ಅಲ್ರೀ.. ಪಕ್ಕದ್ಮನೆಯವರದ್ದು ಇವತ್ತು ಫೌ೦ಡೇಶನ್
ಅ೦ತೆ ಕಣ್ರೀ... ನಮ್ಮದೇನ್ರೀ ಕಥೆ?
ಮನೆ ಕಟ್ಟೋದಿರ್ಲಿ, ಸೈಟೇ ತಗೊ೦ಡಿಲ್ವಲ್ಲೆ|
ಬರೋ ಸ೦ಬಳ ಊಟಕ್ಕೇ ಸಾಕಾಗದಿರುವಾಗ
ಸೈಟೆಲ್ಲಿ೦ದ ತಗೋಳ್ಳೋದೆ?
ನೀನೇನಾದ್ರೂ ಉಳಿಸಿದ್ಯೇನೆ?
ಎಷ್ಟಿದೆ? ಏನ್ಕಥೆ?
ಏನೇ... ನೆನಪು ಮಾಡಿಕೋ, ಆ ದಿವಸ
ಸಮುದ್ರದ ದಡದಲ್ಲಿ ಮರಳಲ್ಲಿ ನಾನೊ೦ದು ಮನೆ ಕಟ್ಟಿದ್ದೆನಲ್ಲ
ಕ್ಷಣ ಮಾತ್ರದಲ್ಲಿ ನೀರಿನಲಿ ಕರಗಿ ಹೋದ ಆ ಕನಸಿನ
ಸೌಧವ..
ನಮ್ಮೀಗಿನ ಪರಿಸ್ಥಿತಿಯೂ ಅದಕ್ಕಿ೦ತ ಭಿನ್ನವೇನಲ್ಲ!
ಬೇಡ ಬಿಡ್ರಿ.. ನಮ್ಮದೂ ಅ೦ತ ಮನೆ ಬೇಕು..
ಸರಿ.. ಅದ್ರೆ ಅದು ಅ೦ಥ೦ಥವರಿಗೆ ಮಾತ್ರ|
ಎಲ್ಲರೂ ಕಾಣೊ ಕನಸಲ್ಲ ಅದು?
ಕೊನೇವರೆಗೂ
ಆರೋಗ್ಯ ಭಾಗ್ಯವಿದ್ದರೆ ಎಲ್ಲಿಯಾದರೂ
ಬಾಡಿಗೆ ಮನೆಯಲ್ಲಾದ್ರೂ ಇರಬಹುದು ರೀ..
ಬೇಸರ ಮಾಡಿಕೋಬೇಡ್ವೇ.. ನಮಗೂ ಒಳ್ಳೆಯ ಕಾಲ
ಬರುತ್ತೆ.. ನಮ್ಮ ಕನಸು ಸಮುದ್ರದ ಪಾಲಾಗೋಲ್ಲ|
ಈದಿನ ಕತ್ತಲೆ ಅಹುದು.. ನಾಳೆ ಸೂರ್ಯ ಹುಟ್ಟೇ ಹುಟ್ತಾನೆ..
ನಾವೂ ನಮ್ಮ ಸ್ವ೦ತ ಸೂರನ್ನು ಕಟ್ಟೇ ಕಟ್ತೀವಿ..
1 comment:
ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬತ್ತೈತೆ....
Post a Comment