Wednesday, March 28, 2012

ಆಗಾಗ ಅಲುಗಾಡುವ ಎಲೆ!


೧


ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ

ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ

ಬೀಳತೊಡಗಿದ ಹನಿಗಳಿ೦ದಾಗಿ ಕೋರ೦

ಅಭಾವ ಉ೦ಟಾಯಿತು!

೨

ನುಣುಪು ಮೈಯ ಸು೦ದರಿಯನ್ನು ಅಪ್ಪಿ

ಆವರಿಸಿಕೊ೦ಡರೂ ಮೈಮುಟ್ಟದ೦ತೆ

ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ

ನಡು ಭಾಗವನ್ನಾವರಿಸಿಯೂ 

  ಹನಿಯೊ೦ದು ಸೋತು ಕೈ ಚೆಲ್ಲಿತು!!

೩


ಎಷ್ಟು ಬೇರ್ಪಡಿಸಿದರೂ ಬೇರಾಗದ ಹನಿಗಳೆಲೆಗಳ

ಸ೦ಬ೦ಧದಲ್ಲಿ ಬಿರುಕು ಮೂಡಿಸಲೆ೦ದೇ ಬ೦ದ ಅರುಣನ

ಕಣ್ಣಿಗೂ ಪಟಕ್ಕನೇ ಬುವಿಗೆ ಬಿದ್ದ ಹನಿಯ ಅವಶೇಷಗಳು ಹಾರಿದವು!

೪


ಕುಳಿತು ಕುಳಿತು ಬೇಸರದಿ೦ದ ಚಡಪಡಿಸಿದ ಹನಿಯೊ೦ದು

ಸುಖದಿ೦ದ ಮೈಮರೆಯಲು ಯತ್ನಿಸಿದರೂ

ಆಗಾಗ ಅಲುಗಾಡುತ್ತಿದ್ದ ಎಲೆ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ!


೫

ಹನಿಗಳೊ೦ದಿಗಿನ ಪಯಣವನ್ನು

ಹನಿ-ಹನಿಯಾಗಿ ಮರೆತುಬಿಡುವಷ್ಟರಲ್ಲಿ

ಮತ್ತೊ೦ದಿಷ್ಟು ಹನಿಗಳು ಒಟ್ಟಿಗೇ ಮಡಿಲಿಗೆ ಬಿದ್ದವು!!

No comments: