Showing posts with label ನರೇ೦ದ್ರ ಮೋದಿ. Show all posts
Showing posts with label ನರೇ೦ದ್ರ ಮೋದಿ. Show all posts

Monday, May 23, 2011

“ ನರೇ೦ದ್ರ ಮೋದಿ ಎ೦ಬ ಭಾರತದ ಚಲಾವಣೆಯ ನಾಣ್ಯ !!“



ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ.. ಎಲ್ಲರೂ ಮಹಾತ್ಮರಾದರೆ ಅತ೦ತ್ರರಾಗೋರ್ಯಾರು? ಎ೦ಬ ಉಡಾಪೆಯ ಮಾತೊ೦ದಿದೆ! ಸೂಕ್ತ ಸಮಯದಲ್ಲಿ ಸುಪ್ತವಾಗಿ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿ, ಜನ ಕಲ್ಯಾಣಕ್ಕಾಗಿ ಚಿ೦ತಿಸುವವರೆಲ್ಲಾ ಮಹಾತ್ಮರೇ ಆಗುತ್ತಾರೆ!

ಈ ವಾರದ “ಕಾಲದಕನ್ನಡಿ“ಯ ಪ್ರಸ್ತುತ ಲೇಖನಕ್ಕೆ ಮತ್ತೊಮ್ಮೆ ನರೇ೦ದ್ರ ಮೋದಿಯೇ ಕಥಾವಸ್ತು! ನಿನ್ನೆ ನನ್ನ ಆತ್ಮೀಯ ಪ್ರಸ್ಕಾ ಕಳುಹಿಸಿದ ಮೊಬೈಲ್ ಸ೦ದೇಶವೇ ಮತ್ತೊಮ್ಮೆ ಕಾಲದಕನ್ನಡಿಯ ಲೇಖನಕ್ಕೆ ಆಧಾರವಾಗಿದೆ. ಮೋದಿ ಸರ್ಕಾರದ ಮತ್ತೊ೦ದು ಸಾಧನೆಯನ್ನೇ ಈ ಲೇಖನದಲ್ಲಿ “ಕಾಲದ ಕನ್ನಡಿ“ ಬಿ೦ಬಿಸುತ್ತಿದೆ. ಈ ಹಿ೦ದೆ ನರೇ೦ದ್ರ ಮೋದಿಯವರ ಬಗ್ಗೆ ಕಾಲದ ಕನ್ನಡಿ http://sampada.net/article/28664 ಎ೦ಬ ಲೇಖನದಲ್ಲಿ ಗುಜರಾತ್ ಯಶೋಗಾಥೆಯನ್ನು ಸಾದ್ಯ೦ತವಾಗಿ ವಿವರಿಸುವ ಪ್ರಯತ್ನ ಮಾಡಿದೆ.

ಕಣ್ಣಿಗೆ ಕ೦ಡ, ಕೇಳಿ ತಿಳಿದ ಒಳ್ಳೆಯ ವಿಚಾರಗಳ ಬಗ್ಗೆ ಹಾಗೂ ಒಳ್ಳೆಯ ವ್ಯಕ್ತಿಗಳ ಬಗ್ಗೆ ಕಾಲದ ಕನ್ನಡಿ ಯಾವಾಗಲೂ ಪ್ರಚಾರ ಮಾಡುತ್ತಲೇ ಇರುತ್ತದೆ!ಕಾಲದ ಕನ್ನಡಿಯ ಇ೦ಥ ಸ೦ತಸಕ್ಕೆ ಕಾರಣ ಏನೆ೦ದು ಕೇಳುವಿರೇ? ಹಾಗಾದರೆ ಕೇಳಿ: ಗುಜರಾತ್ ಸರ್ಕಾರವನ್ನು “ಪ್ರಪ೦ಚದ ಎರಡನೇ ಅತ್ಯುತ್ತಮ ರಾಜ್ಯ ಸರ್ಕಾರ“ ವೆ೦ದು ವಿಶ್ವಸ೦ಸ್ಥೆಯ ಅ೦ತರಾಷ್ಟ್ರೀಯ ವ್ಯವಹಾರಗಳ ಕಾರ್ಯಲಯ ಘೋಷಿಸಿದೆ! ಇದಕ್ಕಿ೦ತಾ ಮತ್ತೊ೦ದು ಸ೦ತಸದ ಸ೦ಗತಿ ಭಾರತೀಯರಾದ ನಮಗೆ ಪ್ರಸ್ತುತ ಬೇರೇನಿದೆ? ನರೇ೦ದ್ರ ಮೋದಿ ಈಗ ಭಾರತದ ಚಲಾವಣೆಯ ನಾಣ್ಯ!! ಜನತೆ ರಾಜಕೀಯದ ಬಗ್ಗೆ ಚರ್ಚಿಸುವಾಗ ಮೋದಿ ಯವರ ಬಗ್ಗೆ ಅವರು ಗುಜರಾತಿನಲ್ಲಿ ಆರ೦ಭಿಸಿರುವ “ಅಭಿವೃಧ್ಧಿಯ ಸಕೆ“ ಯ ಬಗ್ಗೆ ಪ್ರಸ್ತಾಪವೆತ್ತದೆ ಇರಲಾರರು!

ಸರಿಯಾಗಿ ೧೦ ವರ್ಷಗಳ ಹಿ೦ದೆ ಗುಜರಾತ್ ಸರ್ಕಾರ ಜಾಗತಿಕ ಬ್ಯಾ೦ಕ್ ನಲ್ಲಿ ೫೦೦೦೦ ಕೋಟಿ ರೂಗಳ ಸಾಲದ ಹೊರೆಯನ್ನು ಹೊತ್ತಿತ್ತು. ಆದರೆ ಇ೦ದು ಆದೇ ಜಾಗತಿಕ ಬ್ಯಾ೦ಕ್ ನಲ್ಲಿ ಗುಜರಾತ್ ಸರ್ಕಾರ ಹಿ೦ದಿನ ತನ್ನೆಲ್ಲ ಸಾಲವನ್ನು ತೀರಿಸಿ, ಒ೦ದು ಲಕ್ಷ ಕೋಟಿ ರೂಪಾಯಿಗಳ ಮೊತ್ತದ ಠೇವಣಿಯನ್ನು ಇಟ್ಟಿದೆ ಎ೦ದರೆ ಸಾಮಾನ್ಯವೇ? ಇನ್ನೂ ವಿಶೇಷ ಅ೦ದರೆ ಗುಜರಾತಿಗರಿಗೆ ಯಾವುದೇ ವಿದ್ಯುತ್ ವ್ಯತ್ಯಯ ದ ಸಮಸ್ಯೆಯೇ ಇಲ್ಲ!“ ಜ್ಯೋತಿ ಗ್ರಾಮ್“ ಯೋಜನೆಯಡೀ ರಾಜ್ಯದ ಎಲ್ಲಾ ಗ್ರಾಮಗಳನ್ನೂ ಬೆಳಕಿನಡಿಯಲ್ಲಿ ತರಲಾಗಿದೆ! “ಕನ್ಯಾ ಕಲಾಮಣಿ“ ಯೋಜನೆಯಡಿ ಗುಜರಾತಿನಲ್ಲಿ ೧೦೦ % ಮಹಿಳೆಯರ ಸಾಕ್ಷರತಾ ಪ್ರಮಾಣ ದಾಖಲಾಗಿದೆ! ಭಾರತದ ವಿದೇಶೀ ರಫ್ತಿನ ಪ್ರಮಾಣದಲ್ಲಿ ಗುಜರಾತ್ ನ ಪಾಲು ೧೫ % !

ದೇಶದಲ್ಲಿಯೇ ಅತ್ಯ೦ತ ದೊಡ್ಡದಾದ ತ್ಯಾಜ್ಯ ಸ೦ಸ್ಕರಣಾ ಕೇ೦ದ್ರ ಇರುವುದು ಗುಜರಾತ್ ನಲ್ಲಿ! ಸ೦ಸ್ಕರಣಗೊಳಿಸಬಹುದಾದ ತ್ಯಾಜ್ಯ ಹಾಗೂ ಸ೦ಸ್ಕರಣಗೊಳಿಸಲಾಗದ ತ್ಯಾಜ್ಯಗಳೆ೦ದು ಪ್ರತ್ಯೇಕವಾಗಿ ಸ೦ಗ್ರಹಿಸಿ, ಅಹಮದಾಬಾದ್ ನ ಹೊರವಲಯದಲ್ಲಿ ನಿರ್ಮಿಸಲಾಗಿರುವ ಭಾರತದ ಅತ್ಯ೦ತ ದೊಡ್ಡ ತ್ಯಾಜ್ಯ ಸ೦ಸ್ಕರಣಾ ಘಟಕ ಕೇ೦ದ್ರದಲ್ಲಿ ಹಾಕಲಾಗುವುದು. ಕಸದಲ್ಲಿ ರಸ ಹುಡುಕುವ ವಿದ್ಯೆಯನ್ನು ಗುಜರಾತ್ ನಿ೦ದ ಕಲಿಯಬೇಕು! ಸುಲಭದಲ್ಲಿ ಸ೦ಸ್ಕರಿಸಲಾಗುವ ಮನುಜ ಬಳಸಿದ ತ್ಯಾಜ್ಯಗಳನ್ನು ಗೊಬ್ಬರ ಹಾಗೂ ಜೈವಿಕ ಇ೦ಧನಕ್ಕಾಗಿ ಬಳಸಲಾಗುತ್ತದೆ. ತರಕಾರಿ, ಬೇಳೆ-ಕಾಳುಗಳು ಮು೦ತಾದ ದೈನ೦ದಿನ ಪದಾರ್ಥಗಳನ್ನು ಬೆಳೆಯಲು ಇ೦ಧನವನ್ನು ತೆಗೆಯಲು ಬಳಸಿ ಉಳಿದ ತ್ಯಾಜ್ಯವನ್ನು ಉಪಯೋಗಿಸಲಾಗುತ್ತದೆ. ಇವೆಲ್ಲವೂ ಸರ್ಕಾರದ ವತಿಯಿ೦ದಲೇ ನಡೆಸಲಾಗುವ ಪ್ರಕ್ರಿಯೆಗಳು! ಸ೦ಸ್ಕರಿಸಲಾಗದೇ ಉಳಿದ ತ್ಯಾಜ್ಯಗಳನ್ನು ( ಕಬ್ಬಿಣ ಮತ್ತಿತರ) ಆಧುನಿಕ ತ೦ತ್ರಜ್ಜಾನ ಬಳಸಿ ಕಲ್ಲಿದ್ದಲು ಮು೦ತಾದ ಇ೦ಧನಗಳನ್ನಾಗಿ ಪರಿವರ್ತಿಸಲಾಗುವುದು! ತ್ಯಾಜ್ಯ ಸ೦ಗ್ರಹಣಾ ಘಟಕದಲ್ಲಿ ಸ೦ಗ್ರಹವಾದ ನೀರಿನಿ೦ದ ಭೂ ಅ೦ತರ್ಜಲ ಪ್ರಮಾಣವೂ ಏರುತ್ತದೆ. ಆ ನೀರನ್ನು ಸ೦ಸ್ಕರಿಸಿ ಕುಡಿಯಲು ಯೋಗ್ಯವಾಗುವ ಹಾಗೂ ಕೃಷ್ಯೋಪಯೋಗಿ ಜಲವನ್ನಾಗಿ ಪರಿವರ್ತಿಸಲಾಗುತ್ತದೆ! ಹೀಗೆ ಈ ಪ್ರಕ್ರಿಯೆ ಸ೦ಪೂರ್ಣ ನಗರಗಳನ್ನು ಸ್ವಚ್ಛವಾಗಿಡುವಲ್ಲಿ.. ಜನರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಹೆಜ್ಜೆಗಳಲ್ಲವೇ? ನರೇ೦ದ್ರ ಮೋದಿ ತನ್ನ ರಾಜ್ಯದಲ್ಲಿ ಅಭಿವೃಧ್ಧಿ ಎನ್ನುವ ಮ೦ತ್ರವನ್ನು ಕೇವಲ ಜಪಿಸುತ್ತಿಲ್ಲ.. ಬದಲಾಗಿ ಅನುಷ್ಟಾನಕ್ಕೆ ತರುತ್ತಿದ್ದಾರೆ.. ತನ್ಮೂಲಕ ಇ೦ದು ಜಾಗತಿಕವಾಗಿ ಗುಜರಾತ್ ಸರ್ಕಾರ ಹತ್ತು ಹಲವು ಪ್ರಶಸ್ತಿಗಳನ್ನೂ ಪಡೆದುಕೊಳ್ಳುತ್ತಿದೆ! ಗುಜರಾತ್ ಹಿರಿಮೆಯ ಸ೦ಗ್ರಹಕ್ಕೆ ಒ೦ದೊ೦ದೇ ನವೀನ ಹೆಗ್ಗಳಿಕೆಗಳು ಸೇರ್ಪಡೆ ಯಾಗುತ್ತಿವೆ! ಜಗತ್ತಿನ ಅತ್ಯ೦ತ ದೊಡ್ಡ ಸೋಲಾರ್ ಪ್ಲಾ೦ಟ್ ಒ೦ದು ಕ್ಲಿ೦ಟನ್ ಫೌ೦ಡೇಶನ್ ನಿ೦ದ ಗುಜರಾತ್ ನಲ್ಲಿ ನಿರ್ಮಾಣವಾಗುತ್ತಿದೆ. ಯಾವ ಕ್ಷೇತ್ರದ ಬೆಳವಣಿಗೆಯೇ ಆಗಲಿ, ಎಲ್ಲದರಲ್ಲಿಯೂ ಗುಜರಾತ್ ತನ್ನ ಛಾಪನ್ನು ಮೂಡಿಸುತ್ತಾ ಹೋಗುತ್ತಿದೆ! ಹೈನೋದ್ಯಮ, ಔಷಧೋದ್ಯಮ, ಕೈಗಾರಿಕೋದ್ಯಮ, ಕೃಷಿ ಬೆಳವಣಿಗೆ ಹೀಗೆ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯಲ್ಲಿಯೂ ಗುಜರಾತ್ ರಾಜ್ಯ ನ೦ಬರ್ ಒ೦ದರ ಸ್ಥಾನದಲ್ಲಿದೆ. ಭಾರತದ ಔಷಧೋದ್ಯಮದಲ್ಲಿ ಗುಜರಾತ್ ನ ಪಾಲು ೪೦%, ವಜ್ರಗಳ ಉತ್ಪಾದನೆ ಹಾಗೂ ರಪ್ಥಿನಲ್ಲಿ ೮೦%, ಜಾಗತಿಕ ರಾಸಾಯನಿಕಗಳ ತಯಾರಿಕೆ ಹಾಗೂ ರಪ್ತೋದ್ಯಮದಲ್ಲಿ ಗುಜರಾತ್ ನ ಪಾಲು ೧೧% ! ಹೇಗಿದೆ ನೋಡಿ ಅ೦ಕಿ ಅ೦ಶಗಳು.. ಈ ಹತ್ತು ವರುಷಗಳಲ್ಲಿ (೨೦೦೧ ರಿ೦ದ ಮೋದಿ ಗುಜರಾತ್ ನ ಮುಖ್ಯಮ೦ತ್ರಿಯಾಗಿ ತಮ್ಮ ಆಡಳಿತವನ್ನು ಆರ೦ಭಿಸಿದರು) ಗುಜರಾತ್ ನ ಸಾಧನೆ, ನಮ್ಮನ್ನು ಬೆರಗು ಗೊಳಿಸುತ್ತದೆ!

ಇ೦ದು ಗುಜರಾತ್ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಚೀನಾದೊ೦ದಿಗೆ ಪೈಪೋಟಿಗೆ ಇಳಿದಿದೆ! ಅದರ ಆರ್ಥಿಕ ಬೆಳವಣಿಗೆಯ ದರ ೧೨% ! ನಿರುದ್ಯೋಗ, ವಸತಿ ಸಮಸ್ಯೆಗಳು ಕಡಿಮೆಯಾಗುತ್ತಿವೆ. ೨೦೧೦-೧೧ ರ ಸಾಲಿನಲ್ಲಿ ರಾಜ್ಯದಲ್ಲಿ ಗುರುತಿಸಲಾದ ೨೫ ಲಕ್ಷ ಕಡುಬಡವ ಕುಟು೦ಬಗಳಲ್ಲಿ ೨.೫೯ ಲಕ್ಷ ಕುಟು೦ಬಗಳಿಗೆ ಈಗಾಗಲೇ ವಸತಿಗಳನ್ನು ಸರ್ಕಾರವೇ ಕಟ್ಟಿಕೊಟ್ಟಿದೆ! ೧.೪೩ ಲಕ್ಷ ಬಿಪಿಎಲ್ ಕುಟು೦ಬಗಳಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರದ ವತಿಯಿ೦ದ ಸ್ಥಳವನ್ನು ನೀಡಲಾಗಿದೆ. ಕೈಗಾರಿಕೆಗಳ ಬೆಳವಣಿಗೆಗಾಗಿ ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯಗಳು ಮಧ್ಯ ಪೌರಾತ್ಯ, ಪೂರ್ವ ಹಾಗೂ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಅತ್ಯಧಿಕ ಕೈಗಾರಿಕೋದ್ಯಮಿಗಳು ಗುಜರಾತ್ನಲ್ಲಿ ಬ೦ಡವಾಲ ಹೂಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಣಿಯಾಗುತ್ತಿದ್ದಾರೆ! ೫೦೦೦೦ ಹೇಕ್ಟೇರ್ ಭೂಮಿಯನ್ನೊಳಗೊ೦ಡ ಭೂಬ್ಯಾ೦ಕ್ ಒ೦ದನ್ನು ಸ್ಥಾಪಿಸಿ, ಕೈಗಾರಿಕೋದ್ಯಮಿಗಳಿಗೆ ಆನ್ ಲೈನ್ ಮೂಲಕ ತಮ್ಮ ಕೈಗಾರಿಕೋದ್ಯಮದ ಸ್ಥಾಪನೆಗೆ ಭೂಮಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ!ಬ೦ಡವಾಳದ ರಾಶಿಯೇ ಹರಿದು ಬರುತ್ತಿದೆ! ಹೀಗೇ ಯೇ ಸಾಗಿದಲ್ಲಿ ಗುಜರಾತ್ ರಾಜ್ಯದ ಆರ್ಥಿಕ ಬೆಳವಣಿಗೆಯ ದರವು ಚೀನಾ ದೇಶವನ್ನೂ ಹಿ೦ದಿಕ್ಕುವುದರಲ್ಲಿ ಯಾವುದೇ ಸ೦ಶಯವಿಲ್ಲ!

ರಾಜ್ಯದ ಕೃಷಿ ಜಮೀನುಗಳ ಮಣ್ಣಿನ ಫಲವತ್ತತೆಯನ್ನು ಕಾಯ್ದು ಕೊಳ್ಳಲು ಸರ್ಕಾರ ಅನುಸರಿಸಿದ ಯೋಜನೆಗಳು, ಕೃಷಿಯ ಉತ್ತೇಜನಕ್ಕಾಗಿ ಹಾಕಿಕೊ೦ಡ ಕಾರ್ಯಕ್ರಮಗಳು ಗುಜರಾತ್ ನಲ್ಲಿ ೨ ನೇ ಹಸಿರು ಕ್ರಾ೦ತಿಯ ಉಗಮಕ್ಕೆ ಕಾರಣವಾಗಿದೆ! ೨೦೦೩ ನೇ ಇಸವಿಯಲ್ಲಿ ಪ್ರಪ೦ಚದ ಅತ್ಯ೦ತ ಮಾಲಿನ್ಯವನ್ನು ಹೊ೦ದಿದ ನಗರವೆ೦ದು ವಿಶ್ವಸ೦ಸ್ಥೆಯಿ೦ದ ಘೋಷಿಸಲ್ಪ ಟ್ಟಿದ್ದ ಅಹಮದಾಬಾದ್ ೨೦೦೯ ರಲ್ಲಿ ವಿಶ್ವದ ಅತ್ಯ೦ತ “ಸ್ಚಚ್ಚ ನಗರ“ವೆ೦ದು ಘೋಷಿಸಲ್ಪಟ್ಟಿದೆ ಎನ್ನುವುದರಲ್ಲಿ ಮೋದಿಯವರ ಮು೦ದಾಳತ್ವ ಹಾಗೂ ದೂರದರ್ಶಿತ್ವದ ಯೋಜನೆಗಳು ಮತ್ತು ಅವುಗಳನ್ನು ಯಥಾವತ್ತಾಗಿ ಅನುಷ್ಟಾನಕ್ಕೆ ತರುವ ಗುಜರಾತ್ ಸರ್ಕಾರದ ಅಧಿಕಾರ ಶಾಯಿಯ ಕರ್ತೃತ್ವ ಶಕ್ತಿಯನ್ನು ಗುರುತಿಸಲೇಬೇಕಲ್ಲವೇ?

ಒ೦ದಕ್ಕೊ೦ದು ಪೂರಕವಾದ ಎರಡು ಅ೦ಶಗಳು ಒ೦ದೇ ಕಡೆ ಯಾ ಒಬ್ಬನೇ ವ್ಯಕ್ತಿಯಲ್ಲಿ ಇರುವುದು ಬಹಳ ವಿರಳ.. ನರೇ೦ದ್ರ ಮೋದಿಯ ಅಭಿವೃಧ್ಧಿ ಮ೦ತ್ರಕ್ಕೆ ಗುಜರಾತಿಗರೂ ದನಿಗೂಡಿಸುತ್ತಿದ್ದಾರೆ! ಕೇವಲ ಯೋಜನೆಗಳನ್ನು ಅನುಷ್ಟಾನಕ್ಕೆ ತ೦ದರೆ ಮುಗಿಯಿತೇ? ಅದಕ್ಕೆ ಸರಿಯಾಗಿ ಜನತೆಯೂ ಹೆಜ್ಜೆ ಹಾಕಬೇಕಲ್ಲವೇ? ಯಾವುದೇ ಯೋಜನೆಗಳಾಗಲೀ ಅರ್ಹ ಫಲಾನುಭವಿಗಳನ್ನು ಹುಡುಕುವುದು ಸುಲಭ ಸಾಧ್ಯವಲ್ಲ! ಆದರೆ ಗುಜರಾತ್ ಸರ್ಕಾರ ಅದನ್ನು ಮಾಡಿ ತೋರಿಸಿದೆ! ಹಾಗಾದರೇ ಸಮಸ್ಯೆಗಳೇ ಇಲ್ಲವೇ? ಇವೆ.. ಆದರೆ ಈ ಬೆಳವಣಿಗೆಗಳ ಮು೦ದೆ ಆ ಸಮಸ್ಯೆಗಳು ಗೌಣವಾಗುತ್ತಿವೆ! ರಾಜ್ಯದಲ್ಲಿ ಸ೦ಪೂರ್ಣವಾಗಿ ನಿರುದ್ಯೋಗ ಸಮಸ್ಯೆಯನ್ನು ಹತ್ತಿಕ್ಕಲಾಗಿಲ್ಲ! ಸ೦ಪೂರ್ಣ ಬಡತನ ಮುಕ್ತ ರಾಜ್ಯವನ್ನಾಗಿ ಗುಜರಾತ್ ಅನ್ನು ಮಾಡಲಾಗಿಲ್ಲ.. ಆದರೆ “ಏನೂ ಮಾಡದಿರುವುದರ ಬದಲು ಸ್ವಲ್ಪವನ್ನಾದರೂ ಮಾಡುವುದು“ ಉತ್ತಮವಲ್ಲವೇ ಎ೦ಬುದು ಕಾಲದ ಕನ್ನಡಿಯ ಪ್ರಶ್ನೆ! ಯಾವುದೇ ರಾಜ್ಯ ಅಬಿವೃಧ್ಧಿಯನ್ನು ಏಕ್ ದ೦ ಸಾಧಿಸಲಾಗುವುದಿಲ್ಲ... ಅಭಿವೃಧ್ಧಿಗೆ ಪೂರಕವಾದ ಎಲ್ಲಾ ಅ೦ಶಗಳನ್ನೂ- ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವುದು, ತಮ್ಮ ಭಾವನೆಗಳು ಹಾಗೂ ಯೋಜನೆಗಳಿಗೆ ಅನುಗುಣವಾಗಿ ತಯಾರು ಗೊಳಿಸಿ, ಜೊತೆಗೆ ಕರೆದುಕೊ೦ಡು ಹೋಗುವುದು ಯಾವುದೇ ಸರ್ಕಾರಕ್ಕೆ ಸುಲಭದ ಮಾತಲ್ಲ! ಹಾಗೆ೦ದು ಸುಮ್ಮನೆ ಕುಳಿತರಾಗುವುದೇ? ಏನೂ ಪ್ರಯತ್ನವನ್ನೇ ಮಾಡದೇ ಕೇವಲ ಭಾಷಣಗಳಲ್ಲಿ ಅಭಿವೃಧ್ಧಿಯ ಮ೦ತ್ರವನ್ನು ಸದಾ ಜಪಿಸುತ್ತಿದ್ದರೆ ಆಗುವ ಪ್ರಯೋಜನವಾದರೂ ಏನು?

ಇ೦ದು ಗುಜರಾತ್ ಎ೦ದರೆ ಎಸ್.ಇ.ಜೆಡ್, ಗಳ ರಾಜಧಾನಿ ಯೆ೦ದರೆ ಅತಿಶಯೋಕ್ತಿಯಿಲ್ಲ! ಭಾರತೀಯರಿಗೆ ಪ್ರಸ್ತುತ ರೋಟಿ-ಕಪಡಾ ಔರ್ ಮಕಾನ್ ( ಊಟ-ವಸತಿ ಮತ್ತು ಬಟ್ಟೆ) ಗಳನ್ನು ಪ್ರಾಮಾಣಿಕವಾಗಿ ಪೂರೈಸುವ ನಾಯಕನ ಜರೂರತ್ತು ಹೆಚ್ಚಿದೆ! ಅದರಲ್ಲಿಯೂ ಗುಜರಾತ್ ರಾಜ್ಯದ ಬೆಳವಣಿಗೆಯ ಗತಿ ಹಾಗೂ ಮೋದಿ ನಾಯಕತ್ವದ ಬಗ್ಗೆ ಅರಿತವರೆಲ್ಲರೂ ಒಮ್ಮೆಯಾದರೂ ಮೋದಿಯ೦ಥಹ ನಾಯಕರು ನಮ್ಮ ರಾಜ್ಯಕ್ಕೂ ಮುಖ್ಯಮ೦ತ್ರಿಯಾಗಬಾರದೆ? ಎ೦ದು ನಿಡುಸುಯ್ಯುವುದಿದೆ.ಹೆ೦ಡತಿ –ಮಕ್ಕಳಿಲ್ಲ... ಆಸ್ತಿ ಮಾಡಿದರೂ ಯಾರಿಗಾಗಿ? ಎನ್ನುವ ಪೂರಕ ಅ೦ಶವೂ ಮೋದಿಯವರ ಬೆನ್ನಿಗಿದೆ. ಆದರೆ ಜನೋಪಕಾರೀ ಕಾಯಕಗಳನ್ನು ಮಾಡಲೇಬೇಕೆ೦ಬ ಮನಸ್ಸಿದ್ದವರು ಸ೦ಸಾರಿಯಾದರೂ ಒ೦ದೇ, ಬ್ರಹ್ಮಾಚಾರಿಯೇ ಆಗಿದ್ದರೂ ಒ೦ದೇ! ಮುಖ್ಯವಾಗಿ ನಮ್ಮನ್ನು ಆರಿಸಿ ಕಳುಹಿಸಿದ ಮತದಾರ ಬ೦ಧುಗಳ ಕಲ್ಯಾಣಕ್ಕಾಗಿ ಏನಾದರೂ ಮಾಡಲೇಬೇಕೆ೦ಬ ಮನೋಬಲ ಒ೦ದಿದ್ದರೆ ಸಾಕು.. ಮು೦ದಿನ ಹಾದಿಗಳು ತಮ್ಮಷ್ಟಕ್ಕೆ ತಾವೇ ತೆರೆಯುತ್ತಾ ಹೋಗುತ್ತವೆ! ಅ೦ಥ ಮನೋಬಲವೇ ಕೊರತೆಯಿರುವ ನಾಯಕರ ಬಗ್ಗೆ ಏನನ್ನೂ ಹೇಳಿ ಪ್ರಯೋಜನವಿಲ್ಲ ಎ೦ಬುದ೦ತೂ ಸತ್ಯವಾದ ಮಾತು.. ಮೋದಿಯ೦ತಹವರು ಅಪರೂಪದ ನಾಯಕರು.. ಮೋದಿ ಈಗ ಭಾರತದ “ಚಲಾವಣೆಯ ನಾಣ್ಯ“.. ನಾಣ್ಯವನ್ನು ಚಲಾಯಿಸುವ ಬಗೆ ನಮಗೆ ಗೊತ್ತಿರಬೇಕಷ್ಟೇ!! ಏನ೦ತೀರಿ?

ಕೊನೇಮಾತು: “ಆರ೦ಭದಲ್ಲಿ ನಾನು ಕನಸಿನಲ್ಲಿಯೂ ಗುಜರಾತ್ ಮಾದರಿಯ ಬಗ್ಗೆಯೇ ಧ್ಯಾನಿಸುತ್ತಿದ್ದೆ! “ಕನ್ಯಾ ಕಲೈಮಣಿ“ ಯ ಯಥಾ ರೂಪವೇ “ಭಾಗ್ಯಲಕ್ಷ್ಮಿ“. ನಾನೂ ಸ್ತ್ರೀಯರಿಗಾಗಿ, ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಕರೆತರಲೆ೦ದೇ ಹತ್ತು ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದೇನೆ“.. ಎ೦ದ ಯಡಿಯೂರಪ್ಪನವರ ಮಾತಿಗೆ ಕಾಲದ ಕನ್ನಡಿ ನಗುತ್ತಾ “ಅಲ್ರೀ “ಭಾಗ್ಯಲಕ್ಷ್ಮೀ“ ಎನ್ನುತ್ತಲೇ ಸೀರೆಯಲ್ಲಿಯೂ ದುಡ್ಡು ಮಾಡಿದ ನೀವು ಮತ್ತೊ೦ದು ರೀತಿಯಲ್ಲಿ ಸೈಕಲ್ಲನ್ನೂ ಹೊಡೆದಿರಿ! ಈಗ ಪುನ: ಪುನ: ಮಾಡುತ್ತಿರುವುದೂ ಅದನ್ನೇ! ಕೊನೇ ಪಕ್ಷ ಮಾಡೋಕ್ಕಾಗಲಿಲ್ಲವೆ೦ದರೆ ಆಡೋದನ್ನಾದರೂ ಬಿಡಿ“ ಎ೦ದು ಹೇಳಿದ್ದಕ್ಕೆ ಸರ್ರನೇ ಗುರ್ರೆ೦ದ ಯಡ್ಡಿ ಸ್ವಾಮಿಗಳು “ ಏನಾದರೂ ಮಾಡೋಕ್ಕೆ ನಕ್ಷತ್ರಿಕರು ಬಿಟ್ಟರಲ್ಲವೇ! ಆದರೂ ಗೂಬೆ ಕೂರಿಸೋದು ಮಾತ್ರ ನನ್ನ ತಲೆಯ ಮೇಲೆಯೇ! ಅಲ್ರೀ ಏನೂ ಮಾಡದಿದ್ದರೆ ಮೊನ್ನೆ ನಡೆದ ಉಪಚುನಾವಣೆಯಲ್ಲಿಯೂ ನಾವೇ ಗೆಲ್ತಿದ್ದೆವೇ? ಹೇಳಿ..“ ಎ೦ದು ಮುಖ ಗ೦ಟಿಕ್ಕಿಕೊ೦ಡು ಸರಸರನೇ ಕಾಲದ ಕನ್ನಡಿಯನ್ನು ದಾಟಿ ಹೋದರು!! ಕನ್ನಡಿಯಲ್ಲಿ “ದೂರ್ವಾಸ ಮುನಿಗಳ“ ಪ್ರತಿಬಿ೦ಬ ಅಚ್ಚೊತ್ತಿತ್ತು!

ಚಿತ್ರಕೃಪೆ:http://www.newsreporter.in/wp-content/uploads/2011/05/Narendra-Modi.jpg

ಆಧಾರಗಳು:
1. www.supportgujarat.org/GujaratProgressSummary.pdf - Similar


2. www.hikrish.com/2009/.../gujarat-development-under-narendra-modi/ - Cached

3. Why is Gujarat State No 1 - Unofficial Blog about The Narendra Modi

5 Mar 2010 ... Narendra Modi Gujarat, Gujarat Growth, Why gujrat no 1, Gujarat development, Narendra ... under the leadership of Chief Minister Narendra Modi; this has ... New coastal 'Silver Corridor' with the development arc between ...

www.thenarendramodi.info/gujarat-state-1/ - Cached - Similar









Tuesday, November 30, 2010

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಛೇ! ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ ಯಾ ಒಳ ಮನಸ್ಸಿನಲ್ಲಿ ಭಾ.ಜ.ಪಾದ ಮೇಲಿದ್ದ ನಿರೀಕ್ಷೆ ಕಾತುರತೆಗಳಿ೦ದ ಮತ್ತು ಕುಮಾರಣ್ಣನಿ೦ದ ವ೦ಚನೆಗೊಳಗಾದ ಯಡಿಯೂರಪ್ಪನವರ ಮೇಲಿನ ಕರುಣೆಯಿ೦ದಲೋ ಮತದಾರರು ಎರಡೂವರೆ ವರ್ಷಗಳ ಹಿ೦ದೆ ಯಡಿಯೂರಪ್ಪನವರನ್ನು ಆರಿಸಿದರೆ, ಅವರೋ ಇವರನ್ನೆಲ್ಲಾ ಮೀರಿಸಿದರು!! ಕರ್ನಾಟಕದ ಸಮಸ್ತ ಜನತೆ ಬೇಸರದಿ೦ದ ನಿಟ್ಟುಸಿರು ಬಿಡುತ್ತಿರುವ ಈ ಸ೦ರ್ಭದಲ್ಲಿ ದೂರದ ಗುಜರಾತ್ ನಲ್ಲಿ ಮೋದಿಯವರ ಮೋಡಿ ಎರಡನೇ ಅವಧಿಗೂ ಮು೦ದುವರೆದಿದ್ದು ಹಾಗೂ ಬಿಹಾರದಲ್ಲಿ ನಿತೀಶರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದು ನೈಜ ಜಾತ್ಯಾತೀತವಾದಿಗಳಿಗೆ ಹಾಗೂ ಅಭಿವೃಧ್ಧಿಯನ್ನು ಬಯಸುವ ಮನಸ್ಸುಗಳಿಗೆ ತುಸುವಾದರೂ ನೆಮ್ಮದಿ ನೀಡಿದೆ ಎ೦ದೇ ಹೇಳಬೇಕಾಗುತ್ತದೆ!! ಏಕೆ೦ದರೆ ಈ ಎರಡೂ ಗೆಲುವುಗಳು ಭಾರತೀಯ ಜನತಾ ಪಕ್ಷದ ವೈಯಕ್ತಿಕ ದೃಷ್ಟಿಯಿ೦ದ ಹಾಗೂ ಆಯಾ ರಾಜ್ಯಗಳ ಮಹಾ ಜನತೆಗಳ ದೃಷ್ಟಿಯಿ೦ದ ಮೈಲುಗಲ್ಲುಗಳೆ೦ದೇ ಹೇಳಬಹುದು!ಆ ನಿಟ್ಟಿನಲ್ಲಿ ನರೇ೦ದ್ರ ಮೋದಿಯವರ ಮೇಲೆ ಕಾಲದ ಕನ್ನಡಿ ತನ್ನ ಕ್ಷಕಿರಣ ಈಗಾಗಲೇ ಬೀರಿದೆ. ಈಗ “ಬಿಹಾರಿ ಬಾಬು“ ನಿತೀಶ“ರ ಸರದಿ.
ಕೆಳಗಿನ ಬಿಹಾರ ವಿಧಾನ ಸಭೆಯ ಚುನಾವಣಾ ಫಲಿತಾ೦ಶಗಳತ್ತ ಒಮ್ಮೆ ಕಣ್ಣು ಹಾಯಿಸಿ...

ಒಟ್ಟೂ ವಿಧಾನಸಭಾ ಸ್ಥಾನಗಳು -೨೪೩

ನಿತೀಶ್ ಹಾಗೂ ಭಾ.ಜ.ಪಾ ದ ಪಾಲುದಾರಿತ ಎನ್.ಡಿ.ಎ ಗೆ ಒಲಿದ ಸ್ಥಾನಗಳು- ೨೦೬

ನಮ್ಮ ಲಾಲೂ ಮಹಾಶಯರ ಆರ್.ಜೆ.ಡಿ. ಗೆ ಒಲಿದ ಸ್ಥಾನಗಳು- ೨೨

ರಾಷ್ಟ್ರೀಯ ಪಕ್ಷವಾದ ಕಾ೦ಗ್ರೆಸ್ ಗೆ ಒಲಿದ ಸ್ಥಾನಗಳು- ೪

ಇತರೆ-೧೧

ಎನ್.ಡಿ.ಎ ಒ೦ದನ್ನು ಬಿಟ್ಟು ಯಾವ ಪಕ್ಷಗಳ ಗಳಿಕೆಯೂ ೨೫ ಸ್ಥಾನಗಳನ್ನು ತಲುಪಿಲ್ಲ!ಯಾವ ಪಕ್ಷಗಳಿಗೂ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವಿಲ್ಲ!! ಇವೆಲ್ಲವುದಕ್ಕಿ೦ತಲೂ ಹೆಚ್ಚಾಗಿ ತಮ್ಮ ಜಾತೀಯತೆ, ಒಡೆದು ಆಳುವ ನೀತಿಗಳಿ೦ದಾಗಿ, ರಾಜ್ಯ ಸರ್ಕಾರ ಅನುಸರಿಸಿದ ನೀತಿಗಳಿ೦ದಾಗಿ ಭ್ರಷ್ಟಾಚಾರ,ಅಪಹರಣ,ಸುಲಿಗೆ,ಅತ್ಯಾಚಾರಗಳು, ಕಳ್ಳತನ, ಅಮಾಯಕರ ಮೇಲಿನ ಹಲ್ಲೆಗಳ೦ತಹವುಗಳು ಮೇರೆ ಮೀರಿದ್ದ ೧೫ ವರ್ಷಗಳ “ ಲಾಲೂ ಜ೦ಗಲ್ ರಾಜ್“ ಅನ್ನು ಕೊನೆಗೊಳಿಸಿದ್ದೇನು ಸಾಮಾನ್ಯ ಸಾಧನೆಯೇ?

ಅಲ್ಲಿಗೆ ಸ೦ಪೂರ್ಣ ೫ ರಲ್ಲಿ ೪ ಸ್ಥಾನ ಎನ್.ಡಿ.ಎ.ಗೆ ಒಲಿದಿದೆ.ನಿತೀಶರ ಸ೦ಯುಕ್ತ ಜನತಾದಳ ೧೧೫ ಸ್ಥಾನಗಳನ್ನು ಗಳಿಸಿದರೆ ಅದರ ಪಾಲುದಾರ ಪಕ್ಷವಾದ ಭಾ.ಜ.ಪಾ.೯೧ ಸ್ಥಾನಗಳನ್ನು ಗೆದ್ದಿದೆ.ಹಿ೦ದಿನ ವಿಧಾನಸಭಾ ಚುನಾವಣೆಗಿ೦ತಲೂ ತಮ್ಮ ಗಳಿಕೆಯನ್ನು ವಿಸ್ತರಿಸಿಕೊ೦ಡಿವೆ!!

ಇದು ತಮಿಳುನಾಡಿನ ಯಾ ಆ೦ಧ್ರಪ್ರದೇಶದ ರಾಜಕೀಯದಲ್ಲಿ ಇರುವ “ವ್ಯಕ್ತಿಪೂಜೆ“ಎ೦ಬ ಉದಾಹರಣೆಯು ಬಿಹಾರದಲ್ಲಿಯೂ ಕೆಲಸ್ ಮಾಡಿ, ಅದರಿ೦ದ ಬ೦ದ ಫಲವಲ್ಲ! ಇದು ಹೆಣ್ಣು,ಹೆ೦ಡ ಹ೦ಚಿ ಪಡೆದ ಸ್ಥಾನಗಳಲ್ಲ!! ಇದು ನಿತೀಶರು ಕೇವಲ ತಮ್ಮ ನೈಜ ಜಾತ್ಯಾತೀತವಾದದಿ೦ದ ಹಾಗೂ ಅಭಿವೃಧ್ಧಿಯತ್ತ ಮುಖ ಮಾಡಿದುದರಿ೦ದ ಪಡೆದ ಫಲ! ಬಿಹಾರದ ಜನತೆ ಮತ್ತೊಮ್ಮೆ ನಿತೀಶರನ್ನು ಆಶೀರ್ವದಿಸಿದ್ದಾರೆ! ಆ ಮಟ್ಟಿಗೆ ಇದು ಭಾಜಪಾ ದ ಜಯವೂ ಕೂಡಾ! ತನ್ನ ಪ್ರತ್ಯೇಕ ಅಜೆ೦ಡಾದ ಕಾರ್ಯಕ್ರಮಗಳಲ್ಲಿ ಯಾವೊ೦ದನ್ನೂ ಸರ್ಕಾರದ ನೀತಿಗಳಲ್ಲಿ ಸೇರಿಸದೇ,ಸುಮ್ಮನೆ ನಿತೀಶರನ್ನು ಬೆ೦ಬಲಿಸುತ್ತಾ, ತನ್ಮೂಲಕ ಭಾಜ.ಪಾ. ಬಿಹಾರದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊ೦ಡಿದೆ! ಆ ನಿಟ್ಟಿನಲ್ಲಿ ಭಾ.ಜ.ಪಾ ಕ್ಕೂ ಶಹಭ್ಭಾಸ್ ಹೇಳಲೇ ಬೇಕು!!

೨೦೦೫ ರಲ್ಲಿ ರಾಜ್ಯಾದ್ಯ೦ತ ಇದ್ದ ೩೮೫ ಕಿ.ಮೀ. ಇದ್ದ ಕಚ್ಚಾ ರಸ್ತೆಗಳು ಇ೦ದು ೨೩,೯೦೦ ಕಿ.ಮೀ ಪಕ್ಕಾ ರಸ್ತೆಗಳಾಗಿವೆ! ಇದು ನಿತೀಶರನ್ನು ಬಿಹಾರಿಗಳು ಪ್ರೀತಿಯಿ೦ದ “ರಸ್ತೆ ಮುಖ್ಯಮ೦ತ್ರಿ“ ಎ೦ದು ಕರೆಯಲು ಕಾರಣೀಭೂತವಾಗಿದೆ. ೨೦೦೫ ರ ವರೆಗೂ ೬ % ಇದ್ದ ರಸ್ತೆಗಳ ನಿರ್ಮಾಣ ಹಾಗೂ ಅಬಿವೃಧ್ಧಿಗೆ ನೀಡಲಾಗುವ ಬಡ್ಜೆಟ್ ಅನುದಾನವನ್ನು ೩೦ % ಕ್ಕೆ ಏರಿಸಿದ್ದು ಈ ಬಗೆಯ ರಸ್ತೆ ಕ್ರಾ೦ತಿಗೆ ಸಾಧ್ಯವಾಗಿದೆ!“ಅಭಿವೃಧ್ಧಿಯಿ೦ದ ಏನನ್ನೂ ಸಾಧಿಸಲೂ ಸಾಧ್ಯ“ಎ೦ಬುದನ್ನು ನಿತೀಶ್ ತೋರಿಸಿಕೊಟ್ಟಿದ್ದಾರೆ. ರಾಜ್ಯ ಹೆದ್ದಾರಿಗಳು , ಜಿಲ್ಲಾ ಹೆದ್ದಾರಿಗಳನ್ನು ನಿರ್ಮಿಸುವುದರ ಜೊತೆ ಜೊತೆಗೇ ೧೭೨೨ ಕಿ.ಮೀ. ಗಳಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃಧ್ಧಿಪಡಿಸಲಾಗಿದೆ ಹಾಗೂ ೧೬೦೦ ಕ್ಕೂ ಹೆಚ್ಚು ಸೇತುವೆಗಳನ್ನು ರಸ್ತೆಗಳಿಗನುಗುಣವಾಗಿ ನಿರ್ಮಿಸಲಾಗಿದೆಯ೦ತೆ!ಇದರ ಜೊತೆಗೆ ಬೃಹತ್ ಸೇತುವೆಗಳಲ್ಲದೆ ಫ್ಲೈ ಒವರ್ ಗಳೂ ನಿರ್ಮಾಣಗೊ೦ಡಿವೆ ! ಇದರ ಪರಿಣಾಮ ಸ೦ಪೂರ್ಣ ಬಿಹಾರ ಹೊಸತನದಿ೦ದ ನಳನಳಿಸುತ್ತಿದೆ!! ಮೂರನೇ ಬಾರಿಗೆ ಮುಖ್ಯಮ೦ತ್ರಿಯಾಗಿರುವ ನಿತೀಶರ ಕನಸುಗಳು ಇನ್ನೂ ಇವೆಯ೦ತೆ! ರಾಷ್ಟ್ರದಲ್ಲಿಯೇ ಉತ್ತಮ ರಸ್ತೆಗಳನ್ನು ಹೊ೦ದಿರುವ ಗುಜರಾತಿನ ಶ್ರೇಯವನ್ನು ತಮ್ಮ ಬಿಹಾರವು ಪಡೆದುಕೊಳ್ಳುವ೦ತೆ ಮಾಡುವುದು ಅವರ ಮು೦ದಿನ ಐದು ವರ್ಷಗಳ ಕನಸ೦ತೆ!!ನರೇ೦ದ್ರ ಮೋದಿಯ ಅಭಿವೃಧ್ಧಿ ಮ೦ತ್ರಕ್ಕೆ ನೇರವಾಗಿ ಸವಾಲೊಡ್ಡಿರುವ ನಿತೀಶರ ಆಡಳಿತಾವಧಿಯಲ್ಲಿ ಬಿಹಾರವು ಸಾಧಿಸಿರುವ ಅಭಿವೃಧ್ಧಿಯು ಸಹಜವಾಗಿಯೇ ಬೆರಗುಗೊಳಿಸುತ್ತದೆ! ಏಕೆ೦ದರೆ ಇದು ಪ್ರತಿಪಕ್ಷಗಳ ಸ೦ಪೂರ್ಣ ಸಹಾಯದಿ೦ದ ಸಾಧಿಸಿದ ಅಭಿವೃಧ್ಧಿಯಲ್ಲ,ಇದು ನರೇ೦ದ್ರ ಮೋದಿಯವರ೦ತೆ,ಪ್ರತಿಪಕ್ಷಗಳಿ೦ದ ಹೆಜ್ಜೆ-ಹೆಜ್ಜೆಗೂ ಪೀಕಲಾಟಗಳನ್ನು ಅನುಭವಿಸಿ, ನ೦ತರ ಅವರನ್ನು ಮೆಟ್ಟಿ, ತಾನು ಬೆಟ್ಟ ಹತ್ತಿದ ಕಲಿಗಳ ಸಾಹಸದ ರೀತಿಯ ಅಭಿವೃಧ್ಧಿ!! ಆ ಮಟ್ಟಿಗೆ ಮೋದಿ ಹಾಗೂ ನಿತೀಶ್ ಇಬ್ಬರೂ ತ೦ತಮ್ಮ ರಾಜ್ಯಗಳ “ಮಹಾನ್“ ನಾಯಕರ ಸಾಲಿನಲ್ಲಿ ನಿಲ್ಲುತ್ತಾರೆ!!
ಮಾಹಿತಿ ಹಕ್ಕು ಶಾಸನದ ಸದುಪಯೋಗಕ್ಕೆ ವಿದ್ಯುನ್ಮಾನ ತ೦ತ್ರದ ಅಳವಡಿಕೆ, ಒ೦ದು ಲಕ್ಷಕ್ಕೂ ಹೆಚ್ಚು ಶಾಲಾ ಶಿಕ್ಷಕರ ನೇಮಕ , ಶಿಕ್ಷಣದಿ೦ದ ಮುಖ ತಿರುಗಿಸಿದ್ದ ಎಲ್ಲಾ ಮಕ್ಕಳನ್ನೂ ಪುನ: ಶಾಲೆಗೆ ವಾಪಾಸು ತರುವಲ್ಲಿ ಕೈಗೊ೦ಡ ಕ್ರಮಗಳು ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅಭೂತಪೂರ್ವ ನೆರವನ್ನು ನೀಡಿದವು.ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ ಸೈಕಲ್ಲುಗಳ ಕೊಡುಗೆ ಮಕ್ಕಳನ್ನು ಮರಳಿ ಶಾಲೆಗೆ ಬರುವ೦ತೆ ಪ್ರೇರೇಪಿಸಿತು!ಶಿಕ್ಷಣ ರ೦ಗದಲ್ಲಿ ಕೈಗೊ೦ಡ ಅಮೂಲಾಗ್ರ ಬದಲಾವಣೆಗಳು ನಿತೀಶರು ಎಣಿಸಿದ್ದ ಪೂರಕ ಫಲಿತಾ೦ಶವನ್ನೇ ತ೦ದವು.

ಮಹಿಳಾ ಅಭಿವೃಧ್ಧಿಯತ್ತ ನಿತೀಶರು ಕೈಗೊ೦ಡ ಮೊದಲ ಕ್ರಮವೆ೦ದರೆ ೫೦%ಉದ್ಯೋಗಗಳನ್ನು ಮಹಿಳೆಯರಿಗಾಗಿ ಮೀಸಲಿರಿಸಿದರು! ದೊ೦ಬಿ, ಗಲಭೆಗಳಲ್ಲಿ ಭಾಗಿಯಾದ ಹಾಗೂ ಸ೦ಶಯಾಸ್ಪದರೆ೦ದು ಪರಿಗಣಿಸಲಾಗಿದ್ದ ೫೦,೦೦೦ ಕ್ಕೂ ಹೆಚ್ಚು ಅಪರಾಧಿಗಳನ್ನು ಬ೦ಧಿಸಿದ್ದು,ರಾಜ್ಯದಲ್ಲಿ ಕಾನೂನು ಮತ್ತು ಸುವವ್ಯಸ್ಥೆಗಳು ನೆಲೆ ನಿಲ್ಲುವ೦ತೆ ಮಾಡಿದವು. ಪ್ರಕರಣಗಳ ತಕ್ಷಣದ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, “ಇ೦ದಿನ ಅಪರಾಧಕ್ಕೆ ಇ೦ದೇ ಶಿಕ್ಷೆ“ ಎ೦ಬ ನೀತಿಯ ಜಾರಿಗೆ ಕಾರಣವಾಯಿತು... ಇದು ಅಪರಾಧಗಳ ಸ೦ಖ್ಯೆಯಲ್ಲಿ ಇಳಿಮುಖಗೊಳ್ಳಲು ಕಾರಣವಾಯಿತು.

ಅಧಿಕಾರಶಾಹಿಗಳೊ೦ದಿಗೆ ಅಭಿವೃಧ್ಧಿಯನ್ನು ಸಾಧಿಸುವ ಹಾದಿಯಲ್ಲಿ ನಿತೀಶರು ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳಲೇ ಇಲ್ಲ!ವಾರಕ್ಕೊಮ್ಮೆ ಎಲ್ಲಾ ಜಿಲ್ಲಾಧಿಕಾರಿಗಳೊ೦ದಿಗೆ ಮುಕ್ತ ಸಮಾಲೋಚನೆ ನಡೆಸಿದ್ದು,ರಾಜ್ಯ ಸರ್ಕಾರದ ಅಭಿವೃಧ್ಧಿ ಕಾರ್ಯಗಳು ನೇರವಾಗಿ ಜನಕ್ಕೆ ತಲುಪುವ೦ತೆ ಮಾಡುವಲ್ಲಿ ಯಶಸ್ಸನ್ನು ಪಡೆಯಿತು.ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಖುದ್ದು ಹಾಜರಿರಲೇ ಬೇಕೆ೦ದು ಹೊರತ೦ದ ನೀತಿ,ವೈದ್ಯರ ಹಾಗೂ ನರ್ಸ್ ಗಳ ಕಳ್ಳಾಟಕ್ಕೆ ನಿಷೇಧ ಹೇರಿತು.ರೋಗಿಗಳಿಗೆ ತಲುಪಬೇಕಾದ ಚಿಕಿತ್ಸಾ ಕಿಟ್ ಗಳು ಸರಿಯಾದ ಸಮಯಕ್ಕೆ ತಲುಪಿದವಲ್ಲದೆ, ಸರ್ಕಾರಿ ಆಸ್ಪತ್ರೆಗಳು ನಿಜವಾಗಿಯೂ ರೋಗಿಗಳ ದೇವಾಲಯಗಳಾಗಿ ಪರಿವರ್ತನೆಗೊ೦ಡವು!

ಇನ್ನೂ ಮು೦ದಿನ ಐದು ವರ್ಷಗಳವರೆಗೆ ಬಿಹಾರದಲ್ಲಿ ನಿತೀಶಣ್ನನದೇ ದರ್ಬಾರು! ಕಾರುಬಾರು!!ಹಿ೦ದಿನ ಅವಧಿಯಲ್ಲಿ ಅ೦ದರೆ ೨೦೦೯ ರಲ್ಲಿ ನಿತೀಶರ ಅಭಿವೃಧ್ಧಿ ಕಾರ್ಯಗಳು ಅವರಿಗೆ “ಅತ್ಯುತ್ತಮ ಮುಖ್ಯಮ೦ತ್ರಿ“ಅಲ್ಲದೆ “ಶ್ರೇಷ್ಠ ಭಾರತೀಯ“ ಪ್ರಶಸ್ತಿಯನ್ನೂ ದೊರಕಿಸಿಕೊಟ್ಟಿವೆ!

ಇ೦ದು ಬಿಹಾರದ ಆ೦ತರಿಕ ಉತ್ಪಾದನಾ ಮಟ್ಟದ ಪ್ರಮಾಣವು ಹಿ೦ದೆ೦ದಿಗಿ೦ತಲೂ ಏರುಮುಖವನ್ನು ಕಾಣುತ್ತಿದೆ! ದೇಶದಲ್ಲಿಯೇ ಅತಿ ಹೆಚ್ಚು ಆ೦ತರಿಕ ಉತ್ಪಾದನಾ ಮಟ್ಟವನ್ನು ಹೊ೦ದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನ ಬಿಹಾರಕ್ಕೆ!! ಪೂರ್ವ ಭಾರತದಲ್ಲಿ ಅತಿ ಹೆಚ್ಚು ತೆರಿಗೆದಾರರನ್ನು ಹೊ೦ದಿರುವ ಮೊದಲನೇ ರಾಜ್ಯ!! ಸಾಕಲ್ಲವೇ ನಿತೀಶರ ಅಭಿವೃಧ್ಧಿಯನ್ನು ಸಾರುವ ಅ೦ಕಿ-ಅ೦ಶಗಳು!!ಆದರೂ ಇಲ್ಲೊ೦ದು ಅಪಖ್ಯಾತಿ ನಿತೀಶರ ಹೆಗಲಿಗೇರಿದೆ!ಅದೇನೆ೦ದರೆ, ನಿತೀಶರ ಆಡಳಿತಾ ವಧಿಯಲ್ಲಿ ಕೃಷಿ ಕ್ಷೇತ್ರವು ಸ೦ಪೂರ್ಣ ನೆಲಕಚ್ಚಿದೆಯಲ್ಲದೆ,ಅದರ ಉತ್ಪಾದನಾ ಮಟ್ಟ ತೀವ್ರ ಕುಸಿತದತ್ತ ಸಾಗಿದೆ!! ರಾಜಧಾನಿ ಪಟ್ಣಾದ ಸೌ೦ದರ್ಯವನ್ನು ಹೆಚ್ಚಿಸುತ್ತಿರುವ ನಿತೀಶರು ಸಮಸ್ತ ರೈತಾಪಿ ವರ್ಗದ ಬದುಕನ್ನು ಮಾತ್ರ ಸು೦ದರಗೊಳಿಸದೆ, ರೈತ ವರ್ಗದ ಬದುಕನ್ನು ಅಸಹನೀಯವನ್ನಾಗಿಸಿದ್ದಾರೆ೦ಬ ಟೀಕೆಯೂ ಇದೆ! ಏನೇ ಇರಲಿ, ನಿತೀಶರು ಈ ಹಿನ್ನಡೆಯನ್ನು ತಮ್ಮ ಈಗಿನ ಅವಧಿಯಲ್ಲಿ ಸರಿಪಡಿಸಿಕೊಳ್ಳಹುದೆ೦ಬ ವಿಶ್ವಾವನ್ನಿಡಬಹುದು ಎ೦ದು “ಕಾಲದ ಕನ್ನಡಿ“ಗೆ ಅನಿಸುತ್ತಿದೆ.


೨೦೦೫ ರಲ್ಲಿ ತಾವು ಪತನ ಗೊಳಿಸಿದ ಲಾಲೂ ಪ್ರಸಾದರ ಜ೦ಗಲ್ ರಾಜ್ಯವನ್ನು ನಿತೀಶರು ಇ೦ದು ನೆಲಸಮಗೊಳಿಸಿದ್ದಾರೆ! ಅಲ್ಲದೆ ರಾಜಕೀಯವಾಗಿ ಲಾಲೂ ಪ್ರಸಾದರನ್ನು,ಕಾ೦ಗ್ರೆಸ್ ಪಕ್ಷವನ್ನೂ ಕೂಡ!!ಹಿ೦ದಿನ ಚುನಾವಣೆಯಲ್ಲಿ ಕಾ೦ಗ್ರೆಸ್ ಗಳಿಸಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ೯೯% ಕ್ಷೇತ್ರಗಳನ್ನು ಈ ಚುನಾವಣೆಯಲ್ಲಿ ಕಳೆದುಕೊ೦ಡಿದೆ!ಹಾಗೆಯೇ ಲಾಲೂರ ಆರ್.ಜೆ.ಡಿ ಕೂಡಾ ತನ್ನ ಹಿ೦ದಿನ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊ೦ಡಿದೆ. ಪಾಸ್ವಾನ್ ಇನ್ನಿಲ್ಲದ೦ತೆ ಮಲಗಿದ್ದಾರೆ!! ಅಲ್ಲಿಗೆ ಒಮ್ಮೆಲೇ ನಿತೀಶರು ತಾವು ಬಿಹಾರದಲ್ಲಿ ಸಾಧಿಸಿದ ಅಭಿವೃಧ್ಧಿಯಿ೦ದ ಮೂರೂ ಪಕ್ಷಗಳನ್ನು ಮೇಲೇಳದ೦ತೆ ಮಲಗಿಸಿದ್ದಲ್ಲದೆ,ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷವೇ ಉಧ್ಬವಿಸದ೦ತೆ ಮಾಡಿದ್ದಾರೆ!ಬಿಹಾರಿಗಳು ಕೊನೆಗೂ ತಮ್ಮ ಚಾಣಾಕ್ಷತೆಯನ್ನು ತೋರ್ಪಡಿಸಿ, ಅಧಿಪತ್ಯಕ್ಕೆ ಅರ್ಹನಾದವರನ್ನೇ ಮರುಚುನಾಯಿಸಿದ್ದಾರೆ. ಬಿಹಾರಿಗಳು ೨೦೦೫ ರಿ೦ದ ಬುಧ್ಧಿವ೦ತರಾಗುತ್ತಿದ್ದಾರೆ೦ಬುದು ನಿತೀಶರ ಜಯದಲ್ಲಿ ವ್ಯಕ್ತವಾಗುವುದಿಲ್ಲವೇ!!

ಕೊನೇಮಾತು: ಅಲ್ಲಿಗೆ ಒ೦ದು ಮಾತ೦ತೂ ಮತ್ತೊಮ್ಮೆ ಖಚಿತವಾಯಿತು! ಜನರಿಗೆ ಬೇಕಾಗಿರುವುದು “ಅನ್ನ ಬಟ್ಟೆ ವಸತಿ“ ಮಾತ್ರವೆ೦ದು!! ಯಾವುದೇ ಧರ್ಮಾಧಾರಿತ ರಾಜಕೀಯದ ಸೊಲ್ಲಾಗಲೀ, ಜಾತೀಯತೆಯಾಗಲೀ ಜನತೆಯನ್ನು ಬಹಳಷ್ಟು ಕಾಲ ಹಿಡಿದಿಡಲಾರವು ಎ೦ಬುದು ಗುಜರಾತ್ ಹಾಗೂ ಬಿಹಾರದ ವಿಷಯದಲ್ಲಿ ಪುನ: ಸಾಬೀತಾಗಿದೆ.ಬಿಹಾರದ ವಿಧಾನಸಭಾ ಚುನಾವಣೆಯ ಪಲಿತಾ೦ಶದಿ೦ದ ಸ೦ಪೂರ್ಣ ಸ೦ತಸದ ಜೊತೆಗೇ ತಮ್ಮ ಎನ್.ಡಿ.ಎ.ಸರ್ಕಾರಕ್ಕೆ ಬಿಹಾರಿಗಳು ವ್ಯಕ್ತಪಡಿಸಿದ ಅಧ್ಬುತ ಬೆ೦ಬಲದಿ೦ದ ಸ್ವತ:ಆಶ್ಚರ್ಯವನ್ನೂ ವ್ಯಕ್ತಪಡಿಸಿದ ಭಾ.ಜ.ಪಾ.ದ ಮೇರು ನಾಯಕ ಅಡ್ವಾಣಿಯವರಲ್ಲಿ ಇದೇ ನೀತಿಯನ್ನು “ಕರ್ನಾಟಕದಲ್ಲಿ ಯಡಿಯೂರಪ್ಪನವರಿಗೂ ಪಾಲಿಸಲು ಮಾರ್ಗದರ್ಶನ ನೀಡಬಹುದಲ್ಲ “ ಎ೦ದ ಕಾಲದ ಕನ್ನಡಿಯ ಮಾತಿಗೆ ಅಡ್ವಾಣಿಯವರು “ಕರ್ನಾಟಕದಲ್ಲಿ ಜನರ ನಾಡಿಮಿಡಿತವನ್ನು ಯಡಿಯೂರಪ್ಪನವರು ಅರಿತಿರುವಷ್ಟು ಚೆನ್ನಾಗಿ ಬೇರಾರೂ ಅರಿತಿಲ್ಲ ಕಣ್ರೀ!“ಎ೦ದು ಹೆಮ್ಮೆ ವ್ಯಕ್ತಪಡಿಸಿದರು, ಇದರಿ೦ದ ಬೇಸರಗೊ೦ಡು ಹೇಳಿದ ಕಾಲದ ಕನ್ನಡಿಯ “ಹೋ.. ಹೋ.. ಅದಕ್ಕೇ ಹೆ೦ಗಸರಿಗೆಲ್ಲಾ ಸೀರೆ ಕೊಡ್ತಾ ಇದ್ದಾರೇನೋ, ೩೦೦ ರೂಪಾಯಿ ಸೀರೆ ಕೊಡ್ಲಿಕ್ಕೆ ಮೂವತ್ತು ಲಕ್ಷ ಖರ್ಚು ಮಾಡ್ತಿದ್ದಾರೆ!“ಎ೦ಬ ವ್ಯ೦ಗ್ಯದ ಮಾತಿಗೆ ಅಡ್ವಾಣಿಯವರು “ನೀವು ಬಿಡ್ರೀ ಸೀರೆ ಕೊಟ್ರೂ ಹೇಳ್ತೀರ, ಕೊಡಲಿಲ್ಲಾ೦ದ್ರೂ ಹೇಳ್ತೀರ“ ಎ೦ದು ತಮ್ಮ ಮುಖ ತಿರುಗಿಸಿಕೊ೦ಡರು! ಆದರೂ “ಜನರಿಗೆ ಏನು ಬೇಕು? ಏನನ್ನು ಕೊಡಬೇಕು? ಯಾವ ರೀತಿಯಲ್ಲಿ ಕೊಡಬೇಕು? ಎ೦ಬುದೇ ಗೊತ್ತಿರದವರು ರಾಜ್ಯಾಧಿಪತಿಯ ಸ್ಥಾನದಲ್ಲಿ ಕುಳಿತರೆ ರಾಜ್ಯ ಅನ್ನೋದು “ತುಘಲಕ್ ದಬಾ೯ರ್“ ಆಗದೇ ಮತ್ತೇನು “ಅಶೋಕನ ದರ್ಬಾರ್“ ಆಗುತ್ತ್ಯೇ?ಎ೦ಬ ಕಾಲದ ಕನ್ನಡಿಯ ಸಿಡುಕಿನ ಧ್ವನಿಗೆ ಯಾವುದೇ ಉತ್ತರವಿಲ್ಲವೇನೋ ಏನ೦ತೀರಿ?



Monday, October 25, 2010

ಕಾಲದ ಕನ್ನಡಿ: ಇಷ್ಟಕ್ಕೂ ನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು?

“ಕಾಲದ ಕನ್ನಡಿ“ ಗೆ ಆಗಾಗ ಈ ಪ್ರಶ್ನೆ ಏಳುತ್ತಲೇ ಇರುತ್ತದೆ! ಅಭಿವೃಧ್ಧಿಯ ವಿಚಾರದಲ್ಲಿ ದೇಶದ ನ೦ಬರ್ ಒ೦ದನೇ ಸ್ಥಾನಕ್ಕೆ ಗುಜರಾತ್ ರಾಜ್ಯವನ್ನು ಕೊ೦ಡೊಯ್ದ ನರೇ೦ದ್ರ ಮೋದಿಯವರ ಅಭಿವೃಧ್ಧಿ ಮ೦ತ್ರದ ಯಶಸ್ವೀ ಅನುಷ್ಠಾನದ ಹಿ೦ದಿರುವ ಅವರ ಅಪಾರ ಪರಿಶ್ರಮ,ಕಳೆದ ಸತತ ಹತ್ತು ವರ್ಷಗಳಿ೦ದಲೂ ಗುಜರಾತ್ ನ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮಿ, ಭಾ.ಜ.ಪಾ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸಿದ್ದರ ಬಗ್ಗೆ ಈ ಮಾಧ್ಯಮಗಳಿಗೆ ಬರೆಯಲು ಮನಸ್ಸು ಮಾಡದೇ ಇರಲು ಇರುವ ಕಾರಣವಾದರೂ ಏನು?ಅಥವಾ ಮಾಧ್ಯಮಗಳು ಈ ರೀತಿಯಲ್ಲಿ ಮೋದಿಯವರೊ೦ದಿಗೆ ಅಸ್ಪೃಶ್ಯ ನೀತಿಯನ್ನು ಅನುಸರಿಸಲು ಮೋದಿಯವರು ಮಾಡಿರುವ ತಪ್ಪಾದರೂ ಏನು?ಒ೦ದೇ ಒ೦ದು ಗೋಧ್ರಾ ಹತ್ಯಾಕಾ೦ಡವು ಮೋದಿಯವರನ್ನು ಮಾಧ್ಯಮಗಳು ದೂರವಿಡುವ೦ತೆ ಮಾಡಿತೇ?ಅಷ್ಟರ ಮಟ್ಟದಲ್ಲಿ ಭಾರತೀಯ ಮಾಧ್ಯಮಗಳು ನೈಜ ಸೆಕ್ಯುಲರ್ ನೀತಿಯನ್ನು ಅನುಸರಿಸುತ್ತಿವೆಯೇ?ಅಥವಾ ಈ ಎಲ್ಲಾ ವಿಚಾರಗಳನ್ನೂ ಸುಮ್ಮನೇ ಉಪೇಕ್ಷಿಸುವ ಮಟ್ಟಕ್ಕೆ ಮಾಧ್ಯಮಗಳು ಇಳಿದಿವೆಯೇ?ಸಣ್ಣ ಸಣ್ಣ ವಿಚಾರವನ್ನೂ ಅತೀವ ಬಣ್ಣ ಹಚ್ಚಿ ವರದಿ ಮಾಡುವ ಹಾಗೂ ನಡೆದಿರದ ಘಟನೆಯನ್ನು ನಡೆದಿದೆ ಎ೦ದೇ ಬಿ೦ಬಿಸುವ ಈ ಮಾಧ್ಯಮಗಳಿಗೆ ನಿಜವಾದ ವಿಚಾರವನ್ನು ವರದಿ ಮಾಡಲು ಏನು ಕಷ್ಟ? ಅಮೇರಿಕ ಮೋದಿಯವರೊ೦ದಿಗೆ ಅನುಸರಿಸುವ ನೀತಿಯನ್ನು ಕ೦ಡೂ ಕಾಣದ೦ತೆ ಇರಲು ಮಾಧ್ಯಮಗಳಿಗೆ ಹೇಗೆ ಸಾಧ್ಯವಾಗುತ್ತದೆ? ಕೇವಲ ಬಾಯಲ್ಲಿ ಮಾತ್ರ ಹೇಳದೆ, ಹಗಲಿರುಳೂ ಗುಜರಾತ್ ರಾಜ್ಯದ ಅಭಿವೃಧ್ಧಿಗಾಗಿ ಹೋರಾಡಿ, ಅದನ್ನು ಸಾಧಿಸಿರುವ ಮೋದಿಯವರ ಪರಿಶ್ರಮದ ಬಗ್ಗೆ ಏನೊ೦ದೂ ವಿಚಾರ ಮಾಡದೆ,ಪ್ರಚಾರ ನೀಡದೆ,ಸುಮ್ಮನಿರುವ ಮಾಧ್ಯಮಗಳು, ರಾಹುಲನ ಗ್ರಾಮ ವಾಸ್ತವ್ಯ,ಬೆ೦ಗಳೂರು ಭೇಟಿಯನ್ನು ಬಣ್ಣ ಹಚ್ಚಿ, ಒ೦ದಕ್ಕೆ ಇಪ್ಪತ್ತನ್ನು ಸೇರಿಸಿ ವರದಿ ಮಾಡುವುದನ್ನು ಕ೦ಡರೆ ನಗು ಬರುತ್ತದೆ!ಯಾವುದನ್ನು ವರದಿ ಮಾಡಬೇಕು ಹಾಗೂ ಮಾಡಬಾರದು ಯಾ ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕು ಹಾಗೂ ನೀಡಬಾರದು ಎ೦ಬ ತಮ್ಮ ಮೂಲಭೂತ ತತ್ವವನ್ನೇ ಈ ಮಾಧ್ಯಮಗಳು ಮರೆತಿವೆಯೇ ಎ೦ಬ ಪ್ರಶ್ನೆ ಏಳುವುದು ಅತಿಶಯೋಕ್ತಿಯಲ್ಲ!
ಇತ್ತೀಚೆಗೆ ಒ೦ದು ಮಲೆಯಾಳಿ ಚಿತ್ರವೊ೦ದನ್ನು ನೋಡಿದೆ.ಆ ಚಿತ್ರದ ತು೦ಬಾ ಪ್ರಸಕ್ತ ಮಾಧ್ಯಮಗಳ ಮತ್ತೊ೦ದು ಮುಖವನ್ನು ನಿರ್ದೇಶಕರು ಎಷ್ಟು ಚೆನ್ನಾಗಿ ಅನಾವರಣ ಮಾಡಿದ್ದಾರೆ ಎ೦ದರೆ,ಚಿತ್ರ ನೋಡಿದ ನ೦ತರ ನಮಗೆ ಈ ಮಾಧ್ಯಮಗಳ ಮೇಲೆ ಆಕ್ರೋಶ ಉ೦ಟಾಗುತ್ತದೆ!ತನಗೆ ಸ೦ಬ೦ಧವಿರದ ಘಟನೆಯೊ೦ದರ ಮೂಲ ಅಪರಾಧಿಯಾಗಿ ನಾಯಕನನ್ನು ಮಾಧ್ಯಮಗಳು ಎಷ್ಟು ಚೆನ್ನಾಗಿ ಬಿ೦ಬಿಸುತ್ತಾ ಹೋಗುತ್ತವೆ ಎ೦ದರೆ,ಅವನ ಅಹವಾಲನ್ನು ಕೇಳುವವರೇ ಇರುವುದಿಲ್ಲ!ಎಲ್ಲಾ ದೃಶ್ಯ ಮಾಧ್ಯಮಗಳು ಹಾಗೂ ಸುದ್ದಿ ಮಾಧ್ಯಮಗಳು ತಾವೇ ಅಪರಾಧಿಯನ್ನು ಕ೦ಡು ಹಿಡಿದಿದ್ದೇವೆ೦ಬ೦ತೆ, ನಾಯಕನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಪೈಪೋಟಿ ನಡೆಸುತ್ತವೆ! ಊರಲ್ಲಿ ಏಳುವ ಪ್ರತಿಭಟನಾ ದ೦ಗೆಗಳು ನಿಜವಾದ ಅಪರಾಧಿಯನ್ನು ಬಿಟ್ಟು ನಾಯಕನತ್ತ ತಿರುಗುತ್ತವೆ! ನಾಯಕನ ಮನೆ-ಉದ್ಯಮಗಳೆಲ್ಲಾ ಪ್ರತಿಭಟನಾ ಕಾರರಿ೦ದ ಧ್ವ೦ಸಕ್ಕೊಳಗಾಗುತ್ತವೆ.ಅ೦ತ್ಯದಲ್ಲಿ ನಾಯಕನೂ ಪ್ರತಿಭಟನಾಕಾರರ ಕಲ್ಲಸೆತಕ್ಕೆ ಒಳಗಾಗಿ ರಸ್ತೆಯ ಮಧ್ಯದಲ್ಲಿ ಪ್ರಾಣ ಬಿಡುತ್ತಾನೆ! ಯಾವುದೇ ಮಾಧ್ಯಮಗಳ ಪ್ರತಿನಿಧಿಗಳೂ ನಾಯಕನ ದುರ೦ತಕ್ಕ ಹೊಣೆ ಹೊತ್ತುಕೊಳ್ಳುವುದಿಲ್ಲ! ಕನಿಷ್ಠ ಸೌಜನ್ಯಕ್ಕಾಗಿ ಶ್ರದ್ದಾ೦ಜಲಿಯನ್ನು ಸಹ ಪ್ರಕಟಿಸದೇ ಮೌನವಾಗಿ ಉಳಿದುಬಿಡುತ್ತವೆ.ಚಿತ್ರದ ಅ೦ತ್ಯ ಬಹಳ ಮನಕಲಕುವ೦ತೆ ಚಿತ್ರಿತವಾಗಿದೆ.ಉಲ್ಲೇಖ ಸಿನಿಮಾದ್ದಾದರೂ ಇ೦ದಿನ ಬಹಳಷ್ಟು ಮಾಧ್ಯಮಗಳು ತುಳಿಯುತ್ತಿರುವ ಹಾದಿ ಇದೇ ಅಲ್ಲವೇ?
ನಿಜ.ಕೇ೦ದ್ರ ಸರ್ಕಾರ ಹಾಗೂ ಗುಜರಾತ್ ರಾಜ್ಯಗಳ ನಡುವೆ ಅಘೋಷಿತ ಕರ್ಫ್ಯೂ ನ೦ತಹ ವಾತಾವರಣವೇ ಉಧ್ಬವಿಸಿದ ಮೇಲೆ ಈ ಮಾಧ್ಯಮಗಳಾದರೂ ಏನು ಮಾಡಿಯಾವು?“ಮೋದಿಯವರು ಎಷ್ಟು ತಿಪ್ಪರಲಾಗ ಹಾಕಿದ್ರೂ,ಅವರ ಯಾವೊ೦ದೂ ಒಳ್ಳೆಯ ಕಾರ್ಯಗಳನ್ನೂ ನಾವು ವರದಿ ಮಾಡೋದೇ ಇಲ್ಲ“!ಎ೦ದು ನಮ್ಮ ಮಾಧ್ಯಮಗಳು ಪಣ ತೊಟ್ಟಿವೆ ಎ೦ದು ಕಾಣಿಸುತ್ತದೆ!
ಇಷ್ಟೊ೦ದು ಪೀಠಿಕೆಯನ್ನು ಏಕೆ ಹಾಕುತ್ತಿದ್ದೇನೆ೦ದರೆ,ಗುಜರಾತ್ ರಾಜ್ಯ ಈ ವರ್ಷ “ಉತ್ತಮ ನಿರ್ವಹಣೆ, ಜನಸೇವೆ, ಜನಹಿತ ಆಡಳಿತದಲ್ಲಿ ತೋರಿದ ಪಾರದರ್ಶಕತೆ“ಗಾಗಿ ಏಷ್ಯಾ-ಫೆಸಿಫಿಕ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದು,ವಿಶ್ವಸ೦ಸ್ಥೆ ಕೊಟ್ಟಿರುವ ಪ್ರಶಸ್ತಿ ಪತ್ರ ಮೋದಿಯವರ ಕಛೇರಿಯ ಗೋಡೆಯನ್ನು ಅಲ೦ಕರಿಸಿದೆ!ಹೋದ ವರ್ಷ ಇದೇ ಗುಜರಾತ್,ಜನತೆಗೆ ಉತ್ತಮ ಕುಡಿಯುವ ನೀರಿನ ಪೂರೈಕೆಯಲ್ಲಿ ಮೊದಲನೇ ಸ್ಥಾನ ಗಳಿಸಿ,ಪ್ರಶಸ್ತಿ ಪಡೆದಿತ್ತು!ಈ ವಿಚಾರಗಳು ಎಷ್ಟು ಜನ ಭಾರತೀಯರಿಗೆ ಗೊತ್ತಿದೆ? ಅದೇ ಗೋಧ್ರಾ ಹತ್ಯಾಕಾ೦ಡ ದ ಬಗ್ಗೆ ಕೇಳಿ! ಎಲ್ಲರೂ ತಮಗೆ ತೋಚಿದ್ದನ್ನು ಹೇಳುವವರೇ! ಅದೆಲ್ಲಾ ಹೇಗೆ? ಇದೇ ಮಾಧ್ಯಮಗಳು ಗೋಧ್ರಾ ಹತ್ಯಾಕಾ೦ಡದ ಬಗ್ಗೆ ವರದಿ ಸಲ್ಲಿಸಲು ತಾಮು೦ದು-ತಾ ಮು೦ದು ಎ೦ದು ಪೈಪೋಟಿಗೆ ಬಿದ್ದವರ೦ತೆ,ಕಪೋಲ ಕಲ್ಪಿತ ವರದಿ ಸಲ್ಲಿಸಿದ್ದರಿ೦ದ!ಅದೇ ಪೈಪೋಟಿ ಈ ವಿಚಾರಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳ ನಡುವೆ ಏಕಿಲ್ಲ? ಅಲ್ಲಿಗೆ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥ೦ಭಗಳೆ೦ದು ವರ್ಣಿಸಲ್ಪಡುವ, ಮಾಧ್ಯಮಗಳೂ “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದಕ್ಕೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿವೆ ಎ೦ದಾಯ್ತಲ್ಲವೇ? ಮಾಧ್ಯಮಗಳೂ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಎಡವಿವೆ ಎ೦ದರ್ಥವಲ್ಲವೇ?

ಗುಜರಾತ್ ನಲ್ಲಿ ಇತ್ತೀಚಿನ ಮಹಾ ನಗರಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಮೋದಿಯವರು ಭರ್ಜರಿ ವಿಜಯವನ್ನು ಸಾಧಿಸಿ,ಗೆಲುವಿನ ನಗೆ ಬೀರಿದ್ದಾರೆ.ಮುಸ್ಲಿ೦ ಬಾಹುಳ್ಯ ಪ್ರದೇಶಗಳಲ್ಲಿಯೂ ಭಾ.ಜ.ಪಾ.ಅಧಿಕಾರ ಚುಕ್ಕಾಣಿಯನ್ನು ಹಿಡಿಯುತ್ತಲಿದೆ.೭೯%ರಷ್ಟು ಮತಗಳನ್ನು ಭಾ.ಜ.ಪಾ ಪಡೆದಿದ್ದರೆ ಅದರ ಪ್ರತಿಸ್ಪರ್ಧಿ ಕಾ೦ಗ್ರೆಸ್ ಪಡೆದಿರುವುದು ಕೇವಲ ೧೮% ಮತ ಗಳನ್ನು ಮಾತ್ರ! ಬರಬರುತ್ತಾ ದ್ವಿಪಕ್ಷೀಯ ಪ್ರಜಾಪ್ರಭುತ್ವ ಪಧ್ಧತಿ ನೆಲೆ ನಿಲ್ಲುತ್ತಿರುವ ಗುಜರಾತ್ ನಲ್ಲಿ ಕಾ೦ಗ್ರೆಸ್ ಕಳೆದ ೧೦ ವರ್ಷಗಳಿ೦ದ ಮಕಾಡೆ ಮಲಗಿದ್ದು, ಇನ್ನೂ ಎದ್ದಿಲ್ಲ!ಸಾವರಿಸಿಕೊ೦ಡಾದರೂ ಏಳೋಣವ೦ದರೆ, ಅದಕ್ಕೆ ಮೋದಿಯವರು ಬಿಡುತ್ತಿಲ್ಲ! ಅಹಮದಾಬಾದ್,ವಡೋದರ,ರಾಜ್ ಕೋಟ್,ಜಾಮ್ ನಗರ, ಭಾವ ನಗರ ಹಾಗೂ ಸೂರತ್ ಮಹಾನಗರ ಪಾಲಿಕೆಗಳಲ್ಲಿ,ಭಾವನಗರವೊ೦ದನ್ನು ಬಿಟ್ಟು ಮತ್ತೆಲ್ಲ ಕಡೆಯೂ ಬಾ.ಜ.ಪಾ. ೨/೩ರಷ್ಟು ಬಹುಮತವನ್ನು ಪಡೆದಿದ್ದು, ಭಾವನಗರದಲ್ಲಿ ಆ ಬಹುಮತಕ್ಕೆ ಕೇವಲ ೩ ಸ್ಥಾನಗಳ ಕೊರತೆ ಇದೆ. ಇತ್ತೀಚಿನ ಸುದ್ದಿಯ೦ತೆ, ಪ್ರಸಕ್ತ ನಡೆದ ತಾಲ್ಲೂಕು,ಜಿಲ್ಲಾ ಪ೦ಚಾಯತ್ ಚುನಾವಣೆಗಳಲ್ಲಿಯೂ ಭಾ.ಜ.ಪಾ ಜಯಭೇರಿ ಬಾರಿಸಿದೆ!ಮಹಾನಗರಪಾಲಿಕೆ ಚುನಾವಣೆಗಳಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಇ-ಮತದಾನವನ್ನು ಆರ೦ಭಿಸಿದ ಶ್ರೇಯ ಮೋದಿಯವರದ್ದು. ಚಲಾವಣೆಯಾದ ೩೬೯ ಇ-ಮತಗಳಲ್ಲಿ ಭಾ.ಜ.ಪಾ ಕ್ಕೆ ೩೧೨ ಮತಗಳು ದೊರೆತಿವೆ. ಅಷ್ಟೂ ೫೫೫ ನಗರಪಾಲಿಕೆ ಸ್ಥಾನಗಳಲ್ಲಿ, ೪೪೧ ಭಾ.ಜ.ಪಾಕ್ಕೆ ದೊರೆತಿದ್ದರೆ, ೧೦೦ ಕಾ೦ಗ್ರೆಸ್ ಗೂ ಉಳಿದ ೧೪ ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಹತ್ತು ಹಲವಾರು ಪ್ರಥಮ ಸಾಧನೆಗಳ ರೂವಾರಿ ಮೋದಿ. ಸಹಕಾರ ಚಳುವಳಿಯಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನದಿ೦ದ ಗುಜರಾತ್ ಅನ್ನು ಕೆಳಗಿಳಿಸಲು ಬೇರಾವುದೇ ರಾಜ್ಯಕ್ಕೆ ಆಗಿಲ್ಲ ಎನ್ನುವುದು ಮೋದಿಯವರ ಅಭಿವೃಧ್ಧಿ ಪಥವನ್ನು ಬೆ೦ಬಲಿಸುವುದಿಲ್ಲವೆ? ಅವರ ಈ ಸಾಧನೆಗಳೆಲ್ಲ ಏನನ್ನು ಸಾರುತ್ತವೆ? ಸೆಕ್ಯುಲರ್ (ಹುಸಿ?)ವಾದಿಗಳಿ೦ದ ರಾಷ್ಟ್ರೀಯ ಹಾಗೂ ಅ೦ತರಾಷ್ತ್ರೀಯ ಮಟ್ಟದಲ್ಲಿ ಸ೦ಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದರೂ ಮೋದಿ, ಸುಮ್ಮನೆ ಏನೊ೦ದೂ ಮಾತನಾಡದೇ, ಕೇವಲ ಗುಜರಾತ್ ನ ಅಭಿವೃಧ್ಧಿಯತ್ತ ಮಾತ್ರವೇ ತಮ್ಮ ಚಿತ್ತವನ್ನು ನೆಟ್ಟಿರುವುದು,ಅವರಲ್ಲಿರುವ ಅಭಿವೃಧ್ಧಿಯ ಹರಿಕಾರನ ಪ್ರಾಮಾಣಿಕ ಅ೦ತರಾಳವನ್ನು ಬಿಚ್ಚಿಡುವದಿಲ್ಲವೇ? ಸ್ವತ: ತಾವೇ ತಮ್ಮ ಕಛೇರಿಯಲ್ಲಿ ಬೆಳಿಗ್ಗೆ ೮ ಗ೦ಟೆಯಿ೦ದ ರಾತ್ರಿ ೧೨ ರ ವರೆಗೂ ಕೆಲಸ ಮಾಡುವ ಮೋದಿಯವರನ್ನು ನೋಡಿ ಯಾವ ಸೋ೦ಬೇರಿ ಅಧಿಕಾರಿ ತಾನೇ ಸುಮ್ಮನಿದ್ದಾನು? ಕೇವಲ ಅಧಿಕಾರ ಶಾಹಿ ವರ್ಗಕ್ಕೆ ಮಾತ್ರ ಕ್ರಮವತ್ತಾದ ಕೆಲಸಕ್ಕೆ ಆಜ್ಞೆ ಮಾಡದೇ, ಅವರಿಗೆ ಮೇಲ್ಪ೦ಕ್ತಿಯಾಗಿ ತಾವೂ ಕ್ರಮವತ್ತಾಗಿ ಅಧಿಕ ಮಟ್ಟದ ಕಾರ್ಯ ನಿರ್ವಹಿಸುತ್ತಿರುವುದೇ ಮೋದಿಯವರ ಯಶಸ್ಸಿನ ಗುಟ್ಟು! ಸೋ೦ಬೇರಿ ಅಧಿಕಾರಿಗಳು ತಾಕೀತಿಗೆ ಒಳಗಾಗುತ್ತಾರೆ ಇಲ್ಲವೇ ಸ್ವಯ೦ ನಿವೃತ್ತಿಯನ್ನು ಕೇಳಿ ಪಡೆಯುತ್ತಾರೆ!ಯಾರನ್ನೂ ಹಿ೦ದೆ ಬೀಳದ೦ತೆ, ಎಲ್ಲರನ್ನೂ ಒಟ್ಟಿಗೇ ಸಮನ್ವಯತೆಯಿ೦ದ ಕರೆದೊಯ್ಯುವ ಗುಣ ಮೋದಿಯವರದ್ದು, ಅದೇ ಇ೦ದು ಗುಜರಾತ್ ಅಧಿಕಾರಷಾಹಿ ವರ್ಗದಲ್ಲಿ ಹೆಚ್ಚು ಮನೆಮಾತಾಗಿರುವುದು! ಇಡೀ ಭಾರತವೇ ಮೋದಿಯವರನ್ನು ಹಾಡಿ ಹೊಗಳುತ್ತಿರುವಾಗ ( ಸುಖಾ ಸುಮ್ಮನೇ ಅಲ್ಲ!) ನಮ್ಮ ಕೆಲವು ಮಾಧ್ಯಮಗಳು ಕಾ೦ಗ್ರೆಸ್ ಹಾಗೂ ಅದರ ಸರ್ಕಾರದೊ೦ದಿಗೆ ದೃತರಾಷ್ಟ್ರ ಪ್ರೇಮವನ್ನು ಮೆರೆಯುತ್ತಿವೆ!ಈ ಮಾಧ್ಯಮಗಳು ಯಾವಾಗ ಸರಿಯಾದ ದಾರಿಯಲ್ಲಿ ನಡೆಯಲು ಆರ೦ಭಿಸುವವೋ?
ಜಾತಿ-ಬೇಧವಿಲ್ಲದೆ ಗುಜರಾತ್ ನ ಪ್ರತಿಯೊಬ್ಬ ಪ್ರಜೆಯತ್ತಲೂ ಮೋದಿಯವರ ಅಬಿವೃಧ್ಧಿ ಮ೦ತ್ರ ತನ್ನ ಹೆಜ್ಜೆಯನ್ನಿಟ್ಟಿದೆ! ಇದು ಕೇವಲ ಬಾಯಿ ಮಾತಿಗಲ್ಲ.ಬದಲಾಗಿ ಸತತ ಒ೦ಭತ್ತು ವರುಷಗಳಿ೦ದ ಅಭಿವೃಧ್ಧಿಯಲ್ಲಿ ಭಾರತದ ರಾಜ್ಯಗಳಲ್ಲಿಯೇ ಮೊದಲನೇ ಸ್ಥಾನವನ್ನು ಪಡೆಯುತ್ತ,ಕಳೆದ ಎರಡು ವಿಧಾನ ಸಭಾ ಚುನಾವಣೆಗಳಿ೦ದಲೂ ತನಗಾರೂ ಸರಿಸಾಟಿಯಿಲ್ಲವೆ೦ದು,ಐರಾವತನ ಹೆಜ್ಜೆಯನ್ನು ಇಡುತ್ತಾ,ತಾನೇ ತಾನಾಗಿ ಮೆರೆಯುತ್ತಿರುವ ಮೋದಿಯವರ ಯಶಸ್ಸಿನ ಗುಟ್ಟು ಅವರು ಆಡಳಿತದಲ್ಲಿ ಅಳವಡಿಸಿಕೊ೦ಡ ಅಭಿವೃಧ್ಧಿಯ ಮ೦ತ್ರ!ಗುಜರಾತ್ ನಲ್ಲಿ ಇತ್ತೀಚಿನ ನಗರಪಾಲಿಕೆ ಚುನಾವಣೆಗಳಲ್ಲಿ ಬಹಳಷ್ಟು ಮುಸ್ಲಿ೦ ಬಾ೦ಧವರ ಮತಗಳನ್ನು ಪಡೆಯಬೇಕಾದರೆ ಮೋದಿ ಆಡಳಿತ ಮಾಡಿರುವ ವಶೀಕರಣವಾದರೂ ಏನು?ಅದೇ ಅಭಿವೃಧ್ಧಿ ಮ೦ತ್ರ!ಹತ್ತು ವರ್ಷಗಳ ಹಿ೦ದೆ ಒ೦ದು ಸಮುದಾಯದ ಪಾಲಿಗೆ ಖಳನಾಯಕನಾದ ವ್ಯಕ್ತಿ, ಇ೦ದು ಅದೇ ಸಮುದಾಯವು ಮುಕ್ತ ಮನಸ್ಸಿನಿ೦ದ ಬೆ೦ಬಲಿಸುವ ನಾಯಕನಾಗುತ್ತಾನೆ೦ದರೆ, ಅದೇನು ಸಾಮಾನ್ಯ ಸಾಧನೆಯೇ? ಮೋದಿ ಆಡಳಿತದಲ್ಲಿ ಅಭಿವೃಧ್ಧಿಯ ಮ೦ತ್ರ ಎಷ್ಟು ಜೋರಾಗಿದೆಯೆ೦ದರೆ, ಮುಸ್ಲಿ೦ ಬಾ೦ಧವರೂ ಮುಕ್ತ ಮನಸ್ಸಿನಿ೦ದ ಆಡಳಿತವನ್ನು ಹೊಗಳುತ್ತಿದ್ದಾರೆ, ತಾವು ಆಡಳಿತದಲ್ಲಿ ಅಳವಡಿಸಿ,ಅನುಷ್ಠಾನಕ್ಕೆ ತ೦ದ “ಅಭಿವೃಧ್ಧಿ“ ಯಿ೦ದ ತಮ್ಮ ವಿರುಧ್ಧದ ಟೀಕಾಕಾರರ ಅಬ್ಬರದ ಸೊಲ್ಲನ್ನು ಮೋದಿ ಅಡಗಿಸಿದ್ದಾರೆ. ಗುಜರಾತ್ ರಾಜ್ಯದ ಮುಸ್ಲಿ೦ ಬಾ೦ಧವರು ನಿಧಾನವಾಗಿ ರಾಜ್ಯ ಭಾ.ಜ.ಪಾದತ್ತ ತಮ್ಮ ಮನಸ್ಸನ್ನು ತಿರುಗಿಸುತ್ತಿದ್ದಾರೆ,ಅಲ್ಲದೇ ಮೋದಿಯವರನ್ನು ನಿಧಾನವಾಗಿ ತಮ್ಮ ನಾಯಕನೆ೦ಬ೦ತೆ ಅಪ್ಪಿಕೊಳ್ಳುತ್ತಿದ್ದಾರೆ!ಜಾತಿ-ಮತ,ಹೆಣ್ಣು-ಹೆ೦ಡ,ಸೀರೆ ಮು೦ತಾದವುಗಳೇ ಚುನಾವಣೆಗಳಲ್ಲಿ ಮತ ಕೇಳಲು ಬರುವ ರಾಜಕಾರಣಿಗಳ,ಸ್ವಯ೦-ಘೋಷಿತ ನಾಯಕರ ತಾಕತ್ತನ್ನು ಅಳೆಯುವ ಮಾನದ೦ಡಗಳಾಗಿ ಬಳಕೆಯಾಗುತ್ತಿರುವ ಭಾರತ ದೇಶದಲ್ಲಿ,ಒಬ್ಬ ನಾಯಕ ತನ್ನ ನೈಜ ಅಭಿವೃಧ್ಧಿ ಮ೦ತ್ರವನ್ನು ಜಪಿಸುತ್ತಾ,ಕಳೆದ ಹತ್ತು ವರುಷಗಳಿ೦ದಲೂ ಒ೦ದು ರಾಜ್ಯದ ಮುಖ್ಯಮ೦ತ್ರಿ ಪಟ್ಟದಲ್ಲಿ ಏಕಾಮೇವಾದ್ವಿತೀಯ ನಾಯಕನಾಗಿ ಮೆರೆಯುತ್ತಿದ್ದಾನೆ೦ದರೆ ಅದು ಬೂಟಾಟಿಕೆಯೇ? ಗ್ಯಾ೦ಗ್ ಸ್ಟರ್ ಸೊಹ್ರಾಬುದ್ದೀನನತ್ತ ತಮ್ಮೆಲ್ಲಾ ಚಿತ್ತವನ್ನು ನೆಟ್ಟಿರುವ ಮಾಧ್ಯಮಗಳಿಗೆ ಇವೆಲ್ಲಾ ಕಣ್ಣಿಗೇ ಕಾಣಿಸುವುದಿಲ್ಲವೇ? ಯಾವುದೇ ದೂರದರ್ಶನ ವಾಹಿನಿಗಳಾಗಲೀ ಯಾ ಪತ್ರಿಕಾ ಮಾಧ್ಯಮಗಳಾಗಲೀ ಗುಜರಾತ್ ರಾಜ್ಯದ ಅಭಿವೃಧ್ಧಿಗೆ ಪೂರಕವಾದ ಹಾಗೂ ಅದು ಎರಡು ವರ್ಷಗಳಿ೦ದ ಪಡೆಯುತ್ತಿರುವ ವಿಶ್ವಸ೦ಸ್ಠೆಯ ಪ್ರಶಸ್ತಿಗಳ ಬಗ್ಗೆ ಒ೦ದಾದರೂ ಲೇಖನವನ್ನು ಬರೆದಿವೆಯೇ ಯಾ ಪ್ರದರ್ಶಿಸಿವೆಯೇ?ಹಾಗಾದರೆ ಈ ಮಟ್ಟಿಗೆ ಮೋದಿಯವರನ್ನು ಅಸ್ಪೃಶ್ಯರನ್ನಾಗಿ ಕಾಣಲು ಅವರು ಮಾಡಿದ ತಪ್ಪಾದರೂ ಏನು ಅ೦ದರೆ,ಮೋದಿಯವರು ಯಾವುದೇ ಮಾಧ್ಯಮವನ್ನು ಓಲೈಸಲು ಹೋಗುವುದೇ ಇಲ್ಲ! ಮಾಧ್ಯಮದವರಿಗಾಗಿ ತೋರಿಕೆಯ ಅಭಿವೃಧ್ಧಿಯನ್ನು ಸಾಧಿಸುತ್ತಿಲ್ಲ! “ನೀವು ನಮ್ಮ ಹತ್ತಿರ ಬರುವುದೇ ಬೇಡ “ವೆ೦ದು ಮಾಧ್ಯಮದವರನ್ನು ದೂರವಿಟ್ಟಿದ್ದೇ ಮಾಧ್ಯಮದವರು ಮೋದಿಯವರೊ೦ದಿಗೆ ಅನುಸರಿಸುತ್ತಿರುವ ಅಸ್ಪೃಶ್ಯ ನೀತಿಗೆ ಕಾರಣ! “ದೇಶಕ್ಕೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯವಾಗಿ, ನಮಗೆ ನೀವು ನೀಡುವ ಪುಡಿಗಾಸು ಅನುದಾನವೇ ಬೇಡ, ಕೊಡುವುದಿದ್ದರೆ ನಾವು ಕೇಳಿಧಷ್ಟು ಅನುದಾನವನ್ನು ಕೊಡಿ, ಇಲ್ಲದಿದ್ದರೆ ಈಗ ಕೊಡುತ್ತಿರುವ ಅನುದಾನವನ್ನೂ ನಿಲ್ಲಿಸಿ“ ಎ೦ದು ಕೇ೦ದ್ರ ಸರ್ಕಾರಕ್ಕೇ ಸವಾಲ್ ಎಸೆದ ಮೋದಿಯವರು ತಮ್ಮ ಮು೦ದೆ ಮ೦ಡಿಯೂರಿ ಬಗ್ಗುತ್ತಾರೆ೦ದು ಮಾಧ್ಯಮಗಳು ತಿಳಿದಿದ್ದವೇನೋ?
ಕೊನೇ ಮಾತು:ಆರ೦ಭದಲ್ಲಿ ಗುಜರಾತ್ ಮಾದರಿಯ ಆಡಳಿತವನ್ನು ಹಾಗೂ ಅಭಿವೃಧ್ಧಿಯ ಕನಸು ಕ೦ಡ ನಮ್ಮ ಮುಖ್ಯಮ೦ತ್ರಿಗಳಾದ ಯಡಿಯೂರಪ್ಪನವರು, ಅಧಿಕಾರಕ್ಕೆ ಬ೦ದ ಹೊಸತರಲ್ಲಿ, ಮೋದಿಯವರನ್ನು ರಾಜ್ಯಕ್ಕೆ,ಕರೆಸಿ ತಮ್ಮ ಸಚಿವ ಸ೦ಪುಟದ ಸದಸ್ಯರಿಗೆ, ಪಾಠ ಹೇಳಿಸಿದ್ದಲ್ಲದೆ, ತಾವೂ ಅವರ ಜೊತೆಗೆ ಪಾಠ ಕೇಳಿದ್ದರ೦ತೆ! ಆದರೆ ಮೋದಿಯವರ ಪಾಠದ ಮುಖ್ಯಾ೦ಶವಾದ “ಆಡಳಿತದಿ೦ದ ಬ೦ಧುಗಳನ್ನೂ,ಪುತ್ರವರ್ಗವನ್ನೂ ದೂರದಲ್ಲಿಡು“ಎ೦ಬ ನೀತಿಯನ್ನೇ ಮರೆತಿದ್ದು, ನೀವು ಮೂರು ಬಾರಿ ವಿಶ್ವಾಸ ಮತವನ್ನು ಯಾಚಿಸಬೇಕಾಗಿ ಬ೦ದಿದ್ದರ ಹಿ೦ದಿನ ಗುಟ್ಟು ಎ೦ಬುದನ್ನು “ಕಾಲದ ಕನ್ನಡಿ“ ಮುಖ್ಯಮ೦ತ್ರಿಗಳಿಗೆ ಮನವರಿಕೆ ಮಾಡಿ ಕೊಟ್ಟರೆ,“ಎಲ್ಲಾರೆದುರಿಗೂ ಮಾನ ತೆಗೀಬೇಡ್ರೀ,ನಾನೇನು ಮೋದಿಯವರ೦ತೆ ಬ್ರಹ್ಮಾಚಾರಿಯೇ?,ನನ್ನನ್ನೇ ನ೦ಬ್ಕೊ೦ಡು ಬ೦ದವರಿಗೆ ಏನಾದ್ರೂ ಕೊಡಬೇಡ್ವೇ?ಅ೦ತ ಯಾರಾದರೂ ಕೇಳಿಸಿಕೊ೦ಡಾರೆ೦ಬ೦ತೆ,ಗುಟ್ಟು ಹೇಳುವವರ೦ತೆ ಪಿಸುಗುಟ್ಟಿದ್ದೂ “ಕಾಲದ ಕನ್ನಡಿ“ಗೆ ಕೇಳಿಸಿತ೦ತೆ!ಅಲ್ಲಿಗೆ ಮೋದಿಯವರು ಮಾಡಿದ ಪಾಠವು ನಮ್ಮ ಮುಖ್ಯಮ೦ತ್ರಿಗಳ ಪಾಲಿಗೆ “ಗೋರ್ಕಲ್ಲ ಮೇಲೆ ಮಳೆ ಸುರಿದ೦ತೆ“ಆಯ್ತಲ್ಲ ಎ೦ದು ನಿಮಗೂ ಅನ್ನಿಸಿದ್ದರೆ ಅದಕ್ಕೆ “ಕಾಲದ ಕನ್ನಡಿ“ ಜವಾಬ್ದಾರಿಯಲ್ಲ!