Tuesday, July 6, 2010

ದೂರದ ಗೆಳೆಯನಿಗೆ...

ಗೆಳೆಯ, ಇ೦ದೇಕೋ ನಿನ್ನ ನೆನಪಾಗುತ್ತಿದೆ.

ದೂರವಾಣಿ-ಚರವಾಣಿಗಳಿದ್ದರೂ,

ನಿನ್ನ ನೋಡಲೇ ಬೇಕೆನ್ನಿಸುತ್ತಿದೆ.

ಸತತ ಮೂರು ದಿನಗಳ ವಿರಾಮ!

ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ

ಹಾಕಿದೆಯಾ ಅಲ್ಪವಿರಾಮ?

ಕ೦ಡರೂ, ಅದು ನಿನ್ನ ಭಾವಚಿತ್ರ !

ನೀನಲ್ಲವಲ್ಲ!

ಎದುರು ನೋಡುವ ಇ೦ಗಿತವೇನೂ

ಶಮನವಾಗುವುದಿಲ್ಲವಲ್ಲ!

ಒಮ್ಮೆ ನೋಡಿದರೆ ಸಾಕು!

ಮು೦ದಿನ ಘಳಿಗೆಗೂ ಬೇಕು!

ಆ ನೆನಪು

ನನ್ನ ಮು೦ದಿನ ಕ್ಷಣಗಳನ್ನು

ಸಹನೀಯಗೊಳಿಸಬಲ್ಲುದು!

ಕ್ಷಣ-ಮರುಕ್ಷಣಗಳ ನಡುವೆ

ಸದಾ ನಿನ್ನ ನೆನಪು

ನನಗೊ೦ದು ದಾರಿದೀಪ.

No comments: