Thursday, October 2, 2014

ಶ್ರೀಕ್ಷೇತ್ರ ಹೊರನಾಡು- ಶ್ರೀಶರನ್ನವರಾತ್ರಾ ಮಹೋತ್ಸವ- ಆಶ್ವಯುಜ ಶುಧ್ಧ ಸಪ್ತಮಿ

ಆಶ್ವಯುಜ ಶುಧ್ಧ ಪಾಡ್ಯದಿ೦ದ ( ದಿನಾ೦ಕ ೨೫-೦೯-೨೦೧೪ ರಿ೦ದ೦೬-೧೦-೨೦೧೪ ರ ವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀಶರನ್ನವರಾತ್ರಾ ಮಹೋತ್ಸವವು ಜರುಗುತ್ತಿದ್ದು, ಪ್ರತಿದಿನ ಶ್ರೀ ಮಾತೆಯವರಿಗೆ ವಿಶೇಷ ಅಲ೦ಕಾರ ಸೇವೆ, ಶ್ರೀ ಧೇವೀ ಮಹಾತ್ಮೆ ಪುರಾಣ ಪ್ರವಚನ, ವಾದ್ಯ ಸ೦ಗೀತ, ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ೦೧-೧೦-೨೦೧೪ ರ ಬುಧವಾರ  ಶ್ರೀ ನವ ನಾಟ್ಯ ಸ೦ಗಮ, ಬೆ೦ಗಳೂರು, ಇವರಿ೦ದ “ ಭರತನಾಟ್ಯ“ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ೦ದುಶ್ರೀಮಾತೆಯವರಿಗೆ “ಶ್ರೀ ಅಶ್ವಾರೂಢಾ ಗೌರೀ“”ಎ೦ಬ ವಿಶೇಷ ಅಲ೦ಕಾರವನ್ನು ಮಾಡಲಾಗಿತ್ತು, ಧರ್ಮಕರ್ತ ದ೦ಪತಿಗಳು ಶ್ರೀಕ್ಷೇತ್ರದ ತ೦ತ್ರಿಗಳಾದ ಶ್ರೀ ಉದಯಶ೦ಕರ ಶರ್ಮರ ನೇತೃತ್ವದಲ್ಲಿ “ ಶ್ರೀ ವಾಗೀಶ್ವರೀ ಮೂಲಮ೦ತ್ರ ಹೋಮ “ ವನ್ನು ನೆರವೇರಿಸಿದರು.
“ ಶ್ರೀ ವಾಗೀಶ್ವರೀ ಮೂಲ ಮ೦ತ್ರ ಹೋಮ“
 ಶ್ರೀಶಾರದಾ ಪೂಜಾ“

ಶ್ರೀರಾಮಚ೦ದ್ರ ಭಟ್ ರ ನೇತೃತ್ವದಲ್ಲಿ  “ ಅಮೃತಾನ್ನ ಪ್ರಸಾದ ಪೂಜಾ ವಿಧಿ"

No comments: