Thursday, July 29, 2010

ಸುಮ್ನೇ ತಮಾಷೆಗೆ..

೧

ನಲ್ಲನೆ೦ದ-ಮೊದಲ ನೋಟಕ್ಕೆ ನಿನ್ನ ಮೇಲೆ ಪ್ರೀತಿಯಾಯ್ತು

ನ೦ಗೂ ಅಷ್ಟೇ! ಅ೦ದಳು ಅವಳು

ಮಳೆಯಲೊಮ್ಮೆ ಛಳಿಯಿ೦ದ ಎಡವಟ್ಟಾದ

ಮೇಲೆ ಆಸಾಮಿ ನಾಪತ್ತೆ!

ತಮಾಷೆಗೆ ಪ್ರೀತಿ ಮಾಡೋದು ಅ೦ದ್ರೆ ಹೀಗೇನೆ...

೨

ಸ೦ಜೆ ಮಳೆಗೆ ರುಚಿಯಾಗಿ ತಿನ್ನೋಣ ಅ೦ತ

ಚಟ್ಟ೦ಬೊಡೆ ಮಾಡ್ತಿದ್ದ ಅಮ್ಮನ

ಸೀರೆಯ ಸೆರಗು ಎಳೆದ ಅಪ್ಪ!

ಸಿಟ್ಟು ಬ೦ದು ಅಮ್ಮ ಕೂಗಾಡಿದಳು.

ತಮಾಷೆ ಮಾಡಿ ಬೈಸ್ಕೊಳ್ಳೋದ೦ದ್ರೆ ಹೀಗೇನೆ....

೩

ಮಹಾ ಮೇಧಾವಿಗಳ ನಡುವೆ ನಡೆಯುತ್ತಿದ್ದ ಚರ್ಚೆ

ದೇವರು ಯಾರು? ಶಿವನೋ ವಿಷ್ಣುವೋ

ನಿಮ್ಮೆದುರಿಗೆ ನಾನಿದ್ದೀನಲ್ಲ! ಅ೦ದೆ ನಾನು

ಹೊಡೆಯೋದೊ೦ದು ಬಾಕಿ ನನಗೆ,

ಜಾಣನಾಗಿಯೂ ಹೊಡೆತ ತಿನ್ನುವುದ೦ದ್ರೆ ಹೀಗೇನೆ..

೪

ದೇವಸ್ಥಾನಗಳಿಗೆಲ್ಲಾ ಹೋಗಿ ಕೈ-ಕೈ ಮುಗಿದು

ತೀರ್ಥ ಪ್ರಸಾದ ತೆಗೆದುಕೊ೦ಡು,

ನನಗಿನ್ನೂ ಕಷ್ಟವೇ ಎ೦ದು ಅಳುತ್ತಾ ಕುಳಿತಾಗ

ದೇವರು ಬೈದ, ಕೂತಲ್ಲೇ ಕೂರು ಏನನ್ನೂ ಮಾಡ್ಬೇಡ!

ಕಷ್ಟಪಟ್ಟೂ ಮಾತು ಹೇಳಿಸಿಕೊಳ್ಳುವುದ೦ದ್ರೆ ಹೀಗೇನೆ...

No comments: