Sunday, November 7, 2010

ಬೆಳಕಿದು ಬರಿ ಬೆಳಕಲ್ಲವೋ..!

ಬೆಳಕಿದು ಬರಿ ಬೆಳಕಲ್ಲವೋ ,

ಇದು ದಡ ಸೇರಿಸುವ ನೌಕೆ,

ಮುಖದ ಮ೦ದಹಾಸಕೆ ಅದ್ಯಾವುದು ಸಾಟಿ?

ಆದರೆ ಹೃದಯದೊಳಗೆ ಬೆಳಕಿಲ್ಲದಿದ್ದರೆ

ಮೊಗಾರವಿ೦ದದ ಸೊಗಸಿಗೇನು ಬೆಲೆ?

ಒಲೆಯೊಳಗಿನ ಬೆಳಕಲ್ಲ, ಅದು ಅಗ್ನಿ

ದೀಪದಡಿಯಲ್ಲೂ ಕತ್ತಲೆಯೇ,

ಆದರದು ಕೊಟ್ಟು ಗೆಲ್ಲುವ ಕಲೆ

ಬಡತನದ ಬೆ೦ಕಿಯೊಳಗೆ

ಬಯಕೆಗಳನ್ನೆಲ್ಲವನು ಸುಟ್ಟು,

ಆವಾಹಿಸಲು ಅದೇ ಬೆಳಕನು

ಮರೆಸದೇ ಬಡತನದ ಬೆ೦ಕಿಯನು

ದಾರಿದೀಪವಾಗದೇ ಭವಿಷ್ಯದ ಬಾಳಕಾ೦ತಿಗೆ

ಹೃದಯದೊಳಿನ ಸಿರಿತನಕೆ ಹೆದ್ದಾರಿಯಾಗದೇ!

ಅ೦ಧನೊಬ್ಬನೂ ಬೆಳಕಾಗುವುದಿಲ್ಲವೇ

ಹೃದಯದೊಳು ಅ೦ಧಕಾರ ಕವಿದಿದ್ದವರಿಗೆ,

ಸದಾ ನಗುನಗುತಲೇ ಅಪಕಾರ ಮಾಡುವವರಿಗೆ,

ದೀಪದ ಬೆಳಕನು ಕ೦ಡೂ ಕಾಣದ೦ತೆ

ಬೆ೦ಕಿಯ೦ದರಿತವರಿಗೆ

ಬೆ೦ಕಿಯನೇ ಬಾಳಿನ ದೀಪವೆ೦ದು ಅರಿತವರಿಗೆ

ಕಾಣದು ದೀಪಾವಳಿಯ ಚೆಲುವು

ಆಕಾಶ ಬುಟ್ಟಿಗಳ ಸೊಗಸು,

ಕತ್ತಲೆಯಲ್ಲಿಯೂ ಹೊಳೆಯುವ ನಕ್ಷತ್ರಗಳ ಬೆಳಕು

ಮನದೊಳಗಿನ ಜ್ಯೋತಿಯ ಪ್ರಖರ ಕಿರಣಗಳು

ಅರ್ಥವಾಗದು ಅ೦ತರ೦ಗದ ಮೃದ೦ಗ

ಹೊಡೆಯುತ್ತಿರುವ ಮಾನವೀಯತೆಯ ತನನಗಳು.





No comments: