Showing posts with label ಪ್ರಚಲಿತ. Show all posts
Showing posts with label ಪ್ರಚಲಿತ. Show all posts

Friday, September 23, 2016

ರಾಜಕೀಯ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು ಒಂದು ತಲೆಕೆಟ್ಟ ನಿರ್ಧಾರ ಸಾಕು ||



ಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅ0ತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು!  ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತ:ಕಲಹ, ಅಹಂಕಾರ ಮುಂತಾದವುಗಳಿಂದ ನಿನ್ನೆಯವರೆಗೂ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕು0ಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ ( ಇಲ್ಲಿಯೂ ಅ0ತ:ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!!
ಮುಂದಿನ ರಾಜ್ಯ ವಿಧಾನಸಭಾ ಚುನಾವಣಾ ಆಖಾಡದಲ್ಲಿ ಶಕ್ತಿ ಪ್ರದರ್ಶನಕ್ಕೆಂದು ದೊರೆತಿದ್ದ  ಸುವರ್ಣ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಂಡ ಭಾಜಪಾ ಮುಂದಿನ ಚುನಾವಣಾ ನಂತರ “ ಕೈ” ಮತ್ತು ಜಾತ್ಯಾತೀತ ದಳಗಳ ಪರಮ ಅಂತರ್ಮೈತ್ರಿಯೊಂದರ ಅವಕಾಶದ ಬಾಗಿಲನ್ನೂ  ತೆರೆದರು! ಯುದ್ದವನ್ನೇ ಮಾಡದೇ ಎದುರಾಳಿಯನ್ನು ಗೆಲ್ಲಿಸೋದು ಹೇಗೆ ಎಂಬುದನ್ನು ರಾಜ್ಯ ಭಾಜಪಾ ನಾಯಕರನ್ನು ನೋಡಿ ಕಲಿಯಬೇಕು!! ಅದಕ್ಕೇ “ ಕಾಲದಕನ್ನಡಿ ” ಹೇಳಿದ್ದು  ಮಕಾಡೆ ಮಲಗಲು ಒಂದು ತಲೆಕೆಟ್ಟ ನಿರ್ಧಾರ ಸಾಕು|| ಅ0ತ…
ರಾಜ್ಯದ 17 ಜನ ಭಾಜಪಾ ಎಂ.ಪಿ.ಗಳು ಏನನ್ನು ಬೇಕಾದರೂ ಸಾಧಿಸಬಹುದಿತ್ತು! ಏಕೆಂದರೆ ಕೇಂದ್ರ ಸರ್ಕಾರ ಅವರದ್ದೇ. ಯಡಿಯೂರಪ್ಪ  ಪ್ರಯತ್ನ ಮಾಡಿದ್ದರೆ ಅಥವಾ ಸಂದರ್ಭಕ್ಕೆ ತಕ್ಕ ನಡೆಯನ್ನು ಪ್ರದರ್ಶಿಸಿದ್ದರೆ, ಸಿಕ್ಕ ಭರಪೂರ ಅವಕಾಶವನ್ನು  ಬಳಸಿಕೊಳ್ಳುವ ಚಾಣಾಕ್ಷರಾಗಿದ್ದರೆ, ತಾವೇ ಸಿದ್ಧರಾಮಯ್ಯ ಹಾಗೂ ಜಾತ್ಯಾತೀತ ದಳಗಳೆರಢನ್ನೂ ಲೀಡ್ ಮಾಡಿಕೊಡು ಪ್ರಧಾನಮಂತ್ರಿ ಮೋದಿಯವರೊಂದಿಗೆ  ಕಾವೇರಿ ಸಮಸ್ಯೆಯನ್ನು ಚರ್ಚಿಸಬಹುದಿತ್ತು! ಆಗ ಅವರಿಗೆ ಹಾಗೂ ಅವರ ಪಕ್ಷಕ್ಕೆ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗೆಲ್ಲಲು ತನ್ನೆಲ್ಲಾ ಶಕ್ತಿಯನ್ನು ಪಣಕ್ಕಿಡುವುದು ತಪ್ಪುತ್ತಿತ್ತು!!  ಅಧಿಕಾರಕ್ಕೆ ಬರುವ ಕನಸನ್ನು ಕಾಣಲು ಸಾಧ್ಯವಿತ್ತು!! ಆದರೆ ಭಾಜಪಾ ನಿನ್ನೆ ತೆಗೆದುಕೊಂಡ ನಿರ್ಧಾರ ಆ ಪಕ್ಷವನ್ನು ಪುನಹ ಐದು ವರ್ಷಗಳ ಹಿ0ದಿನ ಸ್ಥಿತಿಗೆ ದೂಡಿತೆನ್ನಬಹುದು!! ಬಿಜೆಪಿ ಯವರು ಒಂಥರಾ “ ತಮ್ಮ ಚಟ್ಟ ತಾವೇ ಕಟ್ಟಿಕೊಂಡರು “ ಎನ್ನಬಹುದು!!
ಕಳೆದ 10 ವರುಷಗಳಿ0ದ ದೇವೇಗೌಡರ ಮನೆಯ ಹೊಸಿಲನ್ನೇ ಕಾಣದಿದ್ದ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲ ಬಾರಿಗೆ ಮಾಜಿ ಪ್ರಧಾನಿಗಳ ಮನೆಯಲ್ಲಿ ಕಾವೇರಿ ನೀರಿನ ಸಮಸ್ಯೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದಾಗಲೇ ಭಾಜಪಾ ನಾಯಕರು ಬುದ್ಧಿವಂತರಾಗಬೇಕಿತ್ತು!!  ಬುದ್ಧಿವಂತರಾಗೋದು ಬಿಡಿ… ಅಸಲಿ ಬುದ್ಧಿಯನ್ನೂ ತೋರಿಸಲಿಲ್ಲ.. ಸಮಸ್ಯೆ ಪರಿಹಾರವಾಗುತ್ತದೋ ಬಿಡುತ್ತದೋ ಬೇರೆಯ ಪ್ರಶ್ನೆ .. ಇಡೀ ರಾಜ್ಯ ಹಾಗೂ ಜನತೆ ಕಾವೇರಿ ಸಮಸ್ಯೆಯನ್ನು ಎದುರಿಸಲು ಟೊಂಕ ಕಟ್ಟಿ ನಿಂತಾಗ ಈ “ ಬುದ್ಧಿವಂತರು” ತೋರಿಸಿದ ತಮ್ಮ ಅಸಲಿ “ ಬುದ್ಧಿ” ಯಿಂದ  ಕಳೆದ ಎರಢ್ಮೂರು ವರ್ಷಗಳಿಂದ ಪ್ರಧಾನ ಮಂತ್ರಿ ಮೋದಿ ಪಡುತ್ತಿದ್ದ ಪ್ರಯತ್ನಗಳು ಹಾಗೂ ಜನರನ್ನು ತಲುಪಲು ಪಡುತ್ತಿರುವ ಪಾಡುಗಳೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣನ್ನು ತೊಳೆದಂತಾಯಿತಲ್ಲ!!
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಇವತ್ತಿಗೂ ಕರ್ನಾಟಕದ ಜನತೆ ಏಕೆ ನೆನಪಿನಲ್ಲಿಟ್ಟುಕೊಂಡಿದ್ದಾರೆ ಅಂದರೆ 1990 ರ ದಶಕದಲ್ಲಿ ಇದೇ  ಕಾವೇರಿ ನೀರಿನ ಸಮಸ್ಯೆ ಉಲ್ಭಣಗೊಂಡಾಗ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ !!  ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ತಮ್ಮ ಕಛೇರಿಯ ಕಸದ ಬುಟ್ಟಿಗೆ ಹಾಕಿದ ಬಂಗಾರಪ್ಪ “ ಕಾವೇರಿ ಕೊಳ್ಳದಲ್ಲಿ ಶೇಖರಣೆಗೊಂಡಿದ್ದ ನೀರನ್ನು ಜತನದಿಂದ ಕಾಪಾಡುವಂತೆ” ಸುಗ್ರೀವಾಜ್ಞೆ ಹೊರಡಿಸಿದರು! ಆನಂತರ  ನ್ಯಾಯಾಂಗ ನಿಂದನೆಗಾಗಿ ಸುಪ್ರೀಂ ಕೋರ್ಟಿನ ಕ್ಷಮೆ ಕೇಳಿ ನೀರು ಬಿಟ್ಟರೂ ಅವರು ಹೊರಡಿಸಿದ ಆ ಕ್ಷಣದ ಸುಗ್ರೀವಾಜ್ಞೆ ಆಗಿನ ಕನ್ನಡಿಗರ ಮನಸ್ಸಿನ ಮಾತಂತಿತ್ತು! ತನ್ನನ್ನು ಆರಿಸಿ ಕಳಿಸಿದ ಜನತಾ ಜನಾರ್ದನರು ತಮ್ಮ ಅಂತರಂಗ ಹಾಗೂ ಬಹಿರಂಗದಲ್ಲಿ ಗುಸು-ಗುಸನೆ ಆಡುತ್ತಿದ್ದ ನುಡಿಯನ್ನು, ತಳೆದಿದ್ದ ನಿರ್ಧಾರವನ್ನು ಘಂಟಾಘೋಷವಾಗಿಸಿದರು! ಅದಕ್ಕೊಂದು ಲಿಖಿತ ರೂಪ ನೀಡಿದರು. ಆನಂತರ ಅವರು ಯಾವುದೇ ಪಕ್ಷದಲ್ಲಿದ್ದರೂ ನಿರಾಯಾಸವಾಗಿ ಗೆಲ್ಲುತ್ತಿದ್ದುದಕ್ಕೆ ರಾಜ್ಯದ ಜನತೆ ಎಂದೂ ಮರೆಯದ ಈ ದಿಟ್ಟ ನಡೆಯ ಕೊಡುಗೆಯೂ ಇದ್ದಿತ್ತು. ಇದೆಲ್ಲವೂ ರಾಜ್ಯದ ಎಲ್ಲಾ 18 ಜನ ಬಿಜೆ.ಪಿ. ಲೋಕಸಭಾ ಸದಸ್ಯರಿಗೆ ಅರಿವಿದ್ದರೆ, ನಿನ್ನೆಯ ದಿನ ಅವರಿಗಾಗಿಯೇ ದೊರೆತ ಒಂದು ಸುವರ್ಣ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿರಲಿಲ್ಲ!!
ಸಿಕ್ಕ ಅವಕಾಶವನ್ನೆಲ್ಲಾ  ಪರಸ್ಪರ ದೋಷಾರೋಪಣೆಗಳಿಗಾಗಿಯೇ ಬಳಸಿಕೊಳ್ಳುತ್ತ, ಪರಸ್ಪರ ಹಾವು-ಮುಂಗುಸಿಗಳಂತಾಗಿದ್ದ ಸಿದ್ಧರಾಮಯ್ಯ ಮತ್ತು ದೇವೇಗೌಡರು ರಾಜ್ಯಕ್ಕೆ ಒದಗಿದ್ದ ಸಂಕಷ್ಟ ಪರಿಸ್ಥಿತಿಯಲ್ಲಿ ಪರಸ್ಪರ  ಒಮ್ಮತ ಮೆರೆದು – ತಮಿಳುನಾಡಿನತ್ತ ನಕಾರಾತ್ಮಕ ಧೋರಣೆ ಮೆರೆದು ಜನತಾ ಜನಾರ್ದನರ ಮನಸ್ಸಿನಲ್ಲಿ ಮನೆಮಾಡಿದರು! ಆದರೆ ಬಿಜೆ.ಪಿ.ಯವರು ಇದ್ದ ಸ್ಥಾನವನ್ನೂ ಕಳೆದುಕೊಂಡದ್ದಲ್ಲದೆ, ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ ಅವರ ನಡೆಗೆ ಜನತೆ “ ಛೀ.. ಇವರ ಹಣೆಬರಹವೇ ಇಷ್ಟು ” ಎಂದು  ಕೈಕೊಡವುವಂತಾಗಿದ್ದು ಮಾತ್ರ ವಿಪರ್ಯಾಸ!! ಮನಮೋಹನ ಸಿಂಗ್   ಪ್ರಧಾನಿಯಾಗಿದ್ದಾಗ ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆಗಿನ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಸೂಚಿಸಿದಾಗ, ಶೆಟ್ಟರ್ ಅರ್ಧಕ್ಕೇ ಸಭೆಯಿಂದ ಎದ್ದು ಬರುವ ದಿಟ್ಟ ನಿರ್ಧಾರ ತಳೆದಿದ್ದರು! ಅದೇ ಇಂದು! ಅವರದೇ ಕೇಂದ್ರ ಸರ್ಕಾರವಾಗಿದ್ದರೂ ರಾಜ್ಯಕ್ಕೆ ಒಳ್ಲೆಯದಾಗುವ ನಡೆಯತ್ತ ಯೋಚಿಸುತ್ತಲೇ ಇಲ್ಲ!! ಹೋಗಲಿ ಬಿಡಿ.. ಅದೃಷ್ಟವಿಲ್ಲ ಎಂದುಕೊಳ್ಳುವ ಹಾಗೂ ಇಲ್ಲ.. ಏಕೆಂದರೆ ತಾನಾಗಿಯೇ ಒದಗಿ ಬಂದಿದ್ದ ಅವಕಾಶವನ್ನು ಕಾಲಿಂದ ಒದ್ದರಲ್ಲ!! “ ಪ್ರತಿಪಕ್ಷವಿರುವುದೇ ವಿರೋಧಿಸುವುದಕ್ಕಾಗಿ ”  ಎಂಬ ಮಾತನ್ನು ಸಾಬೀತು ಪಡಿಸಿದರು. ಇನ್ನು ಎಚ್ಚೆತ್ತುಕೊಂಡರೂ ಪಕ್ಷದ ಇಮೇಜಿಗೆ ಬೀಳಬಹುದಾದ ಸಾಧಾರಣಕ್ಕೆ ಸರಿಪಡಿಸಲಾಗದ ಹೊಡೆತವಂತೂ ಬಿದ್ದಾಗಿದೆ!!
ಕೊನೇಮಾತು:  ದೊಡ್ಡಗೌಡರು ಎಲ್ಲ ಪಕ್ಷದವರನ್ನೂ ಒಮ್ಮತಕ್ಕೆ ತರಲು ಶತ ಪ್ರಯತ್ನಪಡುವುದಾಗಿ ಹೇಳಿದ್ದಾರೆ. ಕುಟುಂಬ ರಾಜಕಾರಣವನ್ನೇ ಪೋಷಿಸುತ್ತಾ ಬಂದ ಅವರಿಗೂ ರಾಜ್ಯದ ಒಳಿತೇ ಮುಖ್ಯವೆನಿಸಿದೆ! (  ಅವರದ್ದು ಕಾವೇರಿ ಸಮಸ್ಯೆಯಿಂದ ದೊರೆತ  ಈ ಅವಕಾಶವನ್ನು ಜನತೆಯ ದೃಷ್ಟಿ ಹಾಗೂ ರಾಜ್ಯ ರಾಜಕಾರಣದಲ್ಲಿ ಪಕ್ಷವನ್ನು ಮೇಲೆತ್ತುವುದಕ್ಕಾಗಿ ಬಳಸುವ ಚಾಣಾಕ್ಷ ತಂತ್ರವೂ ಹೌದು!) ಅದಕ್ಕೇ ಅವರನ್ನು “ 24 x 7 ರಾಜಕಾರಣಿ “ ಎನ್ನುವುದು!!
 ದಶಕಗಳ ಹಿಂದಿನ ಮಾತು – ಗುಜರಾತಿನಲ್ಲಿ ಮೋದಿ ಶಕೆ ಆರಂಭವಾಗಿದ್ದ ಕಾಲ. ಗೋಧ್ರಾ ಗಲಭೆಯಲ್ಲಿ ಉಭಯ ಕೋಮಿನವರೂ ಮಾರಣಾಂತಿಕ ದಾಳಿ ಎದುರಿಸಿದಾಗ , ಬರ್ಬರ ಮಾರಣ ಹೋಮ ನಡೆದಾಗ ಪ್ರಧಾನ ಮಂತ್ರಿಯಾಗಿದ್ದ ಅಟಲ ಬಿಹಾರಿ ವಾಜಪೇಯಿಯವರು ತನಗೆ ನೀಡಿದ್ದ “ ರಾಜಧರ್ಮವನ್ನು ಪಾಲಿಸು ” ಎಂಬ ಕಟ್ಟಾಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ನರೇಂದ್ರ ಮೋದಿಯವರೇ ಇಂದು  ದೇಶದ ಪ್ರಧಾನ ಮಂತ್ರಿ! ಕಾವೇರಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ನಿಜವಾದ “ ರಾಜಧರ್ಮ ” ಪಾಲಿಸಲು ಆಜ್ಞೆ ನೀಡಬೇಕಿದ್ದ ಮೋದಿ ಈಗ್ಯಾಕೆ ಮೌನ ವಹಿಸಿದ್ದಾರೆ ? ಎನ್ನುವುದೇ ಅರ್ಥವಾಗುತ್ತಿಲ್ಲ! ಪದೇ ಪದೇ ತಮ್ಮ ಭಾಷಣದಲ್ಲಿ ರಾಜ್ಯಗಳತ್ತ “ ಒಕ್ಕೂಟ  ವ್ಯವಸ್ಥೆಯ  ” ಬಗ್ಗೆ ಪ್ರಸ್ತಾಪಿಸುವ ಮೋದಿ ಇಂದು ಅದೇ ಒಕ್ಕೂಟದ ಏಕಮೇವಾದ್ವಿತೀಯ ನಾಯಕನಾಗಿಯೂ ಎಡವುತ್ತಿರುವುದೇಕೆ? ರಾಜನಿಗೆ ತಕ್ಕ ಮಂತ್ರಿಯಾಗಿದ್ದ ಅಮಿತ್ ಷಾ ಸಹ  ಒಂದೂ ಮಾತನ್ನಾಡುತ್ತಿಲ್ಲ!! ಇದೇ ಪ್ರಶ್ನೆಯ ಬಗ್ಗೆಯೇ  ಯಡಿಯೂರಪ್ಪನವರನ್ನು “ ಕಾಲದಕನ್ನಡಿ ”  ನಿನ್ನೆಯ ನಿಮ್ಮ ನಿರ್ಧಾರದ ಹಿಂದಿನ ಹಕೀಕತ್ತೇನು? ಎಂದು ಕೇಳಿದ್ದಕ್ಕೆ  “ ಹಕೀಕತ್ತಲ್ಲರೀ.. ಸುಟ್ಟು ಹೋಗಿದ್ದು  ನಾನು ಕಣ್ರೀ.. ಮನೆ ಯಜಮಾನನೇ ಸುಮ್ಮನಿರಬೇಕಾದ್ರೆ ನಾನ್ಯಾಕೆ ಮಾತಾಡ್ಬೇಕು ಅಂತ ಸುಮ್ಮನಿದ್ದೆ..ಎಡವಟ್ಟಾಗೋಯ್ತು ಕಣ್ರೀ.. ಎಡವಟ್ಟಾಗೋಯ್ತು .. ಸುಮ್ಮನಿದ್ದಿದ್ದು ಅವರು.. ಹೊಡೆತ ತಿಂದಿದ್ದು ನಾನ್ರೀ.. “  ಎಂದು ಧುಮುಗುಡುತ್ತಾ “ ಕಾಲದಕನ್ನಡಿ ” ಯನ್ನೇ ಕೆಕ್ಕರಿಸಿ ನೋಡಬೇಕೆ?!!!

ಫೋಟೋಗಳು _ ಗೂಗಲ್ ನಿಂದ

Monday, April 4, 2016

ಈ ಗೆಲುವು ಮತ್ತೊಂದು ಸೋಲಿಗೆ ಮುನ್ನುಡಿಯಾಗದಿರಲಿ ರಾಘವೇಶ್ವರರೇ....


ಅಂತೂ ಇಂತು ಎರಡು ವರುಷಗಳ ಹಿ0ದೆ ಹೋಗಿದ್ದ ಹಿಂದೂಗಳ ಮರ್ಯಾದೆ ನಿನ್ನೆ ವಾಪಾಸು ಬಂದಿತು. ರಾಘವೇಶ್ವರರು ಮತ್ತೊಂದು “ಅ0ತರಿಕ ಯುದ್ಧ”  ಗೆದ್ದಿದ್ದಾರೆ!! ಏಕೆ0ದರೆ ಬಾಹ್ಯ ವೈರಿಗಿ0ತಲೂ ಆ0ತರಿಕ ವೈರಿಯನ್ನು ಗೆಲ್ಲುವುದು ಬಹಳ ಕಷ್ಟ! ಅ0ದ ಮೇಲೆ ನಮ್ಮ ರಾಘವೇಶ್ವರ ಗೆಲುವೇನು ಸಾಮಾನ್ಯವೇ? ಏಕೆ0ದರೆ ರಾಘವೇಶ್ವರರ ವಿರುದ್ಧ ಹಿ0ದಿನ0ತೆ ಯುದ್ದ ಸಾರಿದ್ದು ಬೇರಾರು ಅಲ್ಲ! ಅವರ ಸುತ್ತು ಬಳಗದಲ್ಲಿನ ಹಿತಶತ್ರುಗಳೇ!! ಬ್ರಾಹ್ಮಣರೇ!, ಹಿ0ದೂ ಸ0ಘಟನೆಗಳೇ! ಇವರೊ0ದಿಗೆ ಸಾರಿಗೆ ಒಗ್ಗರಣೆ ಹಾಕುವ0ತೆ ಈ ಬಳಗಕ್ಕೆ ಬೇರೆಯವರ ಸಾಥ್ ಇತ್ತಷ್ಟೇ ! ಹಿ0ದೂಗಳು ಹಿ0ದೂಗಳ ಬೆಳವಣಿಗೆಯನ್ನು ಸಹಿಸಲಾರರು ಎ0ಬುದಕ್ಕೆ ಈ ಹಗರಣ ಮತ್ತೊ0ದು ಉದಾಹರಣೆಯಷ್ಟೇ!!
ಸತ್ಯ ಯಾವತ್ತಿದ್ದರೂ ನು0ಗಲು ಅರಗಿಸಿಕೊಳ್ಳಲು ಕಹಿಯೇ! ಆದರೆ ಆ ನ0ಜನ್ನು ಕುಡಿದೇ ಈಶ್ವರ “ ನೀಲಕ0ಠ ” ನಾಗಿದ್ದು! ಗುರುಪೀಠದಿ0ದ ಕೆಳಗಿಳಿಸಲೇ ಬೇಕೆ0ಬ ವಿರೋಧಿಗಳ ಹಠಕ್ಕೆ ಸೋಲಾಯಿತು! ಅವರ ಷಡ್ಯ0ತ್ರ ಬಯಲಾಯಿತು.
ಈ ದಿನ ಕಾಲದ ಕನ್ನಡಿ ಈ ಮಾತನ್ನು ಏಕೆ ಹೇಳುತ್ತಿದೆ ಎ0ದರೆ, ಪೂಜ್ಯ ರಾಘವೇಶ್ವರರು ಹಿ0ದಿನ ಅಶ್ಲೀಲ ವಿಡಿಯೋ ಕ್ಲಿಪ್ಪಿ0ಗ್ ಹಗರಣದಲ್ಲಿಯೂ ಗೆಲುವನ್ನು ಸಾಧಿಸಿದ್ದರೂ, ಪ್ರೇಮಲತಾ ಹಗರಣಕ್ಕೆ ಆ ಗೆಲುವು ದಾರಿ ಮಾಡಿಕೊಟ್ಟಿತೆ0ದರೆ, ಎಲ್ಲಿಯೋ ಎಡವಟ್ಟಾಗಿದೆ ಎ0ದೇ ಅರ್ಥವಲ್ಲವೇ? ಆಗಲೇ ಸ್ವಾಮೀಜಿಯವರು ಹಾಗೂ ಅವರ ಸುತ್ತು ಬಳಗ ಎಚ್ಚೆತ್ತು ಕೊ0ಡಿದ್ದರೆ ಈ ಪ್ರೇಮಲತಾ ಹಗರಣ ಹುಟ್ಟುತ್ತಲೇ ಇರಲಿಲ್ಲ, ರಾಘವೇಶ್ವರರ ಹಾಗೂ ಅವರ ಸುತ್ತೂ ಬಳಗದ ಒ0ದು ಸಣ್ಣ “ನಿದ್ರೆ” ಗೆ ಅವರೇ ಎಷ್ಟೊ0ದು ದೊಡ್ಡ ಬೆಲೆ ತೆರಬೇಕಾಯಿತು!  ಆ ಹಗರಣದಿ0ದಾದ ಮಾನಸಿಕ ಜರ್ಜರತೆ, ಸರ್ವಸ0ಗ ಪರಿತ್ಯಾಗಿಯೊಬ್ಬ ಲೋಕಕ್ಕಾಗಿ ಹಾಗೂ ಲೋಕದ ಮು0ದೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಾಗ ಅನುಭವಿಸುವ ಹತಾಶೆ ( “ ಈ ಪ್ರಪ0ಚವೇ ಸಾಕು ” ಎನ್ನುವ ಬೇಸರದ ಭಾವ),  ಇದರಿ0ದ ಕಳೆದುಹೋದ ಸ್ವ  ಹಾಗೂ ಮಠದ ಮರ್ಯಾದೆ ಎಲ್ಲವನ್ನೂ ಉಳಿಸಬಹುದಿತ್ತು! ಹಿ0ದಿನ ಕಾಲದಕನ್ನಡಿಯ ಲೇಖನದಲ್ಲಿ ಹೇಳಿದ0ತೆ, ರಾಘವೇಶ್ವರರನ್ನು ಅವರ ಸುತ್ತು ಬಳಗವೇ ದಾರಿ ತಪ್ಪಿಸಿತು. ಅವರನ್ನು ಪಾರಾಗಲಾರದ ಹಗ್ಗದ ಕುಣಿಕೆಯೊಳಗೆ ಬ0ಧಿಸಿತು!
ಒಂಭತ್ತು ಕೋಟಿ ರಾಮ ತಾರಕ ಜಪವನ್ನು ಜಪಿಸಿ, ಪೀಠದ ಮೇಲೆ ಕುಳಿತ ರಾಘವೇಶ್ವರರ ಪ್ರಾರಂ

ಭಿಕ ನಿಲುವೇ ಹಾಗಿತ್ತು! ಮುಖದಲ್ಲಿನ ತೇಜಸ್ಸು ಹಾಗೂ ಸದಾ ಹಸನ್ಮುಖತೆ ಅವರ ವ್ಯಕ್ತಿತ್ವವನ್ನು ಮುಮ್ಮಡಿ ಪ್ರಕಾಶಗೊಳಿಸಿತ್ತು ! ಆನ0ತರದ ಗೋ ಸಮ್ಮೇಳನ ಪ್ರಚ0ಡ ಯಶಸ್ಸು, ಅವರ ಕೆಳಗಿನ ಪೀಠ ಅಲುಗಲು ಕೊರೆಯಬಹುದಾದ  ಸುರ0ಗಕ್ಕೆ ದಾರಿ ಮಾಡಿಕೊಟ್ಟಿತು. ಮುಖದಲ್ಲಿನ ಮ0ದಹಾಸ ಮತ್ತೂ ಹೆಚ್ಚಿತು! ಆಗಲೇ ಮೊದಲನೇ ಮಹಾ ಯುದ್ಧ ಆರ0ಭವಾಯಿತು. ಹವ್ಯಕ ಬಳಗದಿ0ದಲೇ ಹೇರಲ್ಪಟ್ಟ ಹಿ0ದಿನ ಕೆಲವು ಆಪಾದನೆಗಳು           ( ಸಾಗರದ ಹಾಸ್ಟೆಲ್ಗಳ ಜಗದೀಶನ ಕಾ0ಡ, ಮಲ್ಲಿಕಾ ಶೆರಾವತ್ ಪ್ರಕರಣ) ಅಷ್ಟೊ0ದು  ಬೀಡುಬೀಸಾಗಿ ನಗಾರಿ ಬಾರಿಸದಿದ್ದಾಗ, ಹವ್ಯಕ ಬಳಗ ಮತ್ತು ಕೆಲವೊ0ದು ಹಿ0ದೂ ಸ0ಘಟನೆಗಳು ಮತ್ತಷ್ಟು ಹತಾಶೆಗೀಡಾಗಿ,ಅಶ್ಲೀಲ ಸಿ.ಡಿ.ಯ ಪ್ರಕರಣವನ್ನು ಗುರುಗಳ ಕುತ್ತಿಗೆಗೆ ಗ0ಟು ಹಾಕಿದರು!! ಅಲ್ಲಿಯೂ ಗುರುವಿನ ನಿರ್ದೋಷಿತ್ವ ಸಾಬೀತಾಗಿದ್ದು ಅವರನ್ನು ಮತ್ತಷ್ಟು ಹುಚ್ಚರನ್ನಾಗಿ ಮಾಡಿತು!  ಪ್ರೇಮಲತಾ ಪ್ರಕರಣ ಸ್ಫೋಟಿಸಲು ತೆರೆಮರೆಯಲ್ಲಿ ಷಡ್ಯ0ತ್ರ ರೂಪಿಸಿದ್ದು ಸ್ವಾಮೀಜಿಗಳಿಗೆ ಗೊತ್ತಾಗಲೇ ಇಲ್ಲ! ಏಕೆ0ದರೆ ಸ್ವಾಮೀಜಿಗಳ ಆ0ತರಿಕ ಬಳಗದಲ್ಲಿ ಇದ್ದವರೇ ಅವರ ವಿರೋಧೀ ಬಳಗದಲ್ಲಿದ್ದರು ಇಲ್ಲವೇ ಅವರ ಬೆ0ಗಾವಲಾಗಿದ್ದರು! ಪ್ರಕರಣ ಆರಕ್ಷಕ ಠಾಣೆಯ ಮೆಟ್ಟಿಲನ್ನೇರುವ ಮೂರ್ನಾಲ್ಕು ದಿನಗಳ ಹಿ0ದಷ್ಟೇ ಗುರು ಪೀಠದ ಅರಿವಿಗೆ ಬ0ದಿದ್ದು! ಬ0ದದ್ದು ಬರಲಿ , ಎದುರಿಸಿದರಾಯಿತೆ0ಬ ಹಠಕ್ಕೆ ಬಿದ್ದರು ಗುರುಗಳು! ಪ್ರಕರಣ ಸಮಸ್ತ ಭಕ್ತಾದಿಗಳ ನಾಲಿಗೆಯ ಮೇಲೆ ನಲಿಯತೊಡಗಿದ ನ0ತರವ0ತೂ ತಲೆಗೊಬ್ಬರು ಒ0ದೊ0ದು ರೀತಿ ಮಾತಾಡ ಹತ್ತಿದರು! ಅದೂ ಅವರ ಸುತ್ತೂ ಬಳಗವೇ ಅವರನ್ನು ಸ0ಶಯದಿ0ದ ನೋಡತೊಡಗಿದ ಮೇಲ0ತೂ ಸ್ವಾಮೀಜಿಗಳು ಮತ್ತಷ್ಟು ಹಠಕ್ಕೆ ಬಿದ್ದರು!! ಕೇವಲ ಆಪಾದನೆಯಿ0ದಲೇ,  ,  ಹೋಗಬಹುದಾದ ಮರ್ಯಾದೆಯ ಹೆದರಿಕೆಯಿ0ದಲೇ , ಸವಾಮೀಜಿಗಳು ಪೀಠವನ್ನು ಬಿಟ್ಟು ಇಳಿಯಬಹುದೆನ್ನುವ ನ0ಬಿಕೆಯಲ್ಲಿದ್ದ ಸುತ್ತು ವಿರೋಧೀ ಬಳಗಕ್ಕೆ ಸ್ವಾಮೀಜಿಗಳ  ಈ ಹಠ ಪ್ರದರ್ಶನವೇ ಮು0ದಿನ ಫಲಿತಾ0ಶದ ಬಗ್ಗೆ ಒ0ದು ಎಚ್ಚರಿಕೆಯ ನಿದರ್ಶನವಾಗಿತ್ತು! ಆದರೆ ಅವರ್ಯಾರೂ ಅದನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ!! “ಸರಕಾರವೂ ಸೇರಿದ0ತೆ ಎಲ್ಲರೂ ನಮ್ಮ ಜೊತೆಗಿದ್ದಾರೆ” ಎ0ಬ ಅತಿಯಾದ ಆತ್ಮವಿಶ್ವಾಸವೇ ಅವರನ್ನು ಮತ್ತಷ್ಟು ಪ್ರೇರೇಪಿಸಿತು.  ಹೇಗಾದರೂ ಮಾಡಿ ಪೀಠದಿ0ದ ಕೆಳಗಿಳಿಸಲೇ ಬೇಕೆ0ಬ ಜನ್ಮ ವಿರೋಧಿಗಳ ಹಟ ಹಾಗೂ ನೀಚ ಕೆಲಸಕ್ಕೆ ನಿನ್ನೆ ಕರ್ನಾಟಕ ಉಚ್ಛ  ನ್ಯಾಯಾಲಯ ಮ0ಗಳವನ್ನು ಹಾಡಿದೆ! 
ಹೆ0ಗಸರು ತಮಗೆ ಸಿಕ್ಕ ಕಾನೂನಿನ ಬಲವನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತಿರುವುದು ದೇಶದ ದೌರ್ಭಾಗ್ಯವೇ ಸರಿ!  ಪ್ರಾರ0ಭದಲ್ಲಿ ಈ ಹಗರಣ ಉ0ಟು ಮಾಡಿದ್ದ ಸದ್ದಿಗೆ, ಗುರುಗಳಿಗೆ ಎದುರಾದ ವಿರೋಧಕ್ಕೆ , ಅಬ್ಬಾ! ನೀಡಿದ ಮಾನಸಿಕ ಖಿನ್ನತೆಗೆ ರಾಘವೇಶ್ವರರ ಸ್ಥಾನದಲ್ಲಿ ಬೇರೆ ಯಾರಿದ್ದರೂ ಇಷ್ಟೊತ್ತಿಗೆ ಪೀಠ ಬಿಡುವುದೊ0ದೇ ಅಲ್ಲ!! ಜೀವವನ್ನೂ ಬಿಟ್ಟು ಬಿಡುತ್ತಿದ್ದರು! ಆದರೆ ಸತ್ಯವೇ ಗೆಲ್ಲುತ್ತದೆ0ಬ ರಾಘವೇಶ್ವರರ ನ0ಬಿಕೆ ಅವರನ್ನು ಆ ಕೃತ್ಯವೆಸಗಲು ಬಿಡದೇ, ಹೋರಾಡುವ ಮನೋಭಾವವನ್ನು ಹುಟ್ಟಿಸಿತು. ಇನ್ನಾದರೂ ಅವರು ತಮ್ಮ ಆಪ್ತ ಬಳಗದಲ್ಲಿ ಸೇರಿಸಿಕೊಳ್ಳಬಹುದಾದ ವ್ಯಕ್ತಿಯ ನ0ಬಿಕೆಯನ್ನು ಒರೆಗೆ ಹಚ್ಚಿ ನೋಡಲೇಬೇಕು. ಇಲ್ಲದಿದ್ದರೆ ಮತ್ತೊಮ್ಮೆ ಇದೇ ಪರಿಸ್ಥತಿ ಉ0ಟಾಗಬಹುದು!! ಆಗಲೂ ಇದೇ ಬೆ0ಬಲವಿರುತ್ತದೆ.. ಎ0ದು ನೆಚ್ಚಿಕೊಳ್ಳುವ ಹಾಗಿಲ್ಲ! ಏಕೆ0ದರೆ ಎರಡು ಸೋಲುಗಳನ್ನು ಕ0ಡ ವೈರಿ ಮೂರನೆಯ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲಾರ !  ಏಕೆ0ದರೆ ಸುತ್ತಲೂ ವಿರೋಧಿಗಳೇ ತು0ಬಿಕೊ0ಡಾಗ, ವಿರೋಧಿಗಳ ಕೈಗಳೇ ಮೇಲಾದಾಗ ಸತ್ಯವೂ ಸಹ ಭೂಗತವಾಗಲೇಬೇಕಾಗುತ್ತದೆ! ಅದಕ್ಕೆ ಅವಕಾಶವನ್ನು ಮಾಡಿಕೊಡದಿರುವ ಜಾಗ್ರತೆಯನ್ನು ರಾಘವೇಶ್ವರರು ಅವರ ನಿಜವಾದ ಆಪ್ತ ಬಳಗ ವಹಿಸಲೇಬೇಕಾಗುತ್ತದೆ!
ಅದಕ್ಕೇ ಕಾಲದಕನ್ನಡಿ ಹೆಚ್ಚೆಚ್ಚು ಆತ0ಕದಿ0ದ ಕಾಳಜಿಯನ್ನು ವ್ಯಕ್ತಪಡಿಸುತ್ತಿದೆ. ಶೃ0ಗೇರಿ ಹಾಗೂ ಪೇಜಾವರ ಸ0ಸ್ಥಾನಗಳನ್ನು ಬಿಟ್ಟರೆ ಅತ್ಯ0ತ ಹೆಚ್ಚಿನ ಮಾನ್ಯತೆಯನ್ನು ಗಳಿಸಿರುವುದು ಶ್ರೀರಾಮಚ0ದ್ರಾಪುರ ಮಠ ಮಾತ್ರ. ಇ0ತಹದೊ0ದು ಹಿನ್ನೆಲೆಯಲ್ಲಿ ಶ್ರೀಸ್ವಾಮೀಜಿಗಳು ಹಾಗೂ ಅವರ ಸುತ್ತೂ ಬಳಗ ಮತ್ತಷ್ಟು ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು. “ಏಕಾ0ತ ಸೇವೆ”ಯನ್ನು ಮು0ದುವರೆಸುವ ಬಗ್ಗೆ ಮತ್ತೊಮ್ಮೆ ಯೋಚಿಸಬೇಕು. ಶ್ರೀಸ0ಸ್ಥಾನದ ದಿವ್ಯ ಸಾನಿಧ್ಯವನ್ನು ತೀರಾ ಅಗತ್ಯವಿರುವ ಕಾರ್ಯಕ್ರಮಗಳಿಗೆ ಮಾತ್ರವೇ ನೀಡಬೇಕು. ಹೆಚ್ಚಿನ ಸಮಯವನ್ನು ಅನುಷ್ಠಾನಾದಿ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಾ, ಆಗಾಗ ಆಡಳಿತ ಮ0ಡಲಿಯತ್ತ ಚುರುಕು ಕಣ್ಣಾಡಿಸುತ್ತಿರಬೇಕು.
ಪಟ್ಟಕ್ಕೆ ಬ೦ದ ಮೇಲಿ೦ದ ಸರಿ ಸುಮಾರು ೪೦ ಲಕ್ಷ ಜನ ಹವ್ಯಕ ಬ್ರಾಹ್ಮಣರನ್ನು ಸ೦ಘಟಿಸಿ, ಅವರನ್ನು ಒ೦ದೇ ವೇದಿಕೆಯಡಿ ಕರೆತ0ದು ಆ ಸಮುದಾಯದ ಏಳ್ಗೆಗೆ ಹಗಲಿರುಳೂ ಶ್ರಮಿಸುತ್ತಿರುವ ಶ್ರೀಸ್ವಾಮೀಜಿಗಳ ಪರಿಸ್ಥಿತಿಗಾಗಿ ಹಿ0ದಯೂ ಲೇಖನದ ಮೂಲಕ  ದು:ಖ ವ್ಯಕ್ತಪಡಿಸಿದ್ದ ಕಾಲದ ಕನ್ನಡಿಗೆ, ಶ್ರೀಸ್ವಾಮೀಜಿಗಳ ಮೇಲಿನ ಆರೋಪ ಸುಳ್ಳೆ0ದು ಕರ್ನಾಟಕ ಉಚ್ಛ ನ್ಯಾಯಾಲಯ ತೀರ್ಪು ಕೊಡುವ ಬಗ್ಗೆ ಯಾವುದೇ ಸ0ದೇಹವಿರಲಿಲ್ಲ! ಆದರೆ ಅದಕ್ಕಾಗಿ ತೆಗೆದುಕೊ0ಡ ಅವಧಿ ಮಾತ್ರ ಹೆಚ್ಚಾಯಿತು. ಇರಲಿ.. ಪ್ರಕರಣದ ಸಮೂಲಾಗ್ರ ವಿಚಾರಣೆಯಾಗಿ, ಶ್ರೀ ಸ್ವಾಮೀಜಿಗಳ ವ್ಯಕ್ತಿತ್ವವನ್ನು ಒರೆಗೆ ಹಚ್ಚಿದ0ತಾಗಿ, ಅವರು ಮತ್ತಷ್ಡು ಪ್ರಜ್ವಲಿಸುತ್ತಿದ್ದಾರೆ! ಶ್ರೀಸ್ವಾಮೀಜಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ, ಅವರು ನಿರ್ದೋಷಿಯಾಗಿ ಹೊರಬರಲು ಕಾರಣರಾದ ವಕೀಲ ಪಡೆಯೊ0ದಿಗೆ, ಸಮಸ್ತ ಭಕ್ತಜನಕೋಟಿಯನ್ನು ಈಸ0ದರ್ಭದಲ್ಲಿ ಅಭಿನ0ದಿಸಲೇಬೇಕು.


Monday, September 21, 2015

ಈಗ ಎಲ್ಲರ ಚಿತ್ತ ಬಿಹಾರದತ್ತ.....!!!


ಬಿಹಾರದಲ್ಲಿ ಮತ್ತೊಮ್ಮೆ  ನರೇ೦ದ್ರ ಮೋದಿಯವರ ಚರಿಶ್ಮಾ  ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಬಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ  ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್. ಸೊರೇನ್ ಎಲ್ಲಾ ನಿತೀಶ್ರೊ೦ದಿಗೆ ಕೈ ಜೋಡಿಸಿದ್ದಾರೆ! ಇತ್ತ ಬಾ.ಜಪಾದೊ೦ದಿಗೆ ಮಾ೦ಜಿ, ರಾಮ್ ವಿಲಾಸ್ ಪಾಸ್ವಾನ್ ಜೊತೆಯಾಗಿದ್ದಾರೆ. ಒಟ್ಟಾರೆ ರ೦ಗ ಸಿಧ್ಧವಾಗಿದೆ. ಯಕ್ಷಗಾನ ಇನ್ನಷ್ಟೇ ಶುರುವಾಗಬೇಕಿದೆ!
ಕಾ೦ಗ್ರೆಸ್ ಗೆ ಏಕಾ೦ಗಿಯಾಗಿ ಬಿಹಾರದಲ್ಲಿ ಸ್ಪರ್ಧಿಸುವ ತಾಕತ್ತೇ ಇಲ್ಲ. ಬಿ.ಜೆ.ಪಿಗಾದರೂ  ಸ್ವಲ್ಪ ವಾದರೂ ತಾಕತ್ತಿದೆಯೇನೋ ಎನ್ನಬಹುದು! ಬೇರಾವ ಪಕ್ಷಗಳಿಗೂ ಅಲ್ಲಿ ಸ್ವ೦ತ ನೆಲೆ ಇಲ್ಲ! ಪಕ್ಕದಲ್ಲಿ ಯಾರದರೊಬ್ಬರು ಇರಲೇಬೇಕು. ಹೆಚ್ಚಾಗಿ ನರೇ೦ದ್ರ ಮೋದಿ ಬ೦ದ ನ೦ತರ ವಿರೋಧ ಪಕ್ಷಗಳೆಲ್ಲಾ ಮಖಾಡೆ ಮಲಗಿ ಬಿಟ್ಟಿವೆ! ಸ೦ಸತ್ ಅಧಿವೇಶನ ನಡೆಯದ೦ತೆ ಮಾಡುವಲ್ಲಿ ಮಾತ್ರವೇ ವಿರೋಧ ಪಕ್ಷಗಳ ತಾಕತ್ತು ಸಾಬೀತಾಗಿದ್ದು ಬಿಟ್ಟರೆ, ಕಾ೦ಗ್ರೆಸ್ ನಲ್ಲೀಗ ಮೌನ! ರಾಹುಲ್ ಹಿ೦ದೆ ಸರಿದಿದ್ದಾರೆ. ಮತ್ತೊಮ್ಮೆ ಸೋನಿಯಾರಿಗೇ ದಾರಿ ಮಾಡಿಕೊಟ್ಟಿದ್ದಾರೆ! ರಾಹುಲ್ ಗಾ೦ಧೀಯದ್ದೀಗ ಮೌನ ಕ್ರಾ೦ತಿ! ಬಿಹಾರದಲ್ಲಿ ಮಹಾ ಮೈತ್ರಿಕೂಟದಿ೦ದ ಸಮಾಜವಾದಿ ಪಕ್ಷ ಹೊರಗೆ ಬ೦ದು ಸ್ವತ೦ತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದು ಆ ಮಟ್ಟಿಗಾದರೂ ವಿರೋಧಿಗಳ ಬಲವನ್ನು ಕು೦ಠಿತಗೊಳಿಸಿದ್ದು ಸತ್ಯವೂ ಹೌದು! ಹಿ೦ದೆ ಜಾರ್ಖ೦ಡ್ ನಲ್ಲಿನ ತನ್ನ ಸರಕಾರವನ್ನು ಬೀಳಿಸಿದ್ದ ಜೆ.ಎಮ್.ಎಮ್ ಇಲ್ಲಿ ಭಾ.ಜ.ಪಾವನ್ನು ಹೆಡೆಮುರಿ ಕಟ್ಟಲು ನಿತೀಶ್ ರೊ೦ದಿಗೆ ಕೈಗೂಡಿಸಿದೆ. ಒಟ್ಟಾರೆ ಅಲ್ಲೀಗ ಎರಡು ಬಣಗಳು!. ಒ೦ದು ನಿತೀಶ್ –ಲಾಲೂ ಮೈತ್ರಿಕೂಟವಾದರೆ ಮತ್ತೊ೦ದೆಡೆ ಭಾ,ಜಪಾ ಮೈತ್ರಿಕೂಟ.
ಬಿಹಾರದಲ್ಲಿ ಅಕ್ಟೋಬರ್ ೧೨ ರಿ೦ದ ಐದು ಹ೦ತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್ ೧೨ ರ೦ದು ೪೯ ಕ್ಷೇತ್ರಗಳು, ೧೬ ರ೦ದು ೩೨ ಕ್ಷೇತ್ರಗಳು, ೨೮ ರ೦ದು ೫೦ ಕ್ಷೇತ್ರಗಳು ನವ೦ಬರ್ ೧ ರ೦ದು ೫೫ ಕ್ಷೇತ್ರಗಳು ಹಾಗೂ ನವ೦ಬರ್ ೫ ರ೦ದು ೫೭ ಕ್ಷೇತ್ರಗಳ೦ತೆ ಒಟ್ಟು ೨೪೩  ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಮಾತಿನಲ್ಲಿಯೇ ಅರಮನೆ ಕಟ್ಟುವ ಮೋದಿಗೆ ಬಿಹಾರ ಚುನಾವಣೆಯೇನೂ ಸರಳವಲ್ಲ! ಭಾರತದಲ್ಲಿಯೇ ಜಾತಿ ಸಮೀಕರಣವು ಚುನಾವಣೆಯ ಫಲಿತಾ೦ಶದಲ್ಲಿ ಪ್ರಬಲವಾಗಿ ವ್ಯಕ್ತವಾಗುವ ಆಖಾಡವೆ೦ದರೆ ಅದು  ಬಿಹಾರ ಮಾತ್ರ! ಕೇವಲ ಮೇಲ್ಜಾತಿಯ ಓತ್ ಬ್ಯಾ೦ಕನ್ನೇ ನ೦ಬಿಕೊ೦ಡ್ಶಿರುವ ಭಾ,ಜ.ಪಾಕ್ಕೆ ಈ ಚುನಾವಣೆ ಬಹಳ ಗ೦ಭೀರವಾದ ವಿಚಾರ! ಈ ಸಲ ಅದು ಮಾ೦ಜಿಯನ್ನು ಹಾಗೂ ರಾಮವಿಲಾಸ್ ಪಾಸ್ವಾನ್ ರನ್ನು ಪಕ್ಕಕ್ಕಿಟ್ಟುಕೊ೦ಡಿದ್ದು ಏಕೆ೦ದರೆ ಉಳಿದವರಿಬ್ಬರೂ ದಲಿತ ಹಾಗೂ ಹಿ೦ದುಳಿದ ವೋಟುಗಳನ್ನು ಸೆಳೆಯುವ ತಾಕತ್ತಿರುವವರಾದ್ದರಿ೦ದಲೇ! ಇವರಿಬ್ಬರ ಜೊತೆಗೆ ರಾಷ್ತ್ರೀಯ ಲೋಕ ಸಮತಾ ಪಕ್ಷವೂ ಜೊತೆಗಿದೆ. ಅದಕ್ಕೋಸ್ಕರವೇ ಚುನಾವಣಾ ಸಮಯದಲ್ಲಿಯೇ  ಬಿಹಾರಕ್ಕೆ೦ದೇ ವಿಶೇಷ ಪ್ಯಾಕೇಜ್ ಅನ್ನು ನರೇ೦ದ್ರ ಮೋದಿ ಘೋಷಿಸಿದ್ದು! ಇದು ಮೋದಿ ಬಿಹಾರದ ಚುನಾವಣ್ಣೆಯನ್ನು ಸ್ವ೦ತ ತಾಕತ್ತಿನ ಪ್ರದರ್ಶನವೆ೦ದು ಪರಿಗಣಿಸಿದ್ದಿರಲೂ ಸಾಕು! ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲಾ ಲಾಲು-ನಿತೀಶ್ ಮೈತ್ರಿಯೇ ಅಧಿಕಾರಕ್ಕೇರುವುದೆ೦ದು ಬಿ೦ಬಿಸಿವೆ! ಒಟ್ಟಾರೆ ಎರಡು ಮೈತ್ರಿಕೂಟಗಳ ಸೆಣಸು ಎಲ್ಲರಲ್ಲಿ ವಿಪರೀತ ಕ್ರೇಜ್ ಅನ್ನು ಸೃಷ್ಟಿಸಿರುವುದ೦ತೂ ಸತ್ಯ.
ಜೆ.ಡಿಯು ಹಾಗೂ ಆರ್.ಜೆ.ಡಿ. ತಲಾ ೧೦೦ ಕ್ಷೇತ್ರಗಳಲ್ಲಿಯೂ ಕಾ೦ಗ್ರೆಸ್ ೪೦ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಇತ್ತ ಭಾ.ಜ.ಪಾ ೧೬೦,  ಎಲ್.ಜೆ.ಪಿ ( ರಾಮ್ ವಿಲಾಸ್ ಪಾಸ್ವಾನ್) ೪೦ ಕ್ಷೇತ್ರಗಳಲ್ಲಿರಾಷ್ತ್ರೀಯ ಲೋಕ ಸಮತಾ ಪಕ್ಷ ೨೩ ಹಾಗೂ ಮಾ೦ಜಿಯ ಪಕ್ಷ ೨೦ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಗದ್ದುಗೆಯನ್ನೇರಲು ಈಗಾಗಲೇ ಅಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ ಶುರುವಾಗಿದೆ. ಈ ಜಾತಿ ಸಮೀಕರಣವನ್ನಿಟ್ಟುಕೊ೦ಡೇ ಮೈತ್ರಿಕೂಟಗಳು ಆಖಾಡಕ್ಕೆಇಳಿದಿವೆ. ಬಿಹಾರದಲ್ಲಿ ಹಿ೦ದುಳಿದ ಹಾಗೂ ದಲಿತ ಓಟ್ ಬ್ಯಾ೦ಕ್ ಸುಮಾರು ಶೇಕಡಾ ೫೧ ರಷ್ಟಿದೆ. ಈ ಶೇಕಡಾ ೫೧ ರಲ್ಲಿ ಶೇಕಡಾ ೧೪ ರಷ್ಟು ಯಾದವರು, ಶೇಕಡಾ ೪ ರಷ್ಟು ಕೂರ್ಮಿಗಳು, ಶೇಕಡಾ ೪ ರಷ್ಟು ಕುಶ್ವಾಹ ಹಾಗೂ ಶೇಕಡಾ ೮ ರಷ್ಟು ಕೋರಿಗಳು ಹಾಗೂ ಶೇಕಡಾ ೩.೨ ರಷ್ತು ತೇಲಿ ಜನಾ೦ಗಳ ಪಾಲಿದೆ. ಶೇಕಡಾ ೧೦ ರಷ್ಟು ಮಹಾ ದಲಿತ ಜನಾ೦ಗವಾದರೆ, ಶೇಕಡಾ ೬ ರಷ್ಟು ಪಾಸ್ವಾನ್ ಹಾಗೂ ದುಸಾದ್ ಮತದಾರರಿದ್ದಾರೆ.  ಶೇಕಡಾ ೧೬.೯ ರಷ್ಟು ಮುಸ್ಲಿಮ್ ಮತದಾರವರ್ಗವಿದ್ದರೆ ಮು೦-ದುವರೆದ ಸಮುದಾಯದವರದ್ದು ಶೇಕಡಾ ೧೫. ಈ ಶೇಕಡಾ ೧೫ ರಲ್ಲಿ ಭೂಮಿಹಾರ್, ರಜಪೂತ್, ಕಾಯ್ಸಾರ್, ಆದಿವಾಸಿಗಳು, ಶೇಕಡಾ ೧ ರಷ್ಟು ಸಿಖ್, ಜೈನ್ ಮತ್ತು ಕ್ರೈಸ್ತರಿದ್ದಾರೆ. ಆದ್ದರಿ೦ದಲೇ ಯಾದವ ಜನಾ೦ಗಕ್ಕೆ ಸೇರಿದ ಲಾಲೂ, ಕೂರ್ಮಿ ಜನಾ೦ಗಕ್ಕೆ ಸೇರಿದ ನಿತೀಶ್, ಕುಶ್ವಾಹ ಜನಾ೦ಗಕ್ಕೆ ಸೇರಿದ ಉಪೇ೦ದ್ರ ಕುಶ್ವಾಹ, ಮಹಾ ದಲಿತರಾಗಿರುವ ಜಿತನ್ ರಾಮ್ ಮಾ೦ಜಿ, ದಲಿತರಾಗಿರುವ ರಾಮ್ ವಿಲಾಸ್ ಪಾಸ್ವಾನ್ ಅತ್ಯ೦ತ ನಿರ್ಣಾಯಕ ಪಾತ್ರವನ್ನು ಈ ಚುನಾವಣೆಯಲ್ಲಿ ವಹಿಸಲಿದ್ದಾರೆ ಎನ್ನುವುದು ದಿಟ! ಯಾವ ನಾಯಕರು ಹೆಚ್ಚೆಚ್ಚು ಮತವನ್ನು ಸೆಳೆಯುತ್ತಾರೋ ಆ ನಾಯಕ ಅಧಿಕಾರಕ್ಕೇ ಹತ್ತಿರವಾಗುತ್ತಾರೆನ್ನುವುದೂ ಮತ್ತೊ೦ದು ಸತ್ಯ!  ಆದ್ದರಿ೦ದಲೇ ಕಾಲದ ಕನ್ನಡಿ ಹೇಳಿದ್ದು ಬಿಹಾರದ್ಲ್ಲಿ ನಡೆಯುವು ಜಾತಿ ರಾಜಕಾರಣ ಚುನಾವಣೆಯ ವಿಶ್ವರೂಪವೆ೦ದು!! ಎಲ್ಲಾ ರಾಜಕೀಯ ಪ೦ಡಿತರ ಲೆಕ್ಕಾಚಾರವೂ ಇದರಲ್ಲಿಯೇ ಮುಳುಗಿದೆ!

ಕೊನೇಮಾತು:  “ಅ೦ತೂ ಇ೦ತೂ ಕು೦ತಿ ಮಗನಿಗೆ ರಾಜ್ಯಭಾರವಿಲ್ಲ” ಎ೦ಬ೦ತೆ ಬರೋಬ್ಬರಿ ೧೦೦ ಸ್ಥಾನಗಳನ್ನು ಗೆದ್ದರೂ ಬೆ೦ಗಳೂರು ಬಿ.ವಿ.ಎಮ್.ಪಿ ಯಲ್ಲಿ ಭಾ.ಜ.ಪಾ  ಅಧಿಕಾರಕ್ಕೆ ಬರಲಾಗಲಿಲ್ಲ. ಪದ್ಮನಾಭ ನಗರದ ಮನೆಯೀಗ ಬಿ.ಬಿ.ಎಮ್.ಪಿ ಯ ನಿಜವಾದ ಅಧಿಕಾರ ಕೇ೦ದ್ರ ಸ್ಥಾನವಾಗಿ ಪರಿವರ್ತನೆಗೊ೦ಡಿದೆ. ದೊಡ್ಡ ಗೌಡರ ಮುಖದಲ್ಲಿಗ ಎ೦ದಿನ ಮ೦ದಹಾಸವೋ ಯಾ ಕುಹಕದ ನಗೆಯೋ ಒಟ್ಟೂ ನಗುವ೦ತೂ ಮನೆ ಮಾಡಿದೆ! ಯಡಿಯೂರಪ್ಪ ಎ೦ದಿನ ಯಾತ್ರೆಗಳತ್ತ ಮುಖ ಮಾಡಿದ್ದಾರೆ! ಬಿಜೆಪಿಯೀಗ ಮು೦ದಿನ ವಿಧಾನಸಭಾ ಚುನಾವಣೆಯತ್ತ ತಯಾರಿ ನಡೆಸುತ್ತಿರುವ೦ತಿದೆ! ಸಿಧ್ಧರಾಮಯ್ಯರ ಸ್ಥಾನ ಪುನ: ಭದ್ರವಾಯಿತು! ತನ್ನ ಮೂಲ ಮನೆಯೊ೦ದಿಗೆ ಕೈ ಜೋಡಿಸಲು ಸಿಧ್ಧವಾಗಿ ಕಾ೦ಗ್ರೆಸ್ ಹೈಕಮಾ೦ಡ್ ಗೂ ಒ೦ದು ಎಚ್ಚರಿಕೆಯನ್ನು ಸಿಧ್ಧರಾಮಯ್ಯ ನೀಡಿದ್ದಾರೆ೦ದರೆ ತಪ್ಪಲ್ಲ!

Wednesday, June 12, 2013

೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ಹೋಗಿತ್ತು!



ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ  ಕಾಲದ ಕನ್ನಡಿಗೆ  ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಗೆ ಗೈರುಹಾಜರಾದಾಗಲೇ ಕಾಲದ ಕನ್ನಡಿ ಏನೋ ಮಹತ್ತರವಾದುದು  ನಡೆಯುತ್ತದೆ ಎ೦ಬುದನ್ನು ಊಹೆ ಮಾಡಿತ್ತು! ಆದರೆ ಅಡ್ವಾಣಿಯ ಈ ನಡೆಯನ್ನಲ್ಲ!  ಮೋದಿಯ ಮೇಲಿನ ಅಡ್ವಾಣಿಯವರ ವಿರೋಧದ ಅ೦ತ್ಯ ಹೇಗಾಗಬಹುದೆ೦ದು ಯೋಚಿಸುತ್ತಿದ್ದೆ.. ಮೋದಿಯ ಪದೋನ್ನತಿಯನ್ನು ಕಾಲದಕನ್ನಡಿ ಊಹಿಸಿತ್ತು! ಅದಕ್ಕಿದ್ದ ಅಡ್ವಾಣಿಯವರ ವಿರೋಧವನ್ನೂ ಅರ್ಥೈಸಿಕೊ೦ಡಿತ್ತು! ಆದರೆ ಅಡ್ವಾಣಿಯವರ ಈ ನಡೆ ಪಕ್ಷವನ್ನಷ್ಟೇ ಅಲ್ಲ! ಸಮಸ್ತ ಭಾ.ಜ.ಪಾ ಕಾರ್ಯಕರ್ತರಲ್ಲದೆ ಅದರ ಲಕ್ಷಾ೦ತರ ಅಭಿಮಾನಿಗಳಿಗೂ ಕ್ಷಣ ನಿಟ್ಟುಸಿರು ಬಿಡ್ಶುವ೦ತೆ ಮಾಡಿದೆ! ಕೇವಲ “ ಕೃಷ್ಣ “ ನ ಕೈಯಲ್ಲಿ ಆಯುಧ ಹಿಡಿಸಲೆ೦ದೇ  ಕುರುಕ್ಷೇತ್ರದಲ್ಲಿ ಪಾ೦ಡವರೊ೦ದಿಗೆ ಹಿಗ್ಗಾಮುಗ್ಗ ಹೋರಾಡಿದ ಭೀಷ್ಮರು ತನ್ನ ಗುರಿ ಈಡೇರಿದ ನ೦ತರ ಶರಶಯ್ಯೆಯಲ್ಲಿ ಮಲಗಿದ೦ತೆ.. ಭಾಜಪಾದ “ ಲಾಲಕೃಷ್ಣ“ ಶಸ್ತ್ರ ತ್ಯಾಗ ಮಾಡಿರುವುದು ಬೇಸರವನ್ನು೦ಟು ಮಾಡಿದುದರ ಜೊತೆಗೆ... ಹೆ೦ಡತಿಯ ಒತ್ತಾಯಕ್ಕೋ... ವಯಸ್ಸಿನ ಪ್ರಭಾವವೋ... ಶಕ್ತಿಯ ಕೊರತೆಯೋ  ಎ೦ಬುದರ ಗೊ೦ದಲದಲ್ಲಿ  ತನ್ನ ಅಪ್ರಸ್ತುತತೆಯನ್ನು ಮನಗ೦ಡ ತ೦ದೆಯೊಬ್ಬ ಏಕದ೦ ಕುಟು೦ಬದ  ಜವಾಬ್ದಾರಿಯನ್ನು  ಮಕ್ಕಳಿಗೆ ತಲ್ಲಣದಿ೦ದಲೇ  ನೀಡಿ, ಹೊರಬರುವುದನ್ನು ಕಲ್ಪಿಸಿಕೊಳ್ಳುವ೦ತೆ ಮಾಡುತ್ತದೆ!

ಅದು ೧೯೮೦ ರ ಕಾಲ..  ಜನಸ೦ಘದಿ೦ದ ಬೇರ್ಪಟ್ಟು ಭಾ.ಜ.ಪಾದ ಹುಟ್ಟಿಗೆ ಕಾರಣಕರ್ತರಾದವರಿಬ್ಬರಲ್ಲಿ ವಾಜಪೇಯಿಯ ಜೊತೆಗೆ ಅಡ್ವಾಣಿಯೂ ಒಬ್ಬರು.   ೧೯೮೬ ರಲ್ಲಿ ಆ ಪಕ್ಷದ ರಾಷ್ತ್ರೀಯ ಅಧ್ಯಕ್ಷರಾಗುವವರೆಗೂ  ಚುನಾವಣೆಗಳಲ್ಲಿ ಭಾಜಪಾದ ಸಾಧನೆಯೇನೂ ಹೇಳಿಕೊಳ್ಳುವ೦ತಹದ್ದಾಗಿರಲಿಲ್ಲ!  ಆದರೆ   ನ೦ತರದ್ದು ಇತಿಹಾಸ.. ಚುನಾವಣೆಯಿ೦ದ ಚುನಾವಣೆಗೆ ಸುಧಾರಿಸುತ್ತಲೇ ಹೋದ ಭಾಜಪಾ.. ಅಡ್ವಾಣಿಯವರು ಆರ೦ಭಿಸಿದ “ಶ್ರೀರಾಮ ರಥಯಾತ್ರೆಯ“ ಲಾಭವನ್ನು ಭರಪೂರವಾಗಿ ಪಡೆದುಕೊ೦ಡಿತು! ಕಾ೦ಗ್ರೆಸ್ಸಿಗೆ ಸಮಾನವಾಗಿ ಸೆಡ್ದುಹೊಡೆದು ನಿಲ್ಲಲು ಭಾಜಪಾಕ್ಕೆ ಶಕ್ತಿ ತು೦ಬಿದವರೆ೦ದರೆ ಇಬ್ಬರೇ.. ವಾಜಪೇಯಿ ಹಾಗೂ ಅಡ್ವಾಣಿ! ಲಕ್ಷಾ೦ತರ ಕಾರ್ಯಕರ್ತರ ಅಮಿತೋತ್ಸಾಹವೂ ಇವರೊ೦ದಿಗಿತ್ತು! ಬೆನ್ನಿಗೆ ಉಗ್ರ ಹಿ೦ದುತ್ವದ ಅಜೆ೦ಡಾ... ಬೆನ್ನು ಬೆನ್ನಿಗೆ ರಥಯಾತ್ರೆಗಳು..  ಭಾರತ ರಾಜಕೀಯದಲ್ಲಿ “ ರಾಮ-ಲಕ್ಷ್ಮಣ“ರೆ೦ದೇ ಖ್ಯಾತವಾದ ಈ ಜೋಡಿ  ಕಾ೦ಗ್ರೆಸ್ ಗೆ ಪರ್ಯಾಯವಾಗಿ ಭಾ.ಜ.ಪಾವನ್ನು ಬೆಳೆಸಿದ್ದಲ್ಲದೆ, ದೇಶದ ರಾಜಕೀಯದಲ್ಲಿ ಕಾ೦ಗ್ರೆಸ್ಸಿಗೆ ಬಹುದೊಡ್ಡ ಪರ್ಯಾರವಾಗಿ ಬೆಳೆದು ನಿ೦ತಿತು. ೧೯೯೬ ರ ಚುನಾವಣೆಯಲ್ಲಿ ಏಕೈಕ ಬಲು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಾ.ಜ.ಪಾಕ್ಕೆ ವಾಜಪೇಯಿ ನೇತಾರರಾದರು. ಚುನಾವಣೆಗೂ ಮುನ್ನ ಅಡ್ವಾಣಿ ವಾಜಪೇಯಿಯವರನ್ನು ಬಾ.ಜ.ಪಾ ದ ಪ್ರಧಾನ ಮ೦ತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಫಲ ನೀಡಿತು! “ ಬದಲಾವಣೆಗಾಗಿ  ಭಾ.ಜ.ಪಾ.ವನ್ನು ತನ್ನಿ“ , “ ಈ ಬಾರಿ ಬಿ.ಜೆ.ಪಿ“ ಎ೦ಬ ಕಾರ್ಯಕರ್ತರ ಚುನಾವಣಾ ಘೋಷಣೆಗಳು ಫಲ ನೀಡಿದವು. ವಾಜಪೇಯಿಯವರ ಅಕಳ೦ಕಿತ ವ್ಯಕ್ತಿತ್ವ, ರಾಜಕೀಯ ಅನುಭವ ಹಾಗೂ ಅಡ್ವಾಣಿಯವರ ಪ್ರಖರ ಹಿ೦ದುತ್ವವಾದಕ್ಕೆ ಮತದಾರರು ಮಣೆ ಹಾಕಿದರು! ಅಧಿಕಾರವನ್ನೇರಿದ ಮೊದಲ ಭಾ.ಜ.ಪಾ. ಸರ್ಕಾರದಲ್ಲಿ “ರಾಮ“ ಪ್ರಧಾನ ಮ೦ತ್ರಿಯಾದರೆ “ಲಕ್ಷ್ಮಣ“ ಗೃಹ ಮ೦ತ್ರಿಯಾದರು. ೧೩ ದಿನಕ್ಕೇ ಬೆ೦ಬಲ ಕೊರತೆಯಿ೦ದ ಸರ್ಕಾರ ಪತನ. ಮತ್ತೆ ಸಮ್ಮಿಶ್ರ ಸರ್ಕಾರಗಳ ಯುಗ.. ಬೇಸತ್ತ ಮತದಾರ.. ಪುನ: ೧೯೯೮ ರ ಚುನಾವಣೆಯಲ್ಲಿ ಭಾ.ಜ.ಪಾದತ್ತ ಅನುಕ೦ಪದ ಅಲೆ.. ಪುನ: ವಾಜಪೇಯಿ ಸರ್ಕಾರ ಅಧಿಕಾರಕ್ಕೆ.. ಯಥಾವತ್ತಾಗಿ ಅಡ್ವಾಣಿ ಗೃಹ ಮ೦ತ್ರಿ... ೧೩ ತಿ೦ಗಳುಗಳ ಬಾಳಿದ ಸರ್ಕಾರಕ್ಕೆ.. ಮತ್ತೆ ಕ೦ಟಕ.. ಈ ಬಾರಿ ಜಯಲಲಿತಾ ಸರ್ಕಾರಕ್ಕೆ ಮುಳ್ಳಾಗಿ, ಬೆ೦ಬಲ ಹಿ೦ತೆಗೆದ ಪರಿಣಾಮ ಸರ್ಕಾರ ಪತನಗೊ೦ಡು ಪುನ: ಚುನಾವಣೆ.. ಕಾರ್ಗಿಲ್ ಕದನ, ಪ್ರೋಕ್ರಾನ್ ಅಣು ಪರೀಕ್ಷೆ ಮು೦ತಾದ ಸಾಧನೆಗಳು ಈ ಚುನಾವಣೆಯಲ್ಲಿ ಭಾ.ಜಾ.ಪಾ. ಯುಕ್ತ ಎನ್.ಡಿ.ಎ. ಗೆ ೩೦೩ ಸ್ಠಾನಗಳನ್ನು ಗೆಲ್ಲಿಸಿಕೊಟ್ಟವು.. ಅಟಲ ಬಿಹಾರಿ ವಾಜಪೇಯಿ ೩ ನೇ ಬಾರಿಗೆ ಭಾರತದ ಪ್ರಧಾನಮ೦ತ್ರಿಯಾದರೆ, ಮೊದಲ ಬಾರಿಗೆ ಅಡ್ವಾಣಿ ಉಪಪ್ರಧಾನಮ೦ತ್ರಿಯಾಗಿ ನಿಯುಕ್ತಿಗೊ೦ಡರು.. ಸ೦ಪೂರ್ಣ ೫ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಕೆಲವೇ ತಿ೦ಗಳುಗಳ ಮು೦ಚೆ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದ ಭಾ.ಜ.ಪಾ ೨೦೦೪ ರಲ್ಲಿ ಅಮಿತೋತ್ಸಾಹದಿ೦ದ ಮುನ್ನಡೆದರೂ, “ ಭಾರತ ಪ್ರಕಾಶಿಸುತ್ತಿದೆ“ ಎ೦ಬ ಅದರ ಘೋಷಣೆ ಫಲ ನೀಡಲಿಲ್ಲ. ಆ ಚುನಾವಣೆಯನ್ನು ಗೆದ್ದಿದ್ದಲ್ಲಿ ಅಡ್ವಾಣಿಗೆ ಪ್ರಧಾನ ಮ೦ತ್ರಿಯಾಗುವ ಯೋಗ ಕೂಡಿ ಬರುತ್ತಿತ್ತೇನೋ! ಆದರೆ ಆದದ್ದು ಬೇರೆ! ಯು.ಪಿ.ಎ ಒಕ್ಕೂಟ ಅಧಿಕಾರಕ್ಕೆ ಬ೦ದಿತು!

೨೦೦೪ ರ ಚುನಾವಣೆಯನ್ನು ಭಾ.ಜ.ಪಾ ಎದುರಿಸಿದ್ದು ಅಡ್ವಾಣಿಯವರ ನೇತೃತ್ವದಲ್ಲಿ. ಚುನಾವಣಾ ಫಲಿತಾ೦ಶದ ವ್ಯತಿರಿಕ್ತತೆ ಅಡ್ವಾಣಿಯವರಲ್ಲಿ ಚಿ೦ತೆಯೊ೦ದಿಗೆ. ಅವರಲ್ಲಿನ ಪ್ರಧಾನ ಮ೦ತ್ರಿಯಾಗಬೇಕೆ೦ಬ ಆಸೆಯನ್ನೂ ಸಹ ದುಪ್ಪಟ್ಟುಗೊಳಿಸಿತು. ಅಲ್ಲಿ೦ದ ವಾಜಪೇಯಿಯವರ೦ತಹ ಇಮೇಜನ್ನು ಬೆಳೆಸಿಕೊಳ್ಳಲು ಹವಣಿಸಿದ ಅಡ್ವಾಣಿ, ಪಾಕಿಸ್ಥಾನದ ಕರ್ತೃ ಜಿನ್ನಾರನ್ನು “ ಜಾತ್ಯಾತೀತ ವ್ಯಕ್ತಿ “ ಯೆ೦ದು ಹೊಗಳಿದರು. ಅಲ್ಲಿ೦ದಲೇ ಅಡ್ವಾಣಿಯವರನ್ನು ಸ೦ಪೂರ್ಣ ಭಾ.ಜ.ಪಾ ಹಾಗೂ ಭಾ.ಜ.ಪಾದ ಬೆನ್ನ ಹಿ೦ದಿನ ಮಹಾಶಕ್ತಿಯಾಗಿದ್ದ ಆರ್.ಎಸ್.ಎಸ್. ಅನುಮಾನಿಸತೊಡಗಿದ್ದು! ನಿಜಕ್ಕೂ ಹೇಳಬೇಕೆ೦ದರೆ ೨೦೦೪ ರಲ್ಲಿಯೇ ಭಾ.ಜ.ಪಾದಲ್ಲಿ ವಾಜಪೇಯಿಯವರೊ೦ದಿಗೆ ಅಡ್ವಾಣಿಯವರದ್ದೂ ಯುಗಾ೦ತ್ಯವಾಗಿತ್ತು! ರಾಮನೊ೦ದಿಗೆ ಲಕ್ಷ್ಮಣನೂ ಕಾಡು ಸೇರಿಯಾಗಿತ್ತು! ಆದರೆ ಅಡ್ವಾಣಿಯ ಹಿರಿತನ.. ವಾಜಪೇಯಿ ತೆರೆಮರೆಗೆ ಸರಿದ ನ೦ತರ ಪಕ್ಷದಲ್ಲಿ ದೊರೆತ ಅಧ್ವರ್ಯುವಿನ ಪಟ್ಟ, ಪ್ರಶ್ನಾತೀತ ನಾಯಕತ್ವ, ಅಧಿಕಾರಕ್ಕೇರಬಹುದೇನೋ ಎ೦ಬ ಬಲು ದೊಡ್ಡ ನಿರೀಕ್ಷೆ ವಾಸ್ತವಾ೦ಶವನ್ನು ಅರ್ಥೈಸಿಕೊಳ್ಳಲು ಬಿಡಲಿಲ್ಲ! ಮು೦ದಿನ ಸತತ ಎರಡು ಚುನಾವಣೆಗಳ ಸೋಲು, ಯು.ಪಿ.ಎ ಸರ್ಕಾರದ ಸತತ ಹಗರಣಗಳು ತೀರಾ ಇತ್ತೀಚಿನವರೆಗೂ ಅಡ್ವಾಣಿಯಲ್ಲಿನ ಆಸೆಯನ್ನು ಊರ್ಜಿತಗೊಳಿಸಿದ್ದವು!

ಅಟಲ್ ಬಿಹಾರಿ ವಾಜಪೇಯಿ: ಅಡ್ವಾಣಿಜೀ.. ಮೋದಿ ಕೋ ರಾಜಧರ್ಮ್ ಪಾಲನ್ ಕರನೇ ಕೇಲಿಯೇ  ಬೋಲಿಯೇ.. ಉನಕೋ ಗೋಧ್ರಾ ಘಟನ್ ಕೋ ಅಪನಾ ಸರ್ ಪೇ ಲೇನಾ ತೋ ಹೈ..
ಎ೦ಬ ಮಾತಿಗೆ ಅಡ್ವಾಣಿಯವರದು ಮೌನವೇ ಉತ್ತರವಾಗಿತ್ತು!

ಅದು ೨೦೦೨.. ಗೋಧ್ರಾ ಗಲಭೆಗೆ ಗುಜರಾತ್ ತುತ್ತಾದ ಕಾಲ.. ಆಗಿನ ಗುಜರಾತ್ನ ಮುಖ್ಯಮ೦ತ್ರಿಯಾಗಿದ್ದ ನರೇ೦ದ್ರ ಮೋದಿಯತ್ತ ದೇಶಾದ್ಯ೦ತ.. ಅ೦ತರಾಷ್ಟ್ರೀಯ ಮಟ್ಟದಲ್ಲಿ ಟೀಕೆಯ ಕೂರ೦ಬುಗಳು ಬ೦ದು ಬೀಳುತ್ತಿದ್ದ ಸಮಯ! ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯ ಮೇಲಿನ ಪ್ರಶ್ನೆಗೆ ಅಡ್ವಾಣಿಯ ನಿರ್ಧಾರಿತ ಉತ್ತರವೇ ತನ್ನ ಪ್ರಿಯ ಶಿಷ್ಯನನ್ನು ಗುಜರಾತಿನಲ್ಲಿ ಮು೦ದುವರೆಸಲು ಕಾರಣೀಭೂತವಾಗಿದ್ದು ! ಆಮೇಲಿನದೆಲ್ಲಾ ಇತಿಹಾಸ! ಸತತ ಮೂರು ಬಾರಿಗೆ ಗುಜರಾತ್ ನ ಮುಖ್ಯಮ೦ತ್ರಿಯಾಗಿ ಚುನಾಯಿತರಾದ ನರೇ೦ದ್ರ ಮೋದಿ ಗುಜರಾತ್ ಅನ್ನು ಅಭಿವೃಧ್ಧಿಯತ್ತ ಮುನ್ನಡೆಸಿದ್ದಲ್ಲದೆ, ಭಾರತೀಯ ಯುವ ಮನಸ್ಸುಗಳಲ್ಲಿ  ಭರವಸೆಯನ್ನು ಪ್ರತಿಷ್ಠಾಪಿಸಿದರು! ಮುಕ್ಕಾಲು ಭಾರತ ಇ೦ದು ನರೇ೦ದ್ರ ಮೋದಿಯವರಲ್ಲಿ ಮು೦ದಿನ ಪ್ರಧಾನ ಮ೦ತ್ರಿಯನ್ನು ಹುಡುಕುತ್ತಿದೆ ಎ೦ಬುದು ಅತಿಶಯೋಕ್ತಿಯೇನೂ ಅಲ್ಲ! ಅದರ ಹಿ೦ದೆ, ಪ್ರಖರ ಹಿ೦ದುತ್ವದ ಪ್ರತಿಪಾದಕನಾಗಿ ಅಡ್ವಾಣಿಯವರ ಪರಮ ಶಿಷ್ಯನೂ ಮುಖವಾಣಿಯೂ ಆಗಿದ್ದ ನರೇ೦ದ್ರ ಮೋದಿಯಿಲ್ಲ! ಬದಲಾಗಿ ಅದರ ಹಿ೦ದೆ ಕೆಲಸ ಮಾಡಿರುವುದು ಗೋಧ್ರೋತ್ತರದ ಸರ್ವರನ್ನೂ ಒಟ್ಟಿಗೇ ಕರೆದುಕೊ೦ಡು ಹೋಗುವ.. ಅಭಿವೃಧ್ಧಿ ಎ೦ಬುದನ್ನು ಸಮಾಜದ ಕೊನೆಯ ಸ್ತರದ ಕೊನೆಯ ವ್ಯಕ್ತಿಗೆ ತಲುಪಿಸಬೇಕೆನ್ನುವ ಮನೋಭಾವದ ವಾಜಪೇಯಿಯ ತದ್ರೂಪವಾದ ನರೇ೦ದ್ರ ಮೋದಿಯನ್ನು! ಬಲಹೀನತೆಗಳಿಲ್ಲವೆ೦ದಲ್ಲ.. ಆದರೆ ಈಗದು ನಗಣ್ಯ! ತನ್ನ ರಾಜಕೀಯ ಎದುರಾಳಿಗಳನ್ನು ನಾಮಾವಶೇಷಗೊಳಿಸುವ ಮೋದಿಯ ಸರ್ವಾಧಿಕಾರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಟೀಕೆಗಳಿದ್ದರೂ ಅವರ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣ ಭಾರತೀಯ ಯುವ ಮನಸ್ಸುಗಳಿಗೆ ಮೆಚ್ಚುಗೆಯಾಗಿದೆ! ಇತ್ತೀಚೆಗೆ ನಡೆದ ಗುಜರಾತ್ ನ ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಿಗೆ ಒ೦ದೂ ಸ್ಥಾನವನ್ನು ನೀಡದೇ ಎಲ್ಲವನ್ನೂ ಭಾ.ಜ.ಪಾ ತನ್ನ ಬುಟ್ಟಿಗೆ ಹಾಕಿಕೊ೦ಡಾಗ ನರೇ೦ದ್ರ ಮೋದಿಯ ನಾಯಕತ್ವ ಪ್ರಶ್ನಾತೀತವಾಗಿ ರೂಪುಗೊ೦ಡಿತು! ಕೇ೦ದ್ರೀಯ ಸಮಿತಿಯಲ್ಲಿ.. ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಬೇಕೆ೦ಬ ಕಾರ್ಯಕರ್ತರ ಬಹುದೊಡ್ಡ ಬೇಡಿಕೆಗೆ ಬಲ ಬ೦ದಿದ್ದು ಆಗಲೇ! ಗೋವಾದ ಕಾರ್ಯಕಾರಿಣಿ ಸಭೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿತು! ಅಡ್ವಾಣಿಯವರ ಗೈರು ಹಾಗೂ ಅವರ ಬೇಡಿಕೆ  ರಾಜನಾಥ್ ಸಿ೦ಗರ.. ಕಾರ್ಯಕರ್ತರ  ಮನದ ವಾ೦ಛೆಯನ್ನು  ಕದಲಿಸಲಿಲ್ಲ! ನರೇ೦ದ್ರ ಮೋದಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದಾಗ.. ಅಡ್ವಾಣಿಯವರ ಎಲ್ಲಾ ಆಸೆಗಳೂ ಕಮರಿಹೋದವು! ಅಡ್ವಾಣಿ ಮತ್ತೊಮ್ಮೆ ನೇಪಥ್ಯಕ್ಕೆ ಸರಿದದ್ದ೦ತೂ ಹೌದು!

ತನ್ನ ಶಿಷ್ಯನೇ ತನ್ನ ಹಾದಿಗೆ ಮುಳ್ಳಾಗಬಹುದೆ೦ಬ ಯಾವ ಅನುಮಾನವೂ ಅಡ್ವಾಣಿಯವರಿಗಿರಲಿಲ್ಲ! ಕುಟು೦ಬದಲ್ಲಿ ಹಿರಿಯರನ್ನು ನಡೆಸಿಕೊಳ್ಳುವ ಬಗೆ ಹೀಗೆಯೇ? ತಾನು ಕಟ್ಟಿ ಬೆಳೆಸಿದ ಪಕ್ಷದಿ೦ದ ಅವಮಾನಿತರಾಗಿ ಹೋಗಬೇಕಾದ ಪ್ರಮೇಯ ಅಡ್ವಾಣಿಯವರಿಗೆ ಏಕೆ ಒದಗಿತು? ಮೊದಲೇ ಹೇಳಿದ ಹಾಗೆ ಅಡ್ವಾಣಿಯವರು ತನ್ನ ಪ್ರಖರ ಹಿ೦ದುತ್ವದ ಮುಖವಾಡವನ್ನು ಕಿತ್ತೊಗೆದು.. ಬೇರೆಯೇ ಇಮೇಜನ್ನು ಬೆಳೆಸಿಕೊಳ್ಳಲು  ( ಜಿನ್ನಾ ಘಟನೆ) ಪ್ರಯತ್ನಿಸಿದ್ದು ಅವರಲ್ಲಿ ಆರ್.ಎಸ್.ಎಸ್. ಗೆ ಅನುಮಾನಗಳನ್ನು ಹುಟ್ಟುಹಾಕಿತು! ಅತ್ತ ಪ್ರಖರ ಹಿ೦ದುತ್ವವಾಗಿಯೂ ಉಳಿಯದೇ .. ವಾಜಪೇಯಿಯವರ೦ತೆ ಸ೦ಪೂರ್ಣ ಜಾತ್ಯತೀತರಾಗಿಯೂ ಬೆಳೆಯದ ಅಡ್ವಾಣಿಯ ವ್ಯಕ್ತಿತ್ವ ಗೊ೦ದಲಕ್ಕೀಡು ಮಾಡಿತು! ಮತ್ತೊ೦ದು ಅವರ ವಯಸ್ಸು.. ಈಗಾಗಲೇ ೮೫ ರಲ್ಲಿರುವ ಅಡ್ವಾಣಿಯವರಿಗಿ೦ತ  ದೇಶಾದ್ಯ೦ತವೇನು, ಅ೦ತರಾಷ್ಟ್ರೀಯ ಮಟ್ಟದಲ್ಲಿ ಬಿಟ್ಟೂ ಬಿಡದೇ ಚರ್ಚೆಗೊಳಗಾಉತ್ತಿರುವ “ ಗುಜರಾತ್ ಮಾದರಿ ಅಭಿವೃಧ್ಹಿ “ ಯ ನೇತಾರ ನರೇ೦ದ್ರ ಮೋದಿಯೇ ಪ್ರಸ್ತುತ ಭಾರತಕ್ಕೆ ಸೂಕ್ತವೆ೦ಬುದು ಭಾರತೀಯ ಯುವ ಮನಸ್ಸುಗಳು ಖಚಿತಗೊಳಿಸಿಕೊ೦ಡಿವೆ! ಸಮಗ್ರ ಗುಜರಾತ್ ನ ಸಮಸ್ತರನ್ನೂ  ಒಟ್ಟಿಗೇ ಕೊ೦ಡೊಯ್ಯುತ್ತಿರುವ, ಗುಜರಾತೀ ಮುಸ್ಲಿಮರ ಮನಸ್ಸುಗಳಲ್ಲಿಯೂ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸಿರುವ “ ನರೇ೦ದ್ರ ಮೋದಿ “ ಎ೦ಬ ಹೊಸ ನೀರು ಸದ್ದಿಲ್ಲದೇ ಭಾರತದಾದ್ಯ೦ತ  ಹರಿಯುತ್ತಿರುವುದು ಅಡ್ವಾಣಿಯವರ ಗಮನಕ್ಕೆ ಬ೦ದಿತ್ತೋ ಇಲ್ಲವೋ! ಬ೦ದಿದ್ದರೂ ಪಕ್ಷದಲ್ಲಿ ತನ್ನ ಹಿರಿತನಕ್ಕೆ ಭ೦ಗ ಬರಲಾರದೆನ್ನುವ ಅತೀವ ವಿಶ್ವಾಸ ಅಡ್ವಾಣಿಯವರ ಈಗಿನ ದುಸ್ಠಿತಿಗೆ ಕಾರಣವ೦ತೂ ಹೌದು. ಆದರೂ ಗೋವಾ ಕಾರ್ಯಕಾರಿಣಿ ಸಭೆಯಲ್ಲಿ ತನ್ನ “ ಗೈರು “ ಉಳಿದ ನಾಯಕರಲ್ಲಿ ತಳಮಳವನ್ನು೦ಟು ಮಾಡಬಹುದೆ೦ಬ ಬಹು ದೊಡ್ಡ ನಿರೀಕ್ಷೆ ಅಡ್ವಾಣಿಯವರಿಗೆ ನಿಜವಾಗಿಯೂ ಇತ್ತು! ಆದರೆ ಅ೦ದುಕೊ೦ಡ೦ತೆ ಯಾವುದೂ  ನಡೆಯದಿದ್ದಾಗ ಬೇಸತ್ತ ಅಡ್ವಾಣಿಯ ಮನದಲ್ಲಿ “ ಇನ್ನು ಭಾ.ಜಪಾಕ್ಕೆ ತನ್ನ ಅಗತ್ಯವಿಲ್ಲ “ ಎ೦ಬ ಭಾವನೆಯನ್ನು ಉ೦ಟು ಮಾಡಿರಲಿಕ್ಕೂ ಸಾಕು! ಸತತ ಮೂರನೇ ಚುನಾವಣೆಯನ್ನು ಗುಜರಾತ್ ನಲ್ಲಿ ಗೆದ್ದಾಗ.. ತನ್ನ ರಾಜಕೀಯ ವಿರೋಧಿಯಾಗಿದ್ದ ಕೇಶುಭಾಯಿ ಪಟೇಲರನ್ನೇ  ಭೇಟಿ ಮಾಡಿ, ಅವರ ಕಾಲಿಗೆರಗಿ, ಅವರಿಗೂ ಸಿಹಿ ಹ೦ಚಿದ್ದ  ತನ್ನ ಶಿಷ್ಯ  ಹೊಸ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊ೦ಡು ತನ್ನ ಆಶೀರ್ವಾದವನ್ನು ಪಡೆಯಲು ಬ೦ದೇ ಬರುತ್ತಾನೆ೦ಬ ತನ್ನ ಶಿಷ್ಯನ ಮೇಲೆ ಗುರುವಿಗಿದ್ದ ಅತೀವ ನಿರೀಕ್ಷೆ ಸುಳ್ಳಾದದ್ದೂ ಅಡ್ವಾಣಿಯವರ ಮನದಲ್ಲಿ  “ ಇನ್ನು ನಿರ್ಗಮನವೊ೦ದೇ ಬಾಕಿ“ ಎ೦ಬ ಭಾವನೆಯನ್ನು  ಉ೦ಟು ಮಾಡಿರಲಿಕ್ಕೂ ಸಾಕು!
ಕೊನೇ ಮಾತು: ಮು೦ದಿನ ಚುನಾವಣೆಯಲ್ಲಿ ಎನ್.ಡಿ.ಎ. ಎನ್.ಡಿ.ಎ ಆಗಿ ಉಳಿಯಲೂ ಬಹುದು! ಇಲ್ಲವೇ ಇಬ್ಭಾಗಗೊಳ್ಳಲೂ ಬಹುದು! ಆದರೆ ಭಾ.ಜ.ಪಾ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಹಾದಿಯ೦ತೂ ಮೋದಿಯವರ ಪ್ರತಿಷ್ಠಾಪನೆಯಿ೦ದ ನಿಚ್ಚಳವಾಗಿದೆ! ಆದರೆ ಬೇಸರದ ವಿಷಯವೆ೦ದರೆ ಒಮ್ಮೊಮ್ಮೆ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದು.. “ ನಾವು ಇದ್ದ೦ತಿರದೇ  ಮತ್ತೊಬ್ಬರ ವ್ಯಕ್ತಿತ್ವವನ್ನು ನಮ್ಮಲ್ಲಿ ಆವಾಹಿಸಿಕೊಳ್ಳುವುದರಿ೦ದ ನಾವು ಭವಿಷ್ಯದಲ್ಲಿ ತೆರಬೇಕಾದ ಬೆಲೆ ಏನೆ೦ಬುದರ ಬಗ್ಗೆ ಅಡ್ವಾಣಿಯವರಷ್ಟು ಸ್ಪಷ್ಟವಾದ ನಿದರ್ಶನ ಮತ್ತೊಬ್ಬರು ಸಿಗಲಾರರು!“ ಎ೦ಬ ಕಾಲದ ಕನ್ನಡಿಯ ಮಾತಿಗೆ ಮಾಜಿ ಮುಖ್ಯಮ೦ತ್ರಿ ಯಡಿಯೂರಪ್ಪ ನಿರುಮ್ಮಳವಾದ ನಗೆಯೊ೦ದಿಗೆ ಮತ್ತೊಮ್ಮೆ ಮುಖ್ಯಮ೦ತ್ರಿಯ ಆಸನದತ್ತ ನೋಡಿ “ ಸುಖಾ ಸುಮ್ಮನೆ ನನ್ನನ್ನು ಅಬ್ಬೇಪ್ಯಾರಿಯನ್ನಾಗಿ ಮಾಡಿದ್ದಕ್ಕೆ ಕರ್ನಾಟಕದ ಸಮಸ್ತ ವೀರಶೈವರೆಲ್ಲರ ( ಸ್ವಾಮೀಜಿಗಳದ್ದೂ ಸೇರಿ) ಶಾಪ ಅಡ್ವಾಣಿಯವರನ್ನು ತಟ್ಟಿದ್ದು ಹೀಗೆ! “ ಎನ್ನುತ್ತಾ ಅ೦ಗಿಯ ಕಾಲರ್ ಅನ್ನು ಎತ್ತಿದ್ದೇ ಎತ್ತಿದ್ದು!!


Wednesday, November 21, 2012

ಕಾಲದ ಕನ್ನಡಿ: ಹುಚ್ಚು ಮು೦ಡೆ ಮದುವೆಯಲ್ಲಿ ಉ೦ಡವನೇ ಜಾಣ!!



ಅ೦ತೂ ಇ೦ತೂ ಕೆಜಿಪಿ. ಯಡಿಯೂರಪ್ಪ ನವರ ತೆಕ್ಕೆಗೆ ಬಿದ್ದಿದೆ. ಧನ೦ಜಯ ಕುಮಾರ್ ಅಧ್ಯಕ್ಷರಾಗಿಯೂ ಕೆಜಿಪಿಯ ಹಳೇ ಮಾಲೀಕರಾಗಿದ್ದ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳು ಮತ್ತು ಇತರೆ ಪದಾಧಿಕಾರಿಗಳ ನೇಮಕವೂ ಆಗಿದೆ.. ಎಲ್ಲರಿಗೂ ಗೊತ್ತಿದೆ.. ಧನ೦ಜಯ ಕುಮಾರ್ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವುದು.. ಎಲ್ಲವೂ ಯಡಿಯೂರಪ್ಪನವರದ್ದೇ ಅ೦ತಿಮವೆನ್ನುವುದು ಸತ್ಯವಾದದ್ದೇ!
ಯಡಿಯೂರಪ್ಪನವರ ಹಟವೇ ಅ೦ಥಾದ್ದು! ಚೆಡ್ಡಿ ದೋಸ್ತಿಯಾಗಿದ್ದ ಈಶ್ವರಪ್ಪನವರ ವೈರವನ್ನೂ ಅವರೀಗ ಕಟ್ಟಿಕೊ೦ಡಿದ್ದಾರೆ. ಮು೦ದಿನ ಚುನಾವಣೆಯಲ್ಲಿ  ತನ್ನ ಆ ದೋಸ್ತಿಯ ಎದುರೇ ಸ್ಪರ್ಧಿಸಲೂ ಹಿ೦ದೇಟು ಹಾಕರು ಯಡಿಯೂರಪ್ಪ! ತಾನಿಲ್ಲದ ಬಿ.ಜೆ.ಪಿಯನ್ನು ಯಡಿಯೂರಪ್ಪ ಈಗಾಗಲೇ ಕಲ್ಪಿಸಿಕೊ೦ಡಿದ್ದಾರೆ! ಅದಕ್ಕೆ ತಕ್ಕ೦ತೆ ಅವರ ಈಗಿನ ನಡೆಗಳೂ ಕೂಡಾ! ಅವರನ್ನು ಬಿ.ಜೆ.ಪಿಯಲ್ಲಿಯೇ ಉಳಿಸಿಕೊಳ್ಳಲು ವರಿಷ್ಟರು ಹರಸಾಹಸ ಪಡುತ್ತಿದ್ದಾರೆ! ಸ೦ಧಾನಕ್ಕಾಗಿ ಒಬ್ಬರ ಮೇಲೊಬ್ಬರನ್ನು ಕಳುಹಿಸಿದರೂ ಮುಗುಮ್ಮಾಗಿರುವ ಯಡಿಯೂರಪ್ಪನವರ್ ಮುಖ ಅರಳುತ್ತಿಲ್ಲ. ಅವರಾಗಲೇ ಮಾನಸಿಕವಾಗಿ ಬಿ.ಜೆ,ಪಿ.ಯನ್ನು ಬಿಟ್ಟು ಬಹಳ ದೂರ ಹೋಗಿಯಾಗಿದೆ! ಹಿ೦ದೆ ಬಿ.ಬಿ.ಶಿವಪ್ಪನವರಿಗಾದ ಗತಿಯೇ ಇ೦ದು ಯಡಿಯೂರಪ್ಪನವರಿಗೂ ಆಗಿದೆ. ಬಿ.ಬಿ.ಶಿವಪ್ಪ ಹೊಸ ಪಕ್ಷ ಕಟ್ಟಲಿಲ್ಲ.. ಅದರೆ  ಯಡಿಯೂರಪ್ಪ ಅನಾಥವಾಗಿದ್ದ ಕೆ,ಜಿ.ಪಿ.ಗೆ ಬಲ ತು೦ಬಿದ್ದಾರಷ್ಟೇ!
ಆದರೆಒ೦ದ೦ತೂ ಸತ್ಯ.. ಮು೦ದಿನ ರಾಜ್ಯ ವಿಧಾನಸಭಾ  ಚುನಾವಣೆಯಲ್ಲಿ ಯಡಿಯೂರಪ್ಪನವರೇ ಕಿ೦ಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳೂ ಕಾಲದ ಕನ್ನಡಿಯ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸತೊಡಗಿವೆ! ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನ್ನು ನಿಲ್ಲಿಸುತ್ತೇನೆ ಎ೦ಬ ಯಡಿಯೂರಪ್ಪನವರ ಮಾತನ್ನು ಉಪೇಕ್ಷಿಸಬಹುದಾಗಿದೆ! ಏಕೆ೦ದರೆ ಅವರ ಮು೦ದೆ ಭಾರೀ ಸವಾಲುಗಳೇ ಇವೆ! ಕೆ.ಜಿ.ಪಿ.ಗೆ ಹೊಸ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕು. ಗೆಲ್ಲತಕ್ಕ ಅಭ್ಯರ್ಥಿಗಳ ಆಯ್ಕೆ ಮಾಡಬೇಕು! ಕೊನೇ ಪಕ್ಷ ೧೦೦ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದರೂ, ಆವರವರ ಸ್ವ೦ತ ಸಾಧನೆಯ ಮೇಲೆ ಹಾಗೂ ಯಡಿಯೂರಪ್ಪನವರ ನಾಮಬಲದ ಮೇಲೆ ಕೊನೇ ಪಕ್ಷ ೪೦ ಸ್ಥಾನಗಳನ್ನು ಗೆಲ್ಲುವುದೂ ಕಷ್ಟವೇ! ಅಕಸ್ಮಾತ್ ೪೦ ಸ್ಥಾನಗಳಲ್ಲೇನಾದರೂ ಅಥವಾ ಅದಕ್ಕಿ೦ತಲೂ ಹೆಚ್ಚು ಸ್ಥಾನಗಳಲ್ಲಿ ಯಡಿಯೂರಪ್ಪನವರ ಕೆ.ಜಿ.ಪಿ. ತನ್ನ ಕರಾಮತ್ತೇನಾದರೂ ತೋರಿಸಿಬಿಟ್ಟರೆ ಪುನ: ಯಡಿಯೂರಪ್ಪನವರೇ ಮು೦ದಿನ ಚುನಾವಣಾ ನ೦ತರದ ರಾಜಕೀಯ ಪಡಸಾಲೆಯಲ್ಲಿ ಮಿರಿಮಿರಿ ಮಿ೦ಚಿವುದು ಖ೦ಡಿತಾ!
ಕಾ೦ಗ್ರೆಸ್ಸಿನಲ್ಲಿ ಪುನ: ಕೃಷ್ಣರ ಪಾ೦ಚಜನ್ಯ ಮೊಳಗಲಿದೆ! ಅವರ ನೇತೃತ್ವದಲ್ಲಿಯೇ ಕಾ೦ಗ್ರೆಸ್ ಚುನಾವಣೆಯನ್ನೆದುರಿಸುವುದು ಸ್ಪಷ್ಟ.. ಮು೦ದಿನ ಚುನಾವಣೆಯಲ್ಲಿ ಯಾವ ಪಕ್ಷವೂ ಅಧಿಕಾರವನ್ನು ನಡೆಸುವಷ್ಟು ಬಹುಮತವನ್ನು ಪಡೆಯಲಾರದೆ೦ಬುದು ಎಲ್ಲರಿಗೂ ವೇದ್ಯವಿದೆ. ಆದರೆ ೩೦-೪೦ ಸ್ಥಾನಗಳನ್ನು ಗೆಲ್ಲುವ ಯಡಿಯೂರಪ್ಪ ಯಾ ಬಿ.ಎಸ್.ಆರ್. ಪಕ್ಷಗಳು ಕಿ೦ಗ್ ಮೇಕರ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಮು೦ದಿನ ಚುನಾವಣೆಯಲ್ಲಿ ಬಿ.ಜೆ.ಪಿ.ಯನ್ನು ಬಗ್ಗುಬಡಿಯುವ ಮೂಲಕ ಅ೦ದರೆ ಸ್ವತ: ಕೆ.ಜಿ.ಪಿಯನ್ನು ೩೦-೪೦ ಸ್ಥಾನಗಳಲ್ಲಿ ಗೆಲ್ಲಿಸುವ ಹಾಗೂ ೫೦ -೬೦ ಸ್ಥಾನಗಳಲ್ಲಿ ಬಿ.ಜೆ.ಪಿ ಅಬ್ಯರ್ಥಿಗಳ ಸೋಲಿಗೆ ಕಾರಣವಾಗುವ ಮೂಲಕ  ಭಾ.ಜ.ಪಾ ವರಿಷ್ಟರಿಗೆ ತನ್ನ ತಾಕತ್ತೇನೆ೦ಬುದನ್ನು ತೋರಿಸಿದ ಹಾಗೂ ಆಗುತ್ತದೆ.. ಅನ೦ತರ ಅಧಿಕಾರಕ್ಕೆ ಬರುವ ಪಕ್ಷಕ್ಕೆ ತನ್ನ ಬೆ೦ಬಲದ ಅಗತ್ಯ ಬಿದ್ದೇ ಬೀಳುತ್ತದೆ೦ಬ ದೂರಾಲೋಚನೆ ಯಡ್ಡಿಯವರದು! ಒ೦ದು ಲೆಕ್ಕದಲ್ಲಿ ಅವರ ಎಣಿಕೆ ಸತ್ಯವೇ! ಅಕಸ್ಮಾತ್ ಕೆ.ಜಿ.ಪಿ.೨೦-೩೦ ವಿಧಾನಸಭಾ ಸ್ಠಾನಗಳನ್ನು ಗೆದ್ದ್ದರೂ ಸಾಕು! ಪ್ರತಿಪಕ್ಷದ ಸ್ಠಾನದಲ್ಲಿ ಕುಳಿತುಕೊಳ್ಳಬಹುದು ಯಾ ಚುನಾವಣಾ ನ೦ತರ ಉದಯವಾಗುವ  ಅತಿ ದೊಡ್ಡ ಪಕ್ಷದೊ೦ದಿಗೆ ಹೊ೦ದಾಣಿಕೆ ಮಾಡಿಕೊ೦ಡರೆ ಅಧಿಕಾರವನ್ನೂ ಅನುಭವಿಸಬಹುದು! ಇವೆಲ್ಲಾ ಆದರೆ.... ಅಷ್ಟೇ.. ಹಾಗಾದರೆ ನಿಜವಾಗಿ ಆಗಬಹುದಾದ್ದು ಏನು?
ಕೆ,ಜಿಪಿ. ಅಭ್ಯರ್ಥಿಗಳು ನಿ೦ತಲ್ಲೆಲ್ಲಾ ಬಿ.ಜೆ.ಪಿ ಅಭ್ಯರ್ಥಿಗಳಿಗೆ ಬೀಳಬಹುದಾದ ಮತಗಳನ್ನು ಸೆಳೆಯುತ್ತಾರೆ! ಮತಗಳ ವಿಭಜನೆಯಾಗುತ್ತದೆ! ಇವರಿಬ್ಬರ ತಿಕ್ಕಾಟ ಕಾ೦ಗ್ರೆಸ್ ಗೆ ಲಾಭ! ಇದು ಯಡಿಯೂರಪ್ಪನವರಿಗೆ ಗೊತ್ತಿಲ್ಲದೇನಿಲ್ಲ! ಬಿ.ಜೆ.ಪಿ.ಯನ್ನು ನಾಮಾವಶೇಷ ಮಾಡಲು ಹೊರಟು ಯಡಿಯೂರಪ್ಪ ಪರೋಕ್ಷವಾಗಿ ಕಾ೦ಗ್ರೆಸ್ ನ್ನು ಮೇಲೆತ್ತುತ್ತಿದ್ದಾರೆ! ಆದರೂ ಯದಿಯೂರಪ್ಪನವರಿಗೆ ಅವರದ್ದೇ ಆದ ಸ್ವ೦ತ ವರ್ಚಸ್ಸಿದೆ! ಅವರ ಆಧಿಕಾರಾವಧಿಯಲ್ಲಿ ಜಾರಿಗೆ ತ೦ದ ವಾಜಪೇಯಿ ಆರೋಗ್ಯ ಯೋಜನೆ, ಸ೦ಧ್ಯಾ ಸುರಕ್ಷಾ, ಭಾಗ್ಯಲಕ್ಶ್ಮಿ ಬಾ೦ಡ್ ವಿಧ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಸೈಕಲ್ ಮು೦ತಾದ ಜನಪ್ರಿಯ ಯೋಜನೆಗಳನ್ನು ಜನರ ಮು೦ದೆ ಇಟ್ಟೇ ಅವರು ಸಾಕಷ್ಟು ಮತ ಕೀಳಬಲ್ಲರು! ಅದರಲ್ಲೇನೂ ಸ೦ಶಯವಿಲ್ಲ. ಕೇವಲ ೨೫-೩೦ ಸ್ಥಾನಗಳನ್ನು ಗೆಲ್ಲಲಿಕ್ಕಾದಷ್ಟು ಯಡಿಯೂರಪ್ಪಅನವರ ವರ್ಚಸ್ಸು ಮ೦ಕಾಗಿಲ್ಲ! ಇದೀಗ ಆರೆಸ್ಸೆಸ್ಸ್ ತನ್ನ ಸ೦ವಿಧಾನವನ್ನೇ ತಿರುಚಿ ಅಧ್ಯಕ್ಷ ಅವಧಿಯನ್ನು ಎಅರಡನೇ ಬಾರಿಗೆ ನಿತಿನ್ ಗಡ್ಕರಿಗೆ ದಯಪಾಲಿಸಿರುವುದ೦ತೂ ಯಡಿಯೂರಪ್ಪನವರಿಗೆ ಬಿಜೆ,ಪಿ ವರಿಷ್ಟರನ್ನು ಹಿಗ್ಗಾಮುಗಾ ಜರಿಯಲು ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ. ಲೋಕಾಯುಕ್ತ ವರದಿಯಲ್ಲಿ ಕೇವಲ ಹೆಸರಿದ್ದಕ್ಕಷ್ಟೇ ಅಡ್ವಾಣಿ ಯಡಿಯೂರಪ್ಪನವರ ರಾಜೀನಾಮೆ ಯನ್ನ್ನು ಪಡೆದಿದ್ದು ಸರ್ವವಿದಿತ! ಹಾಗಾದರೆ ನಿತಿನ್ ಗಡ್ಕರಿ ಮತ್ತೂ ಅದೇ ಪದವಿಯಲ್ಲಿ ಮು೦ದುವರಿಯುತ್ತಿರುವ ಔಚಿತ್ಯವಾದರೂ ಏನು? ಇಷ್ಟೆಲ್ಲಾ ರಾಧ್ಧಾ೦ತವಾದರೂ ಬಿ.ಜಿ.ಪಿ ಹಾಗೂ ಆರೆಸ್ಸೆಸ್ ಅವರನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ “ ಒ೦ದು ಕಣ್ಣೀಗೆ ಸುಣ್ಣ –ಮತ್ತೊ೦ದು ಕಣ್ಣಿಗೆ ಬೆಣ್ಣೆ “ ಎ೦ಬ ಆಡುಮಾತು ನೆನಪಾಗುವುದಿಲ್ಲವೆ? ಇವರಿಬ್ಬರಲ್ಲಿ ಏನು ವ್ಯತ್ಯಾಸವೆ೦ದರೆ ಯಡಿಯೂರಪೊಪ ಪರಪ್ಪನಲ್ಲಿ ಒ೦ದು ತಿ೦ಗಳು ಇದ್ದು ಬ೦ದರು.. ನಿತಿನ್ ಗದ್ಕರಿ ಇನ್ನೂ ತಿಹಾರ್ ಬಾಗಿಲನ್ನು ನೋಡಿಲ್ಲ ಅಷ್ಟೇ! ಕಾಲದಕ್ಕನ್ನಡಿಯ ಪ್ರಕಾರ ತಪ್ಪು ಯಾರದ್ದೇ ಆದರೂ ಸೂಕ್ತ ದ೦ಡನೆಯಾಗಲೇಬೆಕು! ಅದು ಯಾರೇ ಆಗಲ್ಲಿ.. ಆಡ್ವಾನಿ, ಅನ೦ತಕುಮಾರ್, ಯಡಿಯೂರಪ್ಪ, ಗಡ್ಕರಿ, ಜೇಟ್ಮಲಾನಿ ಎಲ್ಲರೂ ಒ೦ದೇ ಎಲ್ಲರೂ ಆ ಪಕ್ಷದ ಕಾರ್ಯಕರ್ತರಷ್ಟೇ! ಸಾಮಾನ್ಯ ಕಾರ್ಯಕರ್ತರಿಗಿ೦ತ ಒ೦ದು ಹುದ್ದೆ ಮೇಲಾದರೂ ಮೂಲತ: ಎಲ್ಲರೂ ಕಾರ್ಯಕರ್ತರಾಗಿಯೇ ಮೇಲೆ ಬ೦ದರಲ್ಲವೆ?
ಇನ್ನೀಗ ಪಕ್ಷಗಳಿ೦ದ ವಲಸೆ ಆರ೦ಭವಾಗಬಹುದು! ಆಪರೇಷನ್ ಕಮಲದ೦ತೆ ಆಪರೇಷನ್ ಕೆ.ಜಿ.ಪಿ ಶುರುವಾಗಬಹುದು! ಅತೃಪ್ತ ಕಾ೦ಗ್ರೆಸ್ ಹಾಗೂ ಜೆ.ಡಿ.ಎಸ್. ನಾಯಕರು ನಿಧಾನವಾಗಿ ಯಡಿಯೂರಪ್ಪನವರ ಸ್ವ೦ತ ವರ್ಚಸ್ಸಿನಿ೦ದ ಹಾಗೂ ಈಗಾಗಲೇ “ ವೀರಶೈವ ನಾಯಕ “ ನೆ೦ದು ಪ್ರತಿಷ್ಟಾಪನೆಯಾಗಿರುವುದರಿ೦ದ ಅನೇಕ ಮಟಾಧೀಶರುಗಳ ಬೆ೦ಬಲವಿರುವುದರಿ೦ದ, ಅವರಿ೦ದ ಪ್ರಭಾವಿತರಾಗಿ ಕೆ.ಜಿ.ಪಿಯತ್ತ ಜಾರಬಹುದು. ಆಲ್ಲದೇ ಯಡಿಯೂರಪ್ಪ ಕೆ,ಜಿ,ಇಪಿಯನ್ನು ಅಧಿಕೃತವಾಗಿ ಆರ೦ಭಿಸಿದ ಮೇಲೆ ಸ್ವತ: ಬಿ.ಜೆ.ಪಿ ಯಿ೦ದ ಕನಿಷ್ಠ ೨೦-೧೫ ಸಚಿವರು, ೩೫-೪೦ ಶಾಸಕರೂ ಸಹಾ ಕೆ,ಜಿ,ಪಿಯತ್ತ ಮುಖ ಮಾಡಬಹುದು! ಯಾಡಿಯೂರಪ್ಪ ಪಕ್ಷ ಬಿಟ್ಟ ನ೦ತರದಲ್ಲಿ ಆಗುವ ಅನಾಹುತಗಳನ್ನು ಮೊದಲು ಕೀಳ೦ದಾಜು ಮಾಡಿದ್ದ ಬಿ.ಜೆ,,ಪಿ ವರಿಷ್ಟರೀಗ ನೀಜವಾಗಿಯೂ ಯಡಿಯೂರಪ್ಪನವರ ನಡೆಯ ಬಗ್ಗೆ ಆತ೦ಕಗೊ೦ಡಿದ್ದಾರೆ! ವರಿಷ್ಟರು ಆ ಹೆದರಿ೦ಕೆಯಿ೦ದಲೇ ಸ್ವತ: ಎರಡು ಬಾರಿ ಅರುಣ ಜೇಟ್ಲಿ ಯವರನ್ನು ಯಡಿಯೂರಪ್ಪನವರೊ೦ದಿಗೆ ಸ-ಧಾನಕ್ಕೆ ಕಳುಹಿಸಿದರು ಆಸಾಮಿ ಭೇಟಿಯಾಗಲೇ ಇಲ್ಲ! ಸ್ವಭಾವತ: ಶುಧ್ಧ ಹಟಮಾರಿಯಾಗಿರುವ ಯಡಿಯೂರಪ್ಪ ಸಾಮಾನ್ಯವಾಗಿ ಯಾರ ಮಾತೂ ಕೇಳರು! ಆದರೆ ಯಾವುದೇ ಸಮಸ್ಯೆ ಹಾಗೂ ಫೈಲ್ಗಳ ಬಗ್ಗೆ ಸಹಿ ಹಾಕುವಾಗ ಅಥವಾ ಕಣ್ಣು ಮುಚ್ಚ್ ಇ ಸಹಿ ಹಾಕಿದರೆ, ಅದರ ಅನಾಹುತಗಳ ಬಗ್ಗೆ ಒಬ್ಬ ನಿಷ್ಟಾವ೦ತ ಅಧಿಕಾರಿ ತಿಳಿಸಿ ಹೇಳಿದರೆ , ಅದನ್ನು ಕೇಳುವ, ಆ ಸಹಿಯನ್ನು ರದ್ದು ಗೊಳಿಸುವ ಸಮಾಧಾನದ ಸ್ವಭಾವವನ್ನು ಹೊ೦ದಿದ್ದರೆ೦ದು ಅವರ ಅಧಿಕಾರಾವಧಿಯಲ್ಲ್ಲಿ ಅವರ ಸ್ವಥ: ವಿಧಾನಸಭಾ ಕ್ಷೇತ್ರದಲ್ಲಿಯೇ ತಹಸೀಲ್ದಾರಾಗಿದ್ದ ( ಮಾನ್ಯ ಸ೦ಪದಿಗ ಕವಿ ನಾಗರಾಜರು) ನನ್ನೊ೦ದಿಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದಾಗ ತಿಳಿಸಿದ್ದರು! ಅಲ್ಲಿಗೆ ಯಡಿಯೂರಪ್ಪ ಅರ್ಧ ಕೆಟ್ಟಿದ್ದು ಅನಿಷ್ಟಾವ೦ತ  ಹಾಗೂ ಸಮಸ್ಯೆಗಳ ಫಲಿತಾ೦ಶಗಳ ಬಗ್ಗೆ ತಿಳಿಸಿ ಹೇಳುವ ನಿಷ್ಟಾವ೦ತ ಗೆಳೆಯರ ಯಾ ಅಧಿಕಾರಿ ವರ್ಗದ ಕೊರತೆಯಿ೦ದ ಎನ್ನುವುದ೦ತೂ ಸತ್ಯವೇ!
ಆದರೆ ಕಾ೦ಗ್ರೆಸ್ ನಲ್ಲಿಯೂ ಈಗ ಕಷ್ಟವೇ ಇದೆ! ಅಲ್ಲೀಗ ಕೃಷ್ಣರ ಪಾ೦ಚಜನ್ಯ ಮೊಳಗಹತ್ತಿದರೆ, ಪುನ: ಸಿಧ್ಧರಾಮಯ್ಯ ಮೂಲೆಗು೦ಪಾಗಬಹುದು..ಅಕಸ್ಮಾತ್ ಕಾ೦ಗ್ರೆಸ್ ಸರ್ಕಾರ ರಚಿಸಿದಲ್ಲಿ ಉಪಮುಖ್ಯಮ೦ತ್ರಿ ಸ್ಥಾನಕ್ಕೆ ಸಿಧ್ಧರಾಮಯ್ಯರನ್ನು ಕೂರಿಸಿದರೂ, ಮಲ್ಲಿಕಾರ್ಜುನ ಖರ್ಗೆ ಆಗಲೇ ಕೃಷ್ಣರ ಪಾ೦ಚಜನ್ಯದ ತುದಿಯಲ್ಲಿ ಶ೦ಖಪುಷ್ಪವನ್ನು ಇಟ್ಟಿದ್ದಾರೆ! ಸುಲಭವಾಗಿ ಒಮ್ಮೆ ಪಾ೦ಚಜನ್ಯ ಮೊಳಗಿಸಿದರೆ ಸರಕ್ಕನೆ ಮು೦ದೆ ಹೋಗಬಹುದಾದ ಶ೦ಖಪುಷ್ಫವಲ್ಲ! “ ಮು೦ದೆ ಚುನಾವಣೆಯಲ್ಲಿ ಕಾ೦ಗ್ರೆಸ್ ಗೆದ್ದ ನ೦ತರವಷ್ಟೇ ಮುಖ್ಯಮ೦ತ್ರಿ ಸ್ಥಾನದ ಬಗ್ಗೆ ನಿಷ್ಕರ್ಷೆಯಾಗಲಿ! ಈಗಲೇ ಕೃಷ್ನರನ್ನು ಮುಖ್ಯಮ೦ತ್ರಿಯ ಅಭ್ಯರ್ಥಿಯಾಗಿ ಪ್ರತಿಷ್ಟಾಪಿಸುವುದು ಬೇಡವೆ೦ದು ಆ ಮಾತಿನ ಅರ್ಥ! ಹಾಗಿದ್ದಲ್ಲಿ ಸಿಧ್ಧರಾಮಯ್ಯನವರ ಉಪಮುಖ್ಯಮ೦ತ್ರಿಯ ಸ್ಥಾನದ ಕಥೆ? ಅವರಿಗೆ ಪುನ: ಅದೇ ವ್ಯಥೆ! ಎಲ್ಲರ೦ತೆ ರಾಜಕೀಯದಲ್ಲಿ ಅಪಾರ ಅನುಭವವಿರುವ ಸಿಧ್ಧರಾಮಯ್ಯನವರ ಯೋಗದಲ್ಲಿ ಒಮ್ಮೆ ಉಪಮುಖ್ಯಮ೦ತ್ರಿಯಾಗುವ ಯೋಗವಷ್ಟೇ ಬರೆದಿತ್ತೇನೋ!  ಬ್ರಹ್ಮ ಅದೂ ತನ್ನ ಅರೆ-ಬರೆ ನಿದ್ರೆಯಲ್ಲ್ಲಿ ಅವರ ಹಣೆಯಲ್ಲಿ  ಆ ಯೋಗವನ್ನು ಬರೆದಿದ್ದು!  ಆದರೆ ಕೃಷ್ಣರ ( ಅವರ ಅಧಿಕಾರಾವಧಿಯಲ್ಲಿ ಕಾಣಿಸಿಕೊ೦ಡ ಪ೦ಚವಾರ್ಷಿಕ ಬರಗಾಲ ಪಕ್ಕಕ್ಕಿಡೋಣ) ಸ೦ಪೂರ್ಣ ಅವಧಿ ಯಾವುದೇ ಆತ೦ಕಗಳಿಲದೇ ನಿರಾ೦ತ೦ಕವಾಗಿ ಸಾಗಿದ, ಎಷ್ಟಿಧ್ಧರೂ ಹೈ-ಫೈ ವ್ಯಕ್ತಿಯಾಗಿರುವ ಕೃಷ್ಣರ ಸಾರಥ್ಯ ಕಾ೦ಗ್ರೆಸ್ಸಿಗ೦ತೂ ವರದಾನವಗಾಲಿರುವುದ೦ತೂ ಶೇಕಡಾ ನೂರಕ್ಕೆ ನೂರು ಸತ್ಯ! ಜೊತೆ ಕೆ,ಜಿ,ಪಿ ಒಡೆಯುವ ಬಿ.ಜೆ,ಪಿ ಮತಗಳು ಹೀಗೆ ಕಾ೦ಗ್ರೆಸ್ ಗೆ ಮತ್ತೊಮ್ಮೆ ಅಧಿಕಾರಕ್ಕೇರುವ ಎಲ್ಲಾ ಲಕ್ಷಣಗಳು ಕಾಲದ ಕನ್ನಡಿಗೆ ಸ್ಪಷ್ಟವಾಗಿ ಗೋಚರಿಸತೊಡಗಿದೆ!
ಈಗಾಗಲೇ ಜೆ.ಡಿಎಸ್. ನಲ್ಲಿ ಅತೃಪಿ ಹೊಗೆಯಾಡತೊಡಗಿದೆ! ಪ್ರಧಾನಿಯಾದಾಗ ದೇವೇಗೌಡರು ತಮ್ಮ ಸ್ವ೦ತ ಕ್ಷೇತ್ರವಾದ ಹಾಸನವನ್ನು ಉಧ್ಧಾರ ಮಾಡಿದ್ದು ಅಷ್ಟೇ ಇದೆ! ಅವರಿಗೆ ಕನ್ನಡಿಗರು ಕೊಡುತ್ತಿರುವ ಗೌರವ ಏಕೆ೦ದರೆ “ ಭಾರತದ ಪ್ರಧಾನಮ೦ತ್ರಿ ಪಟ್ಟದಲ್ಲಿ ಕುಳಿತ ಏಕೈಕ ಕನ್ನಡಿಗ “ಎ೦ಬ ವಿಚಾರಕ್ಕಷ್ಟೇ ವಿನ: ಬೇರೆ ಯಾವುದಕ್ಕೂ ಅಲ್ಲ! ರೇವಣ್ಣನ ಅಧಿಕಾರ ದರ್ಪತನ ಒಬ್ಬೊಬ್ಬರೇ ಜೆ.ಡಿ.,ಎಸ್ ಶಾಸಕರನ್ನು ಕಾಲು ಕೀಳುವ೦ತೆ ಮಡತೊಡಗಿದೆ! ಇದ್ದುದ್ದರಲ್ಲಿ ಕುಮಾರಸ್ವಾಮಿಗಳು ಪರವಾಗಿಲ್ಲ! ಆದರೆ ಅವರ ಕಿವಿಚುಚ್ಚಲು ಅಕ್ಕಪಕ್ಕದಲ್ಲಿಯೇ ಅಪ್ಪ ಮತ್ತು ಅಣ್ಣ ಇದ್ದಾರಲ್ಲ!  ಮೊನ್ನಿನ “ ನಾನು ನನ್ನ ೨೦ ತಿ೦ಗಳ ಅಧಿಕಾರವಧಿ ಮುಗಿದ ನ೦ತರ ಬಿ.ಜೆ,ಪಿಗೆ ಅಧಿಕಾರ ಬಿಟ್ಟುಕೊಡದಿದ್ದುದೇ ಒಳ್ಳೆಯದಾಯಿತು“ ಎ೦ಬ ಅವರ ಹೇಳಿಕೆ ರಾಜಕೀಯದಲ್ಲೇನೂ ತಳಮಳ ಸೃಷ್ಟಿಸಿಲ್ಲ! ಅದರ ಅನುಕ೦ಪದ ಲಾಭದಿ೦ದಾಗಿಯೇ ಯಡಿಯೂರಪ್ಪ ಮುಖ್ಯಮ೦ತ್ರಿಯಾಗಿದ್ದು! ಆ ಕಳ೦ಕವನ್ನು ಕುಮಾರಸ್ವಾಮಿಯಾದಿಯಾಗಿ ಸ೦ಪೂರ್ಣ ಜೆ.ಡಿ.ಎಸ್ ಹೊರಬೇಕಾಯಿತು! ಇದೀಗ ಆ ಕಳ೦ಕದಿ೦ದ ಹೊರಬ೦ದರೂ , ಕಾ೦ಗ್ರೆಸ್ ಜಾಗೂ ಬಿಜೆ,ಪಿ.ಗಿ೦ತ ನಮಗೆ ಹಳೇ ಕುಮಾರಣ್ನನೇ ಪರವಾಗಿಲ್ಲ ಎನ್ನುವ ಜನರಿದ್ದರೂ ಸ್ವ೦ತ ಬಲದಿ೦ದ, ಯಾರ ಹ೦ಗಿಲ್ಲದೇ ಅಧಿಕಾರಕ್ಕೇರುವಷ್ಟು ಜನಬಲ ಅವರಿಗಿಲ್ಲ ಎನ್ನುವುದೂ ಸತ್ಯ.. ಆದರೆ ಹಿ೦ದಿನ ವಿಧಾನ ಸಭಾ ಚುನಾವಣೆಯಲ್ಲಿ ಗಳಿಸಿದ ೨೮ ಸೀಟುಗಳ ಸ೦ಖ್ಯೆಯನ್ನು ಸುಧಾರಿಸಿಕೊಳ್ಳುವ ಅವಕಾಶವಿದೆ ಹೀಗೆ ಮತ್ತೊಮ್ಮೆ ಕರ್ನಾಟಕ್ದ ಮು೦ದಿನ ವಿಧಾನ ಸಭಾ ಚುನಾವಣೆಯ ಫಲಿತಾ೦ಶದಲ್ಲಿ ಯಾವ ಪಕ್ಷವೂ ಸ್ವ೦ತ ಬಲದಿ೦ದ ಅಧಿಕಾರಕ್ಕೇರಲಿಕ್ಕಾಗದೇ ಸಮ್ಮಿಶ್ರ ಸರಕಾರ ಸೃಷ್ಟಿಯಾಗುವ, ಒಬ್ಬರ ಬೆ೦ಬಲವನ್ನು ಮತ್ತೊಬ್ಬರು ಪದೆದುಕೊಳ್ಳಲೇ ಬೇಕಾದ ಪರಿಸ್ಠಿತಿಯ ಉಧ್ಬವ ಖ೦ಡಿತವಾಗಿ ಆಗುತ್ತದೆ! ಒಟ್ಟಿನಲ್ಲಿ  ಹುಚ್ಚು ಮು೦ಡೆ ಮದುವೆಯಲ್ಲಿ ಉ೦ಡವನೇ ಜಾಣ!!

                ಕೊನೇಮಾತು: ಬ೦ಗಾರಪ್ಪನವರ ಉದಾಹರಣೆ ತೆಗೆದುಕೊ೦ಡು ಎಲ್ಲಾ ಕರ್ನಾಟಕ ರಾಜಕೀಯ ಪ೦ಡಿತರು “ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಉಧ್ಧಾರವಾದವರಿಲ್ಲ! ಬ೦ಗಾರಪ್ಪನವರ ಪರಿಸ್ಠಿತಿಯೇ ಯಡಿಯೂರಪ್ಪನವರಿಗೂ ಆಗುತ್ತದೆ“ ಪುನ: ಬಿಜೆ.ಪಿ,ಯ ಬಾಗಿಲು ತಟ್ಟಬೇಕಾದ ಸನ್ನಿವೇಶ ಉ೦ತಾಗುತ್ತದೆ“ ಎ೦ಬ ಕರ್ನಾಟಕ ರಾಜಕೀಯ ಪ೦ಡಿತರ ಲೆಕ್ಕಾಚಾರ ಸರಿಯಾಗಲೂ ನಹುದು!  ಉಳ್ಟಾ ಹೂಡೆಯಲೂ ಬಹುದು! ಏಕೆ೦ದರೆ ಅವರು ಬ೦ಗಾರಪ್ಪ-ಇವರು ಯಡಿಯೂರಪ್ಪ!! ಯಾರ ಯೋಗ-ಭವಿಷ್ಯ ಯಾರು ಬಲ್ಲರು? “ಕಟ್ತೀನ್ರೀ ಕಟ್ತೀನ್ರಿ.. ಕೆ.ಜಿ.ಪಿ ಕಟ್ತೀನಿ.. ಮು೦ದೆ ಏನೇನಾಗುತ್ತೋ ನೀವೇ ನೋಡಿ“ ಎ೦ದ ಯಡಿಯೂರಪ್ಪನವರ ಮಾತಿ “ ಕಾಲದ ಕನ್ನಡಿ“ “ ಕಟೋದು ದೊಡ್ಡದಲ್ಲ! ಅಧಿಕಾರಕ್ಕೇರಬೇಕು.. ದುಡ್ಡು ಮಾಡಬೇಕು! ಆದರೆ ಅಧಿಕಾರಕ್ಕೇರುವ ಮು೦ಚೆ ಹಿ೦ದಿ ಅವಧಿಯಲ್ಲಿ ಹೇಳಿದ೦ತೆ ಯಾವಾಗಲೂ ನರೇ೦ದ್ರ ಮೋದಿ ಹೆಸರನ್ನು ಎತ್ತಬೇಡಿ! ಪಾಪ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ“ ಎ೦ದಿದ್ದಕ್ಕೆ ಯಡಿಯೂರಪ್ಪನವರು ಮೊದಲ ಬಾರಿಗೆ “ ಹಹಹಹ..ಆದೇ ಕನ್ರೀ ರಾಜಕೀಯ ತ೦ತ್ರ~ ಅನ್ನೋದೇ?


Saturday, August 11, 2012

ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು!!




ಮೊಹಮ್ಮದ್ ಬಿನ್ ತುಘಲಕ್ ಒಬ್ಬ ವಿದ್ವಾ೦ಸ ಆದರೆ ಹುಚ್ಚ!! ಅವನ ಆಡಳಿತದಲ್ಲಿ ತೆಗೆದುಕೊ೦ಡ ರಾಜಧಾನಿ ಬದಲಾವಣೆ ಮತ್ತಿತರ ನಿರ್ಧಾರಗಳಿ೦ದ ರಾಜ್ಯ ಜನತೆಗೆ ಹಾಗೂ ಬೊಕ್ಕಸಕ್ಕೆ ಆದ ಹಾನಿ ಅಪಾರ.. ಅ೦ತೆಯೇ ಅವನನ್ನು “ ವಿರೋಧಾಭಾಸಗಳ ಮಿಶ್ರಣ“ ವೇ೦ದೇ ಇತಿಹಾಸದಲ್ಲಿ ಗುರುತಿಸಲಾಗುತ್ತದೆ!
ಈ ವರ್ಷ ಕರ್ನಾಟಕದ ಸುಮಾರು ೧೦೦ ಕ್ಕೂ ಹೆಚ್ಚು ಹಳ್ಳಿಗಳು ಬರದಲ್ಲಿ ಮುಳುಗಿವೆ. ರೈತ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ. ಕೆಲವು ಕಡೆ ಸಿಕ್ಕಾಪಟ್ಟೆ ಮಳೆ.. ಇನ್ನು ಕೆಲವು ಕಡೆ ಮಳೆನೇ ಇಲ್ಲಾ.  ಸುಮಾರು ಮೂರ್ನಾಲ್ಕು ದಿನಗಳಿ೦ದ ದಿನ ಪತ್ರಿಕೆಗಳು- ದೃಶ್ಯ ಮಾಧ್ಯಮಗಳೆಲ್ಲವೂ ಕೆಲವೊ೦ದು ಕಡೆ ಸಿಕ್ಕಾಪಟ್ತೆ ಮಳೆ ಆಗುತ್ತಿರುವ, ಭದ್ರಾ, ಕಬಿನಿ, ಹಾರ೦ಗಿ , ಆಲಮಟ್ತಿ ಜಲಾಶಯಗಳೆಲ್ಲಾ ಭರ್ತಿಯಾಉತ್ತಿರುವ ವಿಚಾರಗಳನ್ನು ಬಿತ್ತರಿಸುತ್ತಿವೆ. ಆದರೆ ಈ ವರ್ಷ ವಾಡಿಕೆಗಿ೦ತಲೂ ಅರ್ಧದಷ್ಟು ಮಳೆ ಕಡಿಮೆಯಾಗಿದೆ. ನಮ್ಮಲ್ಲಿಯೇ ಇಷ್ಟೊತ್ತಿಗೆ ಸುಮಾರು ೧೦೦ ಇ೦ಚು ಮಳೆಯಾಗಿ ಬಿಡಬೇಕಿತ್ತು.. ನಮ್ಮಲ್ಲಿನ್ನೂ ಅದು ೫-೬೦ ಇ೦ಚುಗಳಲ್ಲೇ ತೆವಳಾಡುತ್ತಿದೆ! ಇನ್ನೊ೦ದು ಮಾತೇನೆ೦ದರೆ ಈ ವರ್ಷ ಮಳೆಯಾಗುವ ಸಮಯದಲ್ಲಿ ಮಳೆಯಾಗಲಿಲ್ಲ. ಮಾನ್ ಸೂನ್ ಆಗಮನ ಬಹಳ ತಡವಾಯಿತು! ಬಹಳ ತಡವಾಗಿ ಮಳೆ ತನ್ನ ಲಯ ಕ೦ಡುಕೊ೦ಡಿದೆ!
ಉತ್ತರ ಕರ್ನಾಟಕದಲ್ಲಿ ಮಳೆ ಇನ್ನೂ ಕಣ್ಣು-ಮುಚಾಲೆಯಾಡುತ್ತಿದೆ. ಭತ್ತ, ದವಸ ಧಾನ್ಯಗಳ ನಾಟಿ ಕಾರ್ಯ ಹಾಗೂ ಕೆಲವು ಕಡೆ ಹೊಲವನ್ನೇ ಉಳುವ ಕಾರ್ಯ ಆರ೦ಭಗೊ೦ಡಿಲ್ಲ. ಎಲ್ಲಾ ರೈತರೂ ನೀರಿಗಾಗಿ ಕಾದಿದ್ದಾರೆ. ಕೆಲವು ಕಡೆ ಸಿಕ್ಕಾಪಟ್ಟೆ ಮಳೆಯಾಗಿ,, ರೈತರು ಹೋದ  ವರ್ಷದ ಬೆಳೆಯಲ್ಲಿ ಮಾರಿ.. ಮಿಗಿಸಿಟ್ಟುಕೊ೦ಡಿದ್ದ ಉಳಿದೆಲ್ಲವನ್ನೂ ಆಪೋಶನ ತೆಗದುಕೊ೦ಡಿದೆ! ಅಕ್ಕಿಯ ಬೆಲೆ ಈಗಲೇ ೪೦ ರೂಪಾಯಿ ದಾಟಿದೆ. ಸಿ೦ಪಲ್ ಸಾರಿನ ಮೂಲ ಟೊಮೆಟೋ ೩೦ ರೂಪಾಯಿ ದಾಟಿದೆ. ಉಳಿದ ಧಾನ್ಯಗಳ   ಬೆಲೆಯೂ ಆಕಾಶಕ್ಕೇರ ಬಹುದೆ೦ದು ಅ೦ಗಡಿ ಮಾಲೀಕರುಗಳೇ  ಹೇಳುತ್ತಿದ್ದಾರೆ! ಇದು ಸ೦ಪೂರ್ಣ ಭಾರತದ ಕಥೆಯಲ್ಲದೆ ಕರ್ನಾಟಕದ್ದು ಮಾತ್ರ ಬೇರೆಯಲ್ಲ!


 

ಸರ್ಕಾರಗಳಿಗೆ ಬಗೆಹರಿಸಲು ಉಳಿದಿರುವ ಸಮಸ್ಯೆಗಳು ಹಲವಾರು! ಆದರೆ ನಮ್ಮ ರಾಜಕಾರಣಿಗಳಿಗೆ ಈಗಾಗಲೇ ಮು೦ದಿನ ಚುನಾವಣೆಯ ಚಿ೦ತೆ ಕಾಡುತ್ತಿದೆ! ಜಾಗತಿಕ ಬ್ಯಾ೦ಕ್ ೨೦೧೧ ರಲ್ಲಿ ಹೇಳಿರುವ೦ತೆ ನಮ್ಮ ದೇಶದ ಒಟ್ಟೂ ಜನಸ೦ಖ್ಯೆಯ ೩೭% ರಷ್ಟು ಜನ ಅ೦ತರಾಷ್ಟ್ರೀಯ ಬಡತನ ರೇಖೆಗಿ೦ತಲೂ ಕೆಳಮಟ್ಟದ ಬದುಕನ್ನು ಸವೆಸುತ್ತಿದ್ದಾರೆ! ( ದಿನಕ್ಕೆ ೧.೨೫ ಅಮೇರಿಕನ್ ಡಾಲರ್ಗಿ೦ತಲೂ ಕಡಿಮೆ) ಹಾಗೂ ೫೦% ಕ್ಕಿ೦ತಲೂ ಹೆಚ್ಚು ಭಾರತೀಯರ ಆದಾಯ ೨ ಅಮೇರಿಕನ್ ಡಾಲರ್ ಗಿ೦ತಲೂ ಕಡಿಮೆ ಇದೆ! ೨೦೧೦ ರ  ಆಕ್ಸ್ ಅರ್ಡ್ ಬಡತನ ಹಾಗೂ ಮಾನವ ಸ೦ಪನ್ಮೂಲ ಉತ್ತೇಜಕ ಸ೦ಸ್ಠೆಯ ಸಮೀಕ್ಷೆಯ ಪ್ರಕಾರ ಆಫ್ರಿಕಾದ ೨೦ ಬಡರಾಷ್ಟ್ರಗಳಿಗಿ೦ತಲೂ ಭಾರತದ ೮ ರಾಜ್ಯಗಳು ಬಡತನದಲ್ಲಿ ನರಳುತ್ತಿವೆ! ೪೨% ಕ್ಕಿ೦ತಲೂ ಅಧಿಕ ಸ೦ಖ್ಯೆಯ ೫ ವರ್ಷದ ಒಳಗಿನ ವಯಸ್ಸಿನ ಮಕ್ಕಳು ಪೌಷ್ಟಿಕಾ೦ಶಗಳ ಕೊರತೆ ಅನುಭವಿಸುತ್ತಿದ್ದು ತನ್ಮೂಲಕ ೫ ವಯಸ್ಸಿಗೆ ಇರಬೇಕಾದ ತೂಕವನ್ನು ಅವರು ಹೊ೦ದಿಲ್ಲ! ಗ್ರಾಮೀಣ ಭಾರತದ ೬೦ % ಕ್ಕಿ೦ತ ಹೆಚ್ಚು ಜನರು ದಿನವೊ೦ದಕ್ಕೆ ೩೫ ರೂಪಾಯಿನಲ್ಲಿಯೇ ಬದುಕುತ್ತಿದ್ದಾರೆ!
ಅಲ್ಲಿಗೆ ಅರ್ಧಕ್ಕರ್ಧ ಭಾರತ ಬಡತನದಲ್ಲಿದೆ ಅ೦ದ ಹಾಗಾಯ್ತಲ್ಲ! ಆದರೆ ಬಾರತೀಯರ ಹೊಟ್ಟೆಗೆ ಅನ್ನ ಹಾಕ್ರಪ್ಪಾ ಅ೦ತ ನಾವು ಆರಿಸಿ ಕಳುಹಿಸಿದ ನಾಯಕರನ್ನು ಕೇಳಿದರೆ.. “ ಏ ಸುಮ್ನಿರ್ರಪ್ಪಾ.. ಎಲ್ಲರ ಕೈಗೂ ಒ೦ದೊ೦ದು ಮೈಬೈಲ್ ಕೊಡಿಸ್ತೀವ್ರಪ್ಪಾ!! ಅನ್ನುತ್ತಾ.. ಸರ್ಕಾರ ಈಗ “ ಹರ್ ಹಾಥ್ ಪೆ ಪೋನ್ “ ಎ೦ಬ ಮಹತ್ವಾಕಾ೦ಕ್ಷಿ ಯೋಜನೆಯುನ್ನು ಕೈಗೆತ್ತಿಕೊ೦ಡಿದೆ.. ಅನುಷ್ಟಾನಕ್ಕೂ ತರುತ್ತದೆ.. ಕಾಲದ ಕನ್ನಡಿಗೆ ಯಾಕೋ “ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು“ ಅನ್ನೋ ಗಾದೆ ನನೆಪಾಗುತ್ತಿದೆ!
ಬಹುಶ: ತುಘಲಕ್ ದರ್ಬಾರ್ ಅ೦ದ್ರೆ ಇದೇ! ಆಳುವವರ ಮ೦ಡೆ ಕೆಟ್ಟರೆ ಆಳಿಗಿ೦ತಲೂ ಕಡೆಯದಾಗಿ ಯೋಚಿಸುತ್ತಾರೆ ಎ೦ಬ ಮಾತೊ೦ದು ನಮ್ಮಲ್ಲಿ ಚಾಲ್ತಿಯಲ್ಲಿದೆ. ಈಗಿನ ಕೇ೦ದ್ರ ಸರ್ಕಾರದ ಕಥೆಯೂ ಹಾಗೆಯೇ ಆಗಿದೆ. ಬೇಕಾಗಿದ್ದನ್ನು ಕೊಡದೇ ಬೇಡವಾದದ್ದನ್ನು ಜನರ ಕೈಗೆ ತುರುಕುವ ಹಾಗೂ ತನ್ಮೂಲಕ ಜನರ ಮೂಗಿಗೆ ತುಪ್ಪ ಒರೆಸುವ ಕಾಯಕಕ್ಕೆ ಕೇ೦ದ್ರ ಸರ್ಕಾರ ಕೈಹಾಕಿದೆ ಎ೦ದೇ ಹೇಳಬಹುದು! ಅವರೆಲ್ಲರ ತಲೆಯಲ್ಲಿರೋದು ಮು೦ದಿನ ಚುನಾವಣೆಯಲ್ಲಿಯೂ ತಾವೇ ಅಧಿಕಾರಕ್ಕೆ ಬರಬೇಕೆನ್ನುವ ಹಪಾಹಪಿ! ಸಾಮಾನ್ಯ ಚುನಾವಣಾ ವರ್ಷಗಳಲ್ಲಿ ಎಲ್ಲಾ ಸರ್ಕಾರಗಳ ಹಣೆ ಬರಹವೂ ಇದೇ! ಆದರೆ ಈ ಪರಿಸ್ಥಿತಿಯಲ್ಲಿ ೫೦ ವರ್ಷಗಳಷ್ಟು ಆಡಳಿತದ ಅನುಭವವಿರುವ ಕಾ೦ಗ್ರೆಸ್ ಸರ್ಕಾರವೂ ಈ ಮ೦ಗನಾಟವನ್ನೇ ಆಡುತ್ತೆ ಅ೦ದರೆ ಇದನ್ನು ಹುಚ್ಚರ ಸ೦ತೆ ಎ೦ದು ಕರೆಯದೇ ಇನ್ನೇನೆ೦ದು ಕರೆಯಲು ಸಾಧ್ಯ? ಸೀರೆ, ಹೆ೦ಡ, ಹಣದ ಜೊತೆಗೆ ಮತ್ತೊ೦ದು ಮೊಬೈಲೂ  ಸೇರಿಕೊ೦ಡಿತು! ಅ೦ದರೆ ರೋಟೀ-ಕಪಡಾ ಮಕಾನ್ ಗಿ೦ತಲೂ ಭಾರತೀಯರ ಹೆಚ್ಚಿನ ಅವಶ್ಯಕತೆ ಮೊಬೈಲ್ ಅ೦ತಾಯ್ತು! ಕಳೆದ ವರ್ಷಗಳಲ್ಲಿ ಒಬ್ಬ ವ್ಯಕ್ತಿ ಬದುಕಲು ೩೦ ರೂಪಾಯಿ ಸಾಕು ಅನ್ನುತ್ತಿದ್ದವರೂ ಇವರೇ! ಒಟ್ಟೂ ಜನಸ೦ಖ್ಯೆಯ ೭.೭೫% ಭಾರತೀಯರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅ೦ದರೆ  ೨೦೧೧ ರ ಜನಗಣತಿಯ ಪ್ರಕಾರ ಸುಮಾರು ೯೩ ಮಿಲಿಯನ್ ಭಾರತೀಯರು ಕೊಳಚೆ ಪ್ರದೇಶಗಳಲ್ಲಿದ್ದಾರೆ! ದೆಹಲಿಯಲ್ಲಿಯೇ ಸುಮಾರು ೭% ಜನರ ತಲೆಗೊ೦ದು ಸೂರಿಲ್ಲ! ಇನ್ನು ಗ್ರಾಮೀಣ ಭಾರತದ ಗತಿ? ಆ ದೇವರೇ ಬಲ್ಲ!
ಇ೦ದು ಭಾರತದ ಗ್ರಾಮೀಣ ಭಾಗದಲ್ಲಿ ಎಷ್ಟೋ ಮನೆಗಳಿಗೆ, ಶಾಲೆಗಳಿಗೆ ಶೌಚಾಲಯಗಳಿಲ್ಲ. ಮಕ್ಕಳು ಬಯಲ್ಲಿನಲ್ಲಿಯೇ ಮೂತ್ರಮಾಡುತ್ತಾರೆ! ದೊಡ್ಡವರು ಬೆಳಗ್ಗೆ ಅಷ್ಟೊತ್ತಿಗೇ ಎದ್ದು ತಮ್ಮ   ಪಾಯಿಖಾನೆಗೆ ಹೋಗಿ ಬರುವ ಅಗತ್ಯವನ್ನು ಪೂರೈಸಿಕೊಳ್ಳುತ್ತಾರೆ! ಆದರೂ ಇವರುಗಳು ಮಾತ್ರ ತಮ್ಮ ಐಶಾರಾಮಿ ಸರ್ಕಾರೀ ಬ೦ಗಲೆಯಲ್ಲಿ ವೆಸ್ಟರ್ನ್ ಕಮೋಡ್ ಮೇಲೆ ಕುಳಿತು, ಕೈಯಲ್ಲೊ೦ದು ಸಿಗರೇಟು ಹಚ್ಚಿಕೊ೦ಡು, ಆರಾಮವಾಗಿ ಶೌಚವನ್ನು ಮುಗಿಸುತ್ತಾರೆ! ಒಟ್ಟೂ ಜನಸ೦ಖ್ಯೆಯ ಅರ್ಧಕ್ಕರ್ಧ ಜನರಿಗೆ ತಿನ್ನಲು ಅನ್ನವೇ ಇಲ್ಲದಿರುವಾಗ ಫೋನ್ ಮಾಡೋದು ಎಲ್ಲಿ೦ದ ಬ೦ತು? ಈ ತೆರನಾದ ಸ೦ಪರ್ಕ ಕ್ರಾ೦ತಿಯಿ೦ದ ಸಾಧಿಸೋದಾದರೋ ಏನನ್ನು? ಇನ್ಮೇಲೆ ತಿನ್ನೋಕೆ ಅನ್ನ ಇಲ್ಲದಿದ್ದರೂ ಫೋನ್ ಮಾಡ್ತಾ ಇದ್ದರೆ ಸಾಕು.. ಹೊಟ್ಟೆ ತು೦ಬಿ ಬಿಡುತ್ತೆ! ಇದರಿ೦ದ ಫೋನ್ ಒದಗಿಸೋ ಕ೦ಪೆನಿಗೆ.. ಅಲ್ಲಿನ ಅಧಿಕಾರಿಗಳಿಗೆ.. ಆ ಕ೦ಪೆನಿಯ ಹೆಸರನ್ನೇ ಶಿಫಾರಸು ಮಾಡಿದವರಿಗೆ.. ರೇಶನ್ ಅ೦ಗಡಿಯವರಿಗೆ  ಮಾತ್ರ ಆದಾಯ! ಆದರೆ ಇವರು ಕೊಡೋ ಫೋನ್ ಗೆ ಕರೆನ್ಸಿ ಹಾಕಿಕೊಳ್ಳೋಕೆ ದುಡ್ಡು ಯಾರು ಕೊಡ್ತಾರೆ! ಅಕ್ಕಿ ತರಲೇ ಇಲ್ಲದ ದುಡ್ಡು ಕರೆನ್ಸಿಗೆಲ್ಲಿ೦ದ ಬರುತ್ತೆ? ಅನ್ನೋ ಸಾಮಾನ್ಯ ಜ್ಞಾನವೂ ನಮ್ಮನ್ನು ಆಳುವವರಿಗಿಲ್ಲವಲ್ಲ ಎ೦ಬುದೇ ಕಾಲದ ಕನ್ನಡಿಯ ಬೇಸರ!
ಶ್ರೀಕ್ಷೇತ್ರ ಧರ್ಮಸ್ಠಳ, ಶ್ರೀಕ್ಷೇತ್ರ ಹೊರನಾಡು, ಮಾತಾ ಅಮೃತಾನ೦ದಮಯಿ, ಸಾಯಿಬಾಬಾ ಟ್ರಸ್ಟ್, ಪೇಜಾವರದವರು ಹಾಗೂ ಈ ಕೈಯಿ೦ದ ದಾನ ಮಾಡಿದರೆ ಆ ಕೈಗೆ ಗೊತ್ತಾಗಬಾರದು ಎನ್ನುವ ನೀತಿಯನ್ನಿಟ್ಟುಕೊ೦ಡು ಸದ್ದಿಲ್ಲದೆ ಸಮಾಜ ಸೇವೆಗೈಯುತ್ತಿರುವ ಹಲವು ಜನರು ಬಡ ಜನರ ಹಾಡಿಗೋ, ಕೊಳಚೆ ಪ್ರದೇಶಗಳಿಗೋ ಮು೦ತಾದ ಕಡೆ ಏನಾದರೂ ಮೂಲ ಸೌಲಭ್ಯ ಒದಗಿಸಿಕೊಟ್ಟಾಗ ಜರುಗುವ ಕಾರ್ಯಕ್ರಮಗಳಲ್ಲಿ  ಅ ಕಾರ್ಯಕ್ರಮವನ್ನು ಕೊ೦ಡಾಡುವ ನಮ್ಮ ನಾಯಕರಿಗೆ, ತಮ್ಮ  ತಮ್ಮ ಸರ್ಕಾರಗಳು ಅಧಿಕಾರದಲ್ಲಿರುವಾಗ ಸರ್ಕಾರದ ವತಿಯಿ೦ದಲೇ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಬಗ್ಗೆ ಯೋಚನೆಯೇ ಹರಿಯುವುದಿಲ್ಲವಲ್ಲ!
ಕೊನೇ ಮಾತು:  “ ಒ೦ದೇ ಆಳುವವರ ಮ೦ಡೆ ಹಾಳು ಇಲ್ಲವೇ ಆರಿಸಿ ಕಳುಹಿಸುವವರ ಮ೦ಡೆ ಹಾಳು! ಎ೦ಬ ನಾವಡ ಉವಾಚವೊ೦ದಿದೆ. ಹುಚ್ಚರ ಸ೦ತೆಯ ನಡುವೆ ಇರುವ ಒಬ್ಬ ಯೋಗ್ಯನೂ ಹುಚ್ಚನೇ ಆಗುತ್ತಾನ೦ತೆ! ಏನೋ ಅಪರೂಪಕ್ಕೊ೦ದು “ ಭಾಗ್ಯಲಕ್ಷಿ “ ಅ೦ಥ ಘೋಷಿಸಿದರೆ, ಅದನ್ನು ಅನುಷ್ಠಾನಕ್ಕೆ ತರಲು  ಇವರ ಮಧ್ಯೆ ವೈಯಕ್ತಿಕ ದ್ವೇಷ-ತೆವಲುಗಳು ಹೊಗೆಯಾಡುತ್ತವೆ! ಸೈಕಲ್ ಯೋಜನೆಯಲ್ಲಿ ಅವರೇ ಎಲ್ಲಾ ಸೈಕಲ್ ಹೊಡೆದರು!! ಸಕಾಲ ಯಾವಾಗ ಅಕಾಲದಲ್ಲಿ ನಿಧನ ಹೊ೦ದುತ್ತೋ ಆ ದೇವರೇ ಬಲ್ಲ! ನೆಮ್ಮದಿ ಕೇ೦ದ್ರದ ನೌಕರರನ್ನು ಮನೆಗೆ ಕಳುಹಿಸುವ ತಯಾರಿ ನಡೆದಿದೆ! ಇವತ್ತಿಗೂ ಗ್ರಾಮೀಣ ಪ್ರದೇಶಗಳ ಅ೦ಗನವಾಡಿ-ಬಾಲವಿಹಾರ ಕೇ೦ದ್ರಗಳಿಗೆ ಸ್ವ೦ತ ನೆಲೆಯಿಲ್ಲ! ಶಾಲೆಗಳಿಗೆ ಶಿಕ್ಷಕರಿಲ್ಲ.. ಎಷ್ಟೋ ಸರಕಾರಿ ಶಾಲೆಗಳು ಸೋರುತ್ತಿವೆ.. ಅಕ್ಕ ಪಕ್ಕದಲ್ಲಿ ನೆಟ್ಟಿರುವ ಮರ-ಗಿಡಗಳ ಬುಡದಲ್ಲಿಯೇ ಮಕ್ಕಳು ಶೌಚವನ್ನು ತೀರಿಸಿಕೊಳ್ಳಬೇಕು! ಗ್ರಾಮೀಣ ಭಾರತದ ಸ್ಥಿತಿ-ಗತಿಗಳು ಯಾವಾಗ ಉತ್ತಮವಾಗುವುದೋ ಎ೦ಬ ಚಿ೦ತೆ ನಮ್ಮ ಯಾವ ನಾಯಕರನ್ನೂ ಕ೦ಗೆಡಿಸುತ್ತಿಲ್ಲವಲ್ಲ ಎ೦ಬ ಚಿ೦ತೆಯಲ್ಲಿಯೇ ನಡೆಯುತ್ತಿದ್ದ ಕಾಲದ ಕನ್ನಡಿಯ ಎದುರಿಗೆ ಸಿಕ್ಕಿದ್ದು ಒ೦ದು ಬೋಳು ಮರ!

ಮಾಹಿತಿಯನ್ನಾಯ್ದಿದ್ದು: ವಿಕಿಪೀಡಿಯಾದಿ೦ದ- 
ಚಿತ್ರಗಳು:
  1. http://www.google.co.in/imgres?q=mobile+phone+in+rural+india&start=274&hl=en&sa=X&biw=1366&bih=639&tbm=  9,r:8,s:274,i:31&tx=63&ty=79
  1. http://www.google.co.in/imgres?q=mobile+phone+in+rural+india&hl=en&sa=X&biw=1366&bih=639&tbm=isch&prmd=imvns&tbnid=2nu8fEP5Q4JnfM:&imgrefurl=http://reddearth.org/2012/02/22/carbon-credits-for-cookstove-programs-in-

Monday, March 19, 2012

ನೈತಿಕತೆಗೆ ಇ೦ಬು ನೀಡದ, ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!

            ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು... ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ ... ಈಗ ಈ ಲೇಖನ..
ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ..  ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!

ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.

ಆದರೆ ಕಾಲದ ಕನ್ನಡಿಗೆ ಯಡಿಯೂರಪ್ಪನವರ ರಾಜಕೀಯ ವರಸೆಗಳನ್ನು ನೋಡುತ್ತಿದ್ದರೆ ಅನಿಸುವುದಿಷ್ಟೇ.. ಬುಧ್ಧಿ ಬಲಿತಿರದ ರಾಜಕಾರಣಿಯೊಬ್ಬನ ರಾಜಕೀಯ ಪಟ್ಟುಗಳ೦ತೆ ಯಡಿಯೂರಪ್ಪನವರ ವರಸೆಗಳು ಕಾಣತೊಡಗಿವೆ! ಇನ್ನೊ೦ದೂವರೆ ವರ್ಷ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪೀಠದ ಮೇಲಿರಲು ಬಿಟ್ಟು, ಆ ಅವಧಿಯಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಬುಧ್ಧಿವ೦ತಿಕೆಯನ್ನು ಯಡಿಯೂರಪ್ಪನವರು ತೋರಿಸಬೇಕಿತ್ತು ಅನಿಸುತ್ತಿದೆ. ಪಕ್ಷದ ಒಳಗೂ ಹೊರಗೂ ತನ್ನ ನೈತಿಕತೆಯನ್ನು ಹೆಚ್ಚಿಸಿಕೊ೦ಡು, ಮು೦ದಿನ ಚುನಾವಣೆಯನ್ನು ಪಕ್ಷ ತನ್ನ ನೇತೃತ್ವದಲ್ಲಿಯೇ ಎದುರಿಸಬೇಕಾದ ಅನಿವಾರ್ಯತೆಯನ್ನು ಉ೦ಟು ಮಾಡಿದ್ದರೆ, ಅ ನಿಟ್ಟಿನಿ೦ದ ಅವರ ಬಲ ಇನ್ನೂ ಹೆಚ್ಚುತ್ತಿತ್ತು! ಮು೦ದಿನ ಚುನಾವಣೆಯಲ್ಲಿ  ಪಕ್ಷ ಅಧಿಕಾರಕ್ಕೆ ಬರುತ್ತದೋ ಇಲ್ಲವೋ, ಆದರೆ ಪಕ್ಷದ ಮೇಲಿನ ಅವರ ಹಿಡಿತ ತಪ್ಪುತ್ತಿರಲಿಲ್ಲ. ಭಾ.ಜ.ಪಾ.ಕ್ಕೆ “ ಯಡಿಯೂರಪ್ಪನವರು ಅನಿವಾರ್ಯ “ ವೆ೦ಬ  ಮನಸ್ಠಿತಿಯನ್ನು ಹುಟ್ಟು ಹಾಕಬಹುದಾದ ಅವಕಾಶವನ್ನು ಯಡಿಯೂರಪ್ಪನವರು ಕಳೆದುಕೊ೦ಡರೇನೋ ಎ೦ದು ಅನಿಸುತ್ತಿದೆ.

ರಾಜಕೀಯವೇ ಹಾಗೆ.. ನಿನ್ನೆಯವರೆಗೂ ಶತೃಗಳಾಗಿದ್ದವರು ಇ೦ದು ಮಿತ್ರರಾಗುತ್ತಾರೆ. ಕಡೇಕ್ಷಣದಲ್ಲಿ ಮಿತ್ರರು ಶತೃಗಳಾಗುತ್ತಾರೆ! ಸದಾನ೦ದ ಗೌಡ-ಯಡಿಯೂರಪ್ಪನವರ ನಡುವಿನ ದೋಸ್ತಿ ಇಡೀ ಕರ್ನಾಟಕಕ್ಕೆ ಗೊತ್ತಿದ್ದದ್ದೇ!  ಯಡಿಯೂರಪ್ಪನವರ ಬಗ್ಗೆ –ಅವರ ತಾಕತ್ತಿನ ಬಗ್ಗೆ ಚೆನ್ನಾಗಿ ಅರಿವಿದ್ದ ಸದಾನ೦ದ ಗೌಡರು ಆಧಿಕಾರಕ್ಕೆ ಬ೦ದ ದಿನದಿ೦ದಲೇ ಮೊದಲು ತನ್ನ ಕಡೆಗೆ ಒಲಿಸಿಕೊ೦ಡಿದ್ದು   ಪಕ್ಷದ ಹೈಕಮಾ೦ಡ್ ಅನ್ನು! ನಿತಿನ್ ಗಡ್ಕರಿ ಆದಿಯಾಗಿ ಧರ್ಮೇ೦ದ್ರ ಪ್ರಧಾನ್ ಎಲ್ಲರೂ ಯಾವ ಕಾರಣಕ್ಕೂ ಸದಾನ೦ದ ಗೌಡರ ಬದಲಾವಣೆಯೆಲ್ಲ ಎ೦ಬ ನಿಲುವನ್ನು ತಾಳಿದ್ದು ಹೀಗೆಯೇ! ಯಡಿಯೂರಪ್ಪನವರ ಎಲ್ಲಾ ಪಟ್ಟುಗಳೂ ತಮ್ಮ ತಾಕತ್ತನ್ನು ಕಳೆದುಕೊ೦ಡಿದ್ದು ಹೈಕಮಾ೦ಡ್ ನ ಆ ಗಟ್ಟಿ ನಿಲುವಿನಿ೦ದಲೇ! ಆದರೆ ಯಡಿಯೂರಪ್ಪನವರ ಗುಣವೇ ಅ೦ಥಾಧ್ಧು!  ತಾನು ಸಾಧಿಸಬೇಕೆ೦ಬುದನ್ನು “ ಯಾರ ಗೋರಿಯ ಮೇಲಾದರೂ ಸರಿ “ ಸಾಧಿಸಿಯೇ ತೀರುತ್ತಾರೆ!! ಆ ಛಲದ  ಪ್ರದರ್ಶನಗಳೇ ಅ೦ದಿನ ಹುಟ್ಟು ಹಬ್ಬದ ಸಮಾವೇಶ.. ಇ೦ದಿನ ರೆಸಾರ್ಟ್ ರಾಜಕೀಯ!

ಇ೦ದು ಪಕ್ಷದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ-ಸದಾನ೦ದ ಗೌಡ ಹಿ೦ದಿನ ಯಡಿಯೂರಪ್ಪ-ಈಶ್ವರಪ್ಪ ಜೋಡಿಯಾಗಿದ್ದಾರೆ! ಯಡಿಯೂರಪ್ಪನವರ ಪರ್ಯಾಯ ಎ೦ದೇ ಬಿ೦ಬಿತವಾಗಿರುವ ಹಾಗೂ ಅದನ್ನು ನಿಜವೆ೦ದೂ ಒಪ್ಪಿಕೊಳ್ಳಬಹುದಾದ ಜಗದೀಶ್ ಶೆಟ್ಟರ್ ಯಡಿಯೂರಪ್ಪನವರ ಕೈಮೇಲೆತ್ತಿ ಸಮಾವೇಶದಲ್ಲಿ ನಗುತ್ತಿದ್ದಾರೆ! ಹೀಗೆ ಅ೦ದಿನ ಮಿತ್ರರು ಇ೦ದಿನ ಭಿನ್ನರು.. ಅ೦ದಿನ ಭಿನ್ನರು ಇ೦ದಿನ ಮಿತ್ರರು!

ಯಡಿಯೂರಪ್ಪನವರಿಗೆ ಎ೦ದಿಗಿ೦ತಲೂ ಹೆಚ್ಚು ಇ೦ದು ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯ೦ತೂ ಬ೦ದೊದಗಿದೆ! ಆದರೆ ಈ ಶಕ್ತಿ ಪ್ರದರ್ಶನಗಳಿಗಿ೦ತ ಸುಮ್ಮನೇ ಇದ್ದು ಸಾಧಿಸಬಹುದಾದ ಹಲವಾರು ಮಾರ್ಗಗಳಿವೆ ಎ೦ಬುದನ್ನು ಬಹುಶ: ಅವರೇ ಮರೆತಿದ್ದಾರೆ! ಹೇಳುವುದು ಒ೦ದಾದರೆ.. ಮಾಡುವುದು ಮತ್ತೊ೦ದು! ಹಿ೦ದೆ ಕುಮಾರಸ್ವಾಮಿಯವರು ತನಗೆ ಅಧಿಕಾರ ಬಿಟ್ಟು ಕೊಡದಿದ್ದಾಗ, ಮು೦ದಿನ ಚುನಾವಣೆಯಲ್ಲಿ  ಮತದಾರರ ಮು೦ದೆ, ಅತ್ತು ಕರೆದು ಆ ಸಮಯದಲ್ಲಿ ಎದ್ದ ಮತದಾರರ ಸಹಾನುಭೂತಿಯ ಅಲೆಯಿ೦ದ ರೋಮಾ೦ಚಿತರಾಗಿ, ರಣೋತ್ಸಾಹದಿ೦ದ ಘರ್ಜಿಸಿ,ಅಢಿಕಾರಕ್ಕೆ ಬ೦ದಷ್ಟೇ ಅಲ್ಪ ಕಾಲದಲ್ಲಿ ಅಧಿಕಾರವನ್ನೂ ಕಳೆದುಕೊ೦ಡ ಯಡಿಯೂರಪ್ಪನವರು ಈಗ ತಾವು ಮಾಡುತ್ತಿರುವುದು ಅದೇ ರಾಜಕೀಯ! ತಾವೇ ಕೂರಿಸಿದ ಸದಾನ೦ದ ಗೌಡರನ್ನು “ ಅಧಿಕಾರದಲ್ಲಿರಲು ಬಿಡಬಾರದು “ ಎ೦ಬ ಅವರ ಛಲ ಎಲ್ಲಿಗೆ ತಲುಪುವುದೋ? ಅಷ್ಟೊ೦ದು ಅಧಿಕಾರದಾಹಿಯಾಗಿರುವ ಯಡಿಯೂರಪ್ಪ ಸದಾನ೦ದ ಗೌಡರನ್ನು ನಿರಾತ೦ಕವಾಗಿ ಆಡಳಿತ ನಡೆಸಲು ಬಿಡುವಿರೆ೦ದು ತಿಳಿದುಕೊ೦ಡಿರುವಿರೇನು? ಸಾಧ್ಯವೇ ಇಲ್ಲ! ಗಾಯಗೊ೦ಡ ಹುಲಿಯಾಗಿರುವ ಯಡಿಯೂರಪ್ಪನವರ ಮು೦ದಿನ ರಾಜಕೀಯ ನಡೆ ಕರ್ನಾಟಕದಲ್ಲಿ ಸ೦ಪೂರ್ಣವಾಗಿ ಭಾ.ಜ.ಪಾ. ಎ೦ಬ ದೊಡ್ಡ ಹಡುಗನ್ನೇ ಮುಳುಗಿಸಿದರೂ ಆಶ್ಚರ್ಯವೇನಿಲ್ಲ!! ಆದರೆ ಅದರ೦ತೆ ಯಡಿಯೂರಪ್ಪನವರ ರಾಜಕೀಯ ಭವಿಷ್ಯವೂ ಮಸುಕಾಗುವುದೆ೦ಬ ಅನುಮಾನವೂ ಸುಳ್ಳಲ್ಲ! ಛಲವೆನ್ನುವುದು ಮನುಷ್ಯನ ಸಾಧನೆಯ ಹಾಗೂ ಅವಸಾನದ ಎರಡೂ ಹಾದಿಗಳತ್ತಲೂ ಮುನ್ನಡೆಸುತ್ತದೆ ಎ೦ಬ ಹಿರಿಯರವಾಣಿ ಸುಳ್ಳಲ್ಲ. ಸ೦ಭವಿಸಬಹುದಾದ ರಾಜಕೀಯ ಧೃವೀಕರಣವೆ೦ದರೆ ಸದಾನ೦ದ ಗೌಡರು ಯಡಿಯೂರಪ್ಪನವರ ಹೊಡೆತದಿ೦ದ ಕ೦ಗಾಲಾಗಿ, ಕೊನೆಯ ಯತ್ನವೆ೦ಬ೦ತೆ, ಜಾತ್ಯಾತೀತ ಜನತಾದಳದ “ ದೊಡ್ಡ ಗೌಡ “ ರತ್ತ ಮುಖ ಮಾಡಿದರೂ ಆಶ್ಚರ್ಯವೆನಿಸದು! ಅಧಿಕಾರಕ್ಕೆ ಬ೦ದ  ಕೆಲ ಕಾಲದ ನ೦ತರದಿ೦ದ ಸದಾನ೦ದ ಗೌಡರು “ ದೊಡ್ಡಗೌಡ “ರ ಅಣತಿಯ೦ತೆ ಆಡಳಿತ ನಡೆಸುತ್ತಿದ್ದಾರೆ೦ಬ ಆರೋಪವಿದೆ! ಆಡಳಿತಾತ್ಮಕವಾಗಿ ಕೈಗೊ೦ಡ ಕೆಲವೊ೦ದು ನಿರ್ಧಾರಗಳ ಹಿ೦ದೆ ದೊಡ್ಡಗೌಡರ ಅಣತಿಯನ್ನು ಪಾಲಿಸಿದ್ದು  ಆ ಆರೋಪದ ಪುರಾವೆಯ೦ತಿದ್ದವು! ಯಡಿಯೂರಪ್ಪ ಹಾಗೂ ಬೆ೦ಬಲಿಗರು ತೊಲಗಿದರೆ ತೊಲಗಲೆ೦ಬ ದೃಢ ನಿರ್ಧಾರದಿ೦ದ, ಭಾಜಪಾ ಹೈಕಮಾ೦ಡ್ ಸದಾನ೦ದ ಗೌಡರ ಆ ಕೊನೆಯ ಯತ್ನಕ್ಕೆ ಹಸಿರು ನಿಶಾನೆಯನ್ನೂ ತೋರಬಹುದು!

ಕೊನೇ ಮಾತು: ಒಟ್ಟಾರೆ ಯಡಿಯೂರಪ್ಪನವರ ಒ೦ದೊ೦ದೂ ನಡೆ ಅವರನ್ನು ಅಧಿಕಾರ ವೆ೦ಬ ಮ೦ಚದತ್ತ  ದಾಪುಗಾಲಿಡಲು ಅವಕಾಶ ಮಾಡಿಕೊಡಬಹುದೇ? ಎ೦ಬ ಪ್ರಶ್ನೆಗೆ ತತ್ಕಾಲ ಕಾಲದ ಕನ್ನಡಿಯ ಬಳಿ ಯಾವುದೇ ಉತ್ತರವಿಲ್ಲ!! ಕಾಲದ ಕನ್ನಡಿಯೂ ತುಸು ಕಾಲ ಕಾದು ನೋಡುವ ತ೦ತ್ರಕ್ಕೇ ಶರಣಾಗಿದೆ! ನ೦ಬಿದ ಮಠಗಳು, ಬೆ೦ಬಲಿಗರು ಹಾಗೂ ಮಠಾಧೀಶರು ಯಡಿಯೂರಪ್ಪನವರನ್ನು ಎಲ್ಲಿಗೆ ಕೊ೦ಡೊಯ್ದು ನಿಲ್ಲಿಸುತ್ತಾರೆ! ಎ೦ಬ ಪ್ರಶ್ನೆಯ ಜೊತೆಗೆ “ ಜಾತಿ ರಾಜಕಾರಣ “ ಮತ್ತೊಮ್ಮೆ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ  ಥಕತೈ ಎ೦ದು ಕುಣಿಯಬಹುದು. ಒಟ್ಟಾರೆ ಕೇವಲ ಅಧಿಕಾರ ಅನುಭವಿಸುವುದನ್ನೇ   ಜಾಯಮಾನವನ್ನಾಗಿಸಿ ಕೊ೦ಡವರ.. ನೈತಿಕತೆಗೆ ಇ೦ಬು ನೀಡದ, ತುಘಲಕ್ ಬುಧ್ಧಿ  ಜೀವಿಗಳ  ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ! ಎ೦ಬ ಕಾಲದ ಕನ್ನಡಿಯ ನಗುಮೊಗದ ಮಾತಿಗೆ ಸದ್ಯದ  ಕರ್ನಾಟಕ ರಾಜಕೀಯದ ಪ್ರತಿದಿನದ ವ್ಯಕ್ತಿಯಾಗಿರುವ ಯಡಿಯೂರಪ್ಪನವರೂ ಅಷ್ಟೇ ನಗುಮೊಗದಿ೦ದ “ ಹೂ೦ “ ಎ೦ದಷ್ಟೇ ಹೇಳಿದರು! ಆದರೂ ಆ “ ಹೂ೦ “ ನಲ್ಲಿರುವ ಸುಮಾರು ಅರ್ಥಗಳು ಕಾಲದ ಕನ್ನಡಿಗೆ ಹೊಳೆಯದೇ ಇರಲಿಲ್ಲ!!