Thursday, July 15, 2010

ಎಲ್ಲಿಯವರೆಗೆ?

ನಾನಿರುವ ಈಗಿನ ಜಾಗ ನನ್ನದಲ್ಲ.

ನಾ ಹೊಸದಾಗಿ ಖರೀದಿಸಲಿರುವ
ಜಾಗವೂ ನನ್ನದಲ್ಲ!
ನಾನಿರುವ ಜಾಗಕ್ಕೆ ನಾಳೆ
ಮತ್ತೊಬ್ಬ ಬರಬಲ್ಲ!
ಬರದಿದ್ದಲ್ಲಿಯೂ ಆ ಜಾಗ ನನ್ನದಲ್ಲ!
ನನ್ನದೇನಿದೆ ಇಲ್ಲಿ?
ನನ್ನ ಹೆ೦ಡತಿ,ಮಕ್ಕಳು ಅವರು ನನ್ನವರೇ,
ಎಲ್ಲಿಯವರೆಗೆ? ಎನ್ನುವುದೇ ಪ್ರಶ್ನೆ!
ವ್ಯರ್ಥ ಕಸರತ್ತೇಕೆ?
ಎಲ್ಲದೂ ನನ್ನದೇ ಎ೦ಬ
ಭಾವ ಬೆಳೆಸಿಕೊ೦ಡರೆ ಹೇಗೆ?
ಎಲ್ಲದೂ ನನ್ನದೇ ಆದರೆ ಅವನದೇನಿದೆ ಇಲ್ಲಿ?
ನಿಭಾಯಿಸಲಾಗದ ಜವಾಬ್ದಾರಿಯಲ್ಲವೆ ಅದು?
ಕರ್ತವ್ಯ ಪಾಲನೆಗಾಗಿ
ಮತ್ತದೇ ಹೋರಾಟ!
ನಾನು ನನ್ನದೆ೦ಬ ಮಮಕಾರ.
ಒಬ್ಬನಿಗಾಗಿ ಮತ್ತೊಬ್ಬ,
ಮತ್ತೊಬ್ಬನಿಗಾಗಿ ಮಗದೊಬ್ಬ!
ಎಲ್ಲಿಯವರೆಗೆ ಎನ್ನುವುದೇ ಪ್ರಶ್ನೆ!
ನಾನು -ನನ್ನದಕ್ಕೆ ಕೊನೆ ಇದೆಯೇ?
ನನ್ನದೆ೦ಬುದಕ್ಕೆ ಅ೦ತಿಮ ಸಹಿಯಿದೆಯೇ?

No comments: