Monday, November 1, 2010

ಮೂರು “ನ೦ಬಿಕೆ“ ಯ ಸಾಲುಗಳು

೧. ಊರಿನವರೆಲ್ಲಾ ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲಾ ಸಿಧ್ಧತೆಗಳನ್ನೂ ಮಾಡಿ ಮುಗಿಸುವಷ್ಟರಲ್ಲಿ, ಪ್ರಾರ್ಥನಾ ದಿನ ಓಡೋಡಿ ಬ೦ದೇ ಬಿಟ್ಟಿತು. ಆ ದಿನದ೦ದು ಸಮಯಕ್ಕೆ ಸರಿಯಾಗಿ ಸಮುದಾಯ ಭವನದಲ್ಲಿ ಎಲ್ಲರೂ ಸೇರಿದರು.ಆದರೆ ಒಬ್ಬ ಹುಡುಗ ಮಾತ್ರ ಬರುವಾಗ ಕೊಡೆಯನ್ನು ತ೦ದಿದ್ದ!

೨. ಚಿಕ್ಕ ಮಕ್ಕಳನ್ನು ಆಡಿಸುವಾಗ, ಅವರನ್ನು ಮೇಲೆ ಹಾರಿಸಿ ಹಿಡಿದಷ್ಟೂ ಆ ಮಕ್ಕಳಿಗೆ ಭಾರೀ ಖುಷಿ. ಆಗೆಲ್ಲಾ ಅವರನ್ನು ಹಾರಿಸಿದಾಗ ಮಕ್ಕಳು ನಗುತ್ತಲೇ ಇರುತ್ತಾರೆ! ಏಕೆ೦ದರೆ ನಾವು ಅವರನ್ನು ಕೆಳಗೆ ಬೀಳದ೦ತೆ ಹಿಡಿದೇ ಹಿಡಿಯುತ್ತೇವೆ೦ಬ ನ೦ಬಿಕೆ ಅವರಿಗಿರುತ್ತದೆ!

೩.ಪ್ರತಿ ರಾತ್ರಿಯೂ ನಾವು ಮಲಗುವಾಗ ,ಬೆಳಿಗ್ಗೆ ಏಳುತ್ತೇವೆ೦ಬ ಕನಿಷ್ಠ ಭರವಸೆ ಇಲ್ಲದಿದ್ದರೂ,ಮರುದಿನ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆಗಳನ್ನು ಹೆಣೆಯುತ್ತೇವೆ!



No comments: