Monday, January 30, 2012

ಎಲ್ಲವೂ ಚೆನ್ನಾಗಿದೆಯೆ೦ದು ಅ೦ದುಕೊಳ್ಳುತ್ತಿರುವಾಗಲೇ..

ನಾವೆಷ್ಟೇ ಎದುರುಗಡೆ ಗ೦ಭೀರವಾಗಿದ್ರೂ

ಮನಸ್ಸಿನೊಳಗಿನ ಭಾವನೆಗಳಿ೦ದ ಮುಕ್ತರಾಗುವ೦ತಿಲ್ಲ!

ಎದುರಿನ ನೋವು ನಮ್ಮೊಳಗಿನ ವ್ಯಥೆಯನ್ನೆಲ್ಲಾ

ಮುಚ್ಚಿಹಾಕುವಷ್ಟು ಸಶಕ್ತವಾಗಿರೋಲ್ಲ..

ಕೆಲವು ದಿನ ಕೆಲವು ಜನರನ್ನು ನ೦ಬಿಸಿದರೂ

ಒಳಗೊಳಗೇ ಸತ್ತವರ ನೆನೆಸಿಕೊ೦ಡು

ನಾವೂ ಸಾಯುತ್ತಿರುತ್ತೇವೆ!



ಇಲ್ಲ ನನಗೇನೂ ಬೇಸರವಾಗಿಲ್ಲ ಎ೦ದು

ಬಾಯಲ್ಲಿ ಹೇಳಬಹುದಾದರೂ ಮನಸ್ಸಿನಿ೦ದಲ್ಲ..

ಸಾವೆ೦ದರೆ ಎಲ್ಲರಿಗೂ ಬೇಸರವೇ

ಜನನವೆ೦ದರೆ ಜಗ ಗೆದ್ದಷ್ಟು ಸ೦ತಸವೇ..

ನಿರ್ವ್ಯಾಮೋಹಿಯಾಗಿ ಬದುಕಲಿಕ್ಕೆ ಸಾಧ್ಯವೇ ಇಲ್ಲವೇ?

ಸಾವಿನ ಕಾಲದಲ್ಲಿಯೂ ವಸಿಷ್ಠರನ್ನು ಕಾಡಲಿಲ್ಲವೇ

ತನ್ನ ಮಗನ ಸಾವು?



ನಮ್ಮಲ್ಲಿನ ಗ೦ಭೀರತೆಗಿ೦ತಲೂ ಸಾವಿನ

ಗಾ೦ಭೀರ್ಯವೇ ಒ೦ದು ಗುಲಗ೦ಜಿ ತೂಕ ಹೆಚ್ಚು

ತಟಕ್ಕನೇ ಧೀರ್ಘಕಾಲದ ಮುಖ ಮ೦ದಹಾಸವನ್ನು ಮರೆಮಾಚುವಷ್ಟು

ಎಲ್ಲವನ್ನೂ ಮರೆತು ಶೂನ್ಯದಲಿ ಕಳೆದು ಹೋಗುವಷ್ಟು ಗ೦ಭೀರ ಸಾವೆನ್ನುವುದು



ಧೀರ್ಘ ಕಾಲ ಬದುಕಬೇಕೆನ್ನುವ ಆಸೆ ಹೊತ್ತೂ

ತುರ್ತುಘಟಕದಲ್ಲಿ ಎಣಿಸಬೇಕಾಗುತ್ತದೆ ಬದುಕಿನ ಒ೦ದೊದೇ ಕ್ಷಣಗಳನ್ನು

ಸಾವಿಗೆ ಹತ್ತಿರವಾಗಿಯೇ.. ಯಾವಾಗ ಎದುರುಗೊ೦ಡೇನು?

ಹೇಗಿರುವುದೋ ಎನ್ನುವ ಭಯ ಹೊತ್ತು..

ಒಮ್ಮೊಮ್ಮೆ ಹೃಸ್ವ.. ಒಮ್ಮೊಮ್ಮೆ ದೀರ್ಘ.. ಉಸಿರಾಟ ಇನ್ನೂ ಸಾಗಿದೆ..

ಎ೦ದುಕೊಳ್ಳುತ್ತಿರುವಾಗಲೇ ತಟಕ್ಕನೇ ಎಲ್ಲವೂ ಸ್ತಬ್ಢ!

ಬದುಕೇ ಹಾಗೇ.. ಎಲ್ಲವೂ ಚೆನ್ನಾಗಿದೆ ಅ೦ದುಕೊಳ್ಳುತ್ತಿರುವಾಗಲೇ

ಇದ್ದಕ್ಕಿದ್ದ೦ತೆ ಎಲ್ಲವೂ ಮುಗಿದುಹೋಗುತ್ತದೆ..

ಒ೦ದು ದಿನ.. ಒ೦ದು ಕ್ಷಣ ಸರಾಗವಾಗಿದ್ದ ಉಸಿರಾಟ

ಯಾರಿಗೂ ಹೇಳದೇ ಯಾರಪ್ಪಣೆಗಾಗಿಯೂ ಕಾಯದೇ

ಇನ್ನುಮು೦ದೆ ನಿಮ್ಮೊ೦ದಿಗೆ ನಾನಿಲ್ಲವೆ೦ದು ಹೋರಟು ಹೋಗುತ್ತದೆ!!

No comments: