Monday, September 12, 2011

ಇನ್ನೇನು ಅವಳು ಬರುವ....


ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ..

ಮತ್ತೊಮ್ಮೆ ಜೋಗುಳದ ಸದ್ದು ಶುರುವಾಗುವ

ದಿನಗಳ ಕನಸು ಕಾಣುತ್ತಲಿದ್ದೇನೆ..

ಆ ಸದ್ದಿನಲ್ಲಿ ನನ್ನ ಬಾಲ್ಯದ ದಿನಗಳ

ನೆನಪಿಗಾಗಿ ಕಾತರಿಸುತ್ತಿದ್ದೇನೆ...



ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ...

ಶೇಷುವಿನೊ೦ದಿಗಿನ ಹುಡುಗಾಟದ ಪುನರಾರ೦ಭದ

ದಿನಗಳ ಕನಸು ಕಾಣುತ್ತಲಿದ್ದೇನೆ..

ಆಗಾಗ ಜೂಟ್ ಆಟ.. ಮತ್ತೊಮ್ಮೆ ಲತ್ತೆ..

ದಿನಕ್ಕೆರಡು ಬಾರಿ ಆ ಆ ಇ ಈ..

ಮಲಗಿದ ಕ೦ದನ ವದನಕ್ಕೊ೦ದು ಮುತ್ತು..



ಇನ್ನೇನು ಅವಳು ಬರುವ ದಿನ ಹತ್ತಿರವಾಗುತ್ತಿದೆ..

ಆರು ತಿ೦ಗಳ ವಿರಹದ ದಿನಗಳ ದೂರಾಗುವಿಕೆಯ

ಕನಸು ಕಾಣುತ್ತಲಿದ್ದೇನೆ..

ದಿನ ತು೦ಬ ಪ್ರೀತಿಯ ಒರತೆ..ಆಗಾಗ ಪಿರಿ-ಪಿರಿ

ರಚ್ಚೆ ಹಿಡಿದ ಮಕ್ಕಳ೦ತೆ..

ಸುಖದ ನಡುವಿನ ಕಿರಿ-ಕಿರಿಯಿ೦ದಾಗುವ ಆಭಾಸಗಳ

ಕ೦ಡು ಮನದೊಳಗೇ ನಗುವ ದಿನಗಳ

ಪುನರಾಗಮನದ ಸ೦ತಸದಲ್ಲಿದ್ದೇನೆ..


ಇನ್ನೇನು ಅವಳು ಬರುವ ದಿನ  ಹತ್ತಿರವಾಗುತ್ತಿದೆ..

ಮೂರು ತಿ೦ಗಳ ಮುದ್ದುವಿನೊ೦ದಿಗೆ..

ಭಣ-ಭಣವೆನಿಸುತ್ತಿದ್ದ ಮನೆ-ಮನಗಳೀಗ

ಮತ್ತೊಮ್ಮೆ ನ೦ದಗೋಕುಲವಾಗಬಹುದಾದ

ಕನಸಿನಲ್ಲಿದ್ದೇನೆ.. ಮುದ್ದು ಕೂಸಿನ ಮಾತುಗಳನ್ನಾಲಿಸುವ

ಸುಖದ ನಿರೀಕ್ಷೆಯಲ್ಲಿದ್ದೇನೆ....



3 comments:

shivakumar said...

welcome back to fatherhood.

AntharangadaMaathugalu said...

ಅಭಿನಂದನೆಗಳು.. ಶುಭವಾಗಲಿ..!! ಪುಟ್ಟ ಕಂದನ ಚಿತ್ರ ಹಾಕಿ...


ಶ್ಯಾಮಲ

Prakash Narasimhaiah said...

ಶುಭಾಶಯಗಳು,
ನಮ್ಮ ನಿರೀಕ್ಷೆಯು ಹೌದು. ಸುಂದರ ಕವನಗಳ ಸಾಲುಗಳನ್ನು ಓದಲು. ತುಂಟ ಮುದ್ದು ಕಂದನ ತೊದಲು ಮಾತುಗಳು, ಆಟಪಾಟಗಳ ವಿವರಗಳ ಓದಲು ನಾವು ಕಾತುರರಾಗಿದ್ದೇವೆ.
ಶುಭವಾಗಲಿ.
ಪ್ರಕಾಶ್