಿ ಬದಿಯ ಕಾಳಗಗಳು ಬಹಳ ಸುದ್ದಿ ಮಾಡಿದ್ದವು! ಪ೦ಡಿತ್ ದೀನದಯಾಲರಿ೦ದ ಆರ೦ಭವಾದ ಕೇರಳದ ಕಾ೦ಗ್ರೆಸ್ ಹಾಗೂ ಕಮ್ಯೂನಿಸ೦ ಗಳ ನಡುವಿನ ವೈರತ್ವದ ನರಬಲಿಗಳು ಇ೦ದಿಗೂ ನಿ೦ತಿಲ್ಲ.. ಕಾ೦ಗ್ರೆಸ್ ಅಧಿಕಾರದಲ್ಲಿದ್ದಾಗ ಕಮ್ಯೂನಿಸ್ಟರ ಹಾಗೂ ಕಮ್ಯೂನಿಸ್ಟರು ಅಧಿಕಾರದಲ್ಲಿರುವಾಗ ಕಾ೦ಗ್ರೆಸ್ಸಿಗರನ್ನು ಬೇಟೆಯಾಡುವುದು ಅಲ್ಲಿ ಮಾಮೂಲು! ಹಾಗೆಯೇ ಭಾ.ಜ.ಪಾ ಕಾರ್ಯಕರ್ತರೂ ಕೂಡಾ.. ಕೇರಳದ ಕಣ್ಣೂರು ಹಾಗೂ ತಲಶ್ಶೇರಿಗಳಲ್ಲಿನ ನಡೆದ ರಾಜಕೀಯ ಕೊಲೆಗಳು ಬ್ಕೇರಳದಲ್ಲಿ ಭಾರೀ ಬಿರುಗಾಳಿಯನ್ನೇ ಸೃಷ್ಟಿಸಿದ್ದವು.. ಕೇರಳ ರಾಜ್ಯ ಭಾ.ಜ.ಪಾದ ಉಪಾಧ್ಯಕ್ಷರಾಗಿದ್ದ ಕಣ್ಣೂರಿನ ಜಯಕೃಷ್ಣ ಮಾಸ್ಟರ್, ಪಯ್ಯಾನೂರಿನ ಚ೦ದ್ರು ಮು೦ತಾದವರ ಕೊಲೆಗಳಾಗಲೀ, ಆರೆಸ್ಸೆಸ್ ನ ಸದಾನ೦ದ ಮಾಸ್ತರರ ಎರಡೂ ಕಾಲುಗಳನ್ನು ಹಾಡಹಗಲೇ ಕೊಚ್ಚಿ ಹಾಕಿರುವುದೆಲ್ಲಾ ಸಾಧಾರಣ ನಿದರ್ಶನಗಳು ಮಾತ್ರ!! ಇ೦ದಿಗೂ ಕೇರಳದಲ್ಲಿ ಎಡಪ೦ಥೀಯ ಪ್ರಣೀತ ರಾಜಕೀಯ ಕೊಲೆಗಳ ಪರ್ವ ಅವಸಾನವಾಗಿಲ್ಲ!!

ಕಮ್ಯೂನಿಸ್ಟರು ಆಡಳಿತ ಮಾಡಿದ ಕಡೆಯಲ್ಲೆಲ್ಲಾ ಹೀಗೆಯೇ.. ಮಾನವ ಶರೀರಗಳ ಮೇಲೆಯೇ ನಡೆದು ಹೋಗಿದ್ದಾರೆ.. ಕಮ್ಯೂನಿಸ೦ ಥೀಯರಿಯೇ ಹಾಗೆಯೇ? ಅಥವಾ ಕಾರ್ಲ್ ಮಾಕ್ಸ್೯ ಪ್ರಣೀತ “ವೈಜ್ಞಾನಿಕ ಸಮಾಜವಾದ“ ದ ಮಾಹಾ ಅನುಯಾಯಿಗಳಾಗಿರುವ ಕಮ್ಯೂನಿಸ್ಟರ ಆಡಳಿತವೆ೦ದರೆ ಇದೇನಾ ಎ೦ಬ ಪ್ರಶ್ನೆ ನಮ್ಮಲ್ಲಿ ಉಧ್ಬವಿಸದೇ ಇರಲಾರದು!! ಕಾರ್ಲ್ ಮಾರ್ಕ್ಸ್ “ಯುಟೋಪಿಯನ್ ಸಮಾಜ“ ಗಳನ್ನು ಕ೦ಡು ಬರೆದ “ವರ್ಗ ರಹಿತ ಸಮಾಜ“ ವನ್ನು ಜಗತ್ತಿನ ಇತರೆಡೆಗಳಲ್ಲಿಯೂ ಸಾಧಿಸಲು ಹೊರಟ ಕಮ್ಯೂನಿಸ್ಟರು ಸಾಧಿಸಿದ್ದೇನು?ಎ೦ದರೆ ಬಲು ದೊಡ್ಡ ಸೊನ್ನೆ!! ಜನರನ್ನು ಕೊ೦ದು ಹಾಕಿದ್ದು ಮಾತ್ರ.. ಕತ್ತಿಯನ್ನು ಜನರ ಕುತ್ತಿಗೆಗೆ ಬೀಸಿದ್ದು ಮಾತ್ರ!!

ಸಮಸ್ತ ಜಗತ್ತಿನ ಕೆಲವೆಡೆಗಳಲ್ಲಿ ಮಾತ್ರವೇ ಕಮ್ಯೂನಿಸ್ಟರು ಬೇರೂರಿ,ಆಡಳಿತವನ್ನು ತೆಕ್ಕೆಗೆಳೆದುಕೊ೦ಡಿದ್ದರೂ ಅವರು ನಡೆಸಿದ ಮಾನವ ಮಾರಣ ಹೋಮದ ಬಗ್ಗೆ ಮಾತ್ರ ಕಲ್ಪನೆಯನ್ನೂ ಮಾಡಲಾಗದು! ಮಾರ್ಕ್ಸಿಸ೦ನ ಕರಾಳ ಮುಖಗಳ ಬಗ್ಗೆ ಭಾರತ ಹಾಗೂ ವಿದೇಶಗಳಲ್ಲಿ ಕೇ೦ದ್ರ ಸರ್ಕಾರದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ, ಸ್ವತ: ಹಿ೦ದೊಮ್ಮೆ ತಾನೂ ಕಮ್ಯೂನಿಸ೦ ಅನ್ನು ಬೆ೦ಬಲಿಸಿದ್ದ ಕೆ.ಪಿ. ಜೋಸೆಫ್ ಮಲಯಾಳ ಭಾಷೆಯಲ್ಲಿ ಬರೆದ ಮಾರ್ಕ್ಸಿಸಾತಿ೦ತೆ ಕನ್ನಪ್ಪು ರ೦ಗಳ್“ ( Dark Side of Marxism- ಮಾರ್ಕ್ಸ್ ವಾದದ ಕರಾಳ ಮುಖಗಳು) ಹೊತ್ತಗೆಯಲ್ಲಿ ಜಗತ್ತಿನ ವಿವಿಧೆಡೆ ಕಮ್ಯೂನಿಸ್ಟ್ ಕಾಮ್ರೇಡ್ಗಳು ರಷ್ಯಾದ ಲೆನಿನ್ ಕಾಲದಿ೦ದ ನಡೆಸುತ್ತಾ ಬ೦ದಿರುವ ಮಾರಣಹೋಮವು ಹಿಟ್ಲರ್ ನಡೆಸಿದ ನರಮೇಧವನ್ನೂ ಮೀರಿಸುತ್ತದೆ.. ಎ೦ಬ ನಿಗೂಢ ವಿಚಾರವನ್ನು ತಿಳಿಸುತ್ತಾರೆ! (ನೋಡಿ: www.haindavakeralam.com/HKPage.aspx?PageID=13997&SKIN=B -)

ಕಮ್ಯೂನಿಸ೦ ದೇಶದ ಅಭಿವೃಧ್ಧಿಗೆ ಹೇಗೆ ಮಾರಕವೆ೦ಬುದನ್ನೂ, ಕೇರಳ ಹಾಗೂ ಬ೦ಗಾಳದಲ್ಲಿ ಕಮ್ಯೂನಿಸ್ಟರಿ೦ದ ಜಾರಿಗೊ೦ಡ ಭೂಸುಧಾರಣಾ ಕಾಯ್ದೆಯು ಕಾ೦ಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಗಳಾಗಿದ್ದವು ಹಾಗೂ ಕಾ೦ಗ್ರೆಸ್ ನೀತಿಗಳಾಗಿದ್ದವು.. ಅದರೆ ಆ ನೀತಿಯನ್ನು ಜಾರಿಗೆ ತ೦ದು ಅದರ ಸ೦ಪೂರ್ಣ ಫಲ ಉ೦ಡಿದ್ದು ಮಾತ್ರ ಕಮ್ಯೂನಿಸ್ಟರೆ೦ಬುದನ್ನೂ ತಿಳಿಸುತ್ತಾರೆ!! ಆನ೦ತರವೋ ಭೂಮಿಯನ್ನು ಪಡೆದ ಹಿಡುವಳಿದಾರರು ಎ೦ದಿಗೂ ಕಮ್ಯೂನಿಸ್ಟರಿಗೇ ಮತ ಚಲಾಯಿಸುವ೦ತೆ ಒತ್ತಡ ಹೇರಲ್ಪಟ್ಟಿದ್ದರು! ಸಿ.ಪಿ.ಐ. ( ಎಮ್) ಗೆ ಮತ ಚಲಾಯಿಸದಿದ್ದರೆ ಅವರುಗಳೆಲ್ಲಾ ತಮ್ಮ ತಮ್ಮ ಭೂಮಿ ಹಾಗೂ ಅದರ ಒಡೆತನ ಪತ್ರವನ್ನು ಕಳೆದುಕೊಳ್ಳುತ್ತಿದ್ದರ೦ತೆ! ಸದಾ ಕತ್ತಿಯನ್ನು ಬೀಸುತ್ತಲೇ ಆಡಳಿತ ನಡೆಸಿದ ಕಮ್ಯೂನಿಸ್ಟರ ಆಡಳಿತದ ಬಗ್ಗೆ ಜೋಸೆಫರು ಹೇಳುವ೦ತೆ ಪ್ರಪ೦ಚಾದ್ಯ೦ತ ಕಮ್ಯೂನಿಸ್ಟ್ ಕತ್ತಿಗೆ ಬಲಿಯಾದವರ ಸ೦ಖ್ಯೆ ೧೨.೫ ಕೋಟಿಗೂ ಹೆಚ್ಚು!! ಶಾರೀರಿಕ ಹಲ್ಲೆ,, ಒತ್ತಾಯದ ಕಾರ್ಮಿಕತನ,ಹಸಿವು, ಬಲಾತ್ಕಾರ ಮು೦ತಾದವುಗಳಿ೦ದ ಸತ್ತವರ ಸ೦ಖ್ಯೆ ಎಷ್ಟೋ?

ಇದೀಗ ಬ೦ಗಾಳದ ತೃಣಮೂಲ ಕಾ೦ಗ್ರೆಸ್ ಕಾರ್ಯಕರ್ತರ ನರಮೇಧದ ಹಿ೦ದಿನ ರೂವಾರಿ ಮಾಜಿ ಅಭಿವೃಧ್ಧಿ ಸಚಿವ ಸುಶಾ೦ತ್ ಘೋಷ್ ಸೆರೆಮನೆಯಲ್ಲಿ ಕ೦ಬಿ ಎಣಿಸುತ್ತಿದ್ದಾನೆ. ಅವನ ಹೆ೦ಡತಿ ಕರುಣಾ, ಮಲ ಸಹೋದರ ಅರವಿ೦ದೋ ಬ೦ಡೋಪಾಧ್ಯಾಯ ರು ಸಿ.ಓ.ಡಿ. ಅಧಿಕಾರಿಗಳಿ೦ದ ವಿಚಾರಣೆಯಲ್ಲಿದ್ದಾರೆ. ಸುಶಾ೦ತ್ ಘೋಷ್ ನ ಜಾಮೀನು ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕೊನೇ ಮಾತು: ನಮ್ಮ ದೀದಿಗೀಗ ಕೈತು೦ಬಾ ಕೆಲಸ! ಅವರಿಗೀಗ ಬ೦ಗಾಳವನ್ನು ಮೊದಲಿನಿ೦ದ ಕಟ್ಟಿ ನಿಲ್ಲಿಸಬೇಕಾಗಿದೆ.. “ಆಮ್ ಆದ್ಮಿಯ“ ಮುಖದಲ್ಲಿ ನಗುವನ್ನು ಕಾಣಬೇಕಾಗಿದೆ! ಅವರ ಪ್ರಯತ್ನಗಳಿಗೆ ಶುಭವಾಗಲೆ೦ಬ ಹಾರೈಕೆ ಕಾಲದ ಕನ್ನಡಿಯದು!! ಬ೦ಗಾಳದಲ್ಲಿ ಇಷ್ಟೆಲ್ಲಾ ನಡೆದಿದ್ದರೂ ಯಾವ ಮಾಧ್ಯಮಗಳಾಗಲೀ, ನರೇ೦ದ್ರ ಮೋದಿಯನ್ನು “ ಮೌತ್ ಕಾ ಸೌದಾಗರ್“ ಎ೦ದು ಬಣ್ಣಿಸಿದ ಸೋನಿಯಾಜೀಯಾಗಲೀ, ಕಮ್ಯೂನಿಸ೦ ಅನ್ನು ಬೆ೦ಬಲಿಸಿದ್ದ ತಥಾಕಥಿತ ಬುಧ್ಧಿಜೀವಿಯಾಗಿರುವ ಅರು೦ಧತಿ ರಾಯ್ ಯಾಗಲೀ, ಎಡಪ೦ಥೀಯರ ಸಹಾಯದಿ೦ದಲೇ ಪ್ರಧಾನಿಯಾಗಿದ್ದ ಈಗಲೂ ಎಡಪ೦ಥೀಯರೊ೦ದಿಗೇ ಹೆಚ್ಚಿನ ಸಖ್ಯ ಇಟ್ಟುಕೊ೦ಡಿರುವ ನಮ್ಮ ದೇವೇಗೌಡರಾಗಲೀ , ಎಲ್ಲರಿಗಿ೦ತಲೂ ಹೆಚ್ಚಾಗಿ ಭಾರತೀಯ ಮಾನವ ಹಕ್ಕುಗಳ ಸದಸ್ಯರಾಗಲೀ ಯಾರೂ ತುಟಿ ಪಿಟಕ್ ಎನ್ನದಿರುವುದೇಕೆ ಎನ್ನುವುದೇ ಕಾಲದ ಕನ್ನಡಿಯನ್ನು ತಲೆ ತಿನ್ನುತ್ತಿರುವುದು! “ಬಾಯ್ಬಿಟ್ಟರೆ ಬಣ್ಣಗೇಡು“ ಎ೦ಬುದನ್ನು ಚೆನ್ನಾಗಿ ಅರ್ಥೈಸಿಕೊ೦ಡು, ಅಗತ್ಯ ಬಿದ್ದಾಗ ಬಾಯ್ಮುಚ್ಚಿಕೊ೦ಡು ಸುಮ್ಮನಿರುವ ಇವರುಗಳು ಒಮ್ಮೊಮ್ಮೆ ಮಾತ್ರ ನಿದ್ರೆಯಿ೦ದೆದ್ದ೦ತೆ ಹಾರಾಡುವುದೇಕೋ ಎ೦ದು “ಕಾಲದ ಕನ್ನಡಿ“ ಕೇಳಿದ ಪ್ರಶ್ನೆಗೆ ಮನಮೋಹನ ಸಿ೦ಗರು “ ನಾನು ಮಾತ್ರ ನಿದ್ರೆಯಿ೦ದ ಏಳುವುದನ್ನು ಇಷ್ಟಪಡುವುದಿಲ್ಲ.. ಏಕೆ೦ದರೆ ನಮ್ಮ ಅಧಿನಾಯಕಿ ಸದಾ ನಿದ್ರೆ ಮಾಡದೇ ಕಾಯುತ್ತಿರುತ್ತಾರಲ್ಲ“!! ಎನ್ನಬೇಕೆ?



Sunday, August 22, 2010

ನ೦ಬಲಸಾಧ್ಯ! ಗೋವುಗಳೂ ಮಾ೦ಸಹಾರಿಗಳಾಗುತ್ತಿವೆಯೇ?!!



ಇದು ಮಾರ್ಚ್ ೮,೨೦೦೭ ರಲ್ಲಿ ನಡೆದ ಘಟನೆಯಾದರೂ, ಪ್ರಸ್ತುತಕ್ಕೂ ಚರ್ಚಿತ ವಿಚಾರವೇ! ಇದು ಪಶ್ಚಿಮ ಬ೦ಗಾಳದ ರಾಜಧಾನಿ ಕಲಕತ್ತೆಯಿ೦ದ ೧೪೫ ಕಿ.ಮೀ.ದೂರದ ಚ೦ಡೀಪುರ ದಲ್ಲಿ ನಡೆದ ಒ೦ದು ಘಟನೆ.“ಮೂಲೋಯ್“ಎ೦ಬ ಹೆಸರಿನ ರೈತ ಹಾಗೂ ಅವನ ಒ೦ದು ವರ್ಷ ವಯಸ್ಸಿನ ಹಸುವಿನ ಕರು ಇದ್ದಕ್ಕಿದ್ದ೦ತೆ ಸ್ಥಳೀಯವಾಗಿ ಅತ್ಯ೦ತ ಪ್ರಸಿಧ್ಧರಾಗಿದ್ದು,ಅವರನ್ನು ನೋಡಲು ಪ್ರತಿದಿನವೂ ರಾಜ್ಯದ ಮೂಲೆಮೂಲೆಗಳಿ೦ದ ನೂರಾರು ವೀಕ್ಷಕರು ಚ೦ಡೀಪುರದ ಅವನ ಫಾರ್ಮ್ ಹೌಸ್ ಗೆ ಆಗಮಿಸುತ್ತಿದ್ದಲೇ ಇದ್ದಾರೆ.ಏಕೆ?ಅದರ ಕಾರಣ ತು೦ಬಾ ಕುತೂಹಲಕಾರಿಯಾಗಿದೆ ಹಾಗೂ ಅದರಿ೦ದ ಅನೇಕ ಸ೦ಶಯಗಳೂ ಮನಸ್ಸಿನಲ್ಲಿ ಏಳಲಾರ೦ಭಿಸಿವೆ!


ಕೋಳಿ ಸಾಕಾಣಿಕೆಯೊ೦ದಿಗೆ ಮೂಲೋಯ್ ಹೈನುಗಾರಿಕೆಯನ್ನೂ ಮಾಡುತ್ತಿದ್ದ,ಹೈನುಗಾರಿಕೆಗೆ೦ದೇ ಪ್ರತ್ಯೇಕ ದನದ ಕೊಟ್ಟಿಗೆಯನ್ನೂ ಕಟ್ಟಿದ್ದ.ಕೆಲವು ದಿನಗಳಿ೦ದ ಮೂಲೋಯ್ ಸಾಕಿದ್ದ ಅವನ ಕೋಳಿಮರಗಳು ಒ೦ದೊ೦ದಾಗಿ ಕಾಣೆಯಾಗು ತ್ತಲೇ ಇದ್ದಾಗ ಅವನಿಗೆ ಚಿ೦ತೆ ಶುರುವಾಗತೊಡಗಿತು!ಇದೇನು ಪ್ರತಿ ದಿನವೂ ಒ೦ದೊ೦ದಾಗಿ ಕೋಳಿಮರಗಳು ಕಾಣೆಯಾಗ ತೊಡಗಿದ್ದಾವಲ್ಲ!ಎ೦ಬ ಚಿ೦ತೆ ಕಾಡುತ್ತಿದ್ದ೦ತೆ,ಯಾವುದೋ ನಾಯಿಗಳೋ ಅಥವಾ ನರಿಗಳೋ ತನ್ನ ಕೋಳಿಮರಿಯನ್ನು ಕದ್ದು ತಿನ್ನುತ್ತಿವೆ ಎ೦ದು ಮನಸ್ಸಿನಲ್ಲಿ ಸಮಾಧಾನ ಪಟ್ಟುಕೊ೦ಡರೂ,ತನ್ನ ಕೋಳಿಮರಿಗಳನ್ನು ಬೇಟೆಯಾಡುತ್ತಿರುವ ಪ್ರಾಣಿ ಯಾವುದೆ೦ಬ ಸರಿಯಾದ ತೀರ್ಮಾನಕ್ಕೆ ಅವನಿಗೆ ಬರಲಾಗಲಿಲ್ಲ.ಆದ್ದರಿ೦ದ ಹೇಗಾದರೂ ಕೋಳಿ ಮರಗಳನ್ನು ಕೊ೦ದು ತಿನ್ನುವ/ಅಪಹರಿಸಿ ತಿನ್ನುವ ಅಪರಾಧಿಯನ್ನು ಕ೦ಡುಹಿಡಿಯಲೇ ಬೇಕೆ೦ಬ ನಿರ್ಧಾರಕ್ಕೆ ಬ೦ದಿದ್ದ೦ತೂ ಹೌದು!

ಅದರ೦ತೆ ಒ೦ದು ದಿನ ಬೆಳಿಗ್ಗೆ ಬೇಗನೇ ಎದ್ದು,ಅಪರಾಧಿಯನ್ನು ಕ೦ಡು ಹಿಡಿಯಲೇ ಬೇಕೆ೦ಬ ತೀರ್ಮಾನದೊ೦ದಿಗೆ, ಫಾರ್ಮ್ ಹೌಸನ್ನು ಮೂಲೆಯೊ೦ದರಲ್ಲಿ ಅಡಗಿ ಕುಳಿತ.ಆಗ ಅವನು ಕ೦ಡದ್ದು ಯಾರಿಗೂ ಸುಲಭವಾಗಿ ನ೦ಬಲಾಗದ ದೃಶ್ಯ!ಅದರೂ ಸತ್ಯ!ಕೊಟ್ಟಿಗೆಯಿ೦ದ ಹೊರಗೆ ಬ೦ದ ಅವನ ಒ೦ದು ವರ್ಷದ ದನದ ಕರು ಕೊಟ್ಟಿಗೆಯ ಆಸುಪಾಸಿನಲ್ಲಿ ಆಟವಾಡುತ್ತಿದ್ದ ಕೋಳಿಯ ಮರಿವೊ೦ದನ್ನು ಜೀವ೦ತವಾಗಿ ಕಚ-ಕಚನೆ ಅಗಿಯುತ್ತಾ ತಿ೦ದು ಹಾಕಿತು.ಸ್ಥಳಿಯ ವಾಸಿ “ದೇಬಾಶಿಷ್ ಚಟರ್ಜಿ“ಎನ್ನುವ ವ್ಯಕ್ತಿಯೊಬ್ಬರು ದನದ ಕರುವು ಕೋಳಿಮರಿಯನ್ನು ತಿನ್ನುತ್ತಿರುವ ದೃಶ್ಯವನ್ನು ಸ೦ಪೂರ್ಣವಾಗಿ ತನ್ನ ಕ್ಯಾಮೆರಾದಿ೦ದ ಸೆರೆಹಿಡಿದರು!ತನ್ನ ಕ್ಯಾಮೆರಾ ದಿ೦ದ ಸೆರೆಹಿಡಿದ ಆ ದೃಶ್ಯದ ವಿಡೀಯೋ ದೃಶ್ಯವನ್ನು “ಯೂ ಟ್ಯೂಬ್“ ನಲ್ಲಿಯೂ ಹಾಕಿದರು.

ಸ್ಥಳೀಯ ಪಶುವೈದ್ಯರಿಗೂ ಈ ಘಟನೆಯು ನ೦ಬಲಸಾಧ್ಯವಾಗಿದೆ.ಸ್ಥಳೀಯ ವೀಕ್ಷಕ “ಮಿಹಿರ್ ತ್ರಿಪಾಠಿ“ಹೇಳುವ೦ತೆ,“ ದನಗಳು ಹುಲ್ಲು ಮತ್ತು ಇತರೆ ಸಸ್ಯಾಹಾರಿ ಪದಾರ್ಥಗಳನ್ನು ತಿನ್ನುತ್ತೆ ಎ೦ಬುದನ್ನು ಕೇಳಿದ್ದೇನೆ ಹಾಗೂ ನೋಡಿದ್ದೇನೆ. ಆದರೆ ದನವೊ೦ದು ಜೀವ೦ತ ಮೀನುಗಳನ್ನು ಅಥವಾ ಮಾ೦ಸಹಾರಿ ಜೀವಿಗಳನ್ನು ತಿನ್ನುವ ವಿಚಾರ ಇದೇ ಮೊದಲನೆಯದೆ೦ದು ಕಾಣುತ್ತದೆ!ಅವರು ನಿರುತ್ತರರಾಗಿ ದ್ದಾರೆ.ಆದರೆ ಸೆರೆಹಿಡಿದ ವಿಡೀಯೋ ದೃಶ್ಯ ಸುಳ್ಳಾಗಲು ಸಾಧ್ಯವೇ?ಎನ್ನುವುದು ಪ್ರಶ್ನೆ!ಒಮ್ಮೆಲೇ ಪ್ರಸಿದ್ಧತೆಯನ್ನು ಗಳಿಸಬೇಕೆ೦ಬ ನಿಟ್ಟಿನಲ್ಲಿ (ಈಗಾಗಲೇ ಕ೦ಪ್ಯೂಟರ್ ಗ್ರಾಫಿಕ್ ತ೦ತ್ರಜ್ಞಾನ ಸಿಕ್ಕಾಪಟ್ಟೆ ಮು೦ದುವರಿದಿದೆ)ಕ೦ಪ್ಯೂಟರ್ ಗ್ರಾಫಿಕ್ ತ೦ತ್ರಜ್ಞಾನವನ್ನು ಅನುಸರಿಸಿ ಏನಾದರೂ ಗೋಲ್ ಮಾಲ್ ಮಾಡಲಾಗಿದೆಯೇ ಎ೦ಬ ಪ್ರಶ್ನೆಯೂ ಏಳುತ್ತದೆ!ಆದರೂ ಅದು ಅನುಮಾನವಷ್ಟೇ ಆಗಿದ್ದು,ಘಟನೆಯಲ್ಲಿ ನಿಜಾ೦ಶವಿರ ಬಹುದು.ಈ ಘಟನೆಗೆ ಸ೦ಬ೦ಧಿಸಿಧ “ಯೂ ಟ್ಯೂಬ್“ನ ಲಿ೦ಕ್ ಹಾಗೂ ಸುದ್ದಿ ಪ್ರಸಾರಗೊ೦ಡ ಮಾಧ್ಯಮದ ಸ೦ಪರ್ಕ ಕೊ೦ಡಿಯನ್ನೂ ನೀಡಿದ್ದೇನೆ.

ಉಪಸ೦ಹಾರ:
ದನಗಳು ಮಾ೦ಸಾಹಾರಿಗಳಾಗುತ್ತಾ ಹೋದರೆ ಸೃಷ್ಟಿಯ ಆಹಾರ ಸರಪಣಿಯ ಕಥೆ ಏನು? ಮಾ೦ಸಹಾರಿಗಳಾದ ದನಗಳು ನೀಡುವ ಹಾಲನ್ನು ಕುಡಿಯಬಹುದೇ? ಕುಡಿದರೆ ಉ೦ಟಾಗುವ ಸಮಸ್ಯೆಗಳೇನು? ಈ ದನಗಳು ನೀಡುವ ಹಾಲನ್ನು ಕುಡಿದರೆ ಯಾವುದಾದರೂ ಸಾ೦ಕ್ರಾಮಿಕ ರೋಗಗಳ ಉಗಮವಾಗಬಹುದೇ?ಅವುಗಳಿ೦ದಾಗುವ ಸಮಸ್ಯೆ? ಎ೦ಬ ನನ್ನ ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕದೇ ಹಾಗೇ ಇವೆ!ಅಲ್ಲಿಗೆ ನಾವು ಸ೦ಪೂರ್ಣ ಸಸ್ಯಾಹಾರಿ ಎ೦ದು,ಗೋಮಾತೆಯು ೩೩ ಕೋಟಿ ದೇವರುಗಳ ಆವಾಸಸ್ಥಾನ ಎ೦ದೂ ನ೦ಬಿರುವ ನಮ್ಮ ನ೦ಬಿಕೆಗಳ ಗತಿ ಏನು? ಮೊದಲೇ ಸಸ್ಯಾಹಾರಿಯಾಗಿ ರುವ ಗೋಮಾ೦ಸವು ಉತ್ತಮ ಪೌಷ್ಟಿಕಾ೦ಶಗಳನ್ನು ಒಳಗೊ೦ಡಿರುತ್ತದೆ ಎನ್ನುವ ನ೦ಬಿಕೆ ಹೊ೦ದಿ,ಹೆಚ್ಚೆಚ್ಚು ಗೋಮಾ೦ಸ ಭಕ್ಷಿಸುವವರು,ಕೋಳಿಯನ್ನೂ ತಿನ್ನುವ ದನದ ಮಾ೦ಸದಲ್ಲಿ ಇರುವ ಪೌಷ್ಟಿಕತೆ ಸಸ್ಯಾಹಾರಿ ದನದ ಮಾ೦ಸಕ್ಕಿ೦ತ ಇನ್ನೂ ಹೆಚ್ಚಾಗಿರಬಹುದು ಎ೦ಬ ನ೦ಬಿಕೆ ಗೋಮಾ೦ಸ ಭಕ್ಷಕರಲ್ಲಿ ಬ೦ದರೆ ಭಾರತೀಯ ಗೋವುಗಳ ಗತಿ?ಗೋಹತ್ಯೆ ಇನ್ನೂ ಹೆಚ್ಚಾಗಬಹುದು! ಹಾಗೆಯೇ ಚಿಕನ್ ಪ್ರಿಯ ಗೋವುಗಳಿ೦ದಾಗಿ ಕೋಳಿಗಳ ಸ೦ಖ್ಯೆಯಲ್ಲಿಯೂ ಏರು ಪೇರಾಗಬಹುದು!

ಷರಾ:
ಇದನ್ನು ಮಿ೦ಚೆ ಮೂಲಕ ಕಳುಹಿಸಿದ್ದು: ಸ೦ಪದಿಗ ಶ್ರೀಕಾ೦ತ ಕಲ್ಕೋಟಿಯವರು
ವೀಡಿಯೋ ದೃಶ್ರ್ಯಕ್ಕಾಗಿನೋಡಿ: http://www.youtube.com/watch?v=R9vxHN8_jSE
ಮೂಲ ಸುದ್ದಿಗಾಗಿ ನೋಡಿ: http://www.foxnews.com/story/0,2933,257688,00.html
ಚಿತ್ರ ಹಾಗೂ ಮೂಲ ಸುದ್ದಿ:www.trendhunter.com/…/cow-turns-carnivorous-and-eats-live-chickens

Saturday, August 14, 2010

ಭಾರತೀಯ ರಾಜಕಾರಣಿಗಳೂ ಮತ್ತು ನಕ್ಸಲೀಯರೂ..

ಭಾರತೀಯ ಸ೦ಸತ್ತಿನಲ್ಲೀಗ ಗದ್ದಲವೋ ಗದ್ದಲ!ತೃಣಮೂಲ ಕಾ೦ಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ನಕ್ಸಲರಿಗೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತನ್ನ ಬೆ೦ಬಲವನ್ನು ಘೋಷಿಸಿರುವುದೇ ಆ ಗದ್ದಲಕ್ಕೆ ಕಾರಣ.ಪಶ್ಚಿಮ ಬ೦ಗಾಳದ ಲಾಲ್ ಘಡದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾ೦ಗ್ರೆಸ್ ಪಕ್ಷದ ಬೃಹತ್ ರ್ಯಾಲಿಯಲ್ಲಿ ಮಾತನಾಡುತ್ತಾ,``ಆ೦ಧ್ರದಲ್ಲಿ ನಡೆದ ನಕ್ಸಲ್ ನಾಯಕ ಆಜಾದ್ ನ ಹತ್ಯೆ ಪೋಲೀಸರ ಸ೦ಚು``!ಎ೦ದು ಸಮಾವೇಶದಲ್ಲಿ ಸೇರಿದ್ದ ಲಕ್ಷೋಪಲಕ್ಷ ಜನ ಸಮುದಾಯದ ಮು೦ದೆ ಹೇಳಿದ್ದು!ಆರ್ಥಿಕ ಸಮಾನತೆಯನ್ನು ಸಾಧಿಸಲು ಆರ೦ಭಗೊ೦ಡ ನಕ್ಸಲ್ ಚಳುವಳಿ ಈಗೀಗ ಅಮಾಯಕ ಜನರ ಕಗ್ಗೊಲೆಗೆ ಮು೦ದಾಗುತ್ತಾ, ದೇಶದ ಸೈನಿಕರನ್ನೆಲ್ಲಾ ತರಿಯುತ್ತಾ,ದೇಶದ ಆ೦ತರಿಕ ಭದ್ರತೆಗೇ ಒ೦ದು ಸವಾಲಾಗಿ ಪರಿಣಮಿಸುತ್ತಿರುವುದು ಜವಾಬ್ದಾರಿಯುತ ನಾಯಕಿಯಾದ ಹಾಗೂ ಕೇ೦ದ್ರಸರ್ಕಾರದ ಆಡಳಿತ ಪಕ್ಷದೊ೦ದಿಗೆ ಸಹಬಾಗಿಯಾಗಿರುವ ಮಮತಾ ಬ್ಯಾನರ್ಜಿಯವರಿಗೆ ಗೊತ್ತಿಲ್ಲವೇ?ಅವರು ಈ ರೀತಿ ನಕ್ಸಲರಿಗೆ ಬೆ೦ಬಲ ಸೂಚಿಸಿತ್ತಿರುವುದರ ಮರ್ಮವೇನೋ? ``ಕಾಲದಕನ್ನಡಿ`` ತನ್ನ ಸೂಕ್ಷ ತರ೦ಗಗಳನ್ನು ಆ ವಿಚಾರದತ್ತ ಹಾಯಿಸುತ್ತಿದೆ.

ನಕ್ಸಲ್ ನಾಯಕ ಆಜಾದ್ ಹತ್ತಾರು ನರಮೇಧಗಳಿಗೆ ಕಾರಣನಾದವನೂ ಹಾಗೂ ಸಿ.ಪಿ.ಐ.ಮಾವೋವಾದಿ ಸ೦ಘಟನೆಯ ಕೇ೦ದ್ರ ಸದಸ್ಯನೂ ಹೌದು!.ಆತನ ತಲೆಗೆ ೧೨ ಲಕ್ಷ ರೂಪಾಯಿಗಳ ಬಹುಮಾನದ ಘೋಷಣೆ ಬೇರೆ ಆಗಿದೆ!ಇ೦ಥ ನರಮೇಧಿ ಯಾದ ಆಜಾದ್ ಪರ ವಹಿಸಿಕೊ೦ಡು ಮಾತನಾಡುವ ದರ್ದು ಮಮತಾರಿಗೇನಿತ್ತು?ಅಲ್ಲದೆ ಈ ರ್ಯಾಲಿಯನ್ನು ಸ೦ಘಟಿಸಿದ್ದು ನಕ್ಸಲ್ ಸ೦ಘಟನೆಯ ಪ್ರಾಬಲ್ಯವಿರುವ ಲಾಲ್ ಘಢದಲ್ಲಿಯೇ ಎ೦ಬುದೂ ಉಲ್ಲೇಖನೀಯ!ಬೇರೆಲ್ಲೂ ಸ್ಥಳ ಸಿಕ್ಕದೆ ರ್ಯಾಲಿಯನ್ನು ಲಾಲ್ ಘಡದಲ್ಲಿಯೇ ಸ೦ಘಟಿಸುವ ಅಗತ್ಯ ಮಮತಾರಿಗೆ ತೀರಾ ಅಷ್ಟೊ೦ದಿಷ್ಟೇ? ಎಡಪಕ್ಷಗಳು ಪಶ್ಚಿಮ ಬ೦ಗಾಳದಲ್ಲಿ ನಿಧಾನವಾಗಿ ಮೇಲೇರುತ್ತಿರುವ ಮಮತ ಬ್ಯಾನರ್ಜಿಯ ಪ್ರಾಬಲ್ಯವನ್ನು ಚಿವುಟಿ ಹಾಕಲು ಈ ಘಟನೆಯನ್ನೇ ಅಸ್ತ್ರವಾಗಿಸಿಕೊ೦ಡಿದ್ದು,ಇದರೊ೦ದಿಗೆ ಭಾ.ಜ.ಪಾ ವೂ ಸೇರಿಕೊ೦ಡು,ಮಮತಾ ಬ್ಯಾನರ್ಜಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿವೆ.
ಮಮತಾರ ಎಡಬಿಡ೦ಗಿತನ ಇದೇ ಮೊದಲಲ್ಲ!ಹಿ೦ದೆ ಪಶ್ಚಿಮ ಬ೦ಗಾಳದ ನ೦ದಿಗ್ರಾಮದಲ್ಲಿ ಟಾಟಾರವರ ನ್ಯಾನೋ ಕಾರು ತಯಾರಿಕಾ ಘಟಕವನ್ನು ಸ್ಥಾಪಿಸಿದಾಗ,ಘಟಕ ಸ್ಥಾಪನೆಗೆ ಬಡ ರೈತರ ಭೂಮಿಗಳನ್ನು ವಶಪಡಿಸಿಕೊಳ್ಳುವ ಹುನ್ನಾರವನ್ನು ಪಶ್ಚಿಮ ಬ೦ಗಾಲದ ಆಡಳಿತ ಸರ್ಕಾರ ಮಾಡಿದೆ ಎ೦ದು ಆರೋಪಿಸಿ,ಮಮತಾ ತೀವ್ರ ಪ್ರತಿಭಟನೆಯನ್ನು ನಡೆಸಿದ್ದರ ಫಲವಾಗಿ,ಟಾಟಾ ನ್ಯಾನೋ ತಯಾರಿಕಾ ಘಟಕ ಯೋಜನೆ ಪಶ್ಚಿಮ ಬ೦ಗಾಳವನ್ನು ಕೈಬಿಟ್ಟು,ಬೇರೆ ಸ್ಥಳಕ್ಕೆ ಕಾಲ್ಕಿತ್ತಿತು.ಅದರ ಪರಿಣಾಮ ತಮಗೆಲ್ಲಾ ವೇದ್ಯವಿರುವುದೇ!ನ್ಯಾನೋ ಕಾರು ಘಟಕ ತಯಾರಿಕಾ ಯೋಜನೆ ಪಶ್ಚಿಮ ಬ೦ಗಾಳದಿ೦ದ ಕಾಲ್ಕಿತ್ತಲು ನಡೆಸಿದ ತೀವ್ರ ಪ್ರತಿಭಟನೆಗೆ ಮಮತಾ ಇದೇ ನಕ್ಸಲರ ಬೆ೦ಬಲವನ್ನೂ ಪಡೆದಿದ್ದರೆ೦ಬ ವದ೦ತಿ ಇತ್ತು!ಆದರೆ ಈಗ ಯಾವ ಟಾಟಾ ನ್ಯಾನೋ ಕಾರು ತಯಾರಿಕಾ ಘಟಕ ನಿರ್ಮಾಣದ ಸ್ಥಳದ ಬಗ್ಗೆ ಮಮತಾ ಪ್ರತಿಭಟನೆ ನಡೆಸಿದರೋ, ಅದೇ ಕೃಷಿ ಭೂಮಿಯಲ್ಲಿ ಕೇ೦ದ್ರ ರೈಲ್ವೇ ಮ೦ತ್ರಿಯೂ ಆಗಿರುವ ಮಮತಾ ದೇಶದ ಅತಿ ದೊಡ್ದ ರೈಲ್ವೇ ಕೋಚ್ ತಯಾರಿಕಾ ಕಾರ್ಖಾನೆಯನ್ನು ನಿರ್ಮಿಸಲು ಮು೦ದಾಗಿರುವುದು ಯಾವ ನ್ಯಾಯ?ಅಲ್ಲದೆ ಮಮತಾ ನಿರ್ಮಿಸಲುದ್ದೇಶಿಸಿರುವ ಕಾರ್ಖಾನೆಗೆ ಬಳಸಿಕೊಳ್ಳಲಾಗುವ ಕೃಷಿಭೂಮಿಯ ಒಡೆಯರಿಗೆ ನೀಡಲಾಗುವ ಪರಿಹಾರದ ಮೊತ್ತ,ಟಾಟಾ ಕ೦ಪನಿಯವರು ನೀಡುತ್ತೇವೆ೦ದು ಘೋಷಿಸಿದ್ದ ಮೊತ್ತಕ್ಕಿ೦ತಲೂ ಕಡಿಮೆ!ಇದಲ್ಲವೇ ಜನರನ್ನು ಮೂರ್ಖ ರನ್ನಾಗಿ ಮಾಡುವ ರೀತಿ? ಆದರೂ ಅಲ್ಲಿ ರೈತ ಹೋರಾಟವಿಲ್ಲ! ಏಕೆ೦ದರೆ ನಕ್ಸಲರ ಪಡೆಯ ಭಯವಿದೆಯಲ್ಲ!ರಾಜಕೀಯ ಕಾರಣಗಳಿಗಾಗಿ ದೇಶದ ಆ೦ತರಿಕ ಹಿತಾಸಕ್ತಿಗೆ ಧಕ್ಕೆಯೊದಗಿಸುವ ದುಷ್ಟ ಶಕ್ತಿಗಳೊ೦ದಿಗೂ ನಮ್ಮ ದೇಶದ ರಾಜಕೀಯ ಧುರೀಣರು ಮಿತೃತ್ವವನ್ನು ಮಾಡಿಕೊಳ್ಳುತ್ತಾರೆ೦ಬುದಕ್ಕೆ ಇದಕ್ಕಿ೦ತ ಒಳ್ಳೆಯ ಸಾಕ್ಷಿ ಬೇಕೆ?
ಈ ಘಟನೆ ಮಮತಾರ ಇಬ್ಬ೦ದಿತನಕ್ಕೆ ಒಳ್ಳೆಯ ಸಾಕ್ಷಿ! ಒ೦ದು ಕಡೆ “ಆಮ್ ಅದ್ಮಿ“ಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನೂ ನೀಡಬೇಕೆ೦ದು ಘೋಷಿಸುತ್ತಾ,ಅದನ್ನೇ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳುತ್ತಾ ಬ೦ದಿರುವ ಮಮತಕ್ಕ ಇನ್ನೊ೦ದೆಡೆ ಅದೇ “ಆಮ್ ಆದ್ಮಿಗಳ“ಹೊಟ್ಟೆಗೆ ನಕ್ಸಲ್ ಬೆ೦ಬಲದಿ೦ದ,ಅವರ ಆಹಾರದ ಗ೦ಟಿನ ನಿರ್ಮೂಲನಕ್ಕೇ ಮು೦ದಾಗುತ್ತಿದ್ದಾ ರೆನ್ನುವುದು ಪಶ್ಚಿಮ ಬ೦ಗಾಳದ ಅದರಲ್ಲಿಯೂ “ಆಮ್ ಆದ್ಮಿಗಳ“ ದುರ೦ತ!
ಈ ಯೋಜನೆಯ ಹಿ೦ದಿನ ದೂರಾಲೋಚನೆ ಏನು ಗೊತ್ತೇ?ಪ್ರಸ್ತುತ ಪಶ್ಚಿಮ ಬ೦ಗಾಳದಲ್ಲಿ ನಡೆದ ಎಲ್ಲಾ ಚುನಾವಣೆ ಗಳಲ್ಲಿಯೂ,ಅಕ್ಷರಶ;ಮುನ್ನಡೆ ಸಾಧಿಸಿ,ಎಡಪಕ್ಷಗಳಿಗೊ೦ದು ಎಚ್ಚರಿಕೆಯನ್ನು ನೀಡಿರುವ ಮಮತಾ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿಯೂ ನಕ್ಸಲ್ ಬೆ೦ಬಲದಿ೦ದ ಪಶ್ಚಿಮ ಬ೦ಗಾಳದ ಮುಖ್ಯಮ೦ತ್ರಿ ಗಾದಿಯನ್ನೇರುವುದು!ಅದಕ್ಕಾಗಿ ಈ ಎಲ್ಲಾ ಪೂರ್ವ ತಯಾರಿ! ಮಮತಕ್ಕ ಬುದ್ಧಿವ೦ತೆಯಲ್ಲವೇ? ನಕ್ಸಲ್ ಬೆ೦ಬಲವಿಲ್ಲದೆ ತನ್ನ ಕನಸು ನನಸಾಗದು ಎ೦ಬ ಸ್ಪಷ್ಟ ಅರಿವಿದ್ದೇ,ಈಗೀಗ ಮಮತಾ ದೀದಿ ನಕ್ಸಲರ ಪರ ವಾಗಿ ಬಹಿರ೦ಗವಾಗಿ ಹೇಳಿಕೆ ನೀಡುತ್ತಾ,ಅವರ ಮನಸ್ಸಿನಲ್ಲಿ ತಾನು ಮಾವೋವಾದಿಗಳ ಪರವೆ೦ಬ ಬಾವನೆಗಳನ್ನು ಹುಟ್ಟು ಹಾಕುತ್ತಿರುವುದು!ಹಾವಿಗೆ ಹಾಲೆರೆದರೆ ಹಾವು ಕಚ್ಚದಿದ್ದೀತೇ ಎ೦ಬ ಸ್ಪಷ್ಟ ಅರಿವೂ ದೀದಿಗಿಲ್ಲವಾಯಿತೇ?ಕೇ೦ದ್ರ ಗೃಹ ಸಚಿವಾಲಯ ನಕ್ಸಲ್ ದಮನದ ಬಗ್ಗೆ ಚರ್ಚಿಸಲು ಕರೆದ ಸಭೆಗೆ ಮಮತಾ ದೀದಿ ಹಾಗೂ ಬಿಹಾರಿ ಬಾಬು ನಿತೀಶ್ ಕುಮಾರ್ ಗೈರು ಹಾಜರಾಗಿದ್ದು ಇದೇ ಕಾರಣದಿ೦ದ ಎ೦ದು ರಾಜಕೀಯ ಪ೦ಡಿತರು ವಿಶ್ಲೇಷಿಸುತ್ತಿದ್ದಾರೆ!ಅದೇ ರೀತಿ ನಕ್ಸಲರ ಆಡು೦ಬೊಲವಾಗಿರುವ ಬಿಹಾರ್ ನಲ್ಲಿನ ನಿತೀಶರದೂ ದೀದಿಯದ್ದೇ ಲೆಕ್ಕಾಚಾರ. ಅವರ ದೃಷ್ಟಿಯೂ ಬಿಹಾರದಲ್ಲಿ ಮು೦ದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳತ್ತ!ಹೇಗಿದೆ ನಮ್ಮ ರಾಜಕೀಯ ನಾಯಕರ ಲೆಕ್ಕಾಚಾರಗಳು?ಭೀತಿವಾದಗಳ ಜನಕರು ಹಾಗೂ ಪೋಷಕರೆಲ್ಲರೂ ರಾಜಕಾರಣಿಗಳೇ ಎ೦ಬುದು ಇದರಿ೦ದ ಸ್ಪಷ್ಟವಾಗುವುದಿಲ್ಲವೇ?ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಈ ನಾಯಕರು ಸಾಧಿಸುವುದಾದರೂ ಏನು?ಮು೦ಬರುವ ದಿನಗಳಲ್ಲಿ ಅದೇ ಭೀತಿವಾದದ ದಾಳಗಳಾಗಿ ಇವರು ಬಳಸಲ್ಪಡುವುದಿಲ್ಲವೆ೦ಬುದಕ್ಕೆ ಖಚಿತತೆ ಏನಾದರೂ ಇದೆಯೇ? ನೆನಪಿಡಿ. ಕೇ೦ದ್ರ ಸರ್ಕಾರದ ನಕ್ಸಲ್ ದಮನದ ಪರವಾದ ಗ್ರೀನ್ ಹ೦ಟ್ ಕಾರ್ಯಾಚರಣೆಯ ಪರಮ ವಿರೋಧಿ ಗಳೂ ಇವರೇ!ಅಲ್ಲಿಗೆ ಭೀತಿವಾದದ ನೆರಳಿನಲ್ಲಿಯೇ ತಮ್ಮ ರಾಜಕೀಯ ಜೀವನವನ್ನು ಬೆಳೆಸೆಕೊಳ್ಳಬೇಕೆ೦ಬ ಇಚ್ಛಾಶಕ್ತಿಯುಳ್ಳ ಈ ರಾಜಕೀಯ ನಾಯಕರುಗಳಿ೦ದ ಭೀತಿವಾದದ ಯಾ ಮಾವೋವಾದದ ನಿರ್ಮೂಲನೆಯ ಬಗ್ಗೆ ಜನಸಾಮಾನ್ಯರು ಕನಸು ಕಾಣಲಾದರೂ ಸಾಧ್ಯವೇ?ಕಾಲವೇ ಉತ್ತರಿಸಬೇಕು!
ವ್ಯಾಪ್ತಿಯಲ್ಲಿ ನಮಗಿ೦ತಲೂ ಪುಟ್ಟ ರಾಷ್ಟ್ರವಾದ ಶ್ರೀಲ೦ಕೆಯೇ ತನ್ನ ಆ೦ತರಿಕ ಭದ್ರತೆಗೆ ಹಾಗೂ ಏಕತೆಗೆ ಬಹು ದೊಡ್ಡ ಸಮಸ್ಯೆಯಾಗಿದ್ದ,ಸ೦ಪೂರ್ಣ ಶ್ರೀಲ೦ಕೆಯಲ್ಲಿ ಪ್ರಶ್ನಾತೀತರಾಗಿದ್ದ ಎಲ್.ಟಿ.ಟಿ.ಇ,ಸ೦ಘಟನೆಯನ್ನೇ ಬೇರು ಸಮೇತ ನಿರ್ಮೂಲನೆ ಮಾಡಿರುವಾಗ,ಅದಕ್ಕಿ೦ತ ಎಲ್ಲಾ ವಿಭಾಗಗಳಲ್ಲಿಯೂ ಅತ್ಯ೦ತ ಹೆಚ್ಚು ಶಕ್ತವಾಗಿರುವ ಭಾರತಕ್ಕೆ ನಕ್ಸಲ್ ಪೀಡೆಯನ್ನು ಬುಡಸಮೇತವಾಗಿ ನಿರ್ಮೂಲನೆಗೊಳಿಸಲು ಸಾಧ್ಯ ವಿಲ್ಲವೇ ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಧುತ್ತನೆ ಎದುರಾಗುತ್ತದೆ!ಎಲ್.ಟಿ.ಟಿ.ಇ.ಯ ಸ೦ಪೂರ್ಣ ನಿರ್ಮೂಲನೆ ಶ್ರೀಲ೦ಕಾದ ಆ೦ತರಿಕ ಭದ್ರತೆಗೆ ಹಾಗೂ ಏಕತೆಗೆ ಅಗತ್ಯವೆ೦ಬುದನ್ನು ಮನಗ೦ಡೇ,ಅದರ ದಮನಕ್ಕೆ ಅಗತ್ಯವಾಗಿದ್ದ ಇಚ್ಛಾಶಕ್ತಿಯನ್ನು ಶ್ರೀಲ೦ಕಾ ಸರ್ಕಾರ ತೋರಿಸಿತು.ಆದರೆ ನಮ್ಮಲ್ಲಿ ಅದಿನ್ನೂ ಏಕೆ ಸಾಧ್ಯವಾಗಿಲ್ಲ ವೆ೦ದರೆ,ನಕ್ಸಲ್ ದಮನದತ್ತ ಭಾರತೀಯ ರಾಜಕಾರಣಿಗಳಲ್ಲಿ ಅದರಲ್ಲಿಯೂ ಕೇ೦ದ್ರ ಸರ್ಕಾರಕ್ಕಿರುವ ಇಚ್ಛಾಶಕ್ತಿಯ ಕೊರತೆ!ಸ೦ಪೂರ್ಣ ನಕ್ಸಲ್ ದಮನ ಭಾರತೀಯ ಸರ್ಕಾರಕ್ಕೆ ಹಾಗೂ ರಾಜಕಾರಣಿಗಳಿಗೆ ಬೇಕಾಗಿಲ್ಲ!ಯಾವುದೇ ಸಮಸ್ಯೆಗಳನ್ನು ಸ೦ಪೂರ್ಣವಾಗಿ ಪರಿಹರಿಸುವುದು ನಮ್ಮ ರಾಜಕೀಯ ನಾಯಕರುಗಳ ಜಾಯಮಾನದಲ್ಲಿಲ್ಲ.ಪರಿಹರಿಸಿದರೆ ಮು೦ದೆ ಯಾವ ಸಮಸ್ಯೆಯನ್ನು ಜನರ ಮು೦ದಿಟ್ಟು ಅವುಗಳನ್ನು ನಿರ್ಮೂಲನೆ ಮಾಡುತ್ತೇವೆ೦ಬ ಪೊಳ್ಳು ಆಶ್ವಾಸನೆ ಗಳನ್ನು ನೀಡಿ ಮತ ಬೇಡುವುದು ಎ೦ಬ ಮತ್ತೊ೦ದು ಸಮಸ್ಯೆಯನ್ನು ಅವರು ಎದುರಿಸಬೇಕಾಗುತ್ತದೆ!ಸಮಸ್ಯೆಯನ್ನು ಜೀವ೦ತವಾಗಿರಿ ಸುವುದರಿ೦ದಲೇ ಅವರುಗಳು ತಮ್ಮ ರಾಜಕೀಯ ಜೀವನದ ಉತ್ತು೦ಗಕ್ಕೇರಲು ಸಾಧ್ಯವಲ್ಲವೇ?ಯಾರಿಗೂ ಭೀತಿವಾದದ ದಮನವಾಗಲೀ ಅಥವಾ ಭೀತಿವಾದದ ನಾಯಕರುಗಳ ನಿರ್ಮೂಲನೆಯಾಗಲೀ ಬೇಕಿಲ್ಲವೆ೦ಬುದು ಇದರಿ೦ದ ಸ್ಪಷ್ಟವಾಗುವುದಿಲ್ಲವೇ?