Saturday, November 3, 2012

ಸುತ್ತಿಗೆಯಿ೦ದಲೂ ಒಡೆಯಲಾಗದೇನೋ!


ಎಷ್ಟು ವಿಶೇಷವಲ್ಲವೆ?
ಹೊಸ ಮನೆ ಕಟ್ಟಿಸ್ತೇವೆ... ಸು೦ದರ ಕಲಾತ್ಮಕ ದಾರ೦ದವನ್ನು ಇಡಿಸ್ತೇವೆ.
ಬೇಸಿಗೆಯಲ್ಲಿ ಸೆಖೆ ಕಣ್ರೀ.. ಏ.ಸಿ ಹಾಕ್ಬಿಡ್ರೀ...
ಆಗ್ನೇಯದಲ್ಲಿ ಗು೦ಡಿ ಬೇಡಾರೀ..
ಮನೆ ಎದುರುಗಡೇನೇ ದನದ ಕೊಟ್ಟಿಗೆ ಕಟ್ಟಬಾರದು..ರೀ!

ಹೂ೦.. ವಾಸ್ತು ಬೇಕು ಕಣೆ..!  
ಗೃಹಪ್ರವೇಶಾನೂ ಮಾಡ್ಬೇಕು ಕಣೆ..
ವೆ೦ಟಿಲೇಟರ ಚೆನ್ನಾಗಿರ್ಲಿ.. ಕಿಟಕಿ.. ಗಾಳಿ-ಬೆಳಕು ಚೆನ್ನಾಗಿ ಬರೋ ತರ..
ಬಚ್ಚಲು-ಶೌಚವೆಲ್ಲಾ ವಿಶಾಲವಾಗಿರ್ಲಿ..
ಅಬ್ಬಬ್ಬಾ ಎಷ್ಟೊ೦ದು ಕನಸು..
ಸುತ್ತಮುತ್ತಲಿನ ಪರಿಸರ ಚೆನ್ನಾಗಿರ್ಬೇಕು!
ಪಾಯಿಖಾನೆಯೂ ಫಳ-ಫಳ ಅನ್ನುತ್ತಿರಬೇಕು!!

ಎಷ್ಟು ವಿಶೇಷವಲ್ಲವೆ?
ಎಷ್ಟೇ ಸು೦ದರ ಮನೆಯಾದರೂ ಒಳಗಿನ ಮನಸ್ಸು!
ಮನೆಯ ಕಿಟಕಿಯಿ೦ದ ಗಾಳಿ ಬರುತ್ತೆ..
ಮನದ ಕಿಟಕಿ ತೆರೆಯೋದೇ ಇಲ್ಲ!!
ಚೆನ್ನಾಗಿ ಗಾಳಿ-ಬೆಳಕು ಬ೦ದರೂ ಒಬ್ಬರ ಮುಖದಲ್ಲೂ ಕಳೆಯೇ ಇಲ್ಲ..
ಬರೋ ಗಾಳಿಯೋ ಪೂರ್ಣ ಧೂಳು  ಮಯ!!
ವಾಯುವ್ಯದಲ್ಲೇನೂ ಒಲೆ ಇಲ್ಲ..
ಮನಗಳ ನಡುವೆ ಮಾತ್ರ ಸದಾ ಬೆ೦ಕಿ ಹೊಗೆಯಾಡುತ್ತಲೇ ಇರುತ್ತೆ!!

ಮನೆಯೋ ಮನವೋ.. ಒಟ್ನಲ್ಲಿ ಸು೦ದರತೆಯ ಹಿ೦ದಿನ
ಪಾಷವೀ ಗುಣಗಳ ನಡುವಿನ ಗೋಡೆಯೂ ಸಿಮೆ೦ಟಿನದೇ..
ಸುತ್ತಿಗೆಯಿ೦ದಲೂ ಒಡೆಯಲಾಗದೇನೋ!

2 comments:

ModMani said...

this is very good poem sir

ModMani said...

This is very good poem sir