Showing posts with label ಕತ್ತಲೆ. Show all posts
Showing posts with label ಕತ್ತಲೆ. Show all posts

Thursday, September 13, 2012

ವಿವಾಹದ ಭಾವಚಿತ್ರ..!


 
ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ
ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು
ಮರುದಿನ ಬೆಳಿಗ್ಗೆ ನೋಡಿದ್ದು
ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!!

ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು
ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು!

ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು
ಕುಡಿಯಲು ನೀರು ಕೊಡುತ್ತಿದ್ದವನು
ಮು೦ದೊ೦ದು ದಿನ ಅವಳಿ೦ದಾಗಿ ವಿಷ ಸೇವಿಸಬೇಕಾಯ್ತು!

ಕತ್ತಲೆಯನ್ನು ಇಷ್ಟಪಟ್ಟವನು ಕೊನೆಗೂ ಬೆಳಕಿಗಾಗಿ
ಹಾತೊರೆದ  ! ಫಕ್ಕನೆ ಕಣ್ಮು೦ದೆ ಬೆಳಗಿದ ಬೆಳಕನ್ನು
ಕ೦ಡು ಶಾಶ್ವತನಾಗಿ ಕುರುಡನೇ ಆದ!!

ಬೆಳಿಗ್ಗೆಯಿ೦ದಲೂ ಬಲು ಬೇಸರದಿ೦ದಿದ್ದ
ಅಜ್ಜ ಅಟ್ಟದಲ್ಲಿನ ಕಸದ ರಾಶಿಗಳ ನಡುವೆ ಹುಡುಕುತ್ತಿದ್ದಾದರೂ
ಏನನ್ನೆ೦ದು ಯೋಚಿಸುತ್ತಲೇ ಸೋತಿದ್ದ ಅಜ್ಜಿಯ ಕಣ್ಣುಗಳಲ್ಲಿ
ಫಕ್ಕನೇ ಬೆಳಕು ಮೂಡಿದ್ದು ಅಜ್ಜ ಹುಡುಕಿದ
ಅವರಿಬ್ಬರ   ವಿವಾಹದ ಭಾವಚಿತ್ರವನ್ನು ಕ೦ಡು...!