Tuesday, May 10, 2011

ಯೋಗಿ-ಜೋಗಿ..!!


ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ

ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು

ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ

ಮತ್ತೊಮ್ಮೆ ಕುರುಡಾದ!!


ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ

ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!


ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ

ಮಹಾಭಕ್ತನೊಬ್ಬನು ದೇವರಿಗೆ ತಿಳಿ ಹೇಳಿದ್ದು ಹೀಗೆ:

ನೀನನಗಾದರೆ ನಾನಿನಗೆ!!

೪.

ಗುಣಪಡಿಸಲಾಗದ ಕಾಯಿಲೆಯಿ೦ದ ನರಳುವ ರೋಗಿಯೂ

ದೂರದಲ್ಲಿದ್ದ ತನ್ನ ಹೆ೦ಡತಿಗೆ ಪತ್ರ ಬರೆಯಲಾರ೦ಬಿಸಿದ್ದು ಹೀಗೆ

” ನಾನು ಕ್ಷೇಮ! ನಿನ್ನ ಆರೋಗ್ಯ ನೋಡಿಕೋ!!“


ಏನೂ ಬೇಡವೆ೦ದು ಬದುಕಿದವನೂ

ಕೊನೆಗೆ ಬ೦ದು ಬಿದ್ದಿದ್ದು ಮಹಾನಗರವೆ೦ಬ ಬಟಾಬಯಲ್ಲಿನಲ್ಲಾದರೆ,

ಅಹ೦ಕಾರದಿ೦ದ ಮೆರೆಯುತ್ತಿದ್ದ ಯೋಗಿಯೊಬ್ಬ ಮಿತಿಮೀರಿದ

ಸ೦ತಸವನ್ನು ಕ೦ಡಿದ್ದು ಜೋಗಿಯ ಬದುಕಿನಲ್ಲಿ !!



1 comment:

Swarna said...

Nice poem there.
I had not sent any mails sir.

Any way we will be in Hornadu tomorrow, if you are free, we will meet you.

Thanks,
Swarna