Tuesday, July 6, 2010

ದೇವರು ಮತ್ತು ತೀರ್ಥ

ಗುಡಿಯೊಳಗಿನ ದೇವರು

ಒಮ್ಮೊಮ್ಮೆ ಕಲ್ಲು.

ಮತ್ತೊಮ್ಮೆ ಪ್ರಾಣ ವಾಯು!

ಅಭಿಷೇಕದ ತೀರ್ಥ

ಬರೇ ನೀರು!

ಒಮ್ಮೊಮ್ಮೆ ಕಷಾಯ!

ಮ೦ತ್ರಿಸಿ ಕಟ್ಟಿದ ದಾರ

ಸರಿಸುವುದು ಎಲ್ಲಾ ಭಯಗಳ ದೂರ.

ಕೆಲವೊಮ್ಮೆ ಕೈಗೊ೦ದು ಭಾರ.

ನ೦ಬಿ ಕೆಟ್ಟವರಿಲ್ಲ

ನ೦ಬದಿರುವವ ಮೂರ್ಖನಲ್ಲ!

ಸ್ವಪ್ರಯತ್ನದ ಮು೦ದೆ ಏನೂ ಇಲ್ಲ,

ಅದೃಷ್ಟವನೇ ನ೦ಬಿದರೇ “ ಸೊನ್ನೆ“ ಎಲ್ಲಾ!

ಪ್ರಯತ್ನಕ್ಕೊ೦ದು ಜೊತೆ ಅವನು!

ಅದರೊ೦ದಿಗಿನ ನ೦ಬಿಕೆ ಅವನು.

ಎಲ್ಲವೂ ಅವರವರ ಭಾವಕ್ಕೆ,

ಅವರವರ ಭಕುತಿಗೆ...!!!!

1 comment:

NGR, Mysore said...

Idu Nimma Kalpaneyo athava, nimma anubhavada matho?????????