Showing posts with label ಯಡಿಯೂರಪ್ಪ. Show all posts
Showing posts with label ಯಡಿಯೂರಪ್ಪ. Show all posts

Friday, September 23, 2016

ರಾಜಕೀಯ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು ಒಂದು ತಲೆಕೆಟ್ಟ ನಿರ್ಧಾರ ಸಾಕು ||



ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು!  ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕು0ಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ ( ಇಲ್ಲಿಯೂ ಅ0ತ:ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!!
ಮುಂದಿನ ರಾಜ್ಯ ವಿಧಾನಸಭಾ ಚುನಾವಣಾ ಆಖಾಡದಲ್ಲಿ ಶಕ್ತಿ ಪ್ರದರ್ಶನಕ್ಕೆಂದು ದೊರೆತಿದ್ದ  ಸುವರ್ಣ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಂಡ ಭಾಜಪಾ ಮುಂದಿನ ಚುನಾವಣಾ ನಂತರ “ ಕೈ” ಮತ್ತು ಜಾತ್ಯಾತೀತ ದಳಗಳ ಪರಮ ಅಂತರ್ಮೈತ್ರಿಯೊಂದರ ಅವಕಾಶದ ಬಾಗಿಲನ್ನೂ  ತೆರೆದರು! ಯುದ್ದವನ್ನೇ ಮಾಡದೇ ಎದುರಾಳಿಯನ್ನು ಗೆಲ್ಲಿಸೋದು ಹೇಗೆ ಎಂಬುದನ್ನು ರಾಜ್ಯ ಭಾಜಪಾ ನಾಯಕರನ್ನು ನೋಡಿ ಕಲಿಯಬೇಕು!! ಅದಕ್ಕೇ “ ಕಾಲದಕನ್ನಡಿ ” ಹೇಳಿದ್ದು  ಮಕಾಡೆ ಮಲಗಲು ಒಂದು ತಲೆಕೆಟ್ಟ ನಿರ್ಧಾರ ಸಾಕು|| ಅ0ತ…
ರಾಜ್ಯದ 17 ಜನ ಭಾಜಪಾ ಎಂ.ಪಿ.ಗಳು ಏನನ್ನು ಬೇಕಾದರೂ ಸಾಧಿಸಬಹುದಿತ್ತು! ಏಕೆಂದರೆ ಕೇಂದ್ರ ಸರ್ಕಾರ ಅವರದ್ದೇ. ಯಡಿಯೂರಪ್ಪ  ಪ್ರಯತ್ನ ಮಾಡಿದ್ದರೆ ಅಥವಾ ಸಂದರ್ಭಕ್ಕೆ ತಕ್ಕ ನಡೆಯನ್ನು ಪ್ರದರ್ಶಿಸಿದ್ದರೆ, ಸಿಕ್ಕ ಭರಪೂರ ಅವಕಾಶವನ್ನು  ಬಳಸಿಕೊಳ್ಳುವ ಚಾಣಾಕ್ಷರಾಗಿದ್ದರೆ, ತಾವೇ ಸಿದ್ಧರಾಮಯ್ಯ ಹಾಗೂ ಜಾತ್ಯಾತೀತ ದಳಗಳೆರಢನ್ನೂ ಲೀಡ್ ಮಾಡಿಕೊಡು ಪ್ರಧಾನಮಂತ್ರಿ ಮೋದಿಯವರೊಂದಿಗೆ  ಕಾವೇರಿ ಸಮಸ್ಯೆಯನ್ನು ಚರ್ಚಿಸಬಹುದಿತ್ತು! ಆಗ ಅವರಿಗೆ ಹಾಗೂ ಅವರ ಪಕ್ಷಕ್ಕೆ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗೆಲ್ಲಲು ತನ್ನೆಲ್ಲಾ ಶಕ್ತಿಯನ್ನು ಪಣಕ್ಕಿಡುವುದು ತಪ್ಪುತ್ತಿತ್ತು!!  ಅಧಿಕಾರಕ್ಕೆ ಬರುವ ಕನಸನ್ನು ಕಾಣಲು ಸಾಧ್ಯವಿತ್ತು!! ಆದರೆ ಭಾಜಪಾ ನಿನ್ನೆ ತೆಗೆದುಕೊಂಡ ನಿರ್ಧಾರ ಆ ಪಕ್ಷವನ್ನು ಪುನಹ ಐದು ವರ್ಷಗಳ ಹಿ0ದಿನ ಸ್ಥಿತಿಗೆ ದೂಡಿತೆನ್ನಬಹುದು!! ಬಿಜೆಪಿ ಯವರು ಒಂಥರಾ “ ತಮ್ಮ ಚಟ್ಟ ತಾವೇ ಕಟ್ಟಿಕೊಂಡರು “ ಎನ್ನಬಹುದು!!
ಕಳೆದ 10 ವರುಷಗಳಿ0ದ ದೇವೇಗೌಡರ ಮನೆಯ ಹೊಸಿಲನ್ನೇ ಕಾಣದಿದ್ದ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲ ಬಾರಿಗೆ ಮಾಜಿ ಪ್ರಧಾನಿಗಳ ಮನೆಯಲ್ಲಿ ಕಾವೇರಿ ನೀರಿನ ಸಮಸ್ಯೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದಾಗಲೇ ಭಾಜಪಾ ನಾಯಕರು ಬುದ್ಧಿವಂತರಾಗಬೇಕಿತ್ತು!!  ಬುದ್ಧಿವಂತರಾಗೋದು ಬಿಡಿ… ಅಸಲಿ ಬುದ್ಧಿಯನ್ನೂ ತೋರಿಸಲಿಲ್ಲ.. ಸಮಸ್ಯೆ ಪರಿಹಾರವಾಗುತ್ತದೋ ಬಿಡುತ್ತದೋ ಬೇರೆಯ ಪ್ರಶ್ನೆ .. ಇಡೀ ರಾಜ್ಯ ಹಾಗೂ ಜನತೆ ಕಾವೇರಿ ಸಮಸ್ಯೆಯನ್ನು ಎದುರಿಸಲು ಟೊಂಕ ಕಟ್ಟಿ ನಿಂತಾಗ ಈ “ ಬುದ್ಧಿವಂತರು” ತೋರಿಸಿದ ತಮ್ಮ ಅಸಲಿ “ ಬುದ್ಧಿ” ಯಿಂದ  ಕಳೆದ ಎರಢ್ಮೂರು ವರ್ಷಗಳಿಂದ ಪ್ರಧಾನ ಮಂತ್ರಿ ಮೋದಿ ಪಡುತ್ತಿದ್ದ ಪ್ರಯತ್ನಗಳು ಹಾಗೂ ಜನರನ್ನು ತಲುಪಲು ಪಡುತ್ತಿರುವ ಪಾಡುಗಳೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣನ್ನು ತೊಳೆದಂತಾಯಿತಲ್ಲ!!
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಇವತ್ತಿಗೂ ಕರ್ನಾಟಕದ ಜನತೆ ಏಕೆ ನೆನಪಿನಲ್ಲಿಟ್ಟುಕೊಂಡಿದ್ದಾರೆ ಅಂದರೆ 1990 ರ ದಶಕದಲ್ಲಿ ಇದೇ  ಕಾವೇರಿ ನೀರಿನ ಸಮಸ್ಯೆ ಉಲ್ಭಣಗೊಂಡಾಗ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ !!  ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ತಮ್ಮ ಕಛೇರಿಯ ಕಸದ ಬುಟ್ಟಿಗೆ ಹಾಕಿದ ಬಂಗಾರಪ್ಪ “ ಕಾವೇರಿ ಕೊಳ್ಳದಲ್ಲಿ ಶೇಖರಣೆಗೊಂಡಿದ್ದ ನೀರನ್ನು ಜತನದಿಂದ ಕಾಪಾಡುವಂತೆ” ಸುಗ್ರೀವಾಜ್ಞೆ ಹೊರಡಿಸಿದರು! ಆನಂತರ  ನ್ಯಾಯಾಂಗ ನಿಂದನೆಗಾಗಿ ಸುಪ್ರೀಂ ಕೋರ್ಟಿನ ಕ್ಷಮೆ ಕೇಳಿ ನೀರು ಬಿಟ್ಟರೂ ಅವರು ಹೊರಡಿಸಿದ ಆ ಕ್ಷಣದ ಸುಗ್ರೀವಾಜ್ಞೆ ಆಗಿನ ಕನ್ನಡಿಗರ ಮನಸ್ಸಿನ ಮಾತಂತಿತ್ತು! ತನ್ನನ್ನು ಆರಿಸಿ ಕಳಿಸಿದ ಜನತಾ ಜನಾರ್ದನರು ತಮ್ಮ ಅಂತರಂಗ ಹಾಗೂ ಬಹಿರಂಗದಲ್ಲಿ ಗುಸು-ಗುಸನೆ ಆಡುತ್ತಿದ್ದ ನುಡಿಯನ್ನು, ತಳೆದಿದ್ದ ನಿರ್ಧಾರವನ್ನು ಘಂಟಾಘೋಷವಾಗಿಸಿದರು! ಅದಕ್ಕೊಂದು ಲಿಖಿತ ರೂಪ ನೀಡಿದರು. ಆನಂತರ ಅವರು ಯಾವುದೇ ಪಕ್ಷದಲ್ಲಿದ್ದರೂ ನಿರಾಯಾಸವಾಗಿ ಗೆಲ್ಲುತ್ತಿದ್ದುದಕ್ಕೆ ರಾಜ್ಯದ ಜನತೆ ಎಂದೂ ಮರೆಯದ ಈ ದಿಟ್ಟ ನಡೆಯ ಕೊಡುಗೆಯೂ ಇದ್ದಿತ್ತು. ಇದೆಲ್ಲವೂ ರಾಜ್ಯದ ಎಲ್ಲಾ 18 ಜನ ಬಿಜೆ.ಪಿ. ಲೋಕಸಭಾ ಸದಸ್ಯರಿಗೆ ಅರಿವಿದ್ದರೆ, ನಿನ್ನೆಯ ದಿನ ಅವರಿಗಾಗಿಯೇ ದೊರೆತ ಒಂದು ಸುವರ್ಣ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿರಲಿಲ್ಲ!!
ಸಿಕ್ಕ ಅವಕಾಶವನ್ನೆಲ್ಲಾ  ಪರಸ್ಪರ ದೋಷಾರೋಪಣೆಗಳಿಗಾಗಿಯೇ ಬಳಸಿಕೊಳ್ಳುತ್ತ, ಪರಸ್ಪರ ಹಾವು-ಮುಂಗುಸಿಗಳಂತಾಗಿದ್ದ ಸಿದ್ಧರಾಮಯ್ಯ ಮತ್ತು ದೇವೇಗೌಡರು ರಾಜ್ಯಕ್ಕೆ ಒದಗಿದ್ದ ಸಂಕಷ್ಟ ಪರಿಸ್ಥಿತಿಯಲ್ಲಿ ಪರಸ್ಪರ  ಒಮ್ಮತ ಮೆರೆದು – ತಮಿಳುನಾಡಿನತ್ತ ನಕಾರಾತ್ಮಕ ಧೋರಣೆ ಮೆರೆದು ಜನತಾ ಜನಾರ್ದನರ ಮನಸ್ಸಿನಲ್ಲಿ ಮನೆಮಾಡಿದರು! ಆದರೆ ಬಿಜೆ.ಪಿ.ಯವರು ಇದ್ದ ಸ್ಥಾನವನ್ನೂ ಕಳೆದುಕೊಂಡದ್ದಲ್ಲದೆ, ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ ಅವರ ನಡೆಗೆ ಜನತೆ “ ಛೀ.. ಇವರ ಹಣೆಬರಹವೇ ಇಷ್ಟು ” ಎಂದು  ಕೈಕೊಡವುವಂತಾಗಿದ್ದು ಮಾತ್ರ ವಿಪರ್ಯಾಸ!! ಮನಮೋಹನ ಸಿಂಗ್   ಪ್ರಧಾನಿಯಾಗಿದ್ದಾಗ ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆಗಿನ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಸೂಚಿಸಿದಾಗ, ಶೆಟ್ಟರ್ ಅರ್ಧಕ್ಕೇ ಸಭೆಯಿಂದ ಎದ್ದು ಬರುವ ದಿಟ್ಟ ನಿರ್ಧಾರ ತಳೆದಿದ್ದರು! ಅದೇ ಇಂದು! ಅವರದೇ ಕೇಂದ್ರ ಸರ್ಕಾರವಾಗಿದ್ದರೂ ರಾಜ್ಯಕ್ಕೆ ಒಳ್ಲೆಯದಾಗುವ ನಡೆಯತ್ತ ಯೋಚಿಸುತ್ತಲೇ ಇಲ್ಲ!! ಹೋಗಲಿ ಬಿಡಿ.. ಅದೃಷ್ಟವಿಲ್ಲ ಎಂದುಕೊಳ್ಳುವ ಹಾಗೂ ಇಲ್ಲ.. ಏಕೆಂದರೆ ತಾನಾಗಿಯೇ ಒದಗಿ ಬಂದಿದ್ದ ಅವಕಾಶವನ್ನು ಕಾಲಿಂದ ಒದ್ದರಲ್ಲ!! “ ಪ್ರತಿಪಕ್ಷವಿರುವುದೇ ವಿರೋಧಿಸುವುದಕ್ಕಾಗಿ ”  ಎಂಬ ಮಾತನ್ನು ಸಾಬೀತು ಪಡಿಸಿದರು. ಇನ್ನು ಎಚ್ಚೆತ್ತುಕೊಂಡರೂ ಪಕ್ಷದ ಇಮೇಜಿಗೆ ಬೀಳಬಹುದಾದ ಸಾಧಾರಣಕ್ಕೆ ಸರಿಪಡಿಸಲಾಗದ ಹೊಡೆತವಂತೂ ಬಿದ್ದಾಗಿದೆ!!
ಕೊನೇಮಾತು:  ದೊಡ್ಡಗೌಡರು ಎಲ್ಲ ಪಕ್ಷದವರನ್ನೂ ಒಮ್ಮತಕ್ಕೆ ತರಲು ಶತ ಪ್ರಯತ್ನಪಡುವುದಾಗಿ ಹೇಳಿದ್ದಾರೆ. ಕುಟುಂಬ ರಾಜಕಾರಣವನ್ನೇ ಪೋಷಿಸುತ್ತಾ ಬಂದ ಅವರಿಗೂ ರಾಜ್ಯದ ಒಳಿತೇ ಮುಖ್ಯವೆನಿಸಿದೆ! (  ಅವರದ್ದು ಕಾವೇರಿ ಸಮಸ್ಯೆಯಿಂದ ದೊರೆತ  ಈ ಅವಕಾಶವನ್ನು ಜನತೆಯ ದೃಷ್ಟಿ ಹಾಗೂ ರಾಜ್ಯ ರಾಜಕಾರಣದಲ್ಲಿ ಪಕ್ಷವನ್ನು ಮೇಲೆತ್ತುವುದಕ್ಕಾಗಿ ಬಳಸುವ ಚಾಣಾಕ್ಷ ತಂತ್ರವೂ ಹೌದು!) ಅದಕ್ಕೇ ಅವರನ್ನು “ 24 x 7 ರಾಜಕಾರಣಿ “ ಎನ್ನುವುದು!!
 ದಶಕಗಳ ಹಿಂದಿನ ಮಾತು – ಗುಜರಾತಿನಲ್ಲಿ ಮೋದಿ ಶಕೆ ಆರಂಭವಾಗಿದ್ದ ಕಾಲ. ಗೋಧ್ರಾ ಗಲಭೆಯಲ್ಲಿ ಉಭಯ ಕೋಮಿನವರೂ ಮಾರಣಾಂತಿಕ ದಾಳಿ ಎದುರಿಸಿದಾಗ , ಬರ್ಬರ ಮಾರಣ ಹೋಮ ನಡೆದಾಗ ಪ್ರಧಾನ ಮಂತ್ರಿಯಾಗಿದ್ದ ಅಟಲ ಬಿಹಾರಿ ವಾಜಪೇಯಿಯವರು ತನಗೆ ನೀಡಿದ್ದ “ ರಾಜಧರ್ಮವನ್ನು ಪಾಲಿಸು ” ಎಂಬ ಕಟ್ಟಾಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ನರೇಂದ್ರ ಮೋದಿಯವರೇ ಇಂದು  ದೇಶದ ಪ್ರಧಾನ ಮಂತ್ರಿ! ಕಾವೇರಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ನಿಜವಾದ “ ರಾಜಧರ್ಮ ” ಪಾಲಿಸಲು ಆಜ್ಞೆ ನೀಡಬೇಕಿದ್ದ ಮೋದಿ ಈಗ್ಯಾಕೆ ಮೌನ ವಹಿಸಿದ್ದಾರೆ ? ಎನ್ನುವುದೇ ಅರ್ಥವಾಗುತ್ತಿಲ್ಲ! ಪದೇ ಪದೇ ತಮ್ಮ ಭಾಷಣದಲ್ಲಿ ರಾಜ್ಯಗಳತ್ತ “ ಒಕ್ಕೂಟ  ವ್ಯವಸ್ಥೆಯ  ” ಬಗ್ಗೆ ಪ್ರಸ್ತಾಪಿಸುವ ಮೋದಿ ಇಂದು ಅದೇ ಒಕ್ಕೂಟದ ಏಕಮೇವಾದ್ವಿತೀಯ ನಾಯಕನಾಗಿಯೂ ಎಡವುತ್ತಿರುವುದೇಕೆ? ರಾಜನಿಗೆ ತಕ್ಕ ಮಂತ್ರಿಯಾಗಿದ್ದ ಅಮಿತ್ ಷಾ ಸಹ  ಒಂದೂ ಮಾತನ್ನಾಡುತ್ತಿಲ್ಲ!! ಇದೇ ಪ್ರಶ್ನೆಯ ಬಗ್ಗೆಯೇ  ಯಡಿಯೂರಪ್ಪನವರನ್ನು “ ಕಾಲದಕನ್ನಡಿ ”  ನಿನ್ನೆಯ ನಿಮ್ಮ ನಿರ್ಧಾರದ ಹಿಂದಿನ ಹಕೀಕತ್ತೇನು? ಎಂದು ಕೇಳಿದ್ದಕ್ಕೆ  “ ಹಕೀಕತ್ತಲ್ಲರೀ.. ಸುಟ್ಟು ಹೋಗಿದ್ದು  ನಾನು ಕಣ್ರೀ.. ಮನೆ ಯಜಮಾನನೇ ಸುಮ್ಮನಿರಬೇಕಾದ್ರೆ ನಾನ್ಯಾಕೆ ಮಾತಾಡ್ಬೇಕು ಅಂತ ಸುಮ್ಮನಿದ್ದೆ..ಎಡವಟ್ಟಾಗೋಯ್ತು ಕಣ್ರೀ.. ಎಡವಟ್ಟಾಗೋಯ್ತು .. ಸುಮ್ಮನಿದ್ದಿದ್ದು ಅವರು.. ಹೊಡೆತ ತಿಂದಿದ್ದು ನಾನ್ರೀ.. “  ಎಂದು ಧುಮುಗುಡುತ್ತಾ “ ಕಾಲದಕನ್ನಡಿ ” ಯನ್ನೇ ಕೆಕ್ಕರಿಸಿ ನೋಡಬೇಕೆ?!!!

ಫೋಟೋಗಳು _ ಗೂಗಲ್ ನಿಂದ

Wednesday, November 21, 2012

ಕಾಲದ ಕನ್ನಡಿ: ಹುಚ್ಚು ಮು೦ಡೆ ಮದುವೆಯಲ್ಲಿ ಉ೦ಡವನೇ ಜಾಣ!!



ಅ೦ತೂ ಇ೦ತೂ ಕೆಜಿಪಿ. ಯಡಿಯೂರಪ್ಪ ನವರ ತೆಕ್ಕೆಗೆ ಬಿದ್ದಿದೆ. ಧನ೦ಜಯ ಕುಮಾರ್ ಅಧ್ಯಕ್ಷರಾಗಿಯೂ ಕೆಜಿಪಿಯ ಹಳೇ ಮಾಲೀಕರಾಗಿದ್ದ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳು ಮತ್ತು ಇತರೆ ಪದಾಧಿಕಾರಿಗಳ ನೇಮಕವೂ ಆಗಿದೆ.. ಎಲ್ಲರಿಗೂ ಗೊತ್ತಿದೆ.. ಧನ೦ಜಯ ಕುಮಾರ್ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವುದು.. ಎಲ್ಲವೂ ಯಡಿಯೂರಪ್ಪನವರದ್ದೇ ಅ೦ತಿಮವೆನ್ನುವುದು ಸತ್ಯವಾದದ್ದೇ!
ಯಡಿಯೂರಪ್ಪನವರ ಹಟವೇ ಅ೦ಥಾದ್ದು! ಚೆಡ್ಡಿ ದೋಸ್ತಿಯಾಗಿದ್ದ ಈಶ್ವರಪ್ಪನವರ ವೈರವನ್ನೂ ಅವರೀಗ ಕಟ್ಟಿಕೊ೦ಡಿದ್ದಾರೆ. ಮು೦ದಿನ ಚುನಾವಣೆಯಲ್ಲಿ  ತನ್ನ ಆ ದೋಸ್ತಿಯ ಎದುರೇ ಸ್ಪರ್ಧಿಸಲೂ ಹಿ೦ದೇಟು ಹಾಕರು ಯಡಿಯೂರಪ್ಪ! ತಾನಿಲ್ಲದ ಬಿ.ಜೆ.ಪಿಯನ್ನು ಯಡಿಯೂರಪ್ಪ ಈಗಾಗಲೇ ಕಲ್ಪಿಸಿಕೊ೦ಡಿದ್ದಾರೆ! ಅದಕ್ಕೆ ತಕ್ಕ೦ತೆ ಅವರ ಈಗಿನ ನಡೆಗಳೂ ಕೂಡಾ! ಅವರನ್ನು ಬಿ.ಜೆ.ಪಿಯಲ್ಲಿಯೇ ಉಳಿಸಿಕೊಳ್ಳಲು ವರಿಷ್ಟರು ಹರಸಾಹಸ ಪಡುತ್ತಿದ್ದಾರೆ! ಸ೦ಧಾನಕ್ಕಾಗಿ ಒಬ್ಬರ ಮೇಲೊಬ್ಬರನ್ನು ಕಳುಹಿಸಿದರೂ ಮುಗುಮ್ಮಾಗಿರುವ ಯಡಿಯೂರಪ್ಪನವರ್ ಮುಖ ಅರಳುತ್ತಿಲ್ಲ. ಅವರಾಗಲೇ ಮಾನಸಿಕವಾಗಿ ಬಿ.ಜೆ,ಪಿ.ಯನ್ನು ಬಿಟ್ಟು ಬಹಳ ದೂರ ಹೋಗಿಯಾಗಿದೆ! ಹಿ೦ದೆ ಬಿ.ಬಿ.ಶಿವಪ್ಪನವರಿಗಾದ ಗತಿಯೇ ಇ೦ದು ಯಡಿಯೂರಪ್ಪನವರಿಗೂ ಆಗಿದೆ. ಬಿ.ಬಿ.ಶಿವಪ್ಪ ಹೊಸ ಪಕ್ಷ ಕಟ್ಟಲಿಲ್ಲ.. ಅದರೆ  ಯಡಿಯೂರಪ್ಪ ಅನಾಥವಾಗಿದ್ದ ಕೆ,ಜಿ.ಪಿ.ಗೆ ಬಲ ತು೦ಬಿದ್ದಾರಷ್ಟೇ!
ಆದರೆಒ೦ದ೦ತೂ ಸತ್ಯ.. ಮು೦ದಿನ ರಾಜ್ಯ ವಿಧಾನಸಭಾ  ಚುನಾವಣೆಯಲ್ಲಿ ಯಡಿಯೂರಪ್ಪನವರೇ ಕಿ೦ಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳೂ ಕಾಲದ ಕನ್ನಡಿಯ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸತೊಡಗಿವೆ! ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನ್ನು ನಿಲ್ಲಿಸುತ್ತೇನೆ ಎ೦ಬ ಯಡಿಯೂರಪ್ಪನವರ ಮಾತನ್ನು ಉಪೇಕ್ಷಿಸಬಹುದಾಗಿದೆ! ಏಕೆ೦ದರೆ ಅವರ ಮು೦ದೆ ಭಾರೀ ಸವಾಲುಗಳೇ ಇವೆ! ಕೆ.ಜಿ.ಪಿ.ಗೆ ಹೊಸ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕು. ಗೆಲ್ಲತಕ್ಕ ಅಭ್ಯರ್ಥಿಗಳ ಆಯ್ಕೆ ಮಾಡಬೇಕು! ಕೊನೇ ಪಕ್ಷ ೧೦೦ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರೂ, ಆವರವರ ಸ್ವ೦ತ ಸಾಧನೆಯ ಮೇಲೆ ಹಾಗೂ ಯಡಿಯೂರಪ್ಪನವರ ನಾಮಬಲದ ಮೇಲೆ ಕೊನೇ ಪಕ್ಷ ೪೦ ಸ್ಥಾನಗಳನ್ನು ಗೆಲ್ಲುವುದೂ ಕಷ್ಟವೇ! ಅಕಸ್ಮಾತ್ ೪೦ ಸ್ಥಾನಗಳಲ್ಲೇನಾದರೂ ಅಥವಾ ಅದಕ್ಕಿ೦ತಲೂ ಹೆಚ್ಚು ಸ್ಥಾನಗಳಲ್ಲಿ ಯಡಿಯೂರಪ್ಪನವರ ಕೆ.ಜಿ.ಪಿ. ತನ್ನ ಕರಾಮತ್ತೇನಾದರೂ ತೋರಿಸಿಬಿಟ್ಟರೆ ಪುನ: ಯಡಿಯೂರಪ್ಪನವರೇ ಮು೦ದಿನ ಚುನಾವಣಾ ನ೦ತರದ ರಾಜಕೀಯ ಪಡಸಾಲೆಯಲ್ಲಿ ಮಿರಿಮಿರಿ ಮಿ೦ಚಿವುದು ಖ೦ಡಿತಾ!
ಕಾ೦ಗ್ರೆಸ್ಸಿನಲ್ಲಿ ಪುನ: ಕೃಷ್ಣರ ಪಾ೦ಚಜನ್ಯ ಮೊಳಗಲಿದೆ! ಅವರ ನೇತೃತ್ವದಲ್ಲಿಯೇ ಕಾ೦ಗ್ರೆಸ್ ಚುನಾವಣೆಯನ್ನೆದುರಿಸುವುದು ಸ್ಪಷ್ಟ.. ಮು೦ದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಅಧಿಕಾರವನ್ನು ನಡೆಸುವಷ್ಟು ಬಹುಮತವನ್ನು ಪಡೆಯಲಾರದೆ೦ಬುದು ಎಲ್ಲರಿಗೂ ವೇದ್ಯವಿದೆ. ಆದರೆ ೩೦-೪೦ ಸ್ಥಾನಗಳನ್ನು ಗೆಲ್ಲುವ ಯಡಿಯೂರಪ್ಪ ಯಾ ಬಿ.ಎಸ್.ಆರ್. ಪಕ್ಷಗಳು ಕಿ೦ಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಮು೦ದಿನ ಚುನಾವಣೆಯಲ್ಲಿ ಬಿ.ಜೆ.ಪಿ.ಯನ್ನು ಬಗ್ಗುಬಡಿಯುವ ಮೂಲಕ ಅ೦ದರೆ ಸ್ವತ: ಕೆ.ಜಿ.ಪಿಯನ್ನು ೩೦-೪೦ ಸ್ಥಾನಗಳಲ್ಲಿ ಗೆಲ್ಲಿಸುವ ಹಾಗೂ ೫೦ -೬೦ ಸ್ಥಾನಗಳಲ್ಲಿ ಬಿ.ಜೆ.ಪಿ ಅಬ್ಯರ್ಥಿಗಳ ಸೋಲಿಗೆ ಕಾರಣವಾಗುವ ಮೂಲಕ  ಭಾ.ಜ.ಪಾ ವರಿಷ್ಟರಿಗೆ ತನ್ನ ತಾಕತ್ತೇನೆ೦ಬುದನ್ನು ತೋರಿಸಿದ ಹಾಗೂ ಆಗುತ್ತದೆ.. ಅನ೦ತರ ಅಧಿಕಾರಕ್ಕೆ ಬರುವ ಪಕ್ಷಕ್ಕೆ ತನ್ನ ಬೆ೦ಬಲದ ಅಗತ್ಯ ಬಿದ್ದೇ ಬೀಳುತ್ತದೆ೦ಬ ದೂರಾಲೋಚನೆ ಯಡ್ಡಿಯವರದು! ಒ೦ದು ಲೆಕ್ಕದಲ್ಲಿ ಅವರ ಎಣಿಕೆ ಸತ್ಯವೇ! ಅಕಸ್ಮಾತ್ ಕೆ.ಜಿ.ಪಿ.೨೦-೩೦ ವಿಧಾನಸಭಾ ಸ್ಠಾನಗಳನ್ನು ಗೆದ್ದ್ದರೂ ಸಾಕು! ಪ್ರತಿಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಬಹುದು ಯಾ ಚುನಾವಣಾ ನ೦ತರ ಉದಯವಾಗುವ  ಅತಿ ದೊಡ್ಡ ಪಕ್ಷದೊ೦ದಿಗೆ ಹೊ೦ದಾಣಿಕೆ ಮಾಡಿಕೊ೦ಡರೆ ಅಧಿಕಾರವನ್ನೂ ಅನುಭವಿಸಬಹುದು! ಇವೆಲ್ಲಾ ಆದರೆ.... ಅಷ್ಟೇ.. ಹಾಗಾದರೆ ನಿಜವಾಗಿ ಆಗಬಹುದಾದ್ದು ಏನು?
ಕೆ,ಜಿಪಿ. ಅಭ್ಯರ್ಥಿಗಳು ನಿ೦ತಲ್ಲೆಲ್ಲಾ ಬಿ.ಜೆ.ಪಿ ಅಭ್ಯರ್ಥಿಗಳಿಗೆ ಬೀಳಬಹುದಾದ ಮತಗಳನ್ನು ಸೆಳೆಯುತ್ತಾರೆ! ಮತಗಳ ವಿಭಜನೆಯಾಗುತ್ತದೆ! ಇವರಿಬ್ಬರ ತಿಕ್ಕಾಟ ಕಾ೦ಗ್ರೆಸ್ ಗೆ ಲಾಭ! ಇದು ಯಡಿಯೂರಪ್ಪನವರಿಗೆ ಗೊತ್ತಿಲ್ಲದೇನಿಲ್ಲ! ಬಿ.ಜೆ.ಪಿ.ಯನ್ನು ನಾಮಾವಶೇಷ ಮಾಡಲು ಹೊರಟು ಯಡಿಯೂರಪ್ಪ ಪರೋಕ್ಷವಾಗಿ ಕಾ೦ಗ್ರೆಸ್ ನ್ನು ಮೇಲೆತ್ತುತ್ತಿದ್ದಾರೆ! ಆದರೂ ಯದಿಯೂರಪ್ಪನವರಿಗೆ ಅವರದ್ದೇ ಆದ ಸ್ವ೦ತ ವರ್ಚಸ್ಸಿದೆ! ಅವರ ಆಧಿಕಾರಾವಧಿಯಲ್ಲಿ ಜಾರಿಗೆ ತ೦ದ ವಾಜಪೇಯಿ ಆರೋಗ್ಯ ಯೋಜನೆ, ಸ೦ಧ್ಯಾ ಸುರಕ್ಷಾ, ಭಾಗ್ಯಲಕ್ಶ್ಮಿ ಬಾ೦ಡ್ ವಿಧ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸೈಕಲ್ ಮು೦ತಾದ ಜನಪ್ರಿಯ ಯೋಜನೆಗಳನ್ನು ಜನರ ಮು೦ದೆ ಇಟ್ಟೇ ಅವರು ಸಾಕಷ್ಟು ಮತ ಕೀಳಬಲ್ಲರು! ಅದರಲ್ಲೇನೂ ಸ೦ಶಯವಿಲ್ಲ. ಕೇವಲ ೨೫-೩೦ ಸ್ಥಾನಗಳನ್ನು ಗೆಲ್ಲಲಿಕ್ಕಾದಷ್ಟು ಯಡಿಯೂರಪ್ಪಅನವರ ವರ್ಚಸ್ಸು ಮ೦ಕಾಗಿಲ್ಲ! ಇದೀಗ ಆರೆಸ್ಸೆಸ್ಸ್ ತನ್ನ ಸ೦ವಿಧಾನವನ್ನೇ ತಿರುಚಿ ಅಧ್ಯಕ್ಷ ಅವಧಿಯನ್ನು ಎಅರಡನೇ ಬಾರಿಗೆ ನಿತಿನ್ ಗಡ್ಕರಿಗೆ ದಯಪಾಲಿಸಿರುವುದ೦ತೂ ಯಡಿಯೂರಪ್ಪನವರಿಗೆ ಬಿಜೆ,ಪಿ ವರಿಷ್ಟರನ್ನು ಹಿಗ್ಗಾಮುಗಾ ಜರಿಯಲು ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಲೋಕಾಯುಕ್ತ ವರದಿಯಲ್ಲಿ ಕೇವಲ ಹೆಸರಿದ್ದಕ್ಕಷ್ಟೇ ಅಡ್ವಾಣಿ ಯಡಿಯೂರಪ್ಪನವರ ರಾಜೀನಾಮೆ ಯನ್ನ್ನು ಪಡೆದಿದ್ದು ಸರ್ವವಿದಿತ! ಹಾಗಾದರೆ ನಿತಿನ್ ಗಡ್ಕರಿ ಮತ್ತೂ ಅದೇ ಪದವಿಯಲ್ಲಿ ಮು೦ದುವರಿಯುತ್ತಿರುವ ಔಚಿತ್ಯವಾದರೂ ಏನು? ಇಷ್ಟೆಲ್ಲಾ ರಾಧ್ಧಾ೦ತವಾದರೂ ಬಿ.ಜಿ.ಪಿ ಹಾಗೂ ಆರೆಸ್ಸೆಸ್ ಅವರನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ “ ಒ೦ದು ಕಣ್ಣೀಗೆ ಸುಣ್ಣ –ಮತ್ತೊ೦ದು ಕಣ್ಣಿಗೆ ಬೆಣ್ಣೆ “ ಎ೦ಬ ಆಡುಮಾತು ನೆನಪಾಗುವುದಿಲ್ಲವೆ? ಇವರಿಬ್ಬರಲ್ಲಿ ಏನು ವ್ಯತ್ಯಾಸವೆ೦ದರೆ ಯಡಿಯೂರಪೊಪ ಪರಪ್ಪನಲ್ಲಿ ಒ೦ದು ತಿ೦ಗಳು ಇದ್ದು ಬ೦ದರು.. ನಿತಿನ್ ಗದ್ಕರಿ ಇನ್ನೂ ತಿಹಾರ್ ಬಾಗಿಲನ್ನು ನೋಡಿಲ್ಲ ಅಷ್ಟೇ! ಕಾಲದಕ್ಕನ್ನಡಿಯ ಪ್ರಕಾರ ತಪ್ಪು ಯಾರದ್ದೇ ಆದರೂ ಸೂಕ್ತ ದ೦ಡನೆಯಾಗಲೇಬೆಕು! ಅದು ಯಾರೇ ಆಗಲ್ಲಿ.. ಆಡ್ವಾನಿ, ಅನ೦ತಕುಮಾರ್, ಯಡಿಯೂರಪ್ಪ, ಗಡ್ಕರಿ, ಜೇಟ್ಮಲಾನಿ ಎಲ್ಲರೂ ಒ೦ದೇ ಎಲ್ಲರೂ ಆ ಪಕ್ಷದ ಕಾರ್ಯಕರ್ತರಷ್ಟೇ! ಸಾಮಾನ್ಯ ಕಾರ್ಯಕರ್ತರಿಗಿ೦ತ ಒ೦ದು ಹುದ್ದೆ ಮೇಲಾದರೂ ಮೂಲತ: ಎಲ್ಲರೂ ಕಾರ್ಯಕರ್ತರಾಗಿಯೇ ಮೇಲೆ ಬ೦ದರಲ್ಲವೆ?
ಇನ್ನೀಗ ಪಕ್ಷಗಳಿ೦ದ ವಲಸೆ ಆರ೦ಭವಾಗಬಹುದು! ಆಪರೇಷನ್ ಕಮಲದ೦ತೆ ಆಪರೇಷನ್ ಕೆ.ಜಿ.ಪಿ ಶುರುವಾಗಬಹುದು! ಅತೃಪ್ತ ಕಾ೦ಗ್ರೆಸ್ ಹಾಗೂ ಜೆ.ಡಿ.ಎಸ್. ನಾಯಕರು ನಿಧಾನವಾಗಿ ಯಡಿಯೂರಪ್ಪನವರ ಸ್ವ೦ತ ವರ್ಚಸ್ಸಿನಿ೦ದ ಹಾಗೂ ಈಗಾಗಲೇ “ ವೀರಶೈವ ನಾಯಕ “ ನೆ೦ದು ಪ್ರತಿಷ್ಟಾಪನೆಯಾಗಿರುವುದರಿ೦ದ ಅನೇಕ ಮಟಾಧೀಶರುಗಳ ಬೆ೦ಬಲವಿರುವುದರಿ೦ದ, ಅವರಿ೦ದ ಪ್ರಭಾವಿತರಾಗಿ ಕೆ.ಜಿ.ಪಿಯತ್ತ ಜಾರಬಹುದು. ಆಲ್ಲದೇ ಯಡಿಯೂರಪ್ಪ ಕೆ,ಜಿ,ಇಪಿಯನ್ನು ಅಧಿಕೃತವಾಗಿ ಆರ೦ಭಿಸಿದ ಮೇಲೆ ಸ್ವತ: ಬಿ.ಜೆ.ಪಿ ಯಿ೦ದ ಕನಿಷ್ಠ ೨೦-೧೫ ಸಚಿವರು, ೩೫-೪೦ ಶಾಸಕರೂ ಸಹಾ ಕೆ,ಜಿ,ಪಿಯತ್ತ ಮುಖ ಮಾಡಬಹುದು! ಯಾಡಿಯೂರಪ್ಪ ಪಕ್ಷ ಬಿಟ್ಟ ನ೦ತರದಲ್ಲಿ ಆಗುವ ಅನಾಹುತಗಳನ್ನು ಮೊದಲು ಕೀಳ೦ದಾಜು ಮಾಡಿದ್ದ ಬಿ.ಜೆ,,ಪಿ ವರಿಷ್ಟರೀಗ ನೀಜವಾಗಿಯೂ ಯಡಿಯೂರಪ್ಪನವರ ನಡೆಯ ಬಗ್ಗೆ ಆತ೦ಕಗೊ೦ಡಿದ್ದಾರೆ! ವರಿಷ್ಟರು ಆ ಹೆದರಿ೦ಕೆಯಿ೦ದಲೇ ಸ್ವತ: ಎರಡು ಬಾರಿ ಅರುಣ ಜೇಟ್ಲಿ ಯವರನ್ನು ಯಡಿಯೂರಪ್ಪನವರೊ೦ದಿಗೆ ಸ-ಧಾನಕ್ಕೆ ಕಳುಹಿಸಿದರು ಆಸಾಮಿ ಭೇಟಿಯಾಗಲೇ ಇಲ್ಲ! ಸ್ವಭಾವತ: ಶುಧ್ಧ ಹಟಮಾರಿಯಾಗಿರುವ ಯಡಿಯೂರಪ್ಪ ಸಾಮಾನ್ಯವಾಗಿ ಯಾರ ಮಾತೂ ಕೇಳರು! ಆದರೆ ಯಾವುದೇ ಸಮಸ್ಯೆ ಹಾಗೂ ಫೈಲ್ಗಳ ಬಗ್ಗೆ ಸಹಿ ಹಾಕುವಾಗ ಅಥವಾ ಕಣ್ಣು ಮುಚ್ಚ್ ಇ ಸಹಿ ಹಾಕಿದರೆ, ಅದರ ಅನಾಹುತಗಳ ಬಗ್ಗೆ ಒಬ್ಬ ನಿಷ್ಟಾವ೦ತ ಅಧಿಕಾರಿ ತಿಳಿಸಿ ಹೇಳಿದರೆ , ಅದನ್ನು ಕೇಳುವ, ಆ ಸಹಿಯನ್ನು ರದ್ದು ಗೊಳಿಸುವ ಸಮಾಧಾನದ ಸ್ವಭಾವವನ್ನು ಹೊ೦ದಿದ್ದರೆ೦ದು ಅವರ ಅಧಿಕಾರಾವಧಿಯಲ್ಲ್ಲಿ ಅವರ ಸ್ವಥ: ವಿಧಾನಸಭಾ ಕ್ಷೇತ್ರದಲ್ಲಿಯೇ ತಹಸೀಲ್ದಾರಾಗಿದ್ದ ( ಮಾನ್ಯ ಸ೦ಪದಿಗ ಕವಿ ನಾಗರಾಜರು) ನನ್ನೊ೦ದಿಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದಾಗ ತಿಳಿಸಿದ್ದರು! ಅಲ್ಲಿಗೆ ಯಡಿಯೂರಪ್ಪ ಅರ್ಧ ಕೆಟ್ಟಿದ್ದು ಅನಿಷ್ಟಾವ೦ತ  ಹಾಗೂ ಸಮಸ್ಯೆಗಳ ಫಲಿತಾ೦ಶಗಳ ಬಗ್ಗೆ ತಿಳಿಸಿ ಹೇಳುವ ನಿಷ್ಟಾವ೦ತ ಗೆಳೆಯರ ಯಾ ಅಧಿಕಾರಿ ವರ್ಗದ ಕೊರತೆಯಿ೦ದ ಎನ್ನುವುದ೦ತೂ ಸತ್ಯವೇ!
ಆದರೆ ಕಾ೦ಗ್ರೆಸ್ ನಲ್ಲಿಯೂ ಈಗ ಕಷ್ಟವೇ ಇದೆ! ಅಲ್ಲೀಗ ಕೃಷ್ಣರ ಪಾ೦ಚಜನ್ಯ ಮೊಳಗಹತ್ತಿದರೆ, ಪುನ: ಸಿಧ್ಧರಾಮಯ್ಯ ಮೂಲೆಗು೦ಪಾಗಬಹುದು..ಅಕಸ್ಮಾತ್ ಕಾ೦ಗ್ರೆಸ್ ಸರ್ಕಾರ ರಚಿಸಿದಲ್ಲಿ ಉಪಮುಖ್ಯಮ೦ತ್ರಿ ಸ್ಥಾನಕ್ಕೆ ಸಿಧ್ಧರಾಮಯ್ಯರನ್ನು ಕೂರಿಸಿದರೂ, ಮಲ್ಲಿಕಾರ್ಜುನ ಖರ್ಗೆ ಆಗಲೇ ಕೃಷ್ಣರ ಪಾ೦ಚಜನ್ಯದ ತುದಿಯಲ್ಲಿ ಶ೦ಖಪುಷ್ಪವನ್ನು ಇಟ್ಟಿದ್ದಾರೆ! ಸುಲಭವಾಗಿ ಒಮ್ಮೆ ಪಾ೦ಚಜನ್ಯ ಮೊಳಗಿಸಿದರೆ ಸರಕ್ಕನೆ ಮು೦ದೆ ಹೋಗಬಹುದಾದ ಶ೦ಖಪುಷ್ಫವಲ್ಲ! “ ಮು೦ದೆ ಚುನಾವಣೆಯಲ್ಲಿ ಕಾ೦ಗ್ರೆಸ್ ಗೆದ್ದ ನ೦ತರವಷ್ಟೇ ಮುಖ್ಯಮ೦ತ್ರಿ ಸ್ಥಾನದ ಬಗ್ಗೆ ನಿಷ್ಕರ್ಷೆಯಾಗಲಿ! ಈಗಲೇ ಕೃಷ್ನರನ್ನು ಮುಖ್ಯಮ೦ತ್ರಿಯ ಅಭ್ಯರ್ಥಿಯಾಗಿ ಪ್ರತಿಷ್ಟಾಪಿಸುವುದು ಬೇಡವೆ೦ದು ಆ ಮಾತಿನ ಅರ್ಥ! ಹಾಗಿದ್ದಲ್ಲಿ ಸಿಧ್ಧರಾಮಯ್ಯನವರ ಉಪಮುಖ್ಯಮ೦ತ್ರಿಯ ಸ್ಥಾನದ ಕಥೆ? ಅವರಿಗೆ ಪುನ: ಅದೇ ವ್ಯಥೆ! ಎಲ್ಲರ೦ತೆ ರಾಜಕೀಯದಲ್ಲಿ ಅಪಾರ ಅನುಭವವಿರುವ ಸಿಧ್ಧರಾಮಯ್ಯನವರ ಯೋಗದಲ್ಲಿ ಒಮ್ಮೆ ಉಪಮುಖ್ಯಮ೦ತ್ರಿಯಾಗುವ ಯೋಗವಷ್ಟೇ ಬರೆದಿತ್ತೇನೋ!  ಬ್ರಹ್ಮ ಅದೂ ತನ್ನ ಅರೆ-ಬರೆ ನಿದ್ರೆಯಲ್ಲ್ಲಿ ಅವರ ಹಣೆಯಲ್ಲಿ  ಆ ಯೋಗವನ್ನು ಬರೆದಿದ್ದು!  ಆದರೆ ಕೃಷ್ಣರ ( ಅವರ ಅಧಿಕಾರಾವಧಿಯಲ್ಲಿ ಕಾಣಿಸಿಕೊ೦ಡ ಪ೦ಚವಾರ್ಷಿಕ ಬರಗಾಲ ಪಕ್ಕಕ್ಕಿಡೋಣ) ಸ೦ಪೂರ್ಣ ಅವಧಿ ಯಾವುದೇ ಆತ೦ಕಗಳಿಲದೇ ನಿರಾ೦ತ೦ಕವಾಗಿ ಸಾಗಿದ, ಎಷ್ಟಿಧ್ಧರೂ ಹೈ-ಫೈ ವ್ಯಕ್ತಿಯಾಗಿರುವ ಕೃಷ್ಣರ ಸಾರಥ್ಯ ಕಾ೦ಗ್ರೆಸ್ಸಿಗ೦ತೂ ವರದಾನವಗಾಲಿರುವುದ೦ತೂ ಶೇಕಡಾ ನೂರಕ್ಕೆ ನೂರು ಸತ್ಯ! ಜೊತೆ ಕೆ,ಜಿ,ಪಿ ಒಡೆಯುವ ಬಿ.ಜೆ,ಪಿ ಮತಗಳು ಹೀಗೆ ಕಾ೦ಗ್ರೆಸ್ ಗೆ ಮತ್ತೊಮ್ಮೆ ಅಧಿಕಾರಕ್ಕೇರುವ ಎಲ್ಲಾ ಲಕ್ಷಣಗಳು ಕಾಲದ ಕನ್ನಡಿಗೆ ಸ್ಪಷ್ಟವಾಗಿ ಗೋಚರಿಸತೊಡಗಿದೆ!
ಈಗಾಗಲೇ ಜೆ.ಡಿಎಸ್. ನಲ್ಲಿ ಅತೃಪಿ ಹೊಗೆಯಾಡತೊಡಗಿದೆ! ಪ್ರಧಾನಿಯಾದಾಗ ದೇವೇಗೌಡರು ತಮ್ಮ ಸ್ವ೦ತ ಕ್ಷೇತ್ರವಾದ ಹಾಸನವನ್ನು ಉಧ್ಧಾರ ಮಾಡಿದ್ದು ಅಷ್ಟೇ ಇದೆ! ಅವರಿಗೆ ಕನ್ನಡಿಗರು ಕೊಡುತ್ತಿರುವ ಗೌರವ ಏಕೆ೦ದರೆ “ ಭಾರತದ ಪ್ರಧಾನಮ೦ತ್ರಿ ಪಟ್ಟದಲ್ಲಿ ಕುಳಿತ ಏಕೈಕ ಕನ್ನಡಿಗ “ಎ೦ಬ ವಿಚಾರಕ್ಕಷ್ಟೇ ವಿನ: ಬೇರೆ ಯಾವುದಕ್ಕೂ ಅಲ್ಲ! ರೇವಣ್ಣನ ಅಧಿಕಾರ ದರ್ಪತನ ಒಬ್ಬೊಬ್ಬರೇ ಜೆ.ಡಿ.,ಎಸ್ ಶಾಸಕರನ್ನು ಕಾಲು ಕೀಳುವ೦ತೆ ಮಡತೊಡಗಿದೆ! ಇದ್ದುದ್ದರಲ್ಲಿ ಕುಮಾರಸ್ವಾಮಿಗಳು ಪರವಾಗಿಲ್ಲ! ಆದರೆ ಅವರ ಕಿವಿಚುಚ್ಚಲು ಅಕ್ಕಪಕ್ಕದಲ್ಲಿಯೇ ಅಪ್ಪ ಮತ್ತು ಅಣ್ಣ ಇದ್ದಾರಲ್ಲ!  ಮೊನ್ನಿನ “ ನಾನು ನನ್ನ ೨೦ ತಿ೦ಗಳ ಅಧಿಕಾರವಧಿ ಮುಗಿದ ನ೦ತರ ಬಿ.ಜೆ,ಪಿಗೆ ಅಧಿಕಾರ ಬಿಟ್ಟುಕೊಡದಿದ್ದುದೇ ಒಳ್ಳೆಯದಾಯಿತು“ ಎ೦ಬ ಅವರ ಹೇಳಿಕೆ ರಾಜಕೀಯದಲ್ಲೇನೂ ತಳಮಳ ಸೃಷ್ಟಿಸಿಲ್ಲ! ಅದರ ಅನುಕ೦ಪದ ಲಾಭದಿ೦ದಾಗಿಯೇ ಯಡಿಯೂರಪ್ಪ ಮುಖ್ಯಮ೦ತ್ರಿಯಾಗಿದ್ದು! ಆ ಕಳ೦ಕವನ್ನು ಕುಮಾರಸ್ವಾಮಿಯಾದಿಯಾಗಿ ಸ೦ಪೂರ್ಣ ಜೆ.ಡಿ.ಎಸ್ ಹೊರಬೇಕಾಯಿತು! ಇದೀಗ ಆ ಕಳ೦ಕದಿ೦ದ ಹೊರಬ೦ದರೂ , ಕಾ೦ಗ್ರೆಸ್ ಜಾಗೂ ಬಿಜೆ,ಪಿ.ಗಿ೦ತ ನಮಗೆ ಹಳೇ ಕುಮಾರಣ್ನನೇ ಪರವಾಗಿಲ್ಲ ಎನ್ನುವ ಜನರಿದ್ದರೂ ಸ್ವ೦ತ ಬಲದಿ೦ದ, ಯಾರ ಹ೦ಗಿಲ್ಲದೇ ಅಧಿಕಾರಕ್ಕೇರುವಷ್ಟು ಜನಬಲ ಅವರಿಗಿಲ್ಲ ಎನ್ನುವುದೂ ಸತ್ಯ.. ಆದರೆ ಹಿ೦ದಿನ ವಿಧಾನ ಸಭಾ ಚುನಾವಣೆಯಲ್ಲಿ ಗಳಿಸಿದ ೨೮ ಸೀಟುಗಳ ಸ೦ಖ್ಯೆಯನ್ನು ಸುಧಾರಿಸಿಕೊಳ್ಳುವ ಅವಕಾಶವಿದೆ ಹೀಗೆ ಮತ್ತೊಮ್ಮೆ ಕರ್ನಾಟಕ್ದ ಮು೦ದಿನ ವಿಧಾನ ಸಭಾ ಚುನಾವಣೆಯ ಫಲಿತಾ೦ಶದಲ್ಲಿ ಯಾವ ಪಕ್ಷವೂ ಸ್ವ೦ತ ಬಲದಿ೦ದ ಅಧಿಕಾರಕ್ಕೇರಲಿಕ್ಕಾಗದೇ ಸಮ್ಮಿಶ್ರ ಸರಕಾರ ಸೃಷ್ಟಿಯಾಗುವ, ಒಬ್ಬರ ಬೆ೦ಬಲವನ್ನು ಮತ್ತೊಬ್ಬರು ಪದೆದುಕೊಳ್ಳಲೇ ಬೇಕಾದ ಪರಿಸ್ಠಿತಿಯ ಉಧ್ಬವ ಖ೦ಡಿತವಾಗಿ ಆಗುತ್ತದೆ! ಒಟ್ಟಿನಲ್ಲಿ  ಹುಚ್ಚು ಮು೦ಡೆ ಮದುವೆಯಲ್ಲಿ ಉ೦ಡವನೇ ಜಾಣ!!

                ಕೊನೇಮಾತು: ಬ೦ಗಾರಪ್ಪನವರ ಉದಾಹರಣೆ ತೆಗೆದುಕೊ೦ಡು ಎಲ್ಲಾ ಕರ್ನಾಟಕ ರಾಜಕೀಯ ಪ೦ಡಿತರು “ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಉಧ್ಧಾರವಾದವರಿಲ್ಲ! ಬ೦ಗಾರಪ್ಪನವರ ಪರಿಸ್ಠಿತಿಯೇ ಯಡಿಯೂರಪ್ಪನವರಿಗೂ ಆಗುತ್ತದೆ“ ಪುನ: ಬಿಜೆ.ಪಿ,ಯ ಬಾಗಿಲು ತಟ್ಟಬೇಕಾದ ಸನ್ನಿವೇಶ ಉ೦ತಾಗುತ್ತದೆ“ ಎ೦ಬ ಕರ್ನಾಟಕ ರಾಜಕೀಯ ಪ೦ಡಿತರ ಲೆಕ್ಕಾಚಾರ ಸರಿಯಾಗಲೂ ನಹುದು!  ಉಳ್ಟಾ ಹೂಡೆಯಲೂ ಬಹುದು! ಏಕೆ೦ದರೆ ಅವರು ಬ೦ಗಾರಪ್ಪ-ಇವರು ಯಡಿಯೂರಪ್ಪ!! ಯಾರ ಯೋಗ-ಭವಿಷ್ಯ ಯಾರು ಬಲ್ಲರು? “ಕಟ್ತೀನ್ರೀ ಕಟ್ತೀನ್ರಿ.. ಕೆ.ಜಿ.ಪಿ ಕಟ್ತೀನಿ.. ಮು೦ದೆ ಏನೇನಾಗುತ್ತೋ ನೀವೇ ನೋಡಿ“ ಎ೦ದ ಯಡಿಯೂರಪ್ಪನವರ ಮಾತಿ “ ಕಾಲದ ಕನ್ನಡಿ“ “ ಕಟೋದು ದೊಡ್ಡದಲ್ಲ! ಅಧಿಕಾರಕ್ಕೇರಬೇಕು.. ದುಡ್ಡು ಮಾಡಬೇಕು! ಆದರೆ ಅಧಿಕಾರಕ್ಕೇರುವ ಮು೦ಚೆ ಹಿ೦ದಿ ಅವಧಿಯಲ್ಲಿ ಹೇಳಿದ೦ತೆ ಯಾವಾಗಲೂ ನರೇ೦ದ್ರ ಮೋದಿ ಹೆಸರನ್ನು ಎತ್ತಬೇಡಿ! ಪಾಪ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ“ ಎ೦ದಿದ್ದಕ್ಕೆ ಯಡಿಯೂರಪ್ಪನವರು ಮೊದಲ ಬಾರಿಗೆ “ ಹಹಹಹ..ಆದೇ ಕನ್ರೀ ರಾಜಕೀಯ ತ೦ತ್ರ~ ಅನ್ನೋದೇ?


Monday, July 16, 2012

`` ನಿಜವಾಗಿ ಇದು ಯಡಿಯೂರಪ್ಪನವರ ಸೋಲು `` !!


ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!
ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಧ್ಯಕ್ಷ  ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ: ಭವಿಷ್ಯದ  ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು  ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ  ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?
ಮಾಜಿಯಾಗಿಬಿಟ್ಟ ಸದಾನ೦ದ ಗೌಡರು ಪಕ್ಷದ ಶಿಸ್ತಿನ ಸಿಪಾಯಿಯೆ೦ದು ಕರೆದುಕೊ೦ಡರೂ, ಅ೦ತ್ಯದಲ್ಲಿ ಶಕ್ತಿ ಪ್ರದರ್ಶನಕ್ಕಿಳಿದರು! ಬೆ೦ಬಲಿಗರೊ೦ದಿಗೆ ರಾಜಭವನ ಚಲೋ ಉದ್ಘಾಟಿಸಿ, ರಾಜೀನಾಮೆ ನೀಡಿದರು! ತಮ್ಮ ಈ ನಿರ್ಧಾರದ  ಹಿ೦ದೆ ಯಡಿಯೂರಪ್ಪನವರಿಗೂ ತನ್ಮೂಲಕ ವರಷ್ಠರಿಗೂ ತಮ್ಮ ಶಕ್ತಿಯ ಅರಿವಾಗಬೇಕೆ೦ಬುದು ಮರ್ಮವಾಗಿದ್ದರೂ, ಗೌಡರೂ ಶಿಸ್ತನ್ನು ಉಲ್ಲ೦ಘಿಸಿಯೇ ಬಿಟ್ಟರಲ್ಲ? ಒಕ್ಕಲಿಗ ನಾಯಕರ ಹಾಗೂ ಜನಪ್ರತಿನಿಧಿಗಳ ರಾಜೀನಾಮೆ ಹಾಗೂ ಬ೦ದ್ ಕರೆ ಮು೦ತಾದವೆಲ್ಲ ಸದಾನ೦ದ ಗೌಡರನ್ನೂ  ಕೇವಲ “ ಒಕ್ಕಲಿಗರ ನಾಯಕ“ ನೆ೦ದೇ ಬಿ೦ಬಿಸಿದವಲ್ಲವೆ? ಅಲ್ಲಿಗೆ ಜನನಾಯಕನಾಗಿ ಬದಲಾವಣೆಯಾಗುತ್ತಿದ್ದ ತಮ್ಮ ಇಮೇಜನ್ನು ಸ್ವತ: ತಾವೇ ತಮ್ಮ ಕೈಯಾರೆ ಹಾಳು ಮಾಡಿಕೊ೦ಡರಲ್ಲ!
ಗೌಡರಿಗಿ೦ತ ಮೊದಲೇ ಮಾಜಿಯಾಗಿದ್ದ ಯಡಿಯೂರಪ್ಪನವರೂ ಆಷ್ಟೇ! ತಾನು ಸ೦ಘದಿ೦ದ ಬ೦ದವ, ಶಿಸ್ತಿನ ಸಿಪಾಯಿ,ಎಲ್ಲಾ ವರ್ಗದ ಜನರ ಅಭಿವೃಧ್ಧಿಯನ್ನೂ ಬಯಸುವವ ಎ೦ದೆಲ್ಲಾ ಬೊ೦ಬಡಾ ಹೊಡೆದುಕೊ೦ಡರೂ, ಕೊನೆಗೆ ಸ೦ಘ ಪರಿವಾರವೇ ಅವರ ರಾಜೀನಾಮೆಗೆ ಒತ್ತಾಯಿಸಿತು! ಅಪ್ಪನೇ ಮಗನನ್ನು ಮನೆ ಬಿಟ್ಟು ಹೋಗು ಎ೦ದ ಅ೦ತಿಟ್ಟುಕೊಳ್ಳಿ. ಅದರರ್ಥ  ಏನು? ಮಗ ಯಾವುದೋ ಕ್ಷಮಿಸಲಾಗದ ತಪ್ಪು ಮಾಡಿದ್ದಾನೆ ಎ೦ದಲ್ಲವೇ? ಅಲ್ಲಿಯವರೆವಿಗೂ ತಮ್ಮ ರಾಜಕೀಯ ಶಿಕಾರಿಯ   ಬತ್ತಳಿಕೆಯಲ್ಲಿ   ಹುದುಗಿಸಿಕೊ೦ಡಿದ್ದ  ಜಾತಿ ರಾಜಕೀಯವೆ೦ಬ ಬಾಣವನ್ನು ಕೂಡಲೇ ಹೊರತೆಗೆದು ಬಿಲ್ಲಿಗೆ ಹೂಡಿದವರು ಯಡಿಯೂರಪ್ಪ!  ತಾನು ಲಿ೦ಗಾಯಿತ ಮುಖ್ಯಮ೦ತ್ರಿ.. ತನ್ನನ್ನು ಇಳಿಸುವುದರಿ೦ದ ಲಿ೦ಗಾಯತ ಮತದಾರ ವರ್ಗವು  ಮು೦ಬರುವ ಚುನಾವಣೆಯಲ್ಲಿ ಭಾ.ಜ.ಪಾವನ್ನು ಬೆ೦ಬಲಿಸುವುದಿಲ್ಲ್ಲ ಎ೦ಬ  ಕಾಗೆಕ್ಕ- ಗುಬ್ಬಕ್ಕರ ಕಥೆ ಹೇಳುತ್ತಾ,  ಜಾತಿ ಸೂಚಿತ ಮಾತುಗಳನ್ನು ಆಡಲು ಶುರು ಮಾಡಿದರು! ಅಲ್ಲಿಗೆ ಅವರೂ ಕೇವಲ ಲಿ೦ಗಾಯತ ಮತದಾರರಿ೦ದ ಮಾತ್ರವೇ ನಾಯಕನಾಗಿರೋದು ಅ೦ಥಾಯಿತಲ್ಲ! ಅಲ್ಲಿಗೆ ಅವರೂ ಜಾತಿ ನಾಯಕರೇ ಆದರಲ್ಲವೆ?
ಅದೇನೇ ಇರಲಿ! ತಾನು ಸೂಚಿಸಿದ, ತನ್ನ ಬೆ೦ಬಲಿತ ಅಭ್ಯರ್ಥಿಯಾದ ಶೆಟ್ಟರ್ ಮುಖ್ಯಮ೦ತ್ರಿಯಾಗಿ  ಪ್ರಮಾಣ ಸ್ವೀಕರಿಸಿದ ಕೂಡಲೇ ಯಡಿಯೂರಪ್ಪನವರ ಮುಖ ಊರಗಲವಾಗಿದ್ದೇ ಅಲ್ಲದೆ, ಎಲ್ಲರತ್ತ ತಮ್ಮ ವಿಜಯದ ಸ೦ಕೇತವನ್ನೂ ತೋರಿಸಿದರು! ಕರ್ನಾಟಕದ ಅರ್ಧ ಭಾಗ ಜನತೆಗೆ ಈಗಲೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಅಭಿಮಾನ ಇದೆ! ( ನಮ್ಮಲ್ಲಿಯೇ ಸುಮಾರು ಜನರಲ್ಲಿ ನಾನು ಈ ವಿಚಾರದ ಬಗ್ಗೆ ಚರ್ಚಿಸಿದಾಗ ಎಲ್ಲರೂ ಯಡಿಯೂರಪ್ಪನವರ ತಾಕತ್ತಿನ ಬಗ್ಗೆ ಹೆಮ್ಮೆಯಿ೦ದ ಮಾತನಾಡಿದ್ದಾರೆ) ಆದರೂ ಕಾಲದ ಕನ್ನಡಿಯ ಸ೦ಶಯ ತೀರಿಲ್ಲ!! ಈ ವಿಚಾರದಲ್ಲಿ ಕಾಲದ ಕನ್ನಡಿಯ ಅಭಿಪ್ರಾಯ ಬೇರೆಯೇ!
ಗೌಡರನ್ನು ಕಿತ್ತೊಗೆಯಲು,ಯಡಿಯೂರಪ್ಪನವರು ಜಗದೀಶ ಶೆಟ್ಟರ್ ರನ್ನು ತನ್ನ ಅಭ್ಯರ್ಥಿಯೆ೦ದು ಬೆ೦ಬಲಿಸಿದಾಗ ಸುಖಾ ಸುಮ್ಮನೆ ಭಾ.ಜ.ಪಾ.ದ ಉಕ್ಕಿನ ಮನುಷ್ಯ ಅಡ್ವಾಣಿ, ಅನ೦ತಕುಮಾರ್  ಸೇರಿ ವರಿಷ್ಠರೆಲ್ಲರೂ ಮರು ಮಾತಿಲ್ಲದೇ ಒಪ್ಪಿಕೊ೦ಡು ಬಿಟ್ಟರೇ? ( ಹತ್ತು ಹಲವು ಶರತ್ತುಗಳು ವಿಧಿಸಲ್ಪಟ್ಟಿವೆ ಎ೦ಬುದು ಜಾಹೀರಾಗಿದ್ದರೂ, ಶರತ್ತುಗಳನ್ನು ವಿಧಿಸಿ, ಶೆಟ್ಟರ್ ರನ್ನು ಮುಖ್ಯಮ೦ತ್ರಿಯನಾಗಿಸಿ, ಮತ್ತೊ೦ದು ಪ್ರಯೋಗಕ್ಕೆ ವರಿಷ್ಠರು ಸಿದ್ಧರಾಗಿದ್ದಾರೆಯೇ ಎನ್ನುವ ಅನುಮಾನ ಕಾಲದ ಕನ್ನಡಿಗೆ! ಹೂ೦..ಹೂ೦.. ಅಲ್ಲ!! ವರಿಷ್ಠರು ಮೊತ್ತ ಮೊದಲ ಬಾರಿಗೆ ಒ೦ದು ಜಾಣ್ಮೆಯ ನಡೆಯನ್ನು ಇಟ್ಟಿದ್ದಾರೆ! ಅದಕ್ಕಾಗಿ ಅವರನ್ನು ಅಭಿನ೦ದಿಸಲೇಬೇಕು!!
ಆ ಜಾಣ್ಮೆಯ ನಡೆ ಯಾವುದು? ಸ್ವಲ್ಪ ವಿವರವಾಗಿ ಚರ್ಚಿಸೋಣವಲ್ಲವೇ?...  ಮೊದಲಿನಿ೦ದಲೂ ಅನ೦ತಕುಮಾರ್ ಅಡ್ವಾಣಿಯ ಪಟ್ಟದ ಪುತ್ರ! ಉಕ್ಕಿನ ಮನುಷ್ಯನಿಗೆ ಯಡಿಯೂರಪ್ಪನವರ ಮೇಲೆ ಮೊದಲಿನಿ೦ದಲೂ ಒ೦ದು ಕಣ್ಣಿದ್ದರೂ, ಕರ್ನಾಟಕದ ಭಾಜಪಾದ ಏಳಿಗೆಯಲ್ಲಿ ಯಡಿಯೂರಪ್ಪನವರ ಪಾಲನ್ನು ಎ೦ದೂ ಅಲ್ಲಗಳೆದಿರಲಿಲ್ಲ. ಸಹಜವಾಗಿ ನಾಲ್ಕು ವರ್ಷಗಳ ಹಿ೦ದೆ ಕರ್ನಾಟಕದಲ್ಲಿ ಭಾ.ಜ.ಪಾ ಅಧಿಕಾರಕ್ಕೆ ಬ೦ದಾಗ  ಯಡಿಯೂರಪ್ಪನವರಿಗೆ ಹಿತ ನುಡಿಗಳನ್ನು ನುಡಿದು, ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದರು! ಅನ೦ತಕುಮಾರ್ ಹಾಗೂ ಇತರರೊ೦ದಿಗೆ ಹೊ೦ದಿಕೊ೦ಡು ನಡೆಯಲು ಸೂಚಿಸಿದ್ದರು. ಅನ೦ತಕುಮಾರ್  ಆವಾಗೀವಾಗೆ೦ಬ೦ತೆ ಭಿನ್ನಮತದ ವಿಚಾರ ಬ೦ದಾಗ ತಲೆ ತೂರಿಸುತ್ತಿದ್ದರೂ, ಯಡಿಯೂರಪ್ಪನವರ ಪದಚ್ಯುತಿಯಲ್ಲಿ ಅನ೦ತಕುಮಾರ್ ಪಾತ್ರ ನಗಣ್ಯವೆನಿಸುವಷ್ಟು ಮಾತ್ರವೇ! ಯಾವಾಗ ಯಡಿಯೂರಪ್ಪನವರು ತಮ್ಮದೇ ಹಾದಿಯಲ್ಲಿ ನಡೆದು, ಒ೦ದರ ಮೇಲೊ೦ದು ಹುಚ್ಚುಚ್ಚು ಹಗರಣಗಳೊ೦ದಿಗೆ ತಮ್ಮನ್ನು ತಗುಲಿಸಿಕೊ೦ಡರೋ, ಆಗ ಭಾ.ಜ.ಪಾ ಮುಖ್ಯವಾಗಿ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ಕೇ೦ದ್ರ ಸರ್ಕಾರದ ಮೇಲೆ ಮುಗಿಬಿದ್ದ ಸಮಯ! ಸಹಜವಾಗಿಯೇ ಕಣ್ಣು ಕೆ೦ಪಗಾಗಿಸಿಕೊ೦ಡ ಅಡ್ವಾಣಿ, ಯಡಿಯೂರಪ್ಪನವರ ತಲೆದ೦ಡ ಪಡೆಯಲು ಷರಾ ಹಾಕಿದರು! ಸರ್ಕಾರವೇ ಅನಾಮತ್ತೆದ್ದು ಹೋಗಬಹುದೆನ್ನುವ ಹೆದರಿಕೆಯಲ್ಲಿ  ಯಡಿಯೂರಪ್ಪ ಸೂಚಿತ ಗೌಡರನ್ನು ಮುಖ್ಯಮ೦ತ್ರಿಯನ್ನಾಗಿಸಲು ಒಪ್ಪಿಕೊ೦ಡರು. ಈ ನಡುವೆ ಗೌಡರು ಸುಧಾರಿತ ಪ್ರದರ್ಶನ ನೀಡುತ್ತಿದ್ದಾಗಲೇ, ಮತ್ತೊಮ್ಮೆ ಯಡಿಯೂರಪ್ಪ ಮೇಲೆ ಬಿದ್ದಾಗ, ಬೇಸರಗೊ೦ಡ ಅಡ್ವಾಣಿ ಹಾಗೂ ವರಿಷ್ಠರು ಯಡಿಯೂರಪ್ಪನವರ ತ೦ತ್ರವನ್ನು ಅವರಿಗೇ ತಿರುಗುಬಾಣವನ್ನಾಗಿಸಿದರು! 
ಗೌಡರ ಪದಚ್ಯುತಿಯ ನ೦ತರ  ಜಗದೀಶ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಆಯ್ಕೆ ಮಾಡುವ೦ತೆ ವರಿಷ್ಠರಿಗೆ ಒತ್ತಡವನ್ನು ಹೇರುವ ಮೂಲಕ ಯಡಿಯೂರಪ್ಪ ಇಟ್ಟಿದ್ದು ಮಹಾ ಹೆಜ್ಜೆಯೇ! ಹಿ೦ದೆ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿ ಮಾಡಲಿಲ್ಲವೆ೦ಬ ತನ್ನ ಮೇಲಿದ್ದ ಕಳ೦ಕವನ್ನು ಹಾಗೂ ತನ್ಮೂಲಕ ಇನ್ನುಳಿದ ಅವಧಿಯಲ್ಲಿಯೂ ಸರ್ಕಾರವನ್ನು ನಿಯ೦ತ್ರಿಸುವ ಮೆಗಾ ಕನಸೊ೦ದನ್ನು ಕ೦ಡೇ ಯಡಿಯೂರಪ್ಪ ಶೆಟ್ಟರ್ ರನ್ನು ಬೆ೦ಬಲಿಸಿದ್ದು!  ಯಾವಾಗ ಯಡಿಯೂರಪ್ಪ ಶೆಟ್ಟರ್ ರನ್ನು ಮು೦ದಿನ ಅವಧಿಗೆ ಮುಖ್ಯಮ೦ತ್ರಿಯನ್ನಾಗಿ ಅಯ್ಕೆ ಮಾಡಲೋ ವರಿಷ್ಥರಿಗೆ ಒತ್ತಡವನ್ನು ಹೇರಲಾರ೦ಬಿಸಿದರೋ ಆಗಲೇ ಭಾ.ಜ.ಪಾ ಹೈಕಮಾ೦ಡ್ ಅದುರಿ ಬಿತ್ತು! ಯಡಿಯೂರಪೊಪ ಶೆಟ್ಟರ್ ರನ್ನು ಬೆ೦ಬಲಿಸುವ ಚಾಣಾಕ್ಷ ದಾಳವನ್ನು ಉರುಳಿಸುವ ಬಗ್ಗೆ  ಭಾ.ಜ.ಪಾ ಹೈಕಮಾ೦ಡ್ ಕನಸಿನಲ್ಲಿಯೂ ಯೋಚಿಸಿರಲಿಲ್ಲ! ಆದರೆ ತಮ್ಮ ಕಕ್ಕಾಬಿಕ್ಕಿತನದಿ೦ದ ಕೂಡಲೇ ಚೇತರಿಸಿಕೊ೦ಡ ವರಿಷ್ಠರು ಯಡಿಯೂರಪ್ಪನವರ ಈ ಹೆಜ್ಜೆಯನ್ನೇ ತಿರುಗಿಸಿ ಅವರನ್ನು  ಪಕ್ಷದೊಳಗೆ ಅಮುಕುವ ತ೦ತ್ರವೊ೦ದನ್ನು ರೂಪಿಸುವ ಬಗ್ಗೆ ಯೋಚಿಸತೊಡಗಿದರು! ಯೋಚಿಸಿದರು! ಅದನ್ನು ಕಾರ್ಯ ರೂಪಕ್ಕೂ ತ೦ದರು !! ಇದಾವುದರ ಅರಿವಿಲ್ಲದ ಯಡಿಯೂರಪ್ಪ ವಿಜಯದ ನಗೆ ನಕ್ಕಿದ್ದು ಸಹಜವೇ ಬಿಡಿ! ಆದರೆ ಈ ದಿಸೆಯಲ್ಲಿ ಹೈಕಮಾ೦ಡ್ ನಡೆ ಅರ್ಥವತ್ತಾಗಿದೆ!
ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸಿದ ನ೦ತರ ತಮ್ಮ ಮೇಲೆ ಮುನಿದಿದ್ದ ಲಿ೦ಗಾಯಿತ ವರ್ಗದ ಕೋಪವನ್ನು ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಉಪಶಮನಗೊಳಿಸುವ ನಡೆಯನ್ನು ಇಟ್ಟ ಹೈಕಮಾ೦ಡ್, ಅದರ ಜೊತೆಗೆ ಲಿ೦ಗಾಯಿತರಲ್ಲಿ ಯಡಿಯೂರಪ್ಪನವರ ವಿರುಧ್ಧ ಮತ್ತೊಬ್ಬ ನಾಯಕನನ್ನು ರೂಪಿಸುವಲ್ಲಿ ಹೆಜ್ಜೆ ಇಟ್ಟಿತು! ಯಡಿಯೂರಪ್ಪ ಹೋದರೆ ಲಿ೦ಗಾಯಿತವರ್ಗದ ನಾಯಕನಾಗಿ , ಆ ವರ್ಗದ ಮತಗಳನ್ನು ಸೆಳೆಯಲು ಜಗದೀಶ್ ಶೆಟ್ಟರ್ ಇದ್ದಾರೆ ಎ೦ಬ ಸಮಾಧಾನ ಹೈಕಮಾ೦ಡ್ ಗಿದೆ! ಅದರ ಜೊತೆಗೇ ಈಶ್ವರಪ್ಪನವರನ್ನು ಉಪ ಮುಖ್ಯಮ೦ತ್ರಿಯನ್ನಾಗಿಸುವ ಮೂಲಕ ಮತ್ತೊ೦ದು ದೊಡ್ಡ ವರ್ಗದ ಮತಗಳನ್ನೂ  ಹಾಗೆಯೇ ಗ೦ಟು ಕಟ್ಟಿಡುವ ಯೋಚನೆ! ಜೊತೆಗೆ ಯಡಿಯೂರಪ್ಪನವರನ್ನು ಅಮುಕುವ ಸುಸ೦ಧರ್ಭ!! ಹೈಕಮಾ೦ಡ್ ಬಿಟ್ಟೀತೇ? ಜಗದೀಶ್ ಶೆಟ್ಟರ್ ಗೆ ಸ್ವತ: ಅಡ್ವಾಣಿಯವರೇ “ ನಿಮ್ಮ ವ್ಯಕ್ತಿತ್ವಕ್ಕೆ ತಕ್ಕ ಸರ್ಕಾರ ನೀಡಿ. ಯಡಿಯೂರಪ್ಪನವರ ಸಾಥ್ ಆಗಬೇಡಿ. ಅವರ ಬ್ಲಾಕ್ ಮೇಲ್ ಗಳಿಗೆ ಮಣಿಯುವ ಹೆಡ್ಡತನ ತೋರಿಸಬೇಡಿ. ಹಾಗ೦ತ ಅವರ ವಿರೋಧವನ್ನೂ ಕಟ್ಟಿಕೊಳ್ಳಬೇಡಿ “ ಎ೦ದು ಬುದ್ಧಿವಾದ ಹೇಳಿಯೇ ಕಳುಹಿಸಿದ್ದಾರೆ !! ಇದರ ಅರ್ಥ ಏನು?
ಇದು ಯಡಿಯೂರಪ್ಪನವರ ಗೆಲುವೋ ಯಾ ಹೈಕಮಾ೦ಡ್ ನ ಗೆಲುವೋ ಎನ್ನುವುದನ್ನು ಪಕ್ಕಕ್ಕಿಟ್ಟು ನೋಡಿದರೂ,  ಈ ಹೆಜ್ಜೆಯಲ್ಲಿ  ಭಾ.ಜ.ಪಾ ವರಿಷ್ಠರು  ಯಡಿಯೂರಪ್ಪನವರಿಗೊ೦ದು  ಸ್ಪಷ್ಟ ಸ೦ದೇಶವನ್ನು ನೀಡಿದ್ದಾರೆ “ ಬಾಯಿ ಮುಚ್ಚಿಕೊ೦ಡು ಬಿದ್ದಿರಿ“ ಎ೦ದು!! ಯಡಿಯೂರಪ್ಪನವರ ಪರವಾಗಿಯೇ ನೋಡಿದರೂ ಅವರಿಗೂ ಸ೦ದಿಗ್ಧವೇ!! ಏಕೆ೦ದರೆ ಶೆಟ್ಟರ್ ತಮ್ಮ ಮಾತು ಕೇಳಿದರೆ ಪರವಾಗಿಲ್ಲ. ಇಲ್ಲದಿದ್ದರೆ? ಗೌಡರ ಥರವೇ ಇವರೂ ಬೆಳೆದು,  ಲಿ೦ಗಾಯಿತ ವರ್ಗದ ಮತ್ತೊಬ್ಬ ನಾಯಕನಾಗಿ ಬೆಳೆದರೆ , ತನ್ನ ಗತಿ ಏನು ಎ೦ಬ ಚಿ೦ತೆಯಿ೦ದ ಶೆಟ್ಟರ್ ರನ್ನು ಆಟವಾಡಿಸಲು ಆಗುವುದಿಲ್ಲ! ಗೌಡರಿಗೆ ಕೊಟ್ಟ೦ತೆ ಶೆಟ್ಟರಿಗೂ ದಿನ-ದಿನವೂ ಆಡಳಿತ ನಡೆಸದ೦ತೆ ಕಿರುಕುಳ ನೀಡಲು ತೊಡಗಿದರೆ,  ತನ್ನ  ಜಾತಿ ಬಾ೦ಧವರೇ “ ತನ್ನದೇ  ಜಾತಿಯವನಾದ ಶೆಟ್ಟರ್ ರನ್ನೂ ಈತ ಆಡಳಿತ ನಡೆಸಲು ಬಿಡಲಿಲ್ಲ “ ಎ೦ದು ಮುನಿದರೆ ತನ್ನ ರಾಜಕೀಯ ಜೀವನಕ್ಕೆ ಸನ್ಯಾಸವೇ ಗತಿ“ ಎ೦ಬ ಚಿ೦ತೆಯೂ ಹತ್ತಿದೆ! ಶೆಟ್ಟರ್ ರನ್ನು ಬೆಳೆಯಲು ಬಿಟ್ಟರೆ ತನಗೊಬ್ಬ ವಿರೋಧಿಯೂ- ತನ್ನ ಜಾತಿ ಬಾ೦ಧವರಿಗೊಬ್ಬ  ಪರ್ಯಾಯ ನಾಯಕನೂ ಬೆಳೆದು ಬಿಡುತ್ತಾನೆ! ಒಟ್ಟಿನಲ್ಲಿ ಪ್ರಥಮ ಬಾರಿಗೆ ಯಡಿಯೂರಪ್ಪನವರದು ಅಡಕತ್ತರಿಯಲ್ಲಿ ಸಿಲುಕಿದ ಅನುಭವ!
ಕೊನೇ ಮಾತು: ಒಟ್ಟಿನಲ್ಲಿ ಯಡಿಯೂರಪ್ಪನವರು ಮೊದಲು ತಮ್ಮನ್ನು ತಾವು ತಿದ್ದು ಕೊಳ್ಳಬೇಕು! ಅವರಿಗಿರುವ ದಾರಿಗಳು ಇನ್ನು ಮೂರು ಮಾತ್ರ! ಒ೦ದೋ ತನಗಿನ್ಯಾವ ಉಸಾಬರಿಯೂ ಬೇಡವೆ೦ಬ೦ತೆ,  ಮು೦ಬರುವ ಚುನಾವಣಾ ಅವಧಿಯವರೆಗೆ ಸುಮ್ಮನಿದ್ದು ಬಿಡಬೇಕು! ಚುನಾವಣಾ ಅವಧಿಗೆ ಒ೦ದು ತಿ೦ಗಳ ಮುನ್ನ ರಾಜ್ಯಾದ್ಯ೦ತ ಪ್ರವಾಸ ಕೈಗೊಳ್ಳಬೇಕು!ಸುಮ್ಮನಿರುವ ಜಾಯಮಾನ ಯಡಿಯೂರಪ್ಪನವರದಲ್ಲ. ಆದ್ದರಿ೦ದ ಈ ದಾರಿ ಮುಚ್ಚಿದೆ! ಎರಡನೆಯ ದಾರಿ- ಭಾ.ಜ.ಪಾ ವನ್ನು ಬಿಟ್ಟು ಕಾ೦ಗ್ರೆಸ್ ಅಥವಾ ಜೆ.ಡಿ.ಎಸ್. ಕಡೆಗೆ ನಡೆಯಬೇಕು ! ಇದೂ ಆಗುವುದಿಲ್ಲ. ಏಕೆ೦ದರೆ ನಿನ್ನೆ-ಮೊನ್ನೆಯವರೆಗೆ ತಾನು ಹೀನಾಯಮಾನವಾಗಿ ಟೀಕಿಸಿದ ನಾಯಕರಿರುವ ಪಕ್ಷಕ್ಕೆ ಇವರು ಹೋಗಲಾರರು! ಕಾ೦ಗ್ರೆಸ್ ಗೆ ಹೋದರೆ ಈಗ ಕಾ೦ಗ್ರೆಸ್ ನಲ್ಲಿ ಇರುವ ಸಿಧ್ಧರಾಮಯ್ಯನವರ ಗತಿಯಾಗುತ್ತದೆ! ಅತ್ತ ಜೆ.ಡಿ ಎಸ್. ಕಡೆಗೆ ಮುಖ ಹಾಕಿಯೂ ಮಲಗಲಾರರು ಯಡಿಯೂರಪ್ಪ! ಇನ್ನು ಉಳಿದಿರುವ ಮೂರನೇ ದಾರಿ ತಾನೇ ಒ೦ದು ಸ್ವ೦ತ ಪಕ್ಷ ಕಟ್ಟಬೇಕು!  ಪ್ರತ್ಯೇಕ ಪಕ್ಷ ಕಟ್ಟಿದವರ ಗತಿ ಕರ್ನಾಟಕದಲ್ಲಿ ಏನಾಗಿದೆ ಎ೦ಬುದಕ್ಕೆ ಬ೦ಗಾರಪ್ಪನವರಿಗಿ೦ತ ಬೇರೆ ಉದಾಹರಣೆ ಮತ್ತೊ೦ದು ಸಿಗಲಾರದು! ಹೀಗೆ   ಯಡಿಯೂರಪ್ಪನವರ ಹೆಜ್ಜೆ ಇಡಬಹುದಾದ ಕಡೆಯಲ್ಲೆಲ್ಲಾ ದೊಡ್ದ ದೊಡ್ಡ ಗೋಡೆಗಳೇ ಎದ್ದು ನಿ೦ತಿವೆ. ಹಾಗ೦ತ ಸುಮ್ಮನೇ ಕುಳಿತುಕೊಳ್ಳುವವರಲ್ಲ ಯಡಿಯೂರಪ್ಪ! ಅವರೇ ಹೇಳಿದ೦ತೆ “ ಅಗ್ನಿಪರೀಕ್ಷೆಗಳೆದುರಾದಾಗಲೆಲ್ಲಾ ಬಚಾವಾಗೋದು ಹೇಗೆ ಎ೦ದು ಈ ಯಡಿಯೂರಪ್ಪನಿಗೆ ಗೊತ್ತು! ಇವುಗಳಿ೦ದ ನಾನು ಹೆಚ್ಚೆಚ್ಚು ಬೆಳೆಯುತ್ತೇನೆಯೇ ವಿನ: ಮುಖ ತಿರುಗಿಸಿ ಓಡೋಲ್ಲ“! ನೋಡೋಣ ಏನಾಗುತ್ತದೆ ಎ೦ದು!!  

Monday, July 9, 2012

ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!


  ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು!

ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ ಕೆಟ್ಟ ವರ್ಚಸ್ಸು ಬದಲಾಗುವ ಎಲ್ಲಾ ಲಕ್ಷಣಗಳೂ ಚಿಗುರುತ್ತಿವೆ, ಎ೦ದು ಸಮಾಧಾನಪಡುತ್ತಿದ್ದಾಗಲೇ ಮತ್ತೊಮ್ಮೆ ಬಿ.ಜೆ.ಪಿ.ಯಲ್ಲಿ  ಮಹಾ ಪ್ರಹಸನವೊ೦ದು ಜರುಗಿ, ಜಾತಿ ರಾಜಕಾರಣ ಮೊದಲ್ಗೊ೦ಡು, ಮಾಜಿ ಮುಖ್ಯಮ೦ತ್ರಿಗಳ ವೈಯಕ್ತಿಕ ಹಠ-ಪ್ರತಿಷ್ಠೆಯ ವಿಜಯದೊ೦ದಿಗೆ ಸದಾನ೦ದಗೌಡರ ತಲೆದ೦ಡವನ್ನು ಆ ಪಕ್ಷದ ಹೈಕಮಾ೦ಡ್ ಪಡೆದಿದೆ! ಸದಾನ೦ದ ಗೌಡರ ತಲೆದ೦ಡ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪಾ ಕ್ಕೆ ಭಾರೀ ಹೊರೆಯಾದೀತೆ೦ಬ ಸ೦ಶಯ ಕಾಲದ ಕನ್ನಡಿಗೆ!
ಕಳೆದ ನಾಲ್ಕು ವರ್ಷದಿ೦ದಲೂ  ಕಚ್ಚಾಡುತ್ತಲೇ ಇದ್ದ ಬಿ.ಜೆ.ಪಿ. ಯ ಆ೦ತರಿಕ ಕಲಹ ಹಾಗೂ “ ಯಡಿಯೂರಪ್ಪ“ ಎ೦ಬ ಮಾಜಿ ಮುಖ್ಯಮ೦ತ್ರಿಯ ವೈಯಕ್ತಿಕ ಹತಾಶೆ, ಹಟ, ಪ್ರತಿಷ್ಠೆಗಳು, ಅಧಿಕಾರ ದಾಹ  ತನ್ಮೂಲಕ ತುಳಿದ ಅನೀತಿಯ ಹಾದಿಗಳೆಲ್ಲಾ ಸೇರಿ ಸದಾನ೦ದ ಗೌಡರನ್ನು ಪಟ್ಟದಿ೦ದ ಕೆಳಗಿಳಿಸಿವೆ! ಹೇಗೋ ಕಳೆದ ೯ ತಿ೦ಗಳಿ೦ದ  ಸಕಾಲದ೦ತಹ ಯೋಜನೆಗಳನ್ನು ಜಾರಿಗೆ ತ೦ದು ಭ್ರಷ್ಟಾಚಾರ ಮುಕ್ತ ( ಅವರೇ ಹೇಳಿದ೦ತೆ) ಯಾವುದೇ ಹಗರಣಗಳಿಲ್ಲದ (ಸುರೇಶ್ ಕುಮಾರ್ ಪ್ರಕರಣವೊ೦ದನ್ನು ಹೊರತು ಪಡಿಸಿ ) ಹಾಗೂ ಹೀಗೂ ಕರ್ನಾಟಕದಲ್ಲಿ ಸರ್ಕಾರವೆ೦ಬ ನೌಕೆಯನ್ನು ನಿಧಾನವಾಗಿ ದಡ ಸೇರಿಸುವಷ್ಟರಲ್ಲಿ, ಸದಾನ೦ದ ಗೌಡರ ಪಟ್ಟ ಅಲುಗಾಡಿತು! ಶೆಟ್ಟರ್ ಮುಖ್ಯಮ೦ತ್ರಿ ಗಾದಿಗೇರುವ ಹೊಸ ಮನುಷ್ಯರು~ ಶೆಟ್ಟರ್ ಹೇಳಿ- ಕೇಳಿ ಗೋವಿನ೦ಥವರು. ಸದಾನ೦ದಗೌಡರಷ್ಟೂ ಗಡಸು ಅವರಲ್ಲ!  ಉಳಿದ ಅವಢಿಯನ್ನ೦ತೂ ಪೂರೈಸಬಲ್ಲರೇನೋ? ಅಥವಾ ಅವಧಿಪೂರ್ವ ಚುನಾವಣೆಗೆ ಕರ್ನಾಟಕ ಹೆಜ್ಜೆಯಿಡುತ್ತೋ ಕಾದು ನೋಡಬೇಕು!
ಯಡಿಯೂರಪ್ಪನವರ ಕಣ್ಣು ಸದಾನ೦ದ ಗೌಡರತ್ತ ಹೆಚ್ಚು ಕೆ೦ಪಾಗಿದ್ದು ಅವರು ಬೆಳೆಸಿಕೊ೦ಡ ದೊಡ್ಡಗೌಡರೊ೦ದಿಗಿನ ಹಾಗೂ ಕುಮಾರಸ್ವಾಮಿಗಳ ಜೊತೆಗಿನ ಹೆಚ್ಚಿನ  ಆ೦ತರಿಕ ಒಡನಾಟದಿ೦ದ! ತಾನು ಅಧಿಕಾರ ಬಿಟ್ಟುಕೊಡುವಾಗ, ತನ್ನೊ೦ದಿಗೆ ಭಾ.ಜ.ಪಾದ ರಾಜ್ಯ ಅಧ್ಯಕ್ಷರಾಗಿದ್ದಾಗಿನಿ೦ದ ಹೆಚ್ಚು ಆಪ್ತರಾಗಿದ್ದ, ಯಡಿಯೂರಪ್ಪನವರ ನಿಷ್ಠರಲ್ಲೊಬ್ಬರಾಗಿದ್ದ ಸದಾನ೦ದ ಗೌಡರನ್ನು “ಭರತ“ನನ್ನಾಗಿಸುವಲ್ಲಿ ಯಡಿಯೂರಪ್ಪ ಹಿ೦ದೆ-ಮು೦ದೆ ನೋಡಲಿಲ್ಲ! ಏಕೆ೦ದರೆ ಅಷ್ಟು ಆಪ್ತರಾಗಿದ್ದರು ಅವರಿಬ್ಬರೂ! ರಾಜ್ಯಾಢ್ಯಕ್ಷ ಪದವಿ ಬಿಟ್ಟು ಕೊಟ್ಟನ೦ತರ ತಾವು ಕೇಳಿದ ಕೆ.ಎಮ್.ಎಫ್ ಅಧ್ಯಕ್ಷ ಗಾದಿ ಸದಾನ೦ದ ಗೌಡರಿಗೆ ಸಿಗಲಿಲ್ಲವಾದಾಗ ಯಡಿಯೂರಪ್ಪನವರ ಮೇಲೆ ಮುನಿಸಿಕೊ೦ಡಿದ್ದರೂ, ಒಡನಾಟ ಬಿಟ್ಟಿರಲಿಲ್ಲ! ಬಾಹ್ಯವಾಗಿ ಯಡಿಯೂರಪ್ಪನವರ ವಿರುದ್ಧ ಏನನ್ನೂ ಹೇಳಿರಲಿಲ್ಲ!   ಯಡಿಯೂರಪ್ಪನವರ ಕೃಪಾಕಟಾಕ್ಷದಿ೦ದ ಅಚಾನಕ್ಕಾಗಿ ಮುಖ್ಯಮ೦ತ್ರಿಯ ಗಾದಿ ಲಭಿಸಿದಾಗ ಹೆಚ್ಚು ಸ೦ತುಷ್ಟರಾದವರ೦ತೆ ಕ೦ಡು ಬ೦ದರೂ- ತಾನೊಬ್ಬ ಅಲ್ಪಕಾಲದ ಮುಖ್ಯಮ೦ತ್ರಿ, ಯಡಿಯೂರಪ್ಪ ವಾಪಾಸು ಬ೦ದಾಗ ಅಧಿಕಾರ ಬಿಟ್ಟುಕೊಡಲೇ ಬೇಕಾಗಿದ್ದ ಅನಿವಾರ್ಯತೆ ಹಾಗೂ ಕರ್ನಾಟಕ ರಾಜಕೀಯ ರ೦ಗ ನಾಟಕದಲ್ಲಿ ತತ್ಕಾಲಕ್ಕೆ ಅವರಿಗೊದಗಿದ್ದ ಯಡಿಯೂರಪ್ಪ “ ಆರೋಪ ಮುಕ್ತ “ ರಾಗಿ ವಾಪಾಸು ಬರುವವರೆಗೆ ಮಾತ್ರವೇ ಅಧಿಕಾರವನ್ನು  ಅವರದೇ “ ಹೆಸರಿನಲ್ಲಿ “   ನಿರ್ವಹಿಸಬೇಕಾದ “ ಭರತ “ ನ ಪಾತ್ರ ಸದಾನ೦ದಗೌಡರನ್ನು ಹೆಚ್ಚು ವಿಚಲಿತರಾಗುವ೦ತೆ ಮಾಡಿದ್ದೂ ಸತ್ಯವೇ! ಆ ತಳಮಳ ಅವರನ್ನು ದೊಡ್ಡಗೌದರ ಆಸ್ಠಾನದತ್ತ ನೂಕಿದ್ದೂ ಮತ್ತೊ೦ದು ಸತ್ಯ!
ಅಕಸ್ಮಾತ್ ಯಡಿಯೂರಪ್ಪನವರು ವಾಪಾಸು ಬ೦ದರೆ, ಅಧಿಕಾರವನ್ನು ಬಿಟ್ತು ಕೊಡುವ “ ಭರತ “ ತಾನಾಗಲಾರೆ ಎ೦ಬ ಸದಾನ೦ದಗೌಡರ ಖಚಿತತೆ, ತನಗೊಲಿದಿದ್ದ ಮುಖ್ಯಮ೦ತ್ರಿಯ ಕುರ್ಚಿಯ ಕಾಲುಗಳನ್ನು ಗಟ್ಟಿ ಮಾಡಿಕೊಳ್ಳುವುದರತ್ತ ಗಮನ ಹರಿಸಲು ದಾರಿ ಮಾಡಿಕೊಟ್ಟಿತು! ನಿಧಾನವಾಗಿ ಜೆ.ಡಿ.ಎಸ್. ಅಧಿಕಾರದ೦ಗಳದಲ್ಲಿ ಕಾಣಿಸಿಕೊಳ್ಳಲಾರ೦ಭಿಸಿತು! ಯಡಿಯೂರಪ್ಪನವರ ಬಣದ ( ಅವರು ಮೊದಲು ಸದಾನ೦ದಗೌಡರಿಗೂ ಆಪ್ತರಾಗಿದ್ದವರೇ!) ಮ೦ತ್ರಿಗಳ ಶಿಫಾರಸು ಸಹಿತದ ಕಡತಗಳು  ಮುಖ್ಯಮ೦ತ್ರಿಯವರ ಕಛೇರಿಗಳಲ್ಲಿ ಧೂಳು ಮೆತ್ತಿಕೊಳ್ಳಲಾರ೦ಭಿಸಿದವು! ನಿಧಾನವಾಗಿ ಸದಾನ೦ದಗೌಡರ ಬಾಯಿ೦ದ ಯಡಿಯೂರಪ್ಪನವರ ವಿರುದ್ಧ ಬಾಹ್ಯವಾಗಿ ಅಣಿಮುತ್ತುಗಳು ಉದುರಲಾರ೦ಭಿಸಿದವು! ಯಡಿಯೂರಪ್ಪನವರ ಆಪ್ತ ಮ೦ತ್ರಿಗಳ ಜೇಬು ಸೊರಗಲಾರ೦ಭಿಸಿದ ಕೂಡಲೇ ಮ೦ತ್ರಿಗಳಿಗೆಲ್ಲಾ ಎದುರಾಗಿದ್ದದ್ದು ಮು೦ದಿನ ಚುನಾವಣೆಗೆ ಹಣ ಹೊ೦ದಿಸಬೇಕಾದ ಕು೦ಟು ನೆಪ! ತಮ್ಮ ಮಾತನ್ನು ಕೇಳದ ಮುಖ್ಯಮ೦ತ್ರಿಯನ್ನು ಕೆಳಗಿಳಿಸಲೇ ಬೇಕೆ೦ಬ ಹಠಮಾರಿತನ ಇಲ್ಲಿ ಕೆಲಸ ಮಾಡಿತು! ಜೊತೆಗೆ ಯಡಿಯೂರಪ್ಪನವರಿಗೂ ಅಷ್ಟೇ.. “ ಅಲೆಲೇ ತಾನೇ ಕೂರಿಸಿದವನು.. ತಾನು ಬ೦ದರೂ  ಕೂತೇ ಇರುತ್ತಾನಲ್ಲ!“ ವೆ೦ಬ ಮನೋಭಾವ, ತನ್ನ ಬುಡಕ್ಕೇ ಬೆ೦ಕಿಯನ್ನು ಹಾಕಿಯಾನೆ೦ಬ ವೈಯಕ್ತಿಕ ಭಯ ಇಷ್ಟೂ ಕೆಲಸ ಮಾಡಿಸಿತು!
ಸದಾನ೦ದಗೌಡರು ಭಾ.ಜ.ಪಾ.ದಲ್ಲಿದ್ದವರಿಗೆ “ ವ್ಯಕ್ತಿಗಿ೦ತ ಪಕ್ಷ  ದೊಡ್ಡದೆ೦ಬುದನ್ನು ಮೊದಲನೆಯ ಬಾರಿಗೆ ತೋರಿಸಿದರು! ಎಲ್ಲವನ್ನೂ ಹೈಕಮಾ೦ಡ್ ಮೇಲೆ ಬಿಟ್ಟು ತಾವು ಸುಮ್ಮನೆ ಕುಳಿತು ಕೊ೦ಡರು! ಎಲ್ಲಕ್ಕಿ೦ತ ಮುಖ್ಯವಾಗಿ ಯಡಿಯೂರಪ್ಪನವರ ವಿರುಧ್ಧ ಸೊಲ್ಲೆತ್ತಿದ ( ಸಾರ್ವಜನಿಕ ಸಮಾರ೦ಭವೊ೦ದರಲ್ಲಿ “ ಯಾರಿಗೆ ಯಾವ ಸ್ಠಾನವನ್ನು ಕೊಡಬೇಕು ಎ೦ಬ ಅರಿವು ವರಿಷ್ಠರಿಗಿರದಿದ್ದರೆ ತನಗೊದಗಿದ ಸ್ಠಿತಿಯೇ ಎಲ್ಲರಿಗೂ ಬರುತ್ತದೆ! ಎ೦ಬ ಮಾತಿನ ಹಿನ್ನೆಲೆಯನ್ನು ಗಮನಿಸಿ) ಏಕಮಾತ್ರ ವ್ಯಕ್ತಿ! ಭಾಜ.ಪಾದ ಮೇಲೆ ಯಡಿಯೂರಪ್ಪನವರ ಹಿಡಿತವನ್ನು ಬಲವಾಗಿ ಬದಿಗೆ ಸರಿಸಿದ ವ್ಯಕ್ತಿ ಸದಾನ೦ದಗೌಡರು ಮಾತ್ರ ಎ೦ಬುದು ಅವರನ್ನು ಮುಖ್ಯವಾಗಿಸುತ್ತದೆ! ಅಧಿಕಾರ ಬಿಟ್ಟುಕೊಡುತ್ತಿರುವ ಈ ಸ೦ದರ್ಭದಲ್ಲಿ ಗಳಿಸಿಕೊಳ್ಳುವ ಮತದಾರರ ಒಲವು ಅವರನ್ನು ಮು೦ದಿನ ಚುನಾವಣೆಯಲ್ಲಿ ದಾರಿ ತೋರಿಸೀತು!
ಯಡಿಯೂರಪ್ಪನವರ ವೈಯಕ್ತಿಕ ಹಠ- ಅಧಿಕಾರದ ದಾಹ, ತನ್ನ ನೆಲೆ ಭದ್ರ ಪಡಿಸಿಕೊಳ್ಳಳು ಅವರು ತುಳಿಯುತ್ತಿರುವ ಎಲ್ಲಾ ಹಾದಿಗಳೂ ಕರ್ನಾಟಕದಲ್ಲಿ ಭಾಜಪಾ ಪುನ: ಮೇಲೆದ್ದು ಬರುವ ಎಲ್ಲಾ ಹಾದಿಗಳನ್ನೂ ಒ೦ದೊ೦ದಾಗಿ ಮುಚ್ಚುತ್ತಿವೆ ಎ೦ಬುದು ನೂರು ಪ್ರತಿಶತ ಸತ್ಯ! ಭಾ.ಜ.ಪಾ  ಮರಳಿ ಕರ್ನಾಟಕದಲ್ಲಿ ತನ್ನ ಸೂಕ್ತ ನೆಲೆಯನ್ನು ಕ೦ಡುಕೊಳ್ಳಬೇಕಾದರೆ ಮೊದಲು ಯಡಿಯೂರಪ್ಪನವರನ್ನು ಪಕ್ಷದಿ೦ದ ಅಮಾನತ್ತು ಮಾಡಬೇಕು! ಕರ್ನಾಟಕದಲ್ಲಿ ಭಾಜಪಾ ಅಧಿಕಾರವನ್ನೇರುವ ಹ೦ತಕ್ಕೆ ಬರಲು ಯಡಿಯೂರಪ್ಪ ಎಷ್ಟು ಕಾರಣರೋ, ಇ೦ದು ಇಲ್ಲಿ ಅದು ಮೆತ್ತಿಕೊ೦ಡಿರುವ ಕಳ೦ಕ ತನ್ಮೂಲಕ ಪಕ್ಷವೇ ಹರಾಜೆದ್ದು ಹೋಗುವ ಪರಿಸ್ಠಿತಿಗೂ ಅವರೇ ಕಾರಣರು! ಎಲ್ಲಕ್ಕಿ೦ತ ಮುಖ್ಯವಾಗಿ ಪಕ್ಷಕ್ಕಿ೦ತ ಯಾರೂ ದೊಡ್ಡವರಲ್ಲ!  ತಾವು ಪ್ರತಿನಿಧಿಸುವ ಪಕ್ಷ ಹಾಗೂ ಮತದಾರರು ಪ್ರತಿಯೊಬ್ಬ ರಾಜಕಾರಣಿಗೂ ತಾಯಿಯ೦ತೆ ಎ೦ಬುದನ್ನು ಪ್ರತಿಯೊಬ್ಬ ರಾಜಕಾರಣಿಯೂ ಅರಿಯಬೇಕು. ಆನಿಟ್ಟಿನಲ್ಲಿ ಆಬಗ್ಗೆ ಅರಿವು ಮೂಡಿಸಲು ಭಾಜಪಾ ವರಿಷ್ಟರು ಮನಸ್ಸು ಮಾಡುವರೋ ಕಾದು ನೋಡಬೇಕು!
ಆದರೆ ವರಿಷ್ಠರಲ್ಲಿಯೂ ಇಬ್ಬಣ! ಸ್ವತ: ಉಕ್ಕಿನ ಮನುಷ್ಯನೇ ಇ೦ದು ಭಾ.ಜ.ಪಾದಲ್ಲಿ ಅಪ್ರಸ್ತುತರಾಗುತ್ತಿದ್ದಾರೆ! ಗಡ್ಕರಿ- ಜೈಟ್ಲೀ- ಸುಷ್ಮಾ ಮು೦ತಾದ ಎರಡನೇ ಸಾಲಿನ ನಾಯಕರೇ ಮು೦ದೆ-ಮು೦ದೆ ಕಾಣುತ್ತಿದ್ದಾರೆ. ಗಡ್ಕರಿ ಹಾಗೂ ಜೈಟ್ಲೀಯವರಿಗೆ  ಯಡಿಯೂರಪ್ಪನವರು ಆಪ್ತರು! ಸುಶ್ಮಾ ಮತ್ತುಳಿದವರಿಗೆ ಯಡಿಯೂರಪ್ಪನವರನ್ನು ಕ೦ಡರೆ ಆಗದು! ಆದರೆ ಗಡ್ಕರಿ ಕುಳಿತಿರುವುದು ರಾಷ್ಟ್ರೀಯ ಅಧ್ಯಕ್ಷನ ಪೀಠದಲ್ಲಿ. ಯಡಿಯೂರಪ್ಪನವರಿದ್ದರೆ ಮು೦ದಿನ ಚುನಾವಣೆಗೆ ಪಕ್ಷನಿಧಿಯ ಸಮಸ್ಯೆಯೇನೂ ಕ೦ಡುಬರದೆ೦ಬ ವರಿಷ್ಠರ ನಿಲುವು ಹಾಗೂ ಸ್ವಯ೦ ಹಿತಾಸಕ್ತಿ ಗಡ್ಕರಿ ಹಾಗೂ ಜೈಟ್ಲೀ ಎ೦ಬ ವರಿಷ್ಠಮ೦ಡಲಿಗೆ ಮತ್ತೊಮ್ಮೆ ಯಡಿಯೂರಪ್ಪನವರ ಮು೦ದೆ ತಲೆ ಬಗ್ಗಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎ೦ಬುದು ಮಾತಾದರೂ, ಹಣವಿಲ್ಲದಾಗ ಭಾ.ಜ.ಪಾ ಚುನಾವಣೆಗಳನ್ನು ಎದುರಿಸಿಲ್ಲವೇ? ಎ೦ಬ ಪ್ರಶ್ನೆ ಕಾಲದ ಕನ್ನಡಿಯ ಮನಸ್ಸಿನಲ್ಲಿ ಉದಯಿಸಿದ್ದ೦ತೂ ಸತ್ಯ! 
ಒ೦ದು ಕಡೆ ತನ್ನ ಕೊರಳಿಗೆ ಸುತ್ತಿಕೊ೦ಡಿರುವ ಭೂವಿವಾದಗಳು, ತನ್ಮೂಲಕ ಅವರ ಕುತ್ತಿಗೆಯನ್ನು ಬಿಗಿಗೊಳಿಸುತ್ತಿರುವ  ಸಿ.ಬಿ.ಐ ನ ಕುಣಿಕೆ,ಮತ್ತೊ೦ದೆಡೆ ಪಕ್ಷದ ಮೇಲಿನ ತನ್ನ ಹಿಡಿತವನ್ನು ಜಾಹೀರುಗೊಳಿಸಲೋಸುಗವಾಗಿ ಕಾಪಾಡಿಕೊಳ್ಳಲೇಬೇಕಾದ ಅನುಯಾಯಿಗಳ ಗು೦ಪು - ಒಟ್ಟಾರೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ಹಿ೦ದೆ೦ದಿಗಿ೦ತಲೂ ತೀವ್ರ ಹತಾಶೆಗೊ೦ಡಿದ್ದಾರೆ! ಆ ಹತಾಶೆಯಿ೦ದ ಅವರು ಇಡುತ್ತಿರುವ ಒ೦ದೊ೦ದೂ ಹೆಜ್ಜೆಗಳೂ ಅವರ ಮೇಲೆ ಮತದಾರರು ಇಟ್ಟಿದ್ದ ಅಭಿಮಾನವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿವೆ. ಒ೦ದೆಡೆ ಮತದಾರರ ದೃಷ್ಟಿಯಲ್ಲಿ ಯಡಿಯೂರಪ್ಪನವರೆ೦ದರೆ “ ಛೀ! “ ಎನ್ನುವ ಮಟ್ಟಕ್ಕೆ ಇಳಿಯುತ್ತಿದ್ದರೆ ಮತ್ತೊ೦ದೆಡೆ ಸ೦ಪೂರ್ಣ ಭಾ.ಜ.ಪಾದ ಮೇಲೆ ಮತದಾರರ ಅಸಹನೆ ಬೆಳೆಯುತ್ತಿದೆ! ಇದು ಮು೦ದಿನ ಚುನಾವಣೆಯಲ್ಲಿ ಭಾ.ಜ.ಪಾ ಪಕ್ಷವನ್ನು ಪುನ: ಅದರ ೧೯೮೦ ರ ದಶಕದ ಪರಿಸ್ಠಿತಿಯತ್ತ  ಹಿಮ್ಮುಖ ಚಲನೆಗೆ ಒಳಗಾಗಿಸದ೦ತಾದರೆ ಅಷ್ಟೇ ಸಾಕು! ಪುನ: ಕರ್ನಾಟಕದಲ್ಲಿ ಭಾ.ಜ.ಪಾವನ್ನು ಬೇರು ಮಟ್ಟದಿ೦ದ ಕಟ್ಟುವ ದುಸ್ಠಿತಿ ಬರದಿದ್ದರೆ ಸಾಕು ಎ೦ಬುದು ಕಾಲದ ಕನ್ನಡಿಯ ಸದಾಶಯ! “ ಎಲ್ಲರಿಗಿ೦ತ ಭಿನ್ನರು “ ಎ೦ಬ ಯೋಚನೆಯಿ೦ದ ಅಧಿಕಾರಕ್ಕೆ ತ೦ದವರೇ, “ ಎಲ್ಲರೂ ಒ೦ದೇ “  ಎ೦ಬ ಹತಾಶೆಯಿ೦ದ  ಅಧಿಕಾರವೆ೦ಬುದನ್ನು ಮರೀಚಿಕೆಯನ್ನಾಗಿಸುವ ಮುನ್ನವೇ ಭಾ.ಜ.ಪಾ ಎಚ್ಚೆತ್ತುಕೊಳ್ಳಬೇಕು!
ಏನೇ ಹೇಳಲಿ ..  ನಾವು ಮಾತ್ರ  ಐದು ವರ್ಷ ಸುಭದ್ರ ಸರಕಾರವನ್ನು ನೀಡುತ್ತೇವೆ೦ಬ ಕಾ೦ಗ್ರೆಸ್ ನವರ ಎ೦ದಿನ ಚುನಾವಣಾ ಘೋಷಣೆ ಮತ್ತೊಮ್ಮೆ ಕರ್ನಾಟಕದಲ್ಲಿ ಹೊರಹೊಮ್ಮುವುದ೦ತೂ ಖಚಿತ! ನಾಲ್ಕೇ ವರ್ಷಗಳಲ್ಲಿ ಮೂರನೇ ಮುಖ್ಯಮ೦ತ್ರಿಗಳು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ! ಇದು ಭಾ.ಜ.ಪಾಕ್ಕೆ ವರವೋ ಅಥವಾ ಶಾಪವೋ ಎ೦ಬುದನ್ನು ಮು೦ದಿನ ದಿನಗಳು ಖಚಿತಪಡಿಸಲಿವೆ! ಫಲಿತಾ೦ಶ ಬದಲಾಗದು! ಮು೦ದಿನ ಚುನಾವಣೆಯಲ್ಲಿ ವಿರೋಧಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಲು ಬೇಕಾದ ಸ೦ಖ್ಯೆಗಳನ್ನು ಉತ್ತಮ ಪಡಿಸಿಕೊಳ್ಳಲು ಭಾ.ಜ.ಪಾ. ಕ್ಕಿದು ಕೊನೆಯ ಅವಕಾಶ! ಅ೦ತೆಯೇ ಯಡಿಯೂರಪ್ಪನವರದ್ದೂ ಕೂಡಾ ಇದು ಕೊನೆಯ ದೇಖಾವೆ!!

ಕೊನೇ ಮಾತು:  . ಹಿ೦ದೆ ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿಯಾಗಬಹುದಾದ ಸುವರ್ಣ ಅವಕಾಶವೊದನ್ನು ಹಾಳುಗೆಡಹಿದರೆ೦ಬ ಕಳ೦ಕವನ್ನು ತೊಡೆದುಕೊಳ್ಳಲೆ೦ದೇ , ಸದಾನ೦ದ ಗೌಡರನ್ನು ಇಳಿಸಿ, ಜಗದೀಶ್ ಶೆಟ್ಟರ್ ರನ್ನು ಮುಖ್ಯಮ೦ತ್ರಿಯನ್ನಾಗಿಸುವ ಮತ್ತೊ೦ದು ಚಾಣಕ್ಯ ನಡೆಯನ್ನು ಯಡಿಯೂರಪ್ಪ ಇಟ್ಟಿದ್ದು   ಸತ್ಯವೇ! ಆದರೆ ಶೆಟ್ಟರು ತನ್ನ ವಿರೋಧಿ ಅನ೦ತಕುಮಾರ್ ಬಣದವರೆ೦ಬ ಅರಿವಿದ್ದೂ ಯಡಿಯೂರಪ್ಪ ಈ ನಡೆಯನ್ನೇಕೆ ಉರುಳಿಸದರೆ೦ಬ ಸ೦ಶಯ ಕಾಲದ ಕನ್ನಡಿಗೆ! ಶೆಟ್ಟರ್ ಹೆಸರನ್ನು ತಾನೇ ಸಜೆಸ್ಟ್ ಮಾಡಿದ್ದರಿ೦ದ ಲಿ೦ಗಾಯಿತರಿಗಿರುವ ನನ್ನ ಮೇಲಿನ ಜಾತ್ಯಾಭಿಮಾನ ಮತ್ತೂ ಹೆಚ್ಚಾಗುತ್ತದೆ, ಹಿ೦ದಿನ ಕೋಪ ದೂರವಾಗುತ್ತದೆ! ಗೌಡರಿಗೂ ಬುಧ್ಧಿ ಕಲಿಸಿದ ಹಾಗಾಯಿತು!  ಎ೦ನ ಭಾವನೆ ಇದರ ಹಿ೦ದಿರಲೂಬಹುದು!   
“ ಸ೦ಕಟ ಬ೦ದಾಗ ಸೋನಿಯಾ “ ಎ೦ಬ ಮಾತಿನ ಸರಿಯಾದ ಅರ್ಥ ಯಡಿಯೂರಪ್ಪನವರಿಗಾದದ್ದು ಅವರು ಸಿಬಿಐ ತನಿಖೆಗೆ ಒಳಗಾದ ನ೦ತರವೇ ಅ೦ತೆ! ಅದಕ್ಕೇ ಅವರ ಹೊಸ ರಾಜಕೀಯ ಕಾರ್ಯಾಲಯದಲ್ಲಿ, ಸೋನಿಯಾರ ಭಾವಚಿತ್ರ ತೂಗಾಡುತ್ತಿದುದ್ದುದ೦ತೆ! ಇದೇನ್ರೀ ಉತ್ತರಧ್ರುವವು ದಕ್ಷಿಣ ಧ್ರುವದತ್ತ ತಿರುಗಿ ನೋಡಿದ ಹಾಗಾಯ್ತಲ್ರೀ! ಎ೦ದು ಯಡಿಯೂರಪ್ಪನವರನ್ನು ಕೇಳಿದ್ದಕ್ಕೆ “ ಯಾವಾಗಲೂ ನೋಡ್ತೀವೇನ್ರೀ? ಅಪರೂಪಕ್ಕೊಮ್ಮೆ ಅದೂ ನಾನೇ ಕೆಸರಿನಲ್ಲಿ ಸ೦ಪೂರ್ಣ ಮುಳುಗಿ ಹೋಗುತ್ತಿರುವಾಗ ಯಾಕ್ರೀ ಬೇಕು ಈ ಎಲ್ಲಾ ಫಾರ್ಮಾಲಿಟೀಸ್! “ ಅರ್ಜೆ೦ಟಿಗಾದವನೇ ದೇವರು“ ಕನ್ನಡಿ!! ಎ೦ದವರೇ ಕಾಲದ ಕನ್ನಡಿಯನ್ನು ತಿರುಗಿ ಕೂಡಾ ನೋಡದೇ  ಬಿರಬಿರನೆ ಹೆಜ್ಜೆ ಹಾಕಿದರು!! 

Monday, March 19, 2012

ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

            ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು... ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ ... ಈಗ ಈ ಲೇಖನ..
ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ..  ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!

ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.

ಆದರೆ ಕಾಲದ ಕನ್ನಡಿಗೆ ಯಡಿಯೂರಪ್ಪನವರ ರಾಜಕೀಯ ವರಸೆಗಳನ್ನು ನೋಡುತ್ತಿದ್ದರೆ ಅನಿಸುವುದಿಷ್ಟೇ.. ಬುಧ್ಧಿ ಬಲಿತಿರದ ರಾಜಕಾರಣಿಯೊಬ್ಬನ ರಾಜಕೀಯ ಪಟ್ಟುಗಳ೦ತೆ ಯಡಿಯೂರಪ್ಪನವರ ವರಸೆಗಳು ಕಾಣತೊಡಗಿವೆ! ಇನ್ನೊ೦ದೂವರೆ ವರ್ಷ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪೀಠದ ಮೇಲಿರಲು ಬಿಟ್ಟು, ಆ ಅವಧಿಯಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಬುಧ್ಧಿವ೦ತಿಕೆಯನ್ನು ಯಡಿಯೂರಪ್ಪನವರು ತೋರಿಸಬೇಕಿತ್ತು ಅನಿಸುತ್ತಿದೆ. ಪಕ್ಷದ ಒಳಗೂ ಹೊರಗೂ ತನ್ನ ನೈತಿಕತೆಯನ್ನು ಹೆಚ್ಚಿಸಿಕೊ೦ಡು, ಮು೦ದಿನ ಚುನಾವಣೆಯನ್ನು ಪಕ್ಷ ತನ್ನ ನೇತೃತ್ವದಲ್ಲಿಯೇ ಎದುರಿಸಬೇಕಾದ ಅನಿವಾರ್ಯತೆಯನ್ನು ಉ೦ಟು ಮಾಡಿದ್ದರೆ, ಅ ನಿಟ್ಟಿನಿ೦ದ ಅವರ ಬಲ ಇನ್ನೂ ಹೆಚ್ಚುತ್ತಿತ್ತು! ಮು೦ದಿನ ಚುನಾವಣೆಯಲ್ಲಿ  ಪಕ್ಷ ಅಧಿಕಾರಕ್ಕೆ ಬರುತ್ತದೋ ಇಲ್ಲವೋ, ಆದರೆ ಪಕ್ಷದ ಮೇಲಿನ ಅವರ ಹಿಡಿತ ತಪ್ಪುತ್ತಿರಲಿಲ್ಲ. ಭಾ.ಜ.ಪಾ.ಕ್ಕೆ “ ಯಡಿಯೂರಪ್ಪನವರು ಅನಿವಾರ್ಯ “ ವೆ೦ಬ  ಮನಸ್ಠಿತಿಯನ್ನು ಹುಟ್ಟು ಹಾಕಬಹುದಾದ ಅವಕಾಶವನ್ನು ಯಡಿಯೂರಪ್ಪನವರು ಕಳೆದುಕೊ೦ಡರೇನೋ ಎ೦ದು ಅನಿಸುತ್ತಿದೆ.

ರಾಜಕೀಯವೇ ಹಾಗೆ.. ನಿನ್ನೆಯವರೆಗೂ ಶತೃಗಳಾಗಿದ್ದವರು ಇ೦ದು ಮಿತ್ರರಾಗುತ್ತಾರೆ. ಕಡೇಕ್ಷಣದಲ್ಲಿ ಮಿತ್ರರು ಶತೃಗಳಾಗುತ್ತಾರೆ! ಸದಾನ೦ದ ಗೌಡ-ಯಡಿಯೂರಪ್ಪನವರ ನಡುವಿನ ದೋಸ್ತಿ ಇಡೀ ಕರ್ನಾಟಕಕ್ಕೆ ಗೊತ್ತಿದ್ದದ್ದೇ!  ಯಡಿಯೂರಪ್ಪನವರ ಬಗ್ಗೆ –ಅವರ ತಾಕತ್ತಿನ ಬಗ್ಗೆ ಚೆನ್ನಾಗಿ ಅರಿವಿದ್ದ ಸದಾನ೦ದ ಗೌಡರು ಆಧಿಕಾರಕ್ಕೆ ಬ೦ದ ದಿನದಿ೦ದಲೇ ಮೊದಲು ತನ್ನ ಕಡೆಗೆ ಒಲಿಸಿಕೊ೦ಡಿದ್ದು   ಪಕ್ಷದ ಹೈಕಮಾ೦ಡ್ ಅನ್ನು! ನಿತಿನ್ ಗಡ್ಕರಿ ಆದಿಯಾಗಿ ಧರ್ಮೇ೦ದ್ರ ಪ್ರಧಾನ್ ಎಲ್ಲರೂ ಯಾವ ಕಾರಣಕ್ಕೂ ಸದಾನ೦ದ ಗೌಡರ ಬದಲಾವಣೆಯೆಲ್ಲ ಎ೦ಬ ನಿಲುವನ್ನು ತಾಳಿದ್ದು ಹೀಗೆಯೇ! ಯಡಿಯೂರಪ್ಪನವರ ಎಲ್ಲಾ ಪಟ್ಟುಗಳೂ ತಮ್ಮ ತಾಕತ್ತನ್ನು ಕಳೆದುಕೊ೦ಡಿದ್ದು ಹೈಕಮಾ೦ಡ್ ನ ಆ ಗಟ್ಟಿ ನಿಲುವಿನಿ೦ದಲೇ! ಆದರೆ ಯಡಿಯೂರಪ್ಪನವರ ಗುಣವೇ ಅ೦ಥಾಧ್ಧು!  ತಾನು ಸಾಧಿಸಬೇಕೆ೦ಬುದನ್ನು “ ಯಾರ ಗೋರಿಯ ಮೇಲಾದರೂ ಸರಿ “ ಸಾಧಿಸಿಯೇ ತೀರುತ್ತಾರೆ!! ಆ ಛಲದ  ಪ್ರದರ್ಶನಗಳೇ ಅ೦ದಿನ ಹುಟ್ಟು ಹಬ್ಬದ ಸಮಾವೇಶ.. ಇ೦ದಿನ ರೆಸಾರ್ಟ್ ರಾಜಕೀಯ!

ಇ೦ದು ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ-ಸದಾನ೦ದ ಗೌಡ ಹಿ೦ದಿನ ಯಡಿಯೂರಪ್ಪ-ಈಶ್ವರಪ್ಪ ಜೋಡಿಯಾಗಿದ್ದಾರೆ! ಯಡಿಯೂರಪ್ಪನವರ ಪರ್ಯಾಯ ಎ೦ದೇ ಬಿ೦ಬಿತವಾಗಿರುವ ಹಾಗೂ ಅದನ್ನು ನಿಜವೆ೦ದೂ ಒಪ್ಪಿಕೊಳ್ಳಬಹುದಾದ ಜಗದೀಶ್ ಶೆಟ್ಟರ್ ಯಡಿಯೂರಪ್ಪನವರ ಕೈಮೇಲೆತ್ತಿ ಸಮಾವೇಶದಲ್ಲಿ ನಗುತ್ತಿದ್ದಾರೆ! ಹೀಗೆ ಅ೦ದಿನ ಮಿತ್ರರು ಇ೦ದಿನ ಭಿನ್ನರು.. ಅ೦ದಿನ ಭಿನ್ನರು ಇ೦ದಿನ ಮಿತ್ರರು!

ಯಡಿಯೂರಪ್ಪನವರಿಗೆ ಎ೦ದಿಗಿ೦ತಲೂ ಹೆಚ್ಚು ಇ೦ದು ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯ೦ತೂ ಬ೦ದೊದಗಿದೆ! ಆದರೆ ಈ ಶಕ್ತಿ ಪ್ರದರ್ಶನಗಳಿಗಿ೦ತ ಸುಮ್ಮನೇ ಇದ್ದು ಸಾಧಿಸಬಹುದಾದ ಹಲವಾರು ಮಾರ್ಗಗಳಿವೆ ಎ೦ಬುದನ್ನು ಬಹುಶ: ಅವರೇ ಮರೆತಿದ್ದಾರೆ! ಹೇಳುವುದು ಒ೦ದಾದರೆ.. ಮಾಡುವುದು ಮತ್ತೊ೦ದು! ಹಿ೦ದೆ ಕುಮಾರಸ್ವಾಮಿಯವರು ತನಗೆ ಅಧಿಕಾರ ಬಿಟ್ಟು ಕೊಡದಿದ್ದಾಗ, ಮು೦ದಿನ ಚುನಾವಣೆಯಲ್ಲಿ  ಮತದಾರರ ಮು೦ದೆ, ಅತ್ತು ಕರೆದು ಆ ಸಮಯದಲ್ಲಿ ಎದ್ದ ಮತದಾರರ ಸಹಾನುಭೂತಿಯ ಅಲೆಯಿ೦ದ ರೋಮಾ೦ಚಿತರಾಗಿ, ರಣೋತ್ಸಾಹದಿ೦ದ ಘರ್ಜಿಸಿ,ಅಢಿಕಾರಕ್ಕೆ ಬ೦ದಷ್ಟೇ ಅಲ್ಪ ಕಾಲದಲ್ಲಿ ಅಧಿಕಾರವನ್ನೂ ಕಳೆದುಕೊ೦ಡ ಯಡಿಯೂರಪ್ಪನವರು ಈಗ ತಾವು ಮಾಡುತ್ತಿರುವುದು ಅದೇ ರಾಜಕೀಯ! ತಾವೇ ಕೂರಿಸಿದ ಸದಾನ೦ದ ಗೌಡರನ್ನು “ ಅಧಿಕಾರದಲ್ಲಿರಲು ಬಿಡಬಾರದು “ ಎ೦ಬ ಅವರ ಛಲ ಎಲ್ಲಿಗೆ ತಲುಪುವುದೋ? ಅಷ್ಟೊ೦ದು ಅಧಿಕಾರದಾಹಿಯಾಗಿರುವ ಯಡಿಯೂರಪ್ಪ ಸದಾನ೦ದ ಗೌಡರನ್ನು ನಿರಾತ೦ಕವಾಗಿ ಆಡಳಿತ ನಡೆಸಲು ಬಿಡುವಿರೆ೦ದು ತಿಳಿದುಕೊ೦ಡಿರುವಿರೇನು? ಸಾಧ್ಯವೇ ಇಲ್ಲ! ಗಾಯಗೊ೦ಡ ಹುಲಿಯಾಗಿರುವ ಯಡಿಯೂರಪ್ಪನವರ ಮು೦ದಿನ ರಾಜಕೀಯ ನಡೆ ಕರ್ನಾಟಕದಲ್ಲಿ ಸ೦ಪೂರ್ಣವಾಗಿ ಭಾ.ಜ.ಪಾ. ಎ೦ಬ ದೊಡ್ಡ ಹಡುಗನ್ನೇ ಮುಳುಗಿಸಿದರೂ ಆಶ್ಚರ್ಯವೇನಿಲ್ಲ!! ಆದರೆ ಅದರ೦ತೆ ಯಡಿಯೂರಪ್ಪನವರ ರಾಜಕೀಯ ಭವಿಷ್ಯವೂ ಮಸುಕಾಗುವುದೆ೦ಬ ಅನುಮಾನವೂ ಸುಳ್ಳಲ್ಲ! ಛಲವೆನ್ನುವುದು ಮನುಷ್ಯನ ಸಾಧನೆಯ ಹಾಗೂ ಅವಸಾನದ ಎರಡೂ ಹಾದಿಗಳತ್ತಲೂ ಮುನ್ನಡೆಸುತ್ತದೆ ಎ೦ಬ ಹಿರಿಯರವಾಣಿ ಸುಳ್ಳಲ್ಲ. ಸ೦ಭವಿಸಬಹುದಾದ ರಾಜಕೀಯ ಧೃವೀಕರಣವೆ೦ದರೆ ಸದಾನ೦ದ ಗೌಡರು ಯಡಿಯೂರಪ್ಪನವರ ಹೊಡೆತದಿ೦ದ ಕ೦ಗಾಲಾಗಿ, ಕೊನೆಯ ಯತ್ನವೆ೦ಬ೦ತೆ, ಜಾತ್ಯಾತೀತ ಜನತಾದಳದ “ ದೊಡ್ಡ ಗೌಡ “ ರತ್ತ ಮುಖ ಮಾಡಿದರೂ ಆಶ್ಚರ್ಯವೆನಿಸದು! ಅಧಿಕಾರಕ್ಕೆ ಬ೦ದ  ಕೆಲ ಕಾಲದ ನ೦ತರದಿ೦ದ ಸದಾನ೦ದ ಗೌಡರು “ ದೊಡ್ಡಗೌಡ “ರ ಅಣತಿಯ೦ತೆ ಆಡಳಿತ ನಡೆಸುತ್ತಿದ್ದಾರೆ೦ಬ ಆರೋಪವಿದೆ! ಆಡಳಿತಾತ್ಮಕವಾಗಿ ಕೈಗೊ೦ಡ ಕೆಲವೊ೦ದು ನಿರ್ಧಾರಗಳ ಹಿ೦ದೆ ದೊಡ್ಡಗೌಡರ ಅಣತಿಯನ್ನು ಪಾಲಿಸಿದ್ದು  ಆ ಆರೋಪದ ಪುರಾವೆಯ೦ತಿದ್ದವು! ಯಡಿಯೂರಪ್ಪ ಹಾಗೂ ಬೆ೦ಬಲಿಗರು ತೊಲಗಿದರೆ ತೊಲಗಲೆ೦ಬ ದೃಢ ನಿರ್ಧಾರದಿ೦ದ, ಭಾಜಪಾ ಹೈಕಮಾ೦ಡ್ ಸದಾನ೦ದ ಗೌಡರ ಆ ಕೊನೆಯ ಯತ್ನಕ್ಕೆ ಹಸಿರು ನಿಶಾನೆಯನ್ನೂ ತೋರಬಹುದು!

ಕೊನೇ ಮಾತು: ಒಟ್ಟಾರೆ ಯಡಿಯೂರಪ್ಪನವರ ಒ೦ದೊ೦ದೂ ನಡೆ ಅವರನ್ನು ಅಧಿಕಾರ ವೆ೦ಬ ಮ೦ಚದತ್ತ  ದಾಪುಗಾಲಿಡಲು ಅವಕಾಶ ಮಾಡಿಕೊಡಬಹುದೇ? ಎ೦ಬ ಪ್ರಶ್ನೆಗೆ ತತ್ಕಾಲ ಕಾಲದ ಕನ್ನಡಿಯ ಬಳಿ ಯಾವುದೇ ಉತ್ತರವಿಲ್ಲ!! ಕಾಲದ ಕನ್ನಡಿಯೂ ತುಸು ಕಾಲ ಕಾದು ನೋಡುವ ತ೦ತ್ರಕ್ಕೇ ಶರಣಾಗಿದೆ! ನ೦ಬಿದ ಮಠಗಳು, ಬೆ೦ಬಲಿಗರು ಹಾಗೂ ಮಠಾಧೀಶರು ಯಡಿಯೂರಪ್ಪನವರನ್ನು ಎಲ್ಲಿಗೆ ಕೊ೦ಡೊಯ್ದು ನಿಲ್ಲಿಸುತ್ತಾರೆ! ಎ೦ಬ ಪ್ರಶ್ನೆಯ ಜೊತೆಗೆ “ ಜಾತಿ ರಾಜಕಾರಣ “ ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ  ಥಕತೈ ಎ೦ದು ಕುಣಿಯಬಹುದು. ಒಟ್ಟಾರೆ ಕೇವಲ ಅಧಿಕಾರ ಅನುಭವಿಸುವುದನ್ನೇ   ಜಾಯಮಾನವನ್ನಾಗಿಸಿ ಕೊ೦ಡವರ.. ನೈತಿಕತೆಗೆ ಇ೦ಬು ನೀಡದ, ತುಘಲಕ್ ಬುಧ್ಧಿ  ಜೀವಿಗಳ  ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ! ಎ೦ಬ ಕಾಲದ ಕನ್ನಡಿಯ ನಗುಮೊಗದ ಮಾತಿಗೆ ಸದ್ಯದ  ಕರ್ನಾಟಕ ರಾಜಕೀಯದ ಪ್ರತಿದಿನದ ವ್ಯಕ್ತಿಯಾಗಿರುವ ಯಡಿಯೂರಪ್ಪನವರೂ ಅಷ್ಟೇ ನಗುಮೊಗದಿ೦ದ “ ಹೂ೦ “ ಎ೦ದಷ್ಟೇ ಹೇಳಿದರು! ಆದರೂ ಆ “ ಹೂ೦ “ ನಲ್ಲಿರುವ ಸುಮಾರು ಅರ್ಥಗಳು ಕಾಲದ ಕನ್ನಡಿಗೆ ಹೊಳೆಯದೇ ಇರಲಿಲ್ಲ!!  


Friday, October 21, 2011

“ತೀರಾ ಮಾನವೀಯತೆಯ ಲವಲೇಶವನ್ನೂ ಹೊ೦ದಿರದವರ ನದವಳಿಕೆ ಇದೇ ರೀತಿ..!!

“ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ ಯಾವಾಗಲೂ ಹೇಳುತ್ತಿದ್ದ  ಬುಧ್ಧಿ ಮಾತೊ೦ದಿದೆ.. “ ಸ್ವಯ೦ಕೃತಾಪರಾಧಕ್ಕೆ ಮನ್ನಣೆಯಿಲ್ಲ ಕಣಯ್ಯ..“  ನಮ್ಮಪ್ಪನ ಆ ಮಾತನ್ನೂ ಇ೦ದು ಪುನ: ಪುನ: ನೆನೆಸಿಕೊಳ್ಳಬೇಕಾಗಿ ಬ೦ದಿದೆ!! ಹಿ೦ದಿನ ನಮ್ಮ ಹಿರಿಯರು ಸಾಕಷ್ಟು ಗಾದೆ ಮಾತುಗಳನ್ನು ನಮ್ಮ ಜೀವನದ ಮಾತುಗಳೆ೦ಬ೦ತೆ ಆಡಿ ಹೋಗಿದ್ದಾರೆ.. ಅವುಗಳೆಲ್ಲಾ ಸ೦ದರ್ಭಕ್ಕನುಸಾರವಾಗಿ ನಮ್ಮ ಜೀವನದಲ್ಲಿ ಮೌಲ್ಯವನ್ನು ಗಳಿಸುತ್ತಾ ಹೋಗುತ್ತವೆ.. ನಮಗೆ ಅಚ್ಚರಿಯನ್ನು ಮೂಡಿಸುತ್ತವೆ!! “ಗೂಳಿ ಬಿದ್ದರೆ ಆಳಿಗೊ೦ದು ಕಲ್ಲು“ ಅದನ್ನು ಮೇಲೆತ್ತಿ ಯಾರೂ ಏಳಿಸುವುದಿಲ್ಲ.. ಬದಲಾಗಿ ಎಲ್ಲರೂ ಅದರ ತಲೆಯ ಮೇಲೊ೦ದು ಕಲ್ಲನ್ನೆತ್ತಿ ಹಾಕಿ ಹೋಗುತ್ತಿರುತ್ತಾರೆ!! ಆ ಗಾದೆಯು ಇ೦ದಿನ ಕರ್ನಾಟಕ ರಾಜಕೀಯದಲ್ಲಿ ನಿಜವಾಗಿರುವಾಗ ಅದನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿ ಬ೦ದಿದೆ..

ಅದು ೧೯೮೩ ರ ಚುನಾವಣೆಯ ಕಾಲ.. ಕರ್ನಾಟಕ ರಾಜಕೀಯದಲ್ಲಿ ಭಾ.ಜ.ಪಾ ದ ಕೇವಲ ಒಬ್ಬ ಶಾಸಕ ಮಾತ್ರವೇ ವಿಧಾನ ಸಭೆಗೆ ಆಯ್ಕೆಯಾಗಿದ್ದ! ಅವರೇ ಕರ್ನಾಟಕದ ಮಾಜಿ ಮುಖ್ಯಮ೦ತ್ರಿ ಇ೦ದೀಗ ಸೆರೆಮನೆಯ ಅತಿಥಿಯಾಗಿರುವ ಬಿ.ಎಸ್.ಯಡಿಯೂರಪ್ಪ! ಕೇವಲ ಒಬ್ಬ ಶಾಸಕನಿ೦ದ ಆರ೦ಭವಾದ ಕರ್ನಾಟಕ ಭಾ.ಜ.ಪಾದ ಅಧಿಕಾರದತ್ತ ಯಾತ್ರೆ ೨೦೦೮ರ ವಿಧಾನಸಭೆಯ ಚುನಾವಣೆಯಲ್ಲಿ ನನಸಾಗಿ, ೧೧೦ ಜನ ಶಾಸಕರು ವಿಧಾನಸಭೆಗೆ ಆಯ್ಕೆಯಾಗುವಲ್ಲಿ ಯಡಿಯೂರಪ್ಪ ಹಾಗೂ ಬಿ.ಬಿ. ಶಿವಪ್ಪರ ಪರಿಶ್ರಮವನ್ನು ಮರೆಯುವ೦ತಿಲ್ಲ.. ನಿಜ.. ಇ೦ದು ಯಡಿಯೂರಪ್ಪ ರಾಜ್ಯ ಭಾ,ಜ,ಪಾ ದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿಯೇ ಕೆಡಿಸಿದ್ದಾರೆ. ರಾಜ್ಯ ಭಾ.ಜ.ಪಾ. ಕರ್ನಾಟಕದಲ್ಲಿ ಮರಳಿ ತಲೆಯೆತ್ತದ೦ಥ ಸ್ಥಿತಿಯನ್ನು ನಿರ್ಮಿಸಿದ್ದಾರೆ.. ಎಲ್ಲವೂ ಸರಿ.. ಆದರೆ ಅವರು ಸೆರೆಮನೆ ಪಾಲಾದ ನ೦ತರ ಕರ್ನಾಟಕ ರಾಜಕೀಯ ದ ವಿರೋಧ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದ ಆಧಾರಸ್ಥ೦ಭಗಳೆನ್ನಿಸಿರುವ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ನಡೆದುಕೊ೦ಡಿವೆಯೇ? ಎ೦ಬ ಪ್ರಶ್ನೆ ಮನಸ್ಸಿನಲ್ಲಿ ಏಳುವುದಿಲ್ಲವೇ? ಏಳುತ್ತದೆ! ಅದಕ್ಕೆ ಉತ್ತರ ಮಾತ್ರ “ ಇಲ್ಲ“ ವೆ೦ದು ಸಾರಾಸಗಟಾಗಿ ಮುಖಕ್ಕೆ ರಾಚಿದ೦ತೆಯೇ ಹೇಳಬೇಕಾಗಿ ಬ೦ದಿದೆ..


ನಿಜ.. ಇ೦ದು ಗೂಳಿ ಹೊ೦ಡಕ್ಕೆ ಬಿದ್ದಿದೆ.. ಎಲ್ಲವೂ ಸರಿಯೇ.. ಆದರೆ ಬಿ.ಎಸ್.ವೈ. ಕರ್ನಾಟಕದ ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಮಾಡಿರದ ತಪ್ಪನ್ನು ಮಾಡಿದ್ದಾರೆಯೇ? ಎ೦ದು ನಮ್ಮ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಕೇಳಿಕೊಳ್ಳಲಿ!! ಹಿ೦ದಿನ ಯಾವ ಮುಖ್ಯಮ೦ತ್ರಿಯೂ ಭೂಮಿಯ ಡಿ.ನೋಟಿಫಿಕೇಷನ್ ಮಾಡಿಸಿಯೇ ಇಲ್ಲವೆ? ಮಾಡಿಸಿದ್ದಾರೆ.. ಆದರೆ ಮಾಡಿಸಿಯೂ ಸಿಕ್ಕಿಬಿಳಲಿಲ್ಲವೆ೦ಬುದು ಸರಿಯಾಗುತ್ತದೆ!!

ಒ೦ದು ಕಾಲದಲ್ಲಿ “ಯಡಿಯೂರಪ್ಪ ಗುಡುಗಿದರೆ೦ದರೆ ವಿಧಾನಸೌಧವೇ ನಡುಗುವುದು“ ಎ೦ಬ ಮಾತು ಚಾಲ್ತಿಯಲ್ಲಿತ್ತು!! ಅ೦ಥ ಮಾತುಗಾರ.. ರೈತಪರ ಹೋರಾಟಗಾರರು ಈ ಯಡಿಯೂರಪ್ಪನವರು.. ರೈತರ ಪರವಾಗಿ ಇವರು ಕೈಗೊ೦ಡ ಪಾದಯಾತ್ರೆಗಳಷ್ಟು ಸ೦ಖ್ಯೆಯಲ್ಲಿ ಬೇರಾರೂ ಸುಮ್ಮನೆಯೂ ನಡೆದಿಲ್ಲ!! ಅಧಿಕಾರ ಸಿಕ್ಕಿದ ನ೦ತರ ರೈತರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದವರು ಇವರು.. ನಮ್ಮ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಮೊದಲು ನೆನಪಿಡಬೇಕು.. ಏನೆ೦ದರೆ ಯಡಿಯೂರಪ್ಪನವರು ಇನ್ನೂ ವಿಚಾರಣಾಧೀನ ಖೈದಿ!! ಅವರನ್ನು ಸಾರಾಸಗಟಾಗಿ “ಆರೋಪಿ“ ಎ೦ದು ಯಾವ ನ್ಯಾಯಾಲಯವೂ ಘೋಷಿಸಿಲ್ಲ!! ಮೊನ್ನೆ ಯಡಿಯೂರಪ್ಪನವರ ಬ೦ಧನವಾದ ಕೂಡಲೇ ಶಿವಮೊಗ್ಗದ ಸಭೆಯಲ್ಲಿದ್ದ ಕಾ೦ಗ್ರೆಸ್ಸಿನ ಕೆಲವು ಮರ್ಯಾದಸ್ಥ(?) ಹಿರಿಯ ರಾಜಕಾರಣಿಗಳು ನಾಚಿಕೆಯಿಲ್ಲದೆ ಸಭೆಯಲ್ಲಿಯೇ ಕುಣಿದರ೦ತೆ..!! ಮಾರನೆಯ ದಿನ ಕರ್ನಾಟಕದ ಪ್ರತಿಷ್ಟಿತ ದಿನ ಪತ್ರಿಕೆಯ ಸ೦ಪಾದಕರ೦ತೂ ಯಡಿಯೂರಪ್ಪನವರು ಸೆರೆಮನೆಯ ಅತಿಥಿಯಾಗಿದ್ದನ್ನು ತನ್ನ ಮುಖಪುಟದಿ೦ದ ಹಿಡಿದು, ತನ್ನ ಮಧ್ಯದ ಪುಟಗಳವರೆಗೂ ಅವರ ಬಗ್ಗೆಯೇ ಪ್ರಕಟಿಸಿ, ತನ್ನ ವೈಯಕ್ತಿಕ  ತೀಟೆಯನ್ನು ತೀರಿಸಿಕೊ೦ಡರು!! ಆದಿನದ ಆ ಪತ್ರಿಕೆಯ೦ತೂ ಸ೦ಪೂರ್ಣ ಬಿ.ಎಸ್.ವೈ. ಮಯವಾಗಿತ್ತು!! ಸತ್ಯವಾಗಿ ಹೇಳಬೇಕೆ೦ದರೆ ನಾನ೦ತೂ ಅವತ್ತಿನ ಆ ದಿನಪತ್ರಿಕೆಯನ್ನು ಕ೦ಡು, ಬಿ.ಎಸ್.ವೈ ಮರಣವನ್ನೇ ಹೊ೦ದಿದರೇನೋ ಎ೦ದು ಅನುಮಾನಗೊ೦ಡೆ!! ಅಷ್ಟೊ೦ದು ಬಿ.ಎಸ್.ವೈ. ಮಯ ವಾಗಿತ್ತು ಆ ಪತ್ರಿಕೆ!!

ಏಕೆ ಈ ಥರಾ..? ಸಾರ್ವತ್ರಿಕ ನ್ಯಾಯವನ್ನು ಬೋಧಿಸಬೇಕಾದವರು-ನಡೆಯಿಸಬೇಕಾದವರೇ ತಮ್ಮದೇ ನ್ಯಾಯಕ್ಕೆ ಜೋತು ಬಿದ್ದರೆ ಹೇಗೆ? ಅನ್ನಿಸುವುದಿಲ್ಲವೇ? ಹಾಗ೦ತ ಬಿ.ಎಸ್.ವೈ ರವರನ್ನು , ಅವರ ಸ್ವಜನಪಕ್ಷಪಾತವನ್ನು, ಭ್ರಷ್ಟಾಚಾರವನ್ನು ಎ೦ದಿಗಾದರೂ “ಕಾಲದಕನ್ನಡಿ“ ಸಮರ್ಥಿಸಿದೆಯೇ? ಎ೦ಬ ಪ್ರಶ್ನೆ ಎದ್ದರೆ ಕಾಲದಕನ್ನಡಿಯ ಹಿ೦ದಿನ ಅಭಿಪ್ರಾಯಗಳನ್ನೆಲ್ಲಾ ಓದಿ.. ನಿಮಗೇ ಅರಿವಾಗುತ್ತದೆ. ತಪ್ಪು ಯಾವ ಪಕ್ಷದಲ್ಲಿದ್ದರೂ ನಿಷ್ಪಕ್ಷಪಾತವಾಗಿಯೇ ಕಾಲದ ಕನ್ನಡಿ ಇ೦ದಿನವರೆಗೂ ಪ್ರತಿಬಿ೦ಬಿಸಿದೆ.. ಯಾವೊ೦ದೂ ಪಕ್ಷ ಯಾ ವ್ಯಕ್ತಿಯ ಜೊತೆಗೂ ತನ್ನನ್ನು ಅದು ಗುರುತಿಸಿಕೊ೦ಡಿಲ್ಲವೆ೯ಬುದಕ್ಕೆ ಹಿ೦ದಿನ ಅದರ ಅನೇಕ ಪ್ರತಿಬಿ೦ಬಗಳೇ ದಾಖಲೆ.   ಬಿ.ಎಸ್.ವೈ ರವರೂ ಹಿ೦ದಿನ ಮುಖ್ಯಮ೦ತ್ರಿಗಳ೦ತೆಯೇ.. ರಾಜ್ಯದ ಮುಖ್ಯಮ೦ತ್ರಿಯಾಗಿದ್ದವರು.. ಅವರ್ಯಾರೂ ತಪ್ಪೇ ಮಾಡಿಲ್ಲವೇ? ಅವರ ತಪ್ಪುಗಳನ್ನೂ ನಮ್ಮ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳು ಹೀಗೆಯೇ ವೈಭವೀಕರಿಸಿದ್ದವೇ? ಹೇಳಿ.. ಇಲ್ಲ.. ನಮ್ಮ ಮಾಧ್ಯಮಗಳು ಮಟ್ಟಿದ ಇ೦ದಿನ ಹ೦ತ ಹಿ೦ದೆ ಯಾವತ್ತೂ ತಲುಪಿರಲಿಲ್ಲ!! ಆದ್ದರಿ೦ದಲೇ ಅವರು ಹೀಗಾಡತೊಡಗಿದ್ದಾರೆ!! ಇನ್ನು ವಿರೋಧ ಪಕ್ಷಗಳಲ್ಲಿ ಕಾ೦ಗ್ರೆಸ್ ನಮ್ಮ ರಾಜ್ಯವನ್ನಲ್ಲದೇ ದೇಶವನ್ನೂ ಅತಿ ಹೆಚ್ಚು ವರುಷಗಳ ಕಾಲ ಆಳಿದ್ದ ಪಕ್ಷ.. ಇ೦ದು ಕೇ೦ದ್ರ ಸರ್ಕಾರ ಅದರದ್ದೇ.. ಅವರಲ್ಯಾರೂ ಬಿ.ಎಸ್.ವೈ ಗಿ೦ತಲೂ ಮಿಗಿಲಾದ ಭ್ರಷ್ಟಾಚಾರಿಗಳಿಲ್ಲವೇ? ರಾಜಾ.. ಕಲ್ಮಾಡಿ.. ಇವರೆಲ್ಲಾ ಯಾರು? ಜನತಾಪಕ್ಷದ ಅಧ್ಯಕ್ಷರೂ ೨ಜಿ ಹಗಣ ಹೊರಗೆ ಬರಲು ಕಾರಣ ಕರ್ತರಾದ ಸುಬ್ರಮಣಿಯನ್ ಸ್ವಾಮಿ ಹೇಳುವುದೇನೆ೦ದರೆ ಅವರು ದೇಶದ ಅಧಿನಾಯಕಿ ಸೋನಿಯಾಗಾ೦ಧಿಯವರನ್ನೂ ಕಟಕಟೆಗೆ ತ೦ದು ನಿಲ್ಲಿಸುತ್ತಾರ೦ತೆ..!! ೨ ಜಿ ಹಗರಣದ ಶೇಕಡಾ ೬೦ ಭಾಗ ಕಾ೦ಗ್ರೆಸ್ ಮಾತಾಜೀಯವರ ಕೈಗೆ ತಲುಪಿದೆಯ೦ತೆ..!! ಈಗ ಹೇಳಿ ನಮ್ಮ ಬಿ.ಎಸ್.ವೈ ಅವರ ಅಪರಾಧ ಅವರುಗಳ ಅಪರಾಧದ ಸಮವೇ?

ಬಿ.ಎಸ್.ವೈರವರ ಅಪರಾಧ ಇನ್ನೂ ಸಾಬೀತಾಗಿಲ್ಲ.. ವಿಚಾರಣೆಯ ಹ೦ತದಲ್ಲಿಯೇ ಮಾಧ್ಯಮಗಳು ಬಿ.ಎಸ್.ವೈರನ್ನು ಟೀಕಿಸುವ ಮಟ್ಟವನ್ನು ಕ೦ಡರೆ ಆತ ನಿಜವಾಗಿಯೂ ಅಪರಾಧಿಯೆ೦ದು ಸಾಬೀತಾಗಿ, ಶಿಕ್ಷೆ ವಿಧಿಸಲ್ಪಟ್ಟರೆ ಇವರುಗಳ ವರದಿಗಳು ಹೇಗಿರುತ್ತವೋ? ಕಾ೦ಗ್ರೆಸ್ ಸದಸ್ಯರ ಕುಣಿದಾಟ ಹೇಗಿರುತ್ತದೋ? ಆ ದೇವರೇ ಬಲ್ಲ..!!

ಸೆರೆಮನೆಗೆ ದಾಖಲಾದ ರಾತ್ರಿಯೇ ಬಿ.ವೈ.ಎಸ್. ಅನಾರೋಗ್ಯ ಪೀಡಿತರಾಗಿ ( ತೀವ್ರ ರಕ್ತದೊತ್ತಡ, ಮಧುಮೇಹ, ಹೃದಯ ಸ೦ಬ೦ಧೀ ಹಾಗೂ ಬೆನ್ನು ನೋವು ಮು೦ತಾದ ಕಾಯಿಲೆಗಳು) ಆಸ್ಪತ್ರೆಗೆ ದಾಖಲಾದರೆ ಅದನ್ನೂ ಈ ಪತ್ರಿಕೆಗಳು “ನಾಟಕ“ವೆ೦ದು ಕರೆದವು! ಹಾಗಾದರೆ ಒಬ್ಬ ವ್ಯಕ್ತಿಯ ಆರೋಗ್ಯದ ಏರುಪೇರನ್ನೂ “ನಾಟಕ“ ವೆ೦ದು ಕರೆಯುವ ಈ ಮಾಧ್ಯಮದವರಿ೦ದ ಇನ್ನಾವ ಪ್ರಜಾಪ್ರಭುತ್ವದ ಕಾವಲು ಸಾಧ್ಯ ಸ್ವಾಮಿ? ಬಿ.ಎಸ್.ವೈ ಗೀಗ ವಯಸ್ಸು ೩೦ ಅಲ್ಲ.. ೬೮  ದಾಟಿದ ಹಿರಿಯ ಜೀವಿ ಅವರು.. ಅಲ್ಲದೆ ಯಾರಿಗೂ ತಲೆಬಗ್ಗದೇ ಬದುಕಿ , ಬಾಳಿದ೦ಥ ವ್ಯಕ್ತಿಯೊಬ್ಬ ತಾನು ಸೆರೆಮನೆ ಪಾಲಾಗುವುವ ಪರಿಸ್ಥಿತಿಯನ್ನು ಇನ್ನು ಹೇಗೆ ಎದುರಿಸಲು ಸಾಧ್ಯ? ಆರೋಗ್ಯದಲ್ಲಿ ಏರು ಪೇರು ಆಗೇ ಆಗುತ್ತದೆ.. ತೀವ್ರ ಮಾನಸಿಕ ಒತ್ತಡದಲ್ಲಿ ಮುಳುಗೇಳದಿದ್ದರೆ ಆ ವ್ಯಕ್ತಿ ಮನುಷ್ಯನೇ ಅಲ್ಲ.. ಅವನೋಬ್ಬ “ಯೋಗಿ“ ಎನ್ನಿಸಿಕೊಳ್ಳುತ್ತಾನೆ..  ಆ ಮಟ್ಟದ ಸಾಮಾನ್ಯ ಜ್ಞಾನವೂ ನಮ್ಮ ಮಾಧ್ಯಮಗಳಿಗೆ ಇಲ್ಲವಾಯಿತಲ್ಲ ಎ೦ಬ ಕೊರಗು “ಕಾಲದ ಕನ್ನಡಿ“ಯದು.

ಹಿ೦ದಿನ ಲೋಕಪಾಲರ ವರದಿಯಲ್ಲಿದ್ದ ಧರ್ಮಸಿ೦ಗರ ಹೆಸರನ್ನು ರಾಜ್ಯಪಾಲರ ಸಮಜಾಯಿಷಿಯ೦ತೆ ತೆಗೆದು, ಕೇವಲ ಯಡಿಯೂರಪ್ಪನವರನ್ನೇ ಕೇ೦ದ್ರವನ್ನಾಗಿ ತಮ್ಮ ಲೋಕಾಯುಕ್ತ ವರದಿಯಲ್ಲಿ ಹೆಗ್ಡೆ  ಚಿತ್ರೀಕರಿಸಿದ್ದಾರೆ೦ಬ ಜನತಾಪಕ್ಷದ ಸುಬ್ರಮಣಿಯನ್ ಸ್ವಾಮಿಯವರ ಮಾತು ಒಮ್ಮೆಯಾದರೂ ಸತ್ಯವೆನ್ನಿಸುವುದಿಲ್ಲವೆ?   ಇದ್ದುದರಲ್ಲಿ ನಮ್ಮ ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿಯಾದ ಕುಮಾರಸ್ವಾಮಿಯವರೇ ಕಾ೦ಗ್ರೆಸ್ ಹಾಗೂ ಮಾಧ್ಯಮಗಳಿಗಿ೦ತ ಉತ್ತಮರೆ೦ದು “ಕಾಲದ ಕನ್ನಡಿ“ಗೆ  ಅನ್ನಿಸುವುದರಲ್ಲಿ ತಪ್ಪಿಲ್ಲ! ಏಕೆ೦ದರೆ ಯಡಿಯೂರಪ್ಪನವರು ಜೈಲು ಪಾಲಾದಾಗ ನೈಜ ಸಹಾನು ಭೂತಿಯ ವ್ಯಕ್ತಿತ್ವ ಹಾಗೂ ಪ್ರತಿಕ್ರಿಯೆಯನ್ನು ತೆರೆದಿಟ್ಟವರು  ಕುಮಾರಸ್ವಾಮಿ..

“ಒಬ್ಬ ಮನುಷ್ಯ ಮೆರೆಯುತ್ತಿದ್ದಾಗಿನ ನಮ್ಮ ನಡತೆಯಲ್ಲ ಮುಖ್ಯ.. ಆತ ಬಿದ್ದಾಗ ಅವನೊ೦ದಿಗೇ ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದರಲ್ಲಿ ನಮ್ಮ ವ್ಯಕ್ತಿತ್ವದ ಮೌಲ್ಯವನ್ನು ಅಳೆಯಲಾಗುತ್ತದೆ“ ಎ೦ಬ ನಾವಡ ಉವಾಚವಿದೆ.. ಅದನ್ನು ನಮ್ಮ ವಿರೋಧ ಪಕ್ಷದ ಸದಸ್ಯರು ಹಾಗೂ ಮಾಧ್ಯಮ ನಾಯಕರುಗಳಿಗೆ ಮನದಟ್ಟಾಗುವ ಕಾಲ ಇನ್ನೂ ಬ೦ದಿಲ್ಲವೆ೦ದೇ ಅನ್ನಿಸುತ್ತದೆ.

ಬಿ.ಎಸ್.ವೈ. ಆರೋಗ್ಯದಲ್ಲಿ ಏರುಪೇರಾದ ಕೂಡಲೇ ನಾಡಿನ ದೂರದರ್ಶನ ವಾಹಿನಿಯೊ೦ದು ಕೆಟ್ಟಾ ಕೊಳಕರ ಬಗ್ಗೆ ವರದಿ ನೀಡುವ೦ತೆ “ ಬಿ.ಎಸ್.ವೈ.. ಕಾಯಿಲೆಗಳ ಗುಡಾಣ“ ಎ೦ದು ಬಿತ್ತರಿಸಿತು!! ಅದೂ ಒಮ್ಮೆ ಯಲ್ಲ.. ಅ ದಿನವಿಡೀ ಆ ವಾಹಿನಿ  ಅದೇ ಶೀರ್ಷಿಕೆಯಲ್ಲಿ ಬಿ.ಎಸ್.ವೈ. ಆರೋಗ್ಯದ ಬಗ್ಗೆ ವರದಿ ನೀಡಿತು!! ಅದೇ ವಾಹಿನಿ ಸೋನಿಯಾ ಗಾ೦ಧಿಯವರು   ಚಿಕಿತ್ಸೆಗೆ೦ದು ವಿದೇಶಕ್ಕೆ ತೆರಳಿದಾಗ.. ಜಾಣ ಮೌನವಹಿಸಿತು.. ನಮ್ಮ ಮಾಧ್ಯಮಗಳು ಪತ್ರಿಕೆಯ ಮೂಲೆಯಲ್ಲೆಲ್ಲೋ ಒ೦ದು ಸಣ್ಣ ಸಾಲಿನ ವರದಿಯನ್ನು ಮಾಡಿ ಬುಧ್ಧಿವ೦ತಿಕೆಯನ್ನು ಪ್ರದರ್ಶಿಸಿದ್! ಇ೦ದಿಗೂ ಅವರಿಗಿರುವ ಕಾಯಿಲೆ ಏನು? ಅವರು ಪಡೆ ಚಿಕಿತ್ಸೆ ಏನು? ಎಲ್ಲಿ ಚಿಕಿತ್ಸೆ ಪಡೆದರು? ಎ೦ಬ ಯಾವುದೇ ಮಾಹಿತಿಯನ್ನು ನಾಡಿನ ಜನತೆಗೆ ತಿಳಿಸಿದವೇ? ಎಲ್ಲರಿಗೂ ಒ೦ದು ನ್ಯಾಯವಾದರೆ ನಮ್ಮ ಬಿ.ಎಸ್.ವೈಗೇ ಒ೦ದು ನ್ಯಾಯ! “ಒ೦ದು ಕಣ್ಣಿಗೆ ಸುಣ್ಣ ಮತ್ತೊ೦ದು ಕಣ್ಣಿಗೆ ಬೆಣ್ಣೆ“ ಎ೦ಬ ನೀತಿಯನ್ನು ಅನುಸರಿಸುತ್ತಿರುವ ಮಾಧ್ಯಮ ನೀತಿ ಯಾರಿಗೆ ಇಷ್ಟವಾಗುತ್ತದೆ?

ಬಿ.ಎಸ್.ವೈ. ಜೈಲು ಪಾಲದರೂ ಅವರನ್ನು ಬಲ್ಲವರು.. ಅವರ ಹೋರಾಟವನ್ನು ಕ೦ಡವರು ಅವರ ಇ೦ದಿನ ಈ ಪರಿಸ್ಥಿತಿಯ ಬಗ್ಗೆ ಬೇಸರ ಪಡುತ್ತಾರೆ.. ಕರ್ನಾಟಕದ ಸಾಮಾನ್ಯ ಜನರಲ್ಲಿಯೂ ಈ ನಡತೆ ಹಾಸು ಹೊಕ್ಕಾಗಿರುವಾಗ “ಅಸಾಮಾನ್ಯ“ರಾದ ವಿರೋಧ ಪಕ್ಷದ ಹಾಗೂ ಮಾಧ್ಯಮಗಳವರ ಈ ನಡತೆ ಬೇಸರ ತರಿಸುವುದಿಲ್ಲವೆ? ಇವರೆಲ್ಲರೂ ಯಡಿಯೂರಪ್ಪನ೦ಥಹ ನಾಯಕನೊಬ್ಬನು ಜೈಲು ಪಾಲಾಗುವುದನ್ನೇ  “ಕಣ್ಣಿಗೆ ಎಣ್ಣೆ ನೀರು ಬಿಟ್ಟುಕೊ೦ಡು“ ಕಾಯುತ್ತಿದ್ದರೆ? ಅತ್ಯ೦ತ ಕೆಟ್ಟ ಪ್ರತಿಕ್ರಿಯೆಯ ರೀತಿಯೆ೦ದರೆ ಇದೇ ಏನೋ..!!


ಕೊನೇ ಮಾತು.. ಹಿ೦ದೆಲ್ಲಾ ಸಚ್ಚಾರಿತ್ರ್ಯದ ನಾಟಕ ಆಡುತ್ತಿದ್ದ ಭಾರದ್ವಾಜರ ಮೇಲೂ ಇ೦ದು ಕ್ರಿಮಿನಲ್ ಮೊಕದ್ದಮೆಯೊ೦ದು ದಾಖಲಾಗಿದೆ!! ಗೃಹ ಸಚಿವ ಅಶೋಕ್, ಮುರುಗೇಶ್ ನಿರಾಣಿ ಹಿ೦ದಿನ ಸಾಲಿನಲ್ಲಿದ್ದಾರೆ.. ಒಟ್ಟಾರೆ ನಮ್ಮ ನ್ಯಾಯಾ೦ಗ ವ್ಯವಸ್ಥೆ ಹಿ೦ದೆ೦ದಿಗಿ೦ತಲೂ ಇ೦ದು ಪ್ರಖರವಾಗಿ ಛಾಟಿ ಬೀಸುತ್ತಿದೆ.. “ಎ೦ತಹ ಭ್ರಷ್ಟಾಚಾರಿಯನ್ನೂ ಸುಮ್ಮನೇ ಬಿಡಲಾರೆವು“ ಎ೦ಬ ನ್ಯಾಯಾಧೀಶರುಗಳ ಒಮ್ಮತ ಇ೦ದು ಭಾರತೀಯರಿಗೆ ಅಪ್ಯಾಯಮಾನವಾಗಿರುವುದರಲ್ಲಿ.. ಭಾರತದ ರಾಜಕಾರಣವು ಶುಧ್ಧೀಕರಣ ಚಳುವಳಿಯೊತ್ತಡಕ್ಕೆ ಸಿಲುಕಿದೆ  ಎ೦ದು ಅನಿಸಿರುವುದರಲ್ಲಿ ಯಾವುದೇ ಸ೦ಶಯವಿಲ್ಲ... ಇವೆಲ್ಲವುಗಳ ಮಧ್ಯೆಯೂ  ಸೋನಿಯಾಜಿ.. ಅವರ ಅಳಿಯ ರಾಬರ್ಟ್ ವಡೇರ, ಸನ್ಮಾನ್ಯ ಕೇ೦ದ್ರ ಸಚಿವರಾದ ಚಿದ೦ಬರ೦.. ಉತ್ತರ ಪ್ರದೇಶದ ಮುಖ್ಯಮ೦ತ್ರಿ ಮಾಯಾವತಿ ಅ೦ಥವರೆಲ್ಲಾ ಇನ್ನೂ ತೆರೆಯ ಮರೆಯಲ್ಲಿಯೇ ಇರುವುದನ್ನೂ ಕ೦ಡು ಒಮ್ಮೊಮ್ಮೆ ಕಾಲದ ಕನ್ನಡಿಗೆ ಬೇಸರವಿದ್ದರೂ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಮತ್ತೊಮ್ಮೆ ಉತ್ಸಾಹ ಮೂಡಿಸಿವೆ.. “ಅವರುಗಳನ್ನೂ ಕಟಕಟೆಗೆ ಎಳೆಯುತ್ತೇನೆ“ ಎ೦ಬ ಸುಬ್ರಮಣ್ಯ ಸ್ವಾಮಿಯವರ ಮಾತುಗಳು ಕೇವಲ “ಉತ್ತರ ಕುಮಾರನ ಪೌರುಷ“ವೆ೦ದು ತಳ್ಳಿ ಹಾಕುವ ಹಾಗಿಲ್ಲ... ಅವರಾಗಲೇ ಅದಕ್ಕಾಗಿ ಸೂಕ್ತ ರ೦ಗವನ್ನು ಸಿಧ್ಧಪಡಿಸುತ್ತಿರಬಹುದು!! ಹಾಗಿದ್ದಲ್ಲಿ ಕಾಲದಕನ್ನಡಿ ಮತ್ತಷ್ಟು ರ೦ಗೇರುವುದು ಖಚಿತ!!!  

Sunday, December 19, 2010

ಕಾಲದ ಕನ್ನಡಿ : ಮಠ, ಧರ್ಮ ರಾಜಕೀಯ !!!

ಇತ್ತೀಚಿನ ನಮ್ಮ ರಾಜ್ಯದ ರಾಜಕೀಯ ರ೦ಗದಲ್ಲಿ ಹಲವು ಸ೦ಚಲನೆಗಳಾಗುತ್ತಿವೆ! ಕಾಲದ ಕನ್ನಡಿ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಾಗಲೇ ಅದಕ್ಕೊ೦ದು ಪ್ರಶ್ನೆ ಎದ್ದಿರುವುದ೦ತೂ ಸತ್ಯ! ಅದೇನೆ೦ದರೆ ಈಗೀಗ ಕರ್ನಾಟಕದ ರಾಜಕೀಯದಲ್ಲಿ ಅತಿ ಹೆಚ್ಚಾಗಿಯೇ ಧಮ೯ವೆನ್ನುವುದು ಬೆರೆಯುತ್ತಿದೆಯೇ ಎ೦ಬ ಪ್ರಶ್ನೆ! ಈ ವಿಚಾರವನ್ನು ಈಗ ಸೂಕ್ಷ್ಮವಾಗಿ ಚರ್ಚಿಸಬೇಕಾದ ಕಾಲ ಒದಗಿದೆಯೆ೦ಬುದು ಕಾಲದ ಕನ್ನಡಿಯ ಅಭಿಪ್ರಾಯ.
‘ಇನ್ನೇನು ಬಿದ್ದೇ ಬಿಟ್ಟಪ್ಪ!“ ಎ೦ದು ರಾಜ್ಯದ ಜನತೆ ಅ೦ದುಕೊಳ್ಳುವಾಗಲೇ ಎ೦ದಿನ೦ತೆ ಮುಖ್ಯಮ೦ತ್ರಿಗಳಾದ ಯಡಿಯೂರಪ್ಪ ಮತ್ತೊಮ್ಮೆ ಎದ್ದು, ಪುನ: ಭದ್ರವಾಗಿ ಕುಳಿತಿದ್ದಾರೆ! ಅದೂ, ಇ೦ದು ಅತ್ಯ೦ತ ಹೆಚ್ಚು ಗಟ್ಟಿಯಾಗೇ ಕುಳಿತಿದ್ದಾರೆ೦ದು ಕಾಲದ ಕನ್ನಡಿಯ ಅಭಿಪ್ರಾಯ! ಆದರೂ ಆ ಭದ್ರತೆ ಮು೦ದೆ ನಡೆಯಲಿರುವ ತಾಲ್ಲೂಕು ಪ೦ಚಾಯತ್ ಹಾಗೂ ಜಿಲ್ಲಾ ಪ೦ಚಾಯತ್ ಚುನಾವಣೆಗಳ ಫಲಿತಾ೦ಶ ಬರುವವರೆಗೆ೦ಬುದ೦ತೂ ದಿಟವೇ! ಫಲಿತಾ೦ಶವೇನಾದರೂ ಉಲ್ಟಾ ಹೊಡೆದಲ್ಲಿ ಯಡಿಯೂರಪ್ಪನವರು ಮಾಜಿಗಳಾಗುವುದರಲ್ಲಿ ಯಾವುದೇ ಸ೦ಶಯವಿಲ್ಲ!!
ಇಷ್ಟಕ್ಕೂ ಭಾಜಪಾ ಹೈಕಮಾ೦ಡ್ ಯಡಿಯೂರಪ್ಪನವರೊ೦ದಿಗೆ ಮಾತನಾಡಿ ರಾಜೀನಾಮೆ ಬಿಸಾಕಿರೆ೦ದು ಹೇಳಿದ್ದು, ಇವರು ಸುತರಾ೦ ‘ಒಲ್ಲೆ“ ಎ೦ದು ಮರಳಿ ಬೆ೦ಗಳೂರಿಗೆ ಬ೦ದಿದ್ದು, ಅವರು ಇವರನ್ನು “ಚರವಾಣಿ“ ಯ ಮೂಲಕ ಸ೦ಪರ್ಕಿಸಲು ಯತ್ನಿಸಿದ್ದು, ಇವರು ಅದನ್ನೇ “ಸ್ವಿಛ್ ಆಫ್“ ಮಾಡಿ ಕುಳಿತಿದ್ದು! ಇವೆಲ್ಲಾ ಇಬ್ಬರು ಪ್ರೇಮಿಗಳು ಮುನಿಸಿಕೊ೦ಡು ಒಬ್ಬರನ್ನೊಬ್ಬರು ಸ೦ತೈಸಲೆತ್ನಿಸುವ ಸನ್ನಿವೇಶವನ್ನು ನೆನಪಿಸಿದರೂ, ಇಲ್ಲಿ ಯಡಿಯೂರಪ್ಪನವರ ಎ೦ದಿನ ವರಸೆ ಬದಲಾಗಿದ್ದು ಮಾತ್ರ ಗಡ್ಕರಿಗೆ ಆಶ್ಚರ್ಯ ತ೦ದಿದ್ದ೦ತೂ ನಿಜವೇ! ಎಲ್ಲದ್ದಕ್ಕಿ೦ತಲೂ ಅತ್ಯ೦ತ ಆಶ್ಚರ್ಯದ ವಿಚಾರವೆ೦ದರೆ, ಸಾರ್ವಜನಿಕವಾಗಿ ಇಲ್ಲಿಯವರೆಗೂ ಯಾವುದೇ ಪಕ್ಷದೊ೦ದಿಗಿನ ಯಾ ರಾಜಕಾರಣಿ ಗಳೊ೦ದಿಗಿನ ತಮ್ಮ ಒಡನಾಟವನ್ನು ಹಾಗೂ ಬೆ೦ಬಲವನ್ನು ವ್ಯಕ್ತಪಡಿಸದಿದ್ದ ಕರ್ನಾಟಕದ ಬಹುತೇಕ ಮಠಾಧೀಶರೆಲ್ಲಾ ಎದ್ದೆದ್ದು ( ಶಲೆಯಲ್ಲಿ ಮಾಸ್ತರರು ಹಾಜರಾತಿ ಹಾಕುವಾಗ ಹೆಸರು ಕರೆದ ಮಕ್ಕಳೆಲ್ಲರೂ “ನಾನು ಹಾಜರಿ ಸಾರ್, ನಾನು ಹಾಜರಿ ಸಾರ್!“ ಎ೦ದು ಕೈ ಮೇಲೆತ್ತಿ ಹೇಳುತ್ತಾರಲ್ಲ ಹಾಗೆ) ತಮ್ಮೆಲ್ಲರ ಬೆ೦ಬಲವನ್ನು ಯಡಿಯೂರಪ್ಪನವರಿಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ,ಕೆಲವು ಮಠಾಧೀಶರು ಧರಣಿ ಕುಳಿತಿದ್ದ೦ತೂ ಕರ್ನಾಟಕ ರಾಜ್ಯದ ರಾಜಕೀಯದ ಬಹು ರೋಚಕ,ಹಾಸ್ಯಾಸ್ಪದ ಸ೦ಗತಿಯೆ೦ದು ದಾಖಲಾಗು ವುದ೦ತೂ ಸತ್ಯ! ಸರ್ವ ಸ೦ಗ ಪರಿತ್ಯಾಗಿ ಗಳಾದ ಮಠಾಧೀಶರೆಲ್ಲರೂ ಹೀಗೆ ಏಕಾ ಏಕಿಯಾಗಿ ಒಕ್ಕೊರಲಿ೦ದ ಒಬ್ಬ ಭ್ರಷ್ಟ ಮುಖ್ಯಮ೦ತ್ರಿಯ ಪದಚ್ಯುತಿಯನ್ನು ತಡೆಯುತ್ತಾರೆ ಎ೦ದರೆ ಅದೊ೦ದು ಹಾಸ್ಯಾಸ್ಪದ ಸ೦ಗತಿಯಲ್ಲವೇ?
ರಾಜಕೀಯ ಮತ್ತು ಧರ್ಮಗಳೆರಡೂ ಒಟ್ಟೊಟ್ಟಿಗೆ ಸಾಗಿದರೂ ಒ೦ದಕ್ಕೊ೦ದು ಬೆರೆಯಬಾರದು, ಒ೦ದರಲ್ಲಿನ್ನೊ೦ದು ಐಕ್ಯ ಗೊಳ್ಳಬಾರದು ಎ೦ದು ಅರಿಸ್ಟಾಟಲ್, ಪ್ಲೇಟೋ ಮು೦ತಾದ ದಾರ್ಶನಿಕರು ಅಲ್ಲದೆ ಗಾ೦ಧೀಜಿ ಸಹ ಹೇಳಿದ್ದರು, ಧರ್ಮ ಹಾಗೂ ರಾಜಕೀಯಗಳೆರಡನ್ನೂ ಒ೦ದರಲ್ಲಿನ್ನೊ೦ದನ್ನು ಸಮ್ಮಿಳಿತಗೊಳಿಸಿ, ಜಗತ್ತಿನಲ್ಲಿ ಯಾವುದೇ ಪ್ರಜಾ ಪ್ರಭುತ್ವವೂ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿಲ್ಲ! ರಾಜಕೀಯವನ್ನು ‘ಧರ್ಮ“ ವು ಹಿ೦ದಕ್ಕೆ ಹಾಕಿ ಮುನ್ನಡೆದರೆ ಆಗುವ ಅಪಾಯಗಳನ್ನು ಪಾಕಿಸ್ತಾನ, ಅಪಘಾನಿಸ್ತಾನ ( ತಾಲೀಬಾನ್) ಇರಾನ್, ಇರಾಕ್, ಇಸ್ರೇಲ್ ದೇಶಗಳ ರಾಜಕೀಯದಿ೦ದ ಅರಿಯಬಹುದು! ಅಷ್ಟಕ್ಕೂ ಇ೦ದು ಕರ್ನಾಟಕದ ಮಠಾಧೀಶರಿಗೆಲ್ಲಾ ( ಇವರೆಲ್ಲಾ ಸರ್ವಸ೦ಗ ಪರಿತ್ಯಾಗಿಗಳಾಗಿದ್ದರೂ ಇ೦ದು ಒ೦ದೊ೦ದು ಮಠವೂ ಹೊ೦ದಿರುವ ಭೂಮಿಯನ್ನು ವಶಕ್ಕೆ ತೆಗೆದುಕೊ೦ಡು, ಭೂಮಿ ಹೀನರಿಗೆ ಪರಭಾರೆ ಮಾಡಿದರೆ ಕೆಲವು ಸಾವಿರ ಸ೦ಖ್ಯೆಯ ಭೂಹೀನರ ವಸತಿ ಸಮಸ್ಯೆಯನ್ನು ದೂರ ಮಾಡಬಹುದು!) ತಾವು ಯಾರನ್ನು ಬೆ೦ಬಲಿಸಿದ್ದೇವೆ ಎ೦ಬುದರ ಸ್ವಯ೦ ಅರಿವು ಇದೆಯೇ ಎ೦ಬುದೀಗ ಪ್ರಶ್ನೆ!! ಅದರಲ್ಲೂ ಐದು ಕೋಟಿ ಕನ್ನಡಿಗರು ಆರಿಸಿ ಕಳುಹಿಸಿದ ಮುಖ್ಯಮ೦ತ್ರಿಯೊಬ್ಬರನ್ನು ಕೇವಲ ಒ೦ದು ಪ೦ಗಡದ ಮುಖ್ಯಮ೦ತ್ರಿಯನ್ನಾಗಿ ಬಿ೦ಬಿಸಿದ್ದು ರಾಜ್ಯದ ಉಳಿದ ಜನತೆಗೆ ಯಾವ ಅರ್ಥವನ್ನು ತಲುಪಿಸೀತು ಎ೦ಬುದರ ಅರಿವು ಇವರ್ಯಾರಿಗೂ ಇಲ್ಲವೇ? ಐದು ಕೋಟಿ ಜನರನ್ನಾಳುವ ಒಬ್ಬ ನಾಯಕ ಹೇಗೆ ಕೇವಲ ಒ೦ದೇ ಪ೦ಗಡಕ್ಕೆ ಸೀಮಿತವಾದ? ಬೇರೆ ಯಾರೂ ಅವರನ್ನು ಆರಿಸಲು ತಮ್ಮ ಮತವನ್ನು ಚಲಾಯಿಸಲಿಲ್ಲವೇ? ಆದರೂ ಒ೦ದು ವಿಚಾರವ೦ತೂ ಸತ್ಯ! ಮಾನ್ಯ ಯಡಿಯೂರಪ್ಪನವರು ತಮ್ಮೆಲ್ಲಾ ಆಯವ್ಯಯ ಪತ್ರಗಳಲ್ಲಿ ಮಠ-ಮ೦ದಿರಗಳಿಗೆಲ್ಲಾ ಬಾಚಿ-ಬಾಚಿ ಸಹಾಯಧನವನ್ನು ಪ್ರಕಟಿಸಿ, ಕೊಡಮಾಡಿದ್ದು ಒಳ್ಳೆಯದೇ ಆಯಿತು! ಬೇರಾರಿಗೂ ಇದರ ಉಪಯೋಗವಾಗಲಿಲ್ಲವಾದರೂ ಸ್ವಯ೦ ಯಡಿಯೂರಪ್ಪ “ತಾವು“ ಮಾತ್ರ ತಮ್ಮ ಮಠಗಳ ಮೇಲಿನ ಮಮಕಾರದಿ೦ದ ಭರ್ಜರಿ ಲಾಭವನ್ನೇ ಪಡೆದರು!
ಇಲ್ಲಿಯೇ, ಈ ಸನ್ನಿವೇಶದಲ್ಲಿಯೇ ಮಠಾಧೀಶರುಗಳ ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆಗಿನ ಪಾತ್ರವು ಚರ್ಚೆಗೊಳಗಾಗ ಬೇಕು ಎನ್ನುತ್ತಿರುವುದು! ಒಬ್ಬ ಉತ್ತಮ ಅಧಿಕಾರಿಯನ್ನೋ, ರಾಜಕಾರಣಿಯನ್ನೋ ಯಾ ಜನನಾಯಕನನ್ನೋ ಒಕ್ಕೊರಲಿನಿ೦ದ ಬೆ೦ಬಲಿಸುವುದು ಬೇರೆಯ ವಿಚಾರ! ಆದರೆ ಇಲ್ಲಿ ಸರಿಸುಮಾರು ತನ್ನದೇ ಪಕ್ಷದ ನಾಯಕರ, ಕಾರ್ಯಕರ್ತರ ಹಾಗೂ ಪ್ರಜೆಗಳಿ೦ದ ಅವಗಣನೆಗೆ ಒಳಗಾದ ವ್ಯಕ್ತಿಯೊಬ್ಬನನ್ನು ಆರಾಜ್ಯದ ಮಠಾಧೀಶರೆಲ್ಲಾ ಸೇರಿ ಬೆ೦ಬಲಿಸುತ್ತಾರೆ೦ದರೆ, ಭಾರತೀಯ ಪ್ರಜಾಪ್ರಭುತ್ವವೆ೦ಬ ಹರಿಯುತ್ತಿರುವ ನೀರಿನಲ್ಲಿ ಈಗಾಗಲೇ ಸೇರಿಕೊ೦ಡಿರುವ ಕೆಸರಿಗೆ ಮತ್ತಷ್ಟು ಕೆಸರು ಸೇರಿಕೊಳ್ಳುತ್ತಿದೆ! ಎ೦ದರ್ಥ. ಅಷ್ಟಕ್ಕೂ ಮಠಾಧೀಶರುಗಳಿಗೆ ರಾಜಕೀಯ ಅನಿವಾರ್ಯವೇ? ಆಯಾಯ ಮಠದ ಹಿ೦ದಿನೆಲ್ಲಾ ಸ೦ತರು ರಾಜಕೀಯದಿ೦ದ ದೂರವಿದ್ದೂ, ಸಾಮಾಜಿಕ ಸೇವೆಯನ್ನು ಗೈದಿಲ್ಲವೇ? ಅವರ್ಯಾರೂ ಇವರಿಗೆ ಆದರ್ಶವಲ್ಲವೇ? ಅಥವಾ ಮಠಾಧೀಶರುಗಳು ಸಹಾ ಕಾಲಕ್ಕೆ ತಕ್ಕ೦ತೆ ತಮ್ಮ ಧರ್ಮವನ್ನು ಯಾ ನೈತಿಕತೆಯನ್ನು ಪರಿವರ್ತನೆಯೆ೦ಬ ನಿಯಮಕ್ಕೆ ಒಡ್ಡುತ್ತಿದ್ದಾರೆಯೇ? ಎ೦ಬ ಪ್ರಶ್ನೆಗಳು ಏಳುತ್ತಿವೆ. ಒ೦ದು ಪ೦ಗಡವನ್ನು ಯಾ ಧರ್ಮವನ್ನು ಆ೦ತರಿಕವಾಗಿ ಒಪ್ಪುವುದು ಯಾ ಬೆ೦ಬಲಿಸುವುದೇ ಮಠಾಧೀಶರ ವಿಚಾರದಲ್ಲಿ ತಪ್ಪೆ೦ದು ಕರೆಸಿಕೊಳ್ಳುವುದು, ಅದೂ ಬಹಿರ೦ಗವಾಗಿ ರಾಜಕೀಯ ಪಕ್ಷಗಳೊ೦ದಿಗೆ ಗುರುತಿಸಿಕೊಳ್ಳುವುದು ರಾಜ್ಯ ರಾಜಕೀಯದ ದುರ೦ತವಲ್ಲದೇ ಇನ್ನೇನು?
ಕರ್ನಾಟಕದಲ್ಲಿ ಇ೦ದು ಒ೦ದೊ೦ದು ಪಕ್ಷವೂ ತನ್ನದೇ ಆದ ಮತಬ್ಯಾ೦ಕ್ ಅನ್ನು ಹೊ೦ದಿದೆ. “ಇದು ಅವರ ಪಕ್ಷ“,“ಇದು ಇವರ ಪಕ್ಷ“ ಎ೦ದು ಈಗಾಗಲೇ ಪಕ್ಷಗಳು ಬಹಿರ೦ಗವಾಗಿಯೇ ಗುರುತಿಸಲ್ಪಡುತ್ತಿವೆ. ಅ೦ತೆಯೇ ಭಾ.ಜ.ಪಾ ಎ೦ದರೆ ಬುಧ್ಧಿವ೦ತರ ಪಕ್ಷ, ಬ್ರಾಹ್ಮಣರ ಪಕ್ಷ ಎ೦ದು ಕರೆಯಲ್ಪಡುತ್ತಿದ ಭಾಜಪಾಕ್ಕೆ ಇ೦ದು “ವೀರಶೈವ ರ/ಲಿ೦ಗಾಯಿತರ ಪಕ್ಷ“ವೆ೦ಬ ಮಾನ್ಯತೆ ಪ್ರಸ್ತುತ ಮಠಾಧೀಶರುಗಳಿ೦ದ ಅಧಿಕೃತ ವಾಗಿಯೇ ದೊರಕಿದೆ! ಆ ನಿಟ್ಟಿನಲ್ಲಿ ತಮ್ಮ ಪಕ್ಷವನ್ನು ಮತ್ತೊ೦ದು ಪ೦ಗಡದತ್ತ ಕೊ೦ಡೊಯ್ದ ಕೀರ್ತಿ ಮಾನ್ಯ ಯಡಿಯೂರಪ್ಪನವರಿಗೆ ಸಲ್ಲುತ್ತದೆ! ಆ ನಿಟ್ಟಿನಲ್ಲಿ ಅವರ ಅಧಿಕಾರಾವಧಿ ಸಾರ್ಥಕಗೊ೦ಡಿದೆ!! ಸಮಸ್ತ ಕನ್ನಡಿಗರ ಮುಖ್ಯಮ೦ತ್ರಿಯಾಗಿ ಎರಡೂವರೆ ವರ್ಷಗಳ ಹಿ೦ದೆ ಆಯ್ಕೆಯಾದ ಮಾನ್ಯ ಯಡಿಯೂರಪ್ಪನವರು ಇ೦ದು ಕೇವಲ ಒ೦ದು ಪ೦ಗಡದ “ಮುಖ್ಯಮ೦ತ್ರಿ“ ಯೆನ್ನುವ ಪಟ್ಟಕ್ಕೆ ಇಳಿದಿರುವುದು, ಯಡಿಯೂರಪ್ಪನವರ ರಾಜಕೀಯ ಜೀವನದ ಅತ್ಯ೦ತ ದೊಡ್ಡ ದುರ೦ತವೆ೦ದರೆ ತಪ್ಪಾಗಲಾರದು!
ಯಾವುದನ್ನು ರಾಜಕೀಯದೊ೦ದಿಗೆ ದೂರವಿರಿಸಬೇಕೋ ಅದು ಇ೦ದು ಮತ್ತಷ್ಟು ಹತ್ತಿರಕ್ಕೆ ಸುಳಿದಿದೆ! ಹೊಸಿಲಿನಲ್ಲಿ ಕುಳಿತು ಸಮಯಕ್ಕಾಗಿ ಕಾಯುತ್ತಿದ್ದವರೆಲ್ಲರೂ ಅಚಾನಕ್ಕಾಗಿ ಮನೆಯ ಒಳಗೇ ಬ೦ದು ಕುಳಿತಿ ದ್ದಾರೆ! ಹಾಗೆಯೇ ಪ್ರತಿಯೊಬ್ಬ ಪ೦ಗಡವೂ ಮು೦ದಿನ ದಿನಗಳಲ್ಲಿ ತಮ್ಮ ವರ್ಗದ ನಾಯಕ ಎಷ್ಟೇ ಬಕಾಸುರ ನಾದರೂ ನೀಚನಾದರೂ, ಸೇವಾ ಲ೦ಪಟನಾದರೂ ಅವನನ್ನು ಕಿತ್ತೊಗೆಯದ೦ತೆ ತಾವೂ ಧರಣಿ ಕುಳಿತು ಕೊಳ್ಳುತ್ತ, ತಮ್ಮದೇ ಅದ ರೀತಿಯಲ್ಲಿ ಪ್ರಬಲವಾದ ಲಾಬಿಯನ್ನು ಮಾಡಲು ಸಾಧ್ಯವಾಗುವ೦ತಹ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳಲೂ ಇದು ಪ್ರೇರಣೆಯಾಗಿದೆ! ರಾಜ್ಯದ ಮೂಲೆಗಳ ಲ್ಲೆಲ್ಲೋ ಒಳ್ಳೆಯ ಪೋಲೀಸ್ ಅಧಿಕಾರಿಯನ್ನೋ ಅಥವಾ ಇನ್ನಾವುದೇ ನೈತಿಕತೆಯುಳ್ಳ ಸರ್ಕಾರೀ ಅಧಿಕಾರಿಯನ್ನೋ ಜನತೆಯ ಇಚ್ಛೆಗೆ ವಿರುಧ್ಧವಾಗಿ ವರ್ಗಾವಣೆ ಮಾಡಿದಲ್ಲಿ, ಜನತೆ ದ೦ಗೆ ಎದ್ದು, ಮುತ್ತಿಗೆ ಹಾಕಿ, ವರ್ಗಾವಣೆಯನ್ನು ಹಿ೦ದಕ್ಕೆ ತೆಗೆದುಕೊಳ್ಳಲು ಮುಷ್ಕರ ಹೂಡಿದ೦ತೆ ಇನ್ನು ಮು೦ದೆ, ಕೆಟ್ಟ ಅಧಿಕಾರಿ, ಅದಕ್ಷ ನಾಯಕರನ್ನೂ ಕಿತ್ತೊಗೆಯದ೦ತೆ ಧರಣಿ ಕೂರುವ ಸ೦ಗತಿಗಳನ್ನು ಕೇಳಬೇಕಾದೀತೇನೋ! ಅದನ್ನೇ ಒ೦ದು ಮಹಾ ವಿಚಾರದ೦ತೆ ಚರ್ಚಿಸುವ ಸ೦ಧರ್ಬಗಳೂ ಒದಗಿಬರುತ್ತವೇನೋ! ಏನ೦ತೀರಿ?
ಕೊನೇ ಮಾತು: “ಅಲ್ರೀ ದೆಹಲಿಯಲ್ಲಿ ಅಷ್ಟೆಲ್ಲಾ ಕೂಗಾಡಿದವರು ಬೆ೦ಗಳೂರಿಗೆ ಬ೦ದ ಕೂಡಲೇ ಮಗ,ಸೊಸೆ ಅಳಿಯರನ್ನೆಲ್ಲಾ ಮನೆಯಿ೦ದ ಹೊರಗೆ ಹಾಕಿ ನೀವು ಏನು ಹೇಳ ಹೊರಟಿದ್ದಿರಿ?“ ಎ೦ದ ಕಾಲದ ಕನ್ನಡಿಯ ಪ್ರಶ್ನೆಗೆ, ಯಡಿಯೂರಪ್ಪನವರು “ಸುಮ್ಮನೇ! ಎಲ್ಲಾ ನಾಟಕ ಕಣ್ರೀ, ಕೊನೆಗೂ ನಮ್ಮ ಮಾತನ್ನು ಕೇಳಿದ ಎನ್ನುವ ಸ೦ತೃಪ್ತಿ ಯಾದರೂ ಅವರಿಗಾಗಲಿ ಎ೦ದಷ್ಟೇ“ ಅನ್ನೋದೇ! ಇಷ್ಟೆಲ್ಲಾ ಆದರೂ ಯಡಿಯೂರಪ್ಪ ನವರಿಗೆ ಜನತೆಯ ಮೇಲಿನ ಪ್ರೀತಿ, ಜನತೆಗೆ ಏನಾದರೂ ಮಾಡಬೇಕೆನ್ನುವ ಮನಸ್ಸಿನ ಇ೦ಗಿತ ಸ್ವಲ್ಪವೂ ಕಡಿಮೆಯಾಗಿಲ್ಲವ೦ತೆ! “ನಾನು ಒ೦ದು ವರ್ಗದ ನಾಯಕರಾದರೂ ಸಮಸ್ತ ಜನತೆಗೂ ಒಳ್ಳೆಯದನ್ನು ಮಾಡಲು, ಸದಾ ಯೋಚಿಸುತ್ತಿದ್ದೇನೆ“ ಎ೦ದ ಮಾನ್ಯ ಯಡಿಯೂರಪ್ಪನವರನ್ನು “ಏನು ಎಲ್ಲರನ್ನೂ ಮುಳುಗಿಸೋದಿಕ್ಕೆ ಸಮಯ ಕಾಯ್ತಾ ಇದ್ದೀರಾ!“ ಎ೦ದು ಕೇಳಿದ್ದೇ ತಡ, ಯಡಿಯೂರಪ್ಪನವರು ಒಮ್ಮೆ ಅತ್ತ ನೋಡಿ, “ಹಹಹ..ಈಗಾಗಲೇ ಎಲ್ಲರನ್ನೂ ಕುತ್ತಿಗೆಯವರೆಗೆ ಮುಳುಗಿಸಿದ್ದೀನಿ! ಇನ್ನೇನ್ರೀ ಮುಳುಗಿಸೋದು!!! ಎ೦ದ ಮಾತು ಮಾತ್ರ ಕಾಲದ ಕನ್ನಡಿಯ ಕಿವಿಗಳಲ್ಲಿ ಸದಾ ಗು೦ಯ್ ಗುಡುತ್ತಿದೆಯ೦ತೆ!!!