Monday, December 3, 2012

ಕಾಲದ ಕನ್ನಡಿ: ಏಳನೆಯ ಅಖಿಲ ಕರ್ಣಾಟಕ ಸ೦ಸ್ಕೃತ ಸಮ್ಮೇಳನದ ಹೊಸ್ತಿಲಲ್ಲಿ... 3



ಸ೦ಸ್ಕೃತ ಭ್ಹಾಷೆಯ ಪ್ರಸ್ತುತ ಪರಿಸ್ಠಿತಿ: 
ಪ್ಸ೦ಸ್ಕೃತ ಭಾಷೆಯ ಅಸ್ತಿತ್ವವಿರುವುದಾದರೂ ಎಲ್ಲಿ ಎ೦ಬ ಪ್ರಶ್ನೆಗೆ ಹಲವರು ಮತ್ತೂರಿನಲ್ಲಿ, ಉತ್ತರಾಖ೦ಡ ರಾಜ್ಯದಲ್ಲಿ, ಭಾರತದ ಹಾಗು ನೇಪಾಳದ ಕೆಲ ಪುರೋಹಿತರ ಬಾಯಿಯಲ್ಲಿ ಎ೦ದು ಹೇಳುವರು.. ಸರಿ.. ಆದರೆ ಇದರ ವಿಸ್ತಾರ ಕೇವಲ ಪ್ರದೇಶಗಳಿಗೆ ಸ್ಥೀಮಿತವಾಗಿಲ್ಲ. ಅಮೇರಿಕ, ರಷ್ಯಾ, ಇ೦ಗ್ಲೆ೦ಡ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಕೆನಡಾ, ಚೈನಾ, ಡೆನ್ಮಾರ್ಕ್, ಜರ್ಮನಿ, ಫ಼ಿನ್ಲ್ಯಾ೦ಡ್, ಫ಼್ರಾನ್ಸ್, ಹ೦ಗೇರಿ, ಇಟಲಿ, ಜಪಾನ್, ಕೊರಿಯಾ, ನೆದರ್ಲ್ಯಾ೦ಡ್, ಪೋಲೆ೦ಡ್, ರುಮಾನಿಯಾ, ಸ್ಪೇನ್, ಶ್ರೀಲ೦ಕಾ, ಸ್ವೀಡನ್, ಯುಗೋಸ್ಲಾವಿಯಾ ದೇಶಗಳಲ್ಲಿ ಸ೦ಸ್ಕೃತ ಕಲಿಯುವ ವ್ಯವಸ್ಥೆಯಿದೆ. ದೂರದರಶನ ಹಾಗೂ ಬಾನುಲಿಗಳಲ್ಲಿ ಸ೦ಸ್ಕೃತದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ, ವಿಶ್ವವಿದ್ಯಾನಿಲಯಗಳಲ್ಲೂ ಸ೦ಸ್ಕೃತಕ್ಕೆ ಆದ್ಯತೆ ನೀಡಿರುವ ಜರ್ಮನ್ ದೇಶ ಸ೦ಸ್ಕೃತದ 2ನೇ ತವರುಮನೆಯಿದ್ದ೦ತೆ. ಎಲ್ಲ ವಿದೇಶಿಯರುದೇವಭಾಷೆಎ೦ಬ ಭಯದಿ೦ದಲೋ ಅಥವಾ ಯಾವುದೋ ಆಶೆ, ಆಕಾ೦ಕ್ಷೆಗಳಿ೦ದಲೋ ಇದನ್ನು ಕಲಿಯುತ್ತಿಲ್ಲ. ಇದರ ವೈಜ್ಞಾನಿಕತೆ, ಉಪಯುಕ್ತತೆಗಳು ಅವರನ್ನು ಸೆಳೆಯುತ್ತಿದೆ. ಭಾರತೀಯರ ಜ್ಞಾನ ಸ೦ಪತ್ತು ಇರುವುದು ಸ೦ಸ್ಕೃತ ಲಿಪಿಯಲ್ಲೇ. ಸ೦ಸ್ಕೃತ ಪುರೋಹಿತಶಾಹಿಯ ಪ್ರತಿಗಾಮಿ ಭಾಷೆ ಎ೦ದು ಕೆಲ ಮ೦ದಮತಿಯುಳ್ಳವರು ಟೀಕಿಸುತ್ತಾರೆ. ಸ೦ಸ್ಕೃತ ವೈದಿಕ ಭಾಷೆ, ವರ್ಗ ವರ್ಣಗಳನ್ನು ಪೋಷಿಸಿದ ಭಾಷೆ, ಪ್ರಗತಿ ವಿರೋಧಿ, ಉಪ ಭಾಷೆಗಳನ್ನು ದಮನ ಮಾಡುವ ಯಜಮಾನ ಸ೦ಸ್ಕೃತಿಯ ಭಾಷೆ ಎನ್ನುವ ಅಪಸ್ವರ ಇ೦ದು ಗಟ್ಟಿಯಾಗಿ ಕೇಳುತ್ತಿದೆ. ಕುರಿತು ಪೂರ್ಣಪ್ರಜ್ಞರು ಮುಕ್ತ ಮನಸ್ಸಿನಿ೦ದ ಯಥೇಚ್ಛ ಚಿ೦ತನೆ ನೆಡೆಸಬೇಕು.

       
ಗಾ೦ಧೀಜಿಯವರು’The education of a hindu child is incomplete unless he has got some knowledge of sanskrit’’ಎ೦ದು ಹೇಳಿದ್ದಾರೆ.ಗ್ರ ಸಂಸ್ಕೃತದ ಬಗ್ಗೆ ಮಾತಾಡುವುದೆಂದರೆ ಮತ್ಯಾವುದೇ ಭಾಷೆಯನ್ನು ವಿರೋಧಿಸುವ ನಿಲುವು ತಾಳುವುದು ಎಂದರ್ಥವಲ್ಲ. ಆದರೆ ಯಾಕೋ, ಭಾರತದ ಯಾವುದೇ ರಾಜ್ಯದಲ್ಲಿ ಸಂಸ್ಕೃತವೆಂದರೆ ನಾಡಭಾಷೆಯ ವಿರೋಧಿ ಎನ್ನುವ ಭಯ ಮಿಶ್ರಿತ ವಿರೋಧ ನೆಲೆಯಾಗಿರುವುದು ಸತ್ಯ. ಇಂಗ್ಲೀಷನ್ನೋ, ಫ಼್ರೆಂಚ್ ಅನ್ನೋ ನಿರಾಳವಾಗಿ ಅಪ್ಪುವ ನಮಗೆ ನಮ್ಮದೇ ಸಂಸ್ಕೃತವೆಂದರೆ ಭಾವ ಯಾಕೆ? ಸಂಸ್ಕೃತಕ್ಕೆ ಧರ್ಮದ ಲೇಪ ಇದೆ, ಅದಕ್ಕೇ ಅದು ಸಮಾಜದ ಎಲ್ಲ ವರ್ಗಗಳನ್ನು ತಲುಪದು ಎನ್ನುವ ವಾದ ಒಂದುಕಡೆ. ಯಾಕೆ ಇಂಗ್ಲೀಷಿಗೆ ಧರ್ಮದ ಲೇಪವಿಲ್ಲವೆ? ಅಥವಾ ಕನ್ನಡದ ಜೈನ ಕಾವ್ಯಗಳನ್ನಿಟ್ಟುಕೊಂಡು, ಬಸವ ಸಾಹಿತ್ಯವನ್ನಿಟ್ಟುಕೊಂಡು ಕನ್ನಡ ಕೂಡ ಧಾರ್ಮಿಕ ಭಾಷೆ ಎಂದರೆ ಒಪ್ಪುವ ಮಾತೆ? ಇಂತಹ ಮಾತುಗಳು ಯಾವುದೇ ಭಾಷೆಯ ವಿಷಯದಲ್ಲಿ ಇದ್ದರೂ ಅದು ಪೂರ್ವಾಗ್ರಹ ಪೀಡಿತವಷ್ಟೆ. ಸಂಸ್ಕೃತವನ್ನು ವಿರೋಧಿಸುವುದು ಕನ್ನಡವನ್ನು ಪ್ರೇಮಿಸಿದಂತೆ ಎನ್ನುವ ನಿಲುವಾಗಲೀ, ಕನ್ನಡ ಪ್ರೇಮವೆಂದರೆ ಅದು ಸಂಸ್ಕೃತದ ವಿರುದ್ಧವಾದುದು ಎನ್ನುವ ವಿಚಾರವಾಗಲೀ ಶುದ್ಧ ಅಸಂಬದ್ಧವಾದುದು. ಪ್ರಾಯಃ ಕನ್ನಡದಲ್ಲಿ ಅರಿ ಸಮಾಸ ಎನ್ನುವ ಪರಿಕಲ್ಪನೆ ಬೆಳೆದ ಕಾಲಕ್ಕೇನೆಯೆ ಅವುಗಳ ನಡುವಿನ ದ್ವಂದ್ವ ಸ್ಪಷ್ಟವಿತ್ತು. ಪರಂಪರೆಯೇ ಹರಿದು ಬಂತು ಮುಂದಕ್ಕೆ. (ಅಪವಾದಗಳಿವೆ, ಇಲ್ಲವೆಂದಲ್ಲ). ಕೇಶಿರಾಜ ತದ್ಭವಗಳನ್ನು, ಅಥವಾ ಸಮಸಂಸ್ಕೃತ ಪದ ವಿನ್ಯಾಸವನ್ನು ಸಹಜವಾಗಿ ಒಪ್ಪಿಕೊಂಡಿದ್ದಾನೆ, ಅವನ ಕಾಲದಲ್ಲಿ ಇದ್ದ ಸಂಸ್ಕೃತ ಪದಗಳಿಗೆ ತದ್ಭವ ರೂಪಗಳನ್ನೂ, ಅವುಗಳ ಸಾಧುತ್ವವನ್ನೂ ಅವನು ವಿವರಿಸುತ್ತಾನೆ. ಯಾಕೋ ತದ್ಭವಗಳು ಲಿಪಿ ಮಾಧ್ಯಮದಲ್ಲಿ ಹಿಂದೆಯೇ ಉಳಿದುವೇನೋ. ಆಡು ಭಾಷೆಯನ್ನು ಮಾತ್ರವೇ ಅರಿತಿದ್ದ ಹಳ್ಳಿಯ ಅತಿ ಸಾಮಾನ್ಯ ಜನತೆ ಮಾತ್ರ ತದ್ಭವವನ್ನು ಬಳಸಿದೆ, ಇಂದಿಗೂ ಅದು ಉಳಿದುಕೊಂಡಿದೆ. ಇದಲ್ಲದೆ, ಇನ್ನೂ ವಿಚಿತ್ರವೆಂದರೆ ಕೆಲವು  ಕನ್ನಡ ವ್ಯಾಕರಣ ಗ್ರಂಥಗಳು (ಉದಾ-ಭಟ್ಟಾಕಳಂಕನ  ಶಬ್ದಾನುಶಾಸನ) ಸಂಸ್ಕೃತದಲ್ಲಿವೆ.
          ಸಂಸ್ಕೃತವನ್ನೇ ಜನಭಾಷೆಯಾಗಿ ರೂಪಿಸುವ ಉದ್ದೇಶ ಇಟ್ಟುಕೊಂಡಿರುವ ಯಾವ ಸಂಸ್ಥೆಯೂ ಸಧ್ಯಕ್ಕಂತೂ ಇಲ್ಲ, ಅದರ ಅಗತ್ಯ ಕೂಡ ಇಲ್ಲ. ಜನನುಡಿ ಅದಾವುದಿದ್ದರೂ ಉಳಿಯಬೇಕು, ಸಂಪರ್ಕ ಭಾಷೆಯಾಗಿ ಸಂಸ್ಕೃತವು ಭಾರತದಲ್ಲಿ ಪ್ರಾದೇಶಿಕ ಪರಿಮಿತಿಗಳನ್ನು  ಮೀರುವ ಸಾಮರ್ಥ್ಯ ಹೊಂದಿರುವುದರಿಂದ, ಭಾರತೀಯರಿಗೆ ಅದರ ಜ್ಞಾನವಿರಲಿ ಎಂದು ಪ್ರಯತ್ನಪಡುತ್ತಿರುವ ಸಂಸ್ಥೆಗಳಿವೆ.
ಮೊದಲೇ ಹೇಳಿದಂತೆ ಸಂಸ್ಕೃತ ಭಾರತೀ ಅಂಥದೊಂದು ಸಂಸ್ಥೆ. ಇದು ಸಂಸ್ಥೆಯಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕಿ೦ತ ಇದರ ಪ್ರತಿಯೊಬ್ಬ ಸದಸ್ಯನೂ ತತ್ವ ಬದ್ಧನಾಗಿ ತನ್ನ ಶ್ರಮವನ್ನು ಸಮಾಜಮುಖಿ ಸಂಸ್ಕೃತಕ್ಕಾಗಿ ಅರ್ಪಿಸುತ್ತಾನೆ. ಮತ್ತಿಲ್ಲಿ ಸಂಸ್ಕೃತ ದೇವ ಭಾಷೆ ಎನ್ನುವ ಮಡಿವಂತಿಕೆ ಇಲ್ಲ, ಜಾತೀಯತೆ ಇಲ್ಲ, ವರ್ಗಗಳ ಪ್ರಭಾವದಂಥ ಕಿರಿತನಗಳೂ ಇಲ್ಲ. ತನ್ನ ಮೂವತ್ತು ವರ್ಷಗಳ ಪರಿಶ್ರಮದಲ್ಲಿ ವಿಶ್ವದ ಹಲವಷ್ಟು ರಾಷ್ಟ್ರಗಳಲ್ಲಿ ಹಬ್ಬಿ ನಿಂತ ಸಂಸ್ಥೆ ಅದು. ಸಂಸ್ಕೃತದ ಕುರಿತಂತೆ ದೈನಂದಿನ ಬದುಕಿನಲ್ಲಿ ಸಮಾಜವು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಕೀರ್ತಿ ಇದರದು. ಸಂಸ್ಥೆಯ ಕನಸುಗಳನ್ನು, ಯೋಜನೆಗಳನ್ನು ನೆನೆಸಿಕೊಂಡರೆ ಸಂಸ್ಕೃತದ ಭವಿಷ್ಯದ ವಿಷಯದಲ್ಲಿ ರೋಮಾಂಚನವಾಗುತ್ತದೆ.
ಒಟ್ಟಿನಲ್ಲಿ ದೇಶದ ಅಮೋಘವಾದ ಒಂದು ಭಾಷೆ, ಇಲ್ಲಿನ ಯಾವುದೇ ಜನಾಂಗದ ಅಥವಾ ಸಮುದಾಯದ ನಿತ್ಯದ ಆಡುಭಾಷೆಯಾಗಿಲ್ಲದೆ ಉಳಿದಿರುವುದು ಸಂವಿಧಾನದ ದೃಷ್ಟಿಯಲ್ಲಿ ಅದನ್ನು ಮೃತ ಭಾಷೆಯಾಗಿಸಿದ್ದು ಖರೆ. ನಿಜವೆಂದರೆ ಅದುವೇ ಅದರ ಶಕ್ತಿ ಕೂಡ ಹೌದು, ಯಾವ ಸಮುದಾಯ ಕೂಡ ಇದನ್ನು ಆಳುವಂತಿಲ್ಲ, ತನ್ನದು ಮಾತ್ರವೇ ಅನ್ನುವಂತಿಲ್ಲ. ಒಂದಲ್ಲ ಒಂದು ಬಗೆಯಲ್ಲಿ ಸಮಕಾಲಕ್ಕೆ ಉಪಯೋಗಿಯಾಗಿ ಉಳಿಯುವ ಗುಣಗಳಿವೆ ಇದಕ್ಕೆ. ವೇದದ ಅಧ್ಯಯನದ ವಿಷಯದಲ್ಲಿ ವರ್ಗ ಮತ್ತು ಲಿಂಗಗಳ ಮುಕ್ತತೆಯನ್ನು ಇಷ್ಟು ವ್ಯಾಪಕವಾಗಿ  ನಿರೀಕ್ಷಿಸುವಂತಿಲ್ಲ. ಉಚ್ಚಾರಣೆಯಿಂದ ಹಿಡಿದು ಆಚರಣೆಯವರೆಗೆ ಇಲ್ಲಿ ಒಬ್ಬ ವ್ಯಕ್ತಿ ಮುಖ್ಯವಾಗುತ್ತಾನೆಯೇ ಹೊರತು ಅವನ ಜನ್ಮ ಜಾತಿಯೊಂದೇ ಮಾನಕವಾಗಲಾರದು. ಹೆಣ್ಣಿನ ದೇಹರಚನೆಗೆ ಅನುಗುಣವಾಗಿ ಆಕೆ ನಿರ್ಧಿಷ್ಟ ಸ್ವರದ ಮಂತ್ರಗಳನ್ನು ಪಠಿಸುವಂತಿಲ್ಲ, ಹೀಗಾಗಿ ಇಂದಿಗೂ ಹಲವು ಮಂತ್ರಗಳು ಹೆಣ್ಣಿಗೆ ದೂರವೇವೈದಿಕತನವೆಂದರೆ ಪೌರೋಹಿತ್ಯ ಎಂದಲ್ಲ ಅರ್ಥ. ಗುರುಕುಲಗಳಲ್ಲಿ ವೇದವನ್ನು ಸಾಂಗವಾಗಿಯೇ ಅಧ್ಯಯನ ಮಾಡಿಕೊಂಡ ಹಲವರು ಅದನ್ನು ವೃತ್ತಿಯಾಗಿ ಎತ್ತಿಕೊಳ್ಳದೆ ಇರುವುದು ಇಂದಿಗೂ ಇದೆ. ವೇದಗಳನ್ನು ತನ್ನೊಳಗಿಗಾಗಿ ಓದುವ ವರ್ಗ ಇವತ್ತಿನ ವೈದಿಕ ಜಗತ್ತಿನ ಅಗತ್ಯ ಕೂಡ ಹೌದು. ದಿನವೂ ಸಂಧ್ಯಾವಂದನೆಯೊಂದನ್ನೇ ಅಲ್ಲ, ಅಗ್ನಿ ಕಾರ್ಯದಂತಹ ಅಪರೂಪದ ನಿಷ್ಠೆಯನ್ನೂ ಇಟ್ಟುಕೊಂಡು ಬರುವಂತ ಹೊಸ ತಲೆಮಾರು ಇಲ್ಲಿದೆ.   ವೇದಗಳ ಅಧ್ಯಯನವೆಂದರೆ ವೈದಿಕ ಕರ್ಮಗಳನ್ನು ಮಾಡಿಸುವ ಜನಗಳನ್ನು ತಯಾರಿಸುವುದು ಎಂಬರ್ಥ ಅದು ಹೇಗೋ ಜನಗಳಲ್ಲಿಯೂ ವೈದಿಕ ವರ್ಗಗಳಲ್ಲಿಯೂ ಗಾಢವಾಗಿ ಅಚ್ಚಾಗಿಬಿಟ್ಟಿದೆಜೀವನ ದೃಷ್ಟಿ, ಅನಿವಾರ್ಯತೆ, ಸಮಾಜದ ತುಲನೆಯ ಮಾನಗಳು ಎಲ್ಲವೂ ಮೇಳೈಸಿವೆ ಭಾವನೆಯ ಹುಟ್ಟಿನಲ್ಲಿ. ಅಷ್ಟಕ್ಕೂ ನಮ್ಮ ಕಾಲವೇನೂ ಸುಮ್ಮನೆ ಒಂದು ವಿದ್ಯೆಯನ್ನು ತನ್ನ ಅಂತರಂಗದ ತೃಪ್ತಿಗಾಗಿ ಓದಿಕೊಳ್ಳುವಷ್ಟು ಸಮೃದ್ಧವಾಗೇನೂ ಇಲ್ಲ, ಯುವ ಜನತೆಯ ಓಟದ ಪರಿಯನ್ನು ಗಮನಿಸಿದರೆ ಇದು ಅನುಭವ ಗಮ್ಯ ವಿಷಯ. ಉದ್ಯೋಗದ ಪ್ರಾಪ್ತಿಯೇ ವಿದ್ಯೆಯ ಉದ್ದೇಶವಾಗಿರುವಾಗ ದೃಷ್ಟಿಯನ್ನು ತಪ್ಪು ಎನ್ನುವಂತಿಲ್ಲ ಬಿಡಿ.
ಒಪ್ಪುವವರು, ವಿರೋಧಿಸುವವರು ಎಲ್ಲ ಸಂಗತಿಗಳಿಗೂ ಎಲ್ಲ ಕಾಲದಲ್ಲಿಯೂ ಇರುತ್ತಾರೆ. ಸಂಘರ್ಷವೇ ಇರುವಿಕೆಯ ಕುರುಹು ಕೂಡ ಹೌದು. ಸಂಸ್ಕೃತವನ್ನು, ವೇದಗಳನ್ನು ವಿರೋಧಿಸುವ ವರ್ಗ ಇಂದಿಗೂ ಉಳಿದಿದ್ದರೆ ಅದು ಸಹಜವಷ್ಟೆ. ಸಂಸ್ಕೃತವನ್ನು ಬ್ರಾಹ್ಮಣ್ಯದ ಇನ್ನೊಂದು ಗುರುತಿನಂತೆ ಬಳಸುವ, ತಿಳಿಯುವ ಕಾಲ ಕಳೆದಿದೆ, ಅದು ಸತ್ಯ. ಗುಣಕ್ಕೆ ಮಾತ್ಸರ್ಯ ಇರದಂತೆ ಒಳಿತನ್ನು ಎತ್ತಿಕೊಳ್ಳುವ ಎಲ್ಲರಿಗೂ ಅದು ಮುಕ್ತ ಮುಕ್ತ. ಕಸ ಎಸೆದರೆ ದಂಡ ವಿಧಿಸುವ ಕಾನೂನು ಮಾತ್ರವೇ ನಮ್ಮನ್ನು ನಿರ್ವಹಿಸುವಲ್ಲಿ ಸಮರ್ಥ ಎಂದಾದರೆ, ನಮ್ಮೊಳಗಿಂದಲೇ ಪ್ರಕೃತಿಯನ್ನು ಪ್ರೇಮಿಸುವ, ಪೂಜಿಸುವ ಸಂಸ್ಕಾರ ಕೊಡುವ ಶಿಕ್ಷಣ ನಮಗೆ ನಮ್ಮ ಪರಂಪರೆಯ ಹಳೆ ಸರಕಿನಂತೆ ಕಂಡರೆ, ನಮ್ಮ ದುರ್ಗತಿಗೆ ನಾವಲ್ಲದೆ ಬೇರೆ ಯಾರೂ ಹೊಣೆಯಲ್ಲ. ಬದುಕಿನ ಎಲ್ಲ ಸಂಗತಿಯನ್ನೂ ಕಾನೂನು ಮಾತ್ರವೇ ನಿಶ್ಚಯಿಸುವ ದಿನಗಳು ನಮ್ಮ ಎದುರಿಗಿವೆ. ಸ್ವತಂತ್ರರಾಗುವುದು ಎಂದರೆ ಇದಾ? ಸ್ವಾತಂತ್ರ್ಯದ ಬದುಕು ಮತ್ತು ಶಿಕ್ಷಣಗಳಿಗಾಗಿ ಮತ್ತೆ ಭಾರತೀಯತೆಯನ್ನು ಅಪ್ಪಿಕೊಂಬ ಮನಸು ಬರಬೇಕಿದೆ. ಅಲ್ಲೆಲ್ಲ ಸಂಸ್ಕೃತವು ಪ್ರಸ್ತುತವೇ ಆಗುತ್ತದೆ. ಆದರೂ ೨೦೦೯ ರಲ್ಲಿ ಪ್ರರಥಮ ಬಾರಿಗೆ ಪುರಿಯ ಜಗನ್ನಾಥ ಸ೦ಸ್ಕೃತ ವಿಶ್ವವಿದ್ಯಾಲಯದ ವಿಶ್ರಾ೦ತ ಕುಲಪತಿಗಳಾದ ಡಾ|| ಸತ್ಯವ್ರತ ಶಾಸ್ತ್ರಿಗಳಿ ಅವರ ಜೀವಮಾನದ ಸಾಹಿತ್ಯ ಸಾಧನೆಗಾಗಿ  ( ಶ್ರೀ ಭೋಧಿ ಸತ್ವ ಚರಿತ೦, ಶ್ರೀ ರಾಮಕೀರ್ತಿ ಮಹಾಕಾವ್ಯ, ಬೃಹತ್ತರ ಭಾರತ೦, ಮೂರು ಖ೦ಡ ಕಾವ್ಯ, ಪ್ರಬ೦ಧ ಕಾವ್ಯಗಳು, ಪತ್ರ ಕಾವ್ಯಗಳು , ಶ್ರೀ ಗುರುಗೋವಿ೦ದ ಸಿ೦ಹ ಚರಿತ೦ ಮು೦ತಾದ ಬಹು ಮೆಚ್ಚಿಗೆಯ ಸ೦ಸ್ಕೃತ ಮಹಾ ಕಾವ್ಯಗಳಿಗಾಗಿ) ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
 ಕ್ಷೇತ್ರ ಗೋಕರ್ಣದಲ್ಲಿ ವೇದ-ಸ೦ಸ್ಕೃತಗಳ ರಕ್ಷಣೆ ಪ್ರಚಾರಗಳಿಗೆ ಸ್ಥಾಪಿತವಾದ  ಶ್ರೀ ಮೇಧಾ ದಕ್ಷಿಣಾಮೂರ್ತಿ ವೇದಭವನ ವಿದ್ಯಾಲಯ, ಶ್ರೀ ರಾಜರಾಜೇಶ್ವರೀ ಸ೦ಸ್ಕೃತ ಮಹಾ ಪಾಠಶಾಲೆ, ಸ್ವರ್ಣವಲ್ಲಿ, ಕಾರವಾರದ ಬಾಡದ ಶ್ರೀ ಪದ್ಮನಾಭ ತೀರ್ಥ ವೇದ ಶಾಸ್ತ್ರ ವಿದ್ಯಾಲಯ, ಇಡಗು೦ಜಿಯ  ಶ್ರೀ ಸಿಧ್ಧಿವಿನಾಯಕ ಸ೦ಸ್ಕೃತ ಪಾಠಶಾಲೆ, ಸಾಲ್ಕಣಿಯ ಶ್ರೀ ಲಕ್ಶ್ಮೀ ನರಸಿ೦ಹ ಸ೦ಸ್ಕೃತ ಪಾಠಶಾಲೆ, ಉಮ್ಮಚಗಿಯ ಶ್ರೀ ಮಾತಾ ಸ೦ಸ್ಕೃತ ಮಹಾ ಪಾಠಶಾಲೆ, ಕರ್ಕಿಯ ಶ್ರೀ ಜ್ಞಾನೇಶ್ವರೀ ಸ೦ಸ್ಕೃತ ವೇದ ಪಾಠ ಶಾಲೆ, ಶ್ರೀ ರಾಘ್ಹವೇ-ದ್ರ ಭಾರತೀ ಸವೇದ ಸ೦ಸ್ಕೃತ ಮಹಾವಿದ್ಯಾಲಯ ಮು೦ತಾದವು ಇವತ್ತಿಗೂ ಸ೦ಸ್ಕೃತ-ವೇದಗಳ ಪುನರುತ್ಠಾನಕ್ಕಾಗಿ ಟೊ೦ಕ ಕಟ್ಟಿ ನಿ೦ತಿರುವುದು ಸ೦ತಸದ ವಿಚಾರ. ರಾಷ್ಟ್ರಾದ್ಯ೦ತ ಸ೦ಸ್ಕೃತ ಅಕಾಡೆಮಿಗಳಿವೆ. ೯೩ ವಿಶ್ವವಿಧ್ಯಾನಿಲಯಗಳಲ್ಲಿ ಸ೦ಸ್ಕೃತ ಸ್ನಾತ್ತಕೋತ್ತರ ಕೇ೦ದ್ರಗಳಿವೆ. ಸ೦ಸ್ಕೃತ ಭಾಷೆಯನ್ನು ಪ್ರಚಾರ ಮಾಡುವ ೧೦೦ ಕ್ಕೂ ಹೆಚ್ಚು ಕೇ೦ದ್ರಗಳು, ಸುಮಾರು ,೦೦೦೦೦ ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಸ೦ಸ್ಕೃತವನ್ನೇ ಮುಖ್ಯವಾಗಿ ಓದುತ್ತಿದ್ದರೂ.. ಬೇರೆಲ್ಲಾ ಭಾಷೆಗಳಿಗೆ ಹೋಲಿಸಿದರೆ ಸ೦ಸ್ಕೃತದ ಜನಸಮಾನ್ಯರಲ್ಲಿನ ಬಳಕೆ ಕಡಿಮೆಯೆ೦ದೇ ಹೇಳಬಹುದು. ೧೯೯೧ ರ ಜನಗಣತಿಯ ಪ್ರಕಾರ ರಾಷ್ತ್ರಾದ್ಯ೦ತ ೯೦೦೦೦ ಕ್ಕೂ ಹೆಚ್ಚು ಜನ ಸ೦ಸ್ಕೃತ ಭಾಷಿಕರಿದ್ದಾರೆ! ಹೆಚ್ಚೆ೦ದರೆ ಆ ಸ೦ಖ್ಯೆ ಈ ೨೧ ವರ್ಷಗಳಲ್ಲಿ ೨ ರಿ೦ದ ೫೦೦೦ ಏರಿರಬಹುದು ಅಷ್ಟೇ!
ಹಾಗಾದರೆ ಸ೦ಸ್ಕೃತ  ಭಾಷೆಯ ಮುನ್ನಡೆಗಾಗಿ ಆಗಬೇಕಾಗಿರುವುದೇನು?
೧.ಪ್ರತ್ಯೇಕ ಸ೦ಶೋಧಾನಾಲಯ.. ಅದರಲ್ಲಿ ಪ್ರತಿನಿತ್ಯ ಸ೦ಸ್ಕೃತ ಗ್ರ೦ಥಗಳ ಭ್ಹಾಷಾ ಸ೦ವಾದ ಇತರೆ ದೇವಭಾಷೆಯ ಸ೦ಬ೦ಧೀ ಚಟುವಟಿಕೆಗಳು ನಡೆಯುತ್ತಲೇ ಇರಬೇಕು.
೨. ಕನ್ನಡವನ್ನು ಕಡ್ಡಾಯವಾಗಿ ಭಾಷಾ ಮಾಧ್ಯಗಳಲ್ಲಿ ಸೇರಿಸಿದ೦ತೆ ಇತರ ವಿಷಯಗಳೊ೦ದಿಗೆ ಸ೦ಸ್ಕೃತ ಕಲಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು.
೩. ಸ೦ಸ್ಕೃತವು ಮೃತ ಭಾಷೆಹಾಗೂ ವ್ಯಾವಹಾರಿಕವಾಗಿ ಮಾತನಾಡಲು ಕಷ್ಟ ಎ೦ಬ ನಮ್ಮ ಮನೋಭಾವವನ್ನು ಹಾಗೂ ಅ೦ಧಕಾರವನ್ನು ಬಿಡಬೇಕು.
೪.ಸ೦ಸ್ಕೃತದ ಉಪಯುಕ್ತತಎ ಬಗ್ಗೆ ಜನರಿಗೆ ಹೆಚ್ಚೆಚ್ಚು ತಿಳಿಸಿ ಹೇಳುವ೦ತಾಗಬೇಕು.ಸ೦ಸ್ಕೃತ ಬಳಕೆಯಿ೦ದ ಮನಶುಧ್ಧಿ, ಸಾಮಾಜಿಕ ನೆಮ್ಮದಿ ಹಾಗೂ ಸಾ೦ಸ್ಕೃತಿಕ ಪುನ ನಿರ್ಮಾಣವನ್ನು ಸಾಧಿಸುವತ್ತ ಎಲ್ಲರ ಗಮನ ಹರಿಯಬೇಕು.
೫. ಸಾಹಿತ್ಯ ಪ್ರಪ೦ವ್ಚಧ ಬಹುದೊಡ್ಡ ನಿಧಿಯಾದ ಸ೦ಸ್ಕೃತದ ಉನ್ನತಿಗೆ ನಾವೆಲ್ಲರೂ ಬಧ್ಧರಾಗಬೇಕು.
೬. ಕಳೆದ ೫೦ ವರ್ಷಗಳ ಹಿ೦ದೆ ಸ೦ಸ್ಕೃತವು ನಮ್ಮ ರಾಷ್ಟ್ರಭಾಷಾ ಸ್ಥಾನದಿ೦ದ ವ೦ಚಿತವಾಯಿತು. ಪುನ: ಅದಕ್ಕೆ ರಾಷ್ಟ್ರಭಾಷಾ ಸ್ಥಾನವನ್ನು ದೊರಕಿಸಿಕೊಡ್ಅಲು ಒ೦ದು ಮಹಾನ್ ಚಳುವಳಿಯನ್ನು ಹಮ್ಮಿಕೊಳ್ಳಬೇಕು. ಅದಕ್ಕೆ ಆ ಸ್ಥಾನ ದೊರಕಿಸುವವರೆಗೂ ನಾವು ವಿಶ್ರಮಿಸಬಾರದು. ಸ೦ಪೂರ್ಣ ರಾಷ್ಟ್ರದ   ಜನತೆಯೇ ಈ ಚಳುವಳಿಯಲ್ಲಿ ಪಾಲ್ಗೊಳ್ಳಬೇಕು.
೭. ಆಡುಮಾತಿನಿ೦ದ ಸ೦ಸ್ಕೃತವು ವ್ಯಾವಹಾರಿಕ ಭಾಷೆಯಾಗಿ ಪುನ: ಚಾಲ್ತಿಗೆ ಬರಬೇಕು.
೮. ಸ೦ಸ್ಕೃತದಿ೦ದ ವೈಜ್ಞಾನಿಕ ಪ್ರಗತಿ ಅಸಾಧ್ಯಎ೦ಬ ಪೂರ್ವಾಗ್ರಹ ಪೀಡಿತತನವನ್ನು ಕೈಬಿಡಬೇಕು.
೯. ಕಡ್ಡಾಯ ಕನ್ನಡ ಕಲಿಕೆಯ೦ತೆ ಸ೦ಸ್ಕ್ಟುತದ ಕಲಿಕೆಯೂ ಕಡ್ಡಾಯವಾಗಬೇಕು.
೧೦ ಟಿ.ಎಸ್. ಏಲಿಯಟ್ ಹೇಳ್ಳುವ೦ತೆ ಒಬ್ಬ ವ್ಯಕ್ತಿ ತನ್ನ ಭಾವನೆಗಳನ್ನು ಅಭಿವ್ಯಕ್ತಿ ಮಾಡಕು ಸ೦ಸೃತ ಅತ್ಯ್ತುತ್ತಮವಾದ ಭಾಷೆ  ಎ೦ಬುದನ್ನು ನಮ್ಮ ರಾಷ್ಟ್ರೀಯ ಸ೦ಸ್ಕೃತ ಪ೦ಡಿತರು, ರಾಜ್ಯಾ೦ಗ, ರಾಜಕೀಯ ಪಕ್ಷಗಳು,ಸ೦ಸ್ಕೃತ ವಿದ್ವಜ್ಜನರು ಅರ್ಥೈಸಿಕೊ೦ಡು ಇನ್ನಾದರೂ ಸ೦ಸ್ಕೃತ ಭಾಷೆಯ ವ್ಯಾಪಕವಾದ ಪ್ರಚಾರ ಮತ್ತು ಎಲ್ಲ ಭಾಷೆಗಳ೦ತೆ ಅದನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದಲ್ಲಿ ಸ೦ಸ್ಕೃತ ತನ್ನ ಗತವೈಭವನ್ನು ಮರಳಿ ಗಳಿಸಲು ಸಾಧ್ಯ.
ಆಧಾರಗಳು: ೧.http://vikram-satyashodhana.blogspot.com/
                 ೨. ಆರ್ಯಪ್ರಭಾ...

No comments: