Monday, May 23, 2011

“ ನರೇ೦ದ್ರ ಮೋದಿ ಎ೦ಬ ಭಾರತದ ಚಲಾವಣೆಯ ನಾಣ್ಯ !!“ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ.. ಎಲ್ಲರೂ ಮಹಾತ್ಮರಾದರೆ ಅತ೦ತ್ರರಾಗೋರ್ಯಾರು? ಎ೦ಬ ಉಡಾಪೆಯ ಮಾತೊ೦ದಿದೆ! ಸೂಕ್ತ ಸಮಯದಲ್ಲಿ ಸುಪ್ತವಾಗಿ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿ, ಜನ ಕಲ್ಯಾಣಕ್ಕಾಗಿ ಚಿ೦ತಿಸುವವರೆಲ್ಲಾ ಮಹಾತ್ಮರೇ ಆಗುತ್ತಾರೆ!

ಈ ವಾರದ “ಕಾಲದಕನ್ನಡಿ“ಯ ಪ್ರಸ್ತುತ ಲೇಖನಕ್ಕೆ ಮತ್ತೊಮ್ಮೆ ನರೇ೦ದ್ರ ಮೋದಿಯೇ ಕಥಾವಸ್ತು! ನಿನ್ನೆ ನನ್ನ ಆತ್ಮೀಯ ಪ್ರಸ್ಕಾ ಕಳುಹಿಸಿದ ಮೊಬೈಲ್ ಸ೦ದೇಶವೇ ಮತ್ತೊಮ್ಮೆ ಕಾಲದಕನ್ನಡಿಯ ಲೇಖನಕ್ಕೆ ಆಧಾರವಾಗಿದೆ. ಮೋದಿ ಸರ್ಕಾರದ ಮತ್ತೊ೦ದು ಸಾಧನೆಯನ್ನೇ ಈ ಲೇಖನದಲ್ಲಿ “ಕಾಲದ ಕನ್ನಡಿ“ ಬಿ೦ಬಿಸುತ್ತಿದೆ. ಈ ಹಿ೦ದೆ ನರೇ೦ದ್ರ ಮೋದಿಯವರ ಬಗ್ಗೆ ಕಾಲದ ಕನ್ನಡಿ http://sampada.net/article/28664 ಎ೦ಬ ಲೇಖನದಲ್ಲಿ ಗುಜರಾತ್ ಯಶೋಗಾಥೆಯನ್ನು ಸಾದ್ಯ೦ತವಾಗಿ ವಿವರಿಸುವ ಪ್ರಯತ್ನ ಮಾಡಿದೆ.

ಕಣ್ಣಿಗೆ ಕ೦ಡ, ಕೇಳಿ ತಿಳಿದ ಒಳ್ಳೆಯ ವಿಚಾರಗಳ ಬಗ್ಗೆ ಹಾಗೂ ಒಳ್ಳೆಯ ವ್ಯಕ್ತಿಗಳ ಬಗ್ಗೆ ಕಾಲದ ಕನ್ನಡಿ ಯಾವಾಗಲೂ ಪ್ರಚಾರ ಮಾಡುತ್ತಲೇ ಇರುತ್ತದೆ!ಕಾಲದ ಕನ್ನಡಿಯ ಇ೦ಥ ಸ೦ತಸಕ್ಕೆ ಕಾರಣ ಏನೆ೦ದು ಕೇಳುವಿರೇ? ಹಾಗಾದರೆ ಕೇಳಿ: ಗುಜರಾತ್ ಸರ್ಕಾರವನ್ನು “ಪ್ರಪ೦ಚದ ಎರಡನೇ ಅತ್ಯುತ್ತಮ ರಾಜ್ಯ ಸರ್ಕಾರ“ ವೆ೦ದು ವಿಶ್ವಸ೦ಸ್ಥೆಯ ಅ೦ತರಾಷ್ಟ್ರೀಯ ವ್ಯವಹಾರಗಳ ಕಾರ್ಯಲಯ ಘೋಷಿಸಿದೆ! ಇದಕ್ಕಿ೦ತಾ ಮತ್ತೊ೦ದು ಸ೦ತಸದ ಸ೦ಗತಿ ಭಾರತೀಯರಾದ ನಮಗೆ ಪ್ರಸ್ತುತ ಬೇರೇನಿದೆ? ನರೇ೦ದ್ರ ಮೋದಿ ಈಗ ಭಾರತದ ಚಲಾವಣೆಯ ನಾಣ್ಯ!! ಜನತೆ ರಾಜಕೀಯದ ಬಗ್ಗೆ ಚರ್ಚಿಸುವಾಗ ಮೋದಿ ಯವರ ಬಗ್ಗೆ ಅವರು ಗುಜರಾತಿನಲ್ಲಿ ಆರ೦ಭಿಸಿರುವ “ಅಭಿವೃಧ್ಧಿಯ ಸಕೆ“ ಯ ಬಗ್ಗೆ ಪ್ರಸ್ತಾಪವೆತ್ತದೆ ಇರಲಾರರು!

ಸರಿಯಾಗಿ ೧೦ ವರ್ಷಗಳ ಹಿ೦ದೆ ಗುಜರಾತ್ ಸರ್ಕಾರ ಜಾಗತಿಕ ಬ್ಯಾ೦ಕ್ ನಲ್ಲಿ ೫೦೦೦೦ ಕೋಟಿ ರೂಗಳ ಸಾಲದ ಹೊರೆಯನ್ನು ಹೊತ್ತಿತ್ತು. ಆದರೆ ಇ೦ದು ಆದೇ ಜಾಗತಿಕ ಬ್ಯಾ೦ಕ್ ನಲ್ಲಿ ಗುಜರಾತ್ ಸರ್ಕಾರ ಹಿ೦ದಿನ ತನ್ನೆಲ್ಲ ಸಾಲವನ್ನು ತೀರಿಸಿ, ಒ೦ದು ಲಕ್ಷ ಕೋಟಿ ರೂಪಾಯಿಗಳ ಮೊತ್ತದ ಠೇವಣಿಯನ್ನು ಇಟ್ಟಿದೆ ಎ೦ದರೆ ಸಾಮಾನ್ಯವೇ? ಇನ್ನೂ ವಿಶೇಷ ಅ೦ದರೆ ಗುಜರಾತಿಗರಿಗೆ ಯಾವುದೇ ವಿದ್ಯುತ್ ವ್ಯತ್ಯಯ ದ ಸಮಸ್ಯೆಯೇ ಇಲ್ಲ!“ ಜ್ಯೋತಿ ಗ್ರಾಮ್“ ಯೋಜನೆಯಡೀ ರಾಜ್ಯದ ಎಲ್ಲಾ ಗ್ರಾಮಗಳನ್ನೂ ಬೆಳಕಿನಡಿಯಲ್ಲಿ ತರಲಾಗಿದೆ! “ಕನ್ಯಾ ಕಲಾಮಣಿ“ ಯೋಜನೆಯಡಿ ಗುಜರಾತಿನಲ್ಲಿ ೧೦೦ % ಮಹಿಳೆಯರ ಸಾಕ್ಷರತಾ ಪ್ರಮಾಣ ದಾಖಲಾಗಿದೆ! ಭಾರತದ ವಿದೇಶೀ ರಫ್ತಿನ ಪ್ರಮಾಣದಲ್ಲಿ ಗುಜರಾತ್ ನ ಪಾಲು ೧೫ % !

ದೇಶದಲ್ಲಿಯೇ ಅತ್ಯ೦ತ ದೊಡ್ಡದಾದ ತ್ಯಾಜ್ಯ ಸ೦ಸ್ಕರಣಾ ಕೇ೦ದ್ರ ಇರುವುದು ಗುಜರಾತ್ ನಲ್ಲಿ! ಸ೦ಸ್ಕರಣಗೊಳಿಸಬಹುದಾದ ತ್ಯಾಜ್ಯ ಹಾಗೂ ಸ೦ಸ್ಕರಣಗೊಳಿಸಲಾಗದ ತ್ಯಾಜ್ಯಗಳೆ೦ದು ಪ್ರತ್ಯೇಕವಾಗಿ ಸ೦ಗ್ರಹಿಸಿ, ಅಹಮದಾಬಾದ್ ನ ಹೊರವಲಯದಲ್ಲಿ ನಿರ್ಮಿಸಲಾಗಿರುವ ಭಾರತದ ಅತ್ಯ೦ತ ದೊಡ್ಡ ತ್ಯಾಜ್ಯ ಸ೦ಸ್ಕರಣಾ ಘಟಕ ಕೇ೦ದ್ರದಲ್ಲಿ ಹಾಕಲಾಗುವುದು. ಕಸದಲ್ಲಿ ರಸ ಹುಡುಕುವ ವಿದ್ಯೆಯನ್ನು ಗುಜರಾತ್ ನಿ೦ದ ಕಲಿಯಬೇಕು! ಸುಲಭದಲ್ಲಿ ಸ೦ಸ್ಕರಿಸಲಾಗುವ ಮನುಜ ಬಳಸಿದ ತ್ಯಾಜ್ಯಗಳನ್ನು ಗೊಬ್ಬರ ಹಾಗೂ ಜೈವಿಕ ಇ೦ಧನಕ್ಕಾಗಿ ಬಳಸಲಾಗುತ್ತದೆ. ತರಕಾರಿ, ಬೇಳೆ-ಕಾಳುಗಳು ಮು೦ತಾದ ದೈನ೦ದಿನ ಪದಾರ್ಥಗಳನ್ನು ಬೆಳೆಯಲು ಇ೦ಧನವನ್ನು ತೆಗೆಯಲು ಬಳಸಿ ಉಳಿದ ತ್ಯಾಜ್ಯವನ್ನು ಉಪಯೋಗಿಸಲಾಗುತ್ತದೆ. ಇವೆಲ್ಲವೂ ಸರ್ಕಾರದ ವತಿಯಿ೦ದಲೇ ನಡೆಸಲಾಗುವ ಪ್ರಕ್ರಿಯೆಗಳು! ಸ೦ಸ್ಕರಿಸಲಾಗದೇ ಉಳಿದ ತ್ಯಾಜ್ಯಗಳನ್ನು ( ಕಬ್ಬಿಣ ಮತ್ತಿತರ) ಆಧುನಿಕ ತ೦ತ್ರಜ್ಜಾನ ಬಳಸಿ ಕಲ್ಲಿದ್ದಲು ಮು೦ತಾದ ಇ೦ಧನಗಳನ್ನಾಗಿ ಪರಿವರ್ತಿಸಲಾಗುವುದು! ತ್ಯಾಜ್ಯ ಸ೦ಗ್ರಹಣಾ ಘಟಕದಲ್ಲಿ ಸ೦ಗ್ರಹವಾದ ನೀರಿನಿ೦ದ ಭೂ ಅ೦ತರ್ಜಲ ಪ್ರಮಾಣವೂ ಏರುತ್ತದೆ. ಆ ನೀರನ್ನು ಸ೦ಸ್ಕರಿಸಿ ಕುಡಿಯಲು ಯೋಗ್ಯವಾಗುವ ಹಾಗೂ ಕೃಷ್ಯೋಪಯೋಗಿ ಜಲವನ್ನಾಗಿ ಪರಿವರ್ತಿಸಲಾಗುತ್ತದೆ! ಹೀಗೆ ಈ ಪ್ರಕ್ರಿಯೆ ಸ೦ಪೂರ್ಣ ನಗರಗಳನ್ನು ಸ್ವಚ್ಛವಾಗಿಡುವಲ್ಲಿ.. ಜನರ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಹೆಜ್ಜೆಗಳಲ್ಲವೇ? ನರೇ೦ದ್ರ ಮೋದಿ ತನ್ನ ರಾಜ್ಯದಲ್ಲಿ ಅಭಿವೃಧ್ಧಿ ಎನ್ನುವ ಮ೦ತ್ರವನ್ನು ಕೇವಲ ಜಪಿಸುತ್ತಿಲ್ಲ.. ಬದಲಾಗಿ ಅನುಷ್ಟಾನಕ್ಕೆ ತರುತ್ತಿದ್ದಾರೆ.. ತನ್ಮೂಲಕ ಇ೦ದು ಜಾಗತಿಕವಾಗಿ ಗುಜರಾತ್ ಸರ್ಕಾರ ಹತ್ತು ಹಲವು ಪ್ರಶಸ್ತಿಗಳನ್ನೂ ಪಡೆದುಕೊಳ್ಳುತ್ತಿದೆ! ಗುಜರಾತ್ ಹಿರಿಮೆಯ ಸ೦ಗ್ರಹಕ್ಕೆ ಒ೦ದೊ೦ದೇ ನವೀನ ಹೆಗ್ಗಳಿಕೆಗಳು ಸೇರ್ಪಡೆ ಯಾಗುತ್ತಿವೆ! ಜಗತ್ತಿನ ಅತ್ಯ೦ತ ದೊಡ್ಡ ಸೋಲಾರ್ ಪ್ಲಾ೦ಟ್ ಒ೦ದು ಕ್ಲಿ೦ಟನ್ ಫೌ೦ಡೇಶನ್ ನಿ೦ದ ಗುಜರಾತ್ ನಲ್ಲಿ ನಿರ್ಮಾಣವಾಗುತ್ತಿದೆ. ಯಾವ ಕ್ಷೇತ್ರದ ಬೆಳವಣಿಗೆಯೇ ಆಗಲಿ, ಎಲ್ಲದರಲ್ಲಿಯೂ ಗುಜರಾತ್ ತನ್ನ ಛಾಪನ್ನು ಮೂಡಿಸುತ್ತಾ ಹೋಗುತ್ತಿದೆ! ಹೈನೋದ್ಯಮ, ಔಷಧೋದ್ಯಮ, ಕೈಗಾರಿಕೋದ್ಯಮ, ಕೃಷಿ ಬೆಳವಣಿಗೆ ಹೀಗೆ ಎಲ್ಲಾ ಕ್ಷೇತ್ರಗಳ ಬೆಳವಣಿಗೆಯಲ್ಲಿಯೂ ಗುಜರಾತ್ ರಾಜ್ಯ ನ೦ಬರ್ ಒ೦ದರ ಸ್ಥಾನದಲ್ಲಿದೆ. ಭಾರತದ ಔಷಧೋದ್ಯಮದಲ್ಲಿ ಗುಜರಾತ್ ನ ಪಾಲು ೪೦%, ವಜ್ರಗಳ ಉತ್ಪಾದನೆ ಹಾಗೂ ರಪ್ಥಿನಲ್ಲಿ ೮೦%, ಜಾಗತಿಕ ರಾಸಾಯನಿಕಗಳ ತಯಾರಿಕೆ ಹಾಗೂ ರಪ್ತೋದ್ಯಮದಲ್ಲಿ ಗುಜರಾತ್ ನ ಪಾಲು ೧೧% ! ಹೇಗಿದೆ ನೋಡಿ ಅ೦ಕಿ ಅ೦ಶಗಳು.. ಈ ಹತ್ತು ವರುಷಗಳಲ್ಲಿ (೨೦೦೧ ರಿ೦ದ ಮೋದಿ ಗುಜರಾತ್ ನ ಮುಖ್ಯಮ೦ತ್ರಿಯಾಗಿ ತಮ್ಮ ಆಡಳಿತವನ್ನು ಆರ೦ಭಿಸಿದರು) ಗುಜರಾತ್ ನ ಸಾಧನೆ, ನಮ್ಮನ್ನು ಬೆರಗು ಗೊಳಿಸುತ್ತದೆ!

ಇ೦ದು ಗುಜರಾತ್ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಚೀನಾದೊ೦ದಿಗೆ ಪೈಪೋಟಿಗೆ ಇಳಿದಿದೆ! ಅದರ ಆರ್ಥಿಕ ಬೆಳವಣಿಗೆಯ ದರ ೧೨% ! ನಿರುದ್ಯೋಗ, ವಸತಿ ಸಮಸ್ಯೆಗಳು ಕಡಿಮೆಯಾಗುತ್ತಿವೆ. ೨೦೧೦-೧೧ ರ ಸಾಲಿನಲ್ಲಿ ರಾಜ್ಯದಲ್ಲಿ ಗುರುತಿಸಲಾದ ೨೫ ಲಕ್ಷ ಕಡುಬಡವ ಕುಟು೦ಬಗಳಲ್ಲಿ ೨.೫೯ ಲಕ್ಷ ಕುಟು೦ಬಗಳಿಗೆ ಈಗಾಗಲೇ ವಸತಿಗಳನ್ನು ಸರ್ಕಾರವೇ ಕಟ್ಟಿಕೊಟ್ಟಿದೆ! ೧.೪೩ ಲಕ್ಷ ಬಿಪಿಎಲ್ ಕುಟು೦ಬಗಳಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರದ ವತಿಯಿ೦ದ ಸ್ಥಳವನ್ನು ನೀಡಲಾಗಿದೆ. ಕೈಗಾರಿಕೆಗಳ ಬೆಳವಣಿಗೆಗಾಗಿ ಕಲ್ಪಿಸಲಾಗಿರುವ ಮೂಲಭೂತ ಸೌಕರ್ಯಗಳು ಮಧ್ಯ ಪೌರಾತ್ಯ, ಪೂರ್ವ ಹಾಗೂ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಅತ್ಯಧಿಕ ಕೈಗಾರಿಕೋದ್ಯಮಿಗಳು ಗುಜರಾತ್ನಲ್ಲಿ ಬ೦ಡವಾಲ ಹೂಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಣಿಯಾಗುತ್ತಿದ್ದಾರೆ! ೫೦೦೦೦ ಹೇಕ್ಟೇರ್ ಭೂಮಿಯನ್ನೊಳಗೊ೦ಡ ಭೂಬ್ಯಾ೦ಕ್ ಒ೦ದನ್ನು ಸ್ಥಾಪಿಸಿ, ಕೈಗಾರಿಕೋದ್ಯಮಿಗಳಿಗೆ ಆನ್ ಲೈನ್ ಮೂಲಕ ತಮ್ಮ ಕೈಗಾರಿಕೋದ್ಯಮದ ಸ್ಥಾಪನೆಗೆ ಭೂಮಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ!ಬ೦ಡವಾಳದ ರಾಶಿಯೇ ಹರಿದು ಬರುತ್ತಿದೆ! ಹೀಗೇ ಯೇ ಸಾಗಿದಲ್ಲಿ ಗುಜರಾತ್ ರಾಜ್ಯದ ಆರ್ಥಿಕ ಬೆಳವಣಿಗೆಯ ದರವು ಚೀನಾ ದೇಶವನ್ನೂ ಹಿ೦ದಿಕ್ಕುವುದರಲ್ಲಿ ಯಾವುದೇ ಸ೦ಶಯವಿಲ್ಲ!

ರಾಜ್ಯದ ಕೃಷಿ ಜಮೀನುಗಳ ಮಣ್ಣಿನ ಫಲವತ್ತತೆಯನ್ನು ಕಾಯ್ದು ಕೊಳ್ಳಲು ಸರ್ಕಾರ ಅನುಸರಿಸಿದ ಯೋಜನೆಗಳು, ಕೃಷಿಯ ಉತ್ತೇಜನಕ್ಕಾಗಿ ಹಾಕಿಕೊ೦ಡ ಕಾರ್ಯಕ್ರಮಗಳು ಗುಜರಾತ್ ನಲ್ಲಿ ೨ ನೇ ಹಸಿರು ಕ್ರಾ೦ತಿಯ ಉಗಮಕ್ಕೆ ಕಾರಣವಾಗಿದೆ! ೨೦೦೩ ನೇ ಇಸವಿಯಲ್ಲಿ ಪ್ರಪ೦ಚದ ಅತ್ಯ೦ತ ಮಾಲಿನ್ಯವನ್ನು ಹೊ೦ದಿದ ನಗರವೆ೦ದು ವಿಶ್ವಸ೦ಸ್ಥೆಯಿ೦ದ ಘೋಷಿಸಲ್ಪ ಟ್ಟಿದ್ದ ಅಹಮದಾಬಾದ್ ೨೦೦೯ ರಲ್ಲಿ ವಿಶ್ವದ ಅತ್ಯ೦ತ “ಸ್ಚಚ್ಚ ನಗರ“ವೆ೦ದು ಘೋಷಿಸಲ್ಪಟ್ಟಿದೆ ಎನ್ನುವುದರಲ್ಲಿ ಮೋದಿಯವರ ಮು೦ದಾಳತ್ವ ಹಾಗೂ ದೂರದರ್ಶಿತ್ವದ ಯೋಜನೆಗಳು ಮತ್ತು ಅವುಗಳನ್ನು ಯಥಾವತ್ತಾಗಿ ಅನುಷ್ಟಾನಕ್ಕೆ ತರುವ ಗುಜರಾತ್ ಸರ್ಕಾರದ ಅಧಿಕಾರ ಶಾಯಿಯ ಕರ್ತೃತ್ವ ಶಕ್ತಿಯನ್ನು ಗುರುತಿಸಲೇಬೇಕಲ್ಲವೇ?

ಒ೦ದಕ್ಕೊ೦ದು ಪೂರಕವಾದ ಎರಡು ಅ೦ಶಗಳು ಒ೦ದೇ ಕಡೆ ಯಾ ಒಬ್ಬನೇ ವ್ಯಕ್ತಿಯಲ್ಲಿ ಇರುವುದು ಬಹಳ ವಿರಳ.. ನರೇ೦ದ್ರ ಮೋದಿಯ ಅಭಿವೃಧ್ಧಿ ಮ೦ತ್ರಕ್ಕೆ ಗುಜರಾತಿಗರೂ ದನಿಗೂಡಿಸುತ್ತಿದ್ದಾರೆ! ಕೇವಲ ಯೋಜನೆಗಳನ್ನು ಅನುಷ್ಟಾನಕ್ಕೆ ತ೦ದರೆ ಮುಗಿಯಿತೇ? ಅದಕ್ಕೆ ಸರಿಯಾಗಿ ಜನತೆಯೂ ಹೆಜ್ಜೆ ಹಾಕಬೇಕಲ್ಲವೇ? ಯಾವುದೇ ಯೋಜನೆಗಳಾಗಲೀ ಅರ್ಹ ಫಲಾನುಭವಿಗಳನ್ನು ಹುಡುಕುವುದು ಸುಲಭ ಸಾಧ್ಯವಲ್ಲ! ಆದರೆ ಗುಜರಾತ್ ಸರ್ಕಾರ ಅದನ್ನು ಮಾಡಿ ತೋರಿಸಿದೆ! ಹಾಗಾದರೇ ಸಮಸ್ಯೆಗಳೇ ಇಲ್ಲವೇ? ಇವೆ.. ಆದರೆ ಈ ಬೆಳವಣಿಗೆಗಳ ಮು೦ದೆ ಆ ಸಮಸ್ಯೆಗಳು ಗೌಣವಾಗುತ್ತಿವೆ! ರಾಜ್ಯದಲ್ಲಿ ಸ೦ಪೂರ್ಣವಾಗಿ ನಿರುದ್ಯೋಗ ಸಮಸ್ಯೆಯನ್ನು ಹತ್ತಿಕ್ಕಲಾಗಿಲ್ಲ! ಸ೦ಪೂರ್ಣ ಬಡತನ ಮುಕ್ತ ರಾಜ್ಯವನ್ನಾಗಿ ಗುಜರಾತ್ ಅನ್ನು ಮಾಡಲಾಗಿಲ್ಲ.. ಆದರೆ “ಏನೂ ಮಾಡದಿರುವುದರ ಬದಲು ಸ್ವಲ್ಪವನ್ನಾದರೂ ಮಾಡುವುದು“ ಉತ್ತಮವಲ್ಲವೇ ಎ೦ಬುದು ಕಾಲದ ಕನ್ನಡಿಯ ಪ್ರಶ್ನೆ! ಯಾವುದೇ ರಾಜ್ಯ ಅಬಿವೃಧ್ಧಿಯನ್ನು ಏಕ್ ದ೦ ಸಾಧಿಸಲಾಗುವುದಿಲ್ಲ... ಅಭಿವೃಧ್ಧಿಗೆ ಪೂರಕವಾದ ಎಲ್ಲಾ ಅ೦ಶಗಳನ್ನೂ- ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವುದು, ತಮ್ಮ ಭಾವನೆಗಳು ಹಾಗೂ ಯೋಜನೆಗಳಿಗೆ ಅನುಗುಣವಾಗಿ ತಯಾರು ಗೊಳಿಸಿ, ಜೊತೆಗೆ ಕರೆದುಕೊ೦ಡು ಹೋಗುವುದು ಯಾವುದೇ ಸರ್ಕಾರಕ್ಕೆ ಸುಲಭದ ಮಾತಲ್ಲ! ಹಾಗೆ೦ದು ಸುಮ್ಮನೆ ಕುಳಿತರಾಗುವುದೇ? ಏನೂ ಪ್ರಯತ್ನವನ್ನೇ ಮಾಡದೇ ಕೇವಲ ಭಾಷಣಗಳಲ್ಲಿ ಅಭಿವೃಧ್ಧಿಯ ಮ೦ತ್ರವನ್ನು ಸದಾ ಜಪಿಸುತ್ತಿದ್ದರೆ ಆಗುವ ಪ್ರಯೋಜನವಾದರೂ ಏನು?

ಇ೦ದು ಗುಜರಾತ್ ಎ೦ದರೆ ಎಸ್.ಇ.ಜೆಡ್, ಗಳ ರಾಜಧಾನಿ ಯೆ೦ದರೆ ಅತಿಶಯೋಕ್ತಿಯಿಲ್ಲ! ಭಾರತೀಯರಿಗೆ ಪ್ರಸ್ತುತ ರೋಟಿ-ಕಪಡಾ ಔರ್ ಮಕಾನ್ ( ಊಟ-ವಸತಿ ಮತ್ತು ಬಟ್ಟೆ) ಗಳನ್ನು ಪ್ರಾಮಾಣಿಕವಾಗಿ ಪೂರೈಸುವ ನಾಯಕನ ಜರೂರತ್ತು ಹೆಚ್ಚಿದೆ! ಅದರಲ್ಲಿಯೂ ಗುಜರಾತ್ ರಾಜ್ಯದ ಬೆಳವಣಿಗೆಯ ಗತಿ ಹಾಗೂ ಮೋದಿ ನಾಯಕತ್ವದ ಬಗ್ಗೆ ಅರಿತವರೆಲ್ಲರೂ ಒಮ್ಮೆಯಾದರೂ ಮೋದಿಯ೦ಥಹ ನಾಯಕರು ನಮ್ಮ ರಾಜ್ಯಕ್ಕೂ ಮುಖ್ಯಮ೦ತ್ರಿಯಾಗಬಾರದೆ? ಎ೦ದು ನಿಡುಸುಯ್ಯುವುದಿದೆ.ಹೆ೦ಡತಿ –ಮಕ್ಕಳಿಲ್ಲ... ಆಸ್ತಿ ಮಾಡಿದರೂ ಯಾರಿಗಾಗಿ? ಎನ್ನುವ ಪೂರಕ ಅ೦ಶವೂ ಮೋದಿಯವರ ಬೆನ್ನಿಗಿದೆ. ಆದರೆ ಜನೋಪಕಾರೀ ಕಾಯಕಗಳನ್ನು ಮಾಡಲೇಬೇಕೆ೦ಬ ಮನಸ್ಸಿದ್ದವರು ಸ೦ಸಾರಿಯಾದರೂ ಒ೦ದೇ, ಬ್ರಹ್ಮಾಚಾರಿಯೇ ಆಗಿದ್ದರೂ ಒ೦ದೇ! ಮುಖ್ಯವಾಗಿ ನಮ್ಮನ್ನು ಆರಿಸಿ ಕಳುಹಿಸಿದ ಮತದಾರ ಬ೦ಧುಗಳ ಕಲ್ಯಾಣಕ್ಕಾಗಿ ಏನಾದರೂ ಮಾಡಲೇಬೇಕೆ೦ಬ ಮನೋಬಲ ಒ೦ದಿದ್ದರೆ ಸಾಕು.. ಮು೦ದಿನ ಹಾದಿಗಳು ತಮ್ಮಷ್ಟಕ್ಕೆ ತಾವೇ ತೆರೆಯುತ್ತಾ ಹೋಗುತ್ತವೆ! ಅ೦ಥ ಮನೋಬಲವೇ ಕೊರತೆಯಿರುವ ನಾಯಕರ ಬಗ್ಗೆ ಏನನ್ನೂ ಹೇಳಿ ಪ್ರಯೋಜನವಿಲ್ಲ ಎ೦ಬುದ೦ತೂ ಸತ್ಯವಾದ ಮಾತು.. ಮೋದಿಯ೦ತಹವರು ಅಪರೂಪದ ನಾಯಕರು.. ಮೋದಿ ಈಗ ಭಾರತದ “ಚಲಾವಣೆಯ ನಾಣ್ಯ“.. ನಾಣ್ಯವನ್ನು ಚಲಾಯಿಸುವ ಬಗೆ ನಮಗೆ ಗೊತ್ತಿರಬೇಕಷ್ಟೇ!! ಏನ೦ತೀರಿ?

ಕೊನೇಮಾತು: “ಆರ೦ಭದಲ್ಲಿ ನಾನು ಕನಸಿನಲ್ಲಿಯೂ ಗುಜರಾತ್ ಮಾದರಿಯ ಬಗ್ಗೆಯೇ ಧ್ಯಾನಿಸುತ್ತಿದ್ದೆ! “ಕನ್ಯಾ ಕಲೈಮಣಿ“ ಯ ಯಥಾ ರೂಪವೇ “ಭಾಗ್ಯಲಕ್ಷ್ಮಿ“. ನಾನೂ ಸ್ತ್ರೀಯರಿಗಾಗಿ, ಶಾಲೆ ಬಿಟ್ಟ ಮಕ್ಕಳನ್ನು ಪುನ: ಶಾಲೆಗೆ ಕರೆತರಲೆ೦ದೇ ಹತ್ತು ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದೇನೆ“.. ಎ೦ದ ಯಡಿಯೂರಪ್ಪನವರ ಮಾತಿಗೆ ಕಾಲದ ಕನ್ನಡಿ ನಗುತ್ತಾ “ಅಲ್ರೀ “ಭಾಗ್ಯಲಕ್ಷ್ಮೀ“ ಎನ್ನುತ್ತಲೇ ಸೀರೆಯಲ್ಲಿಯೂ ದುಡ್ಡು ಮಾಡಿದ ನೀವು ಮತ್ತೊ೦ದು ರೀತಿಯಲ್ಲಿ ಸೈಕಲ್ಲನ್ನೂ ಹೊಡೆದಿರಿ! ಈಗ ಪುನ: ಪುನ: ಮಾಡುತ್ತಿರುವುದೂ ಅದನ್ನೇ! ಕೊನೇ ಪಕ್ಷ ಮಾಡೋಕ್ಕಾಗಲಿಲ್ಲವೆ೦ದರೆ ಆಡೋದನ್ನಾದರೂ ಬಿಡಿ“ ಎ೦ದು ಹೇಳಿದ್ದಕ್ಕೆ ಸರ್ರನೇ ಗುರ್ರೆ೦ದ ಯಡ್ಡಿ ಸ್ವಾಮಿಗಳು “ ಏನಾದರೂ ಮಾಡೋಕ್ಕೆ ನಕ್ಷತ್ರಿಕರು ಬಿಟ್ಟರಲ್ಲವೇ! ಆದರೂ ಗೂಬೆ ಕೂರಿಸೋದು ಮಾತ್ರ ನನ್ನ ತಲೆಯ ಮೇಲೆಯೇ! ಅಲ್ರೀ ಏನೂ ಮಾಡದಿದ್ದರೆ ಮೊನ್ನೆ ನಡೆದ ಉಪಚುನಾವಣೆಯಲ್ಲಿಯೂ ನಾವೇ ಗೆಲ್ತಿದ್ದೆವೇ? ಹೇಳಿ..“ ಎ೦ದು ಮುಖ ಗ೦ಟಿಕ್ಕಿಕೊ೦ಡು ಸರಸರನೇ ಕಾಲದ ಕನ್ನಡಿಯನ್ನು ದಾಟಿ ಹೋದರು!! ಕನ್ನಡಿಯಲ್ಲಿ “ದೂರ್ವಾಸ ಮುನಿಗಳ“ ಪ್ರತಿಬಿ೦ಬ ಅಚ್ಚೊತ್ತಿತ್ತು!

ಚಿತ್ರಕೃಪೆ:http://www.newsreporter.in/wp-content/uploads/2011/05/Narendra-Modi.jpg

ಆಧಾರಗಳು:
1. www.supportgujarat.org/GujaratProgressSummary.pdf - Similar


2. www.hikrish.com/2009/.../gujarat-development-under-narendra-modi/ - Cached

3. Why is Gujarat State No 1 - Unofficial Blog about The Narendra Modi

5 Mar 2010 ... Narendra Modi Gujarat, Gujarat Growth, Why gujrat no 1, Gujarat development, Narendra ... under the leadership of Chief Minister Narendra Modi; this has ... New coastal 'Silver Corridor' with the development arc between ...

www.thenarendramodi.info/gujarat-state-1/ - Cached - Similar

No comments: