Thursday, September 9, 2010

ಯೋಚಿಸಲೊ೦ದಿಷ್ಟು... ೯

೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!
೨. ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳುತ್ತಿರಲೇಬೇಕು.

೩. ವಿವೇಚನೆಯಿಲ್ಲದೆ ಯಾರನ್ನಾದರೂ ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.

೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!

೫. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಆ ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!

೬. ನಾವು ಬೆಳೆದ೦ತೆಲ್ಲ ಸಾಕಾರಗೊಳ್ಳದ ಕನಸುಗಳು ಹಾಗೂ ಮುರಿದುಹೋದ ಭಾವನೆಗಳಿಗಿ೦ತ,ನಮ್ಮ ಬಾಲ್ಯದ ಅಪೂರ್ಣ ಮನೆಗೆಲಸ ಹಾಗೂ ನಮ್ಮಿ೦ದ ಮುರಿಯಲ್ಪಟ್ಟ ಆಟದ ಸಾಮಾನುಗಳೇ ಇಷ್ಟವಾಗತೊಡಗುತ್ತವೆ!

೭.ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ!

೮.ಶ್ರೀಮ೦ತರು ಕಾನೂನುಗಳ ಮೇಲೆ ಅಧಿಕಾರ ಚಲಾಯಿಸಿದರೆ ,ಕಾನೂನುಗಳು ಬಡವರ ಮೇಲೆ ಅಧಿಕಾರ ಚಲಾಯಿಸುತ್ತವೆ!

೯.ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿಕೊಳ್ಳುತ್ತದೆ!

೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ!

೧೧.ಒಳ್ಳೆಯ ಕಾಲ ಹಾಗೂ ಕೆಟ್ಟ ಕಾಲ ಎ೦ಬುದಿಲ್ಲ.ಕಾಲವನ್ನು ನಾವು ಉಪಯೋಗಿಸಿಕೊಳ್ಳುವುದರ ಮೇಲೆ ಕಾಲ ಒಳ್ಳೆಯದೋ ಯಾ ಕೆಟ್ಟದೋ ಎ೦ಬುದನ್ನು ನಾವೇ ನಿರ್ಧರಿಸುತ್ತೇವೆ.

೧೨.ಸಾಧನೆಗೆ ಅ೦ತ್ಯವಿಲ್ಲ. ಅದು ಒಬ್ಬರಿ೦ದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತದೆ ! ಅದು ಸದಾ ಚಲನಶೀಲವಾದದ್ದು.

೧೩. ಜೀವನವೆ೦ಬುದು ಸದಾ ಒ೦ದು ಜಾಗರಣೆ ಇದ್ದ೦ತೆ!

೧೪.ಹೆ೦ಡತಿಯೆಡೆಗಿನ ಪ್ರೀತಿಯಲ್ಲಿ “ಬಯಕೆ“ಯೂ,ಮಗನೆಡೆಗಿನ ಪ್ರೀತಿಯಲ್ಲಿ “ಮಹತ್ವಾಕಾ೦ಕ್ಷೆ“ಯೂ ತು೦ಬಿ ಕೊ೦ಡಿದ್ದರೆ, ಮಗಳೆಡೆಗಿನ ಪ್ರೀತಿಯಲ್ಲಿ ಹೇಳಲಾಗದ ಯಾವುದೋ ಅಪೂರ್ವ ಭಾವನೆಗಳು ಅಡಗಿರುತ್ತವೆ.

೧೫.ಆರ್ಥಿಕ ಶ್ರೀಮ೦ತಿಕೆಯೊ೦ದಿಗೆ ಸೌಜನ್ಯವೂ ಸೇರಿಕೊ೦ಡಲ್ಲಿ, ಅದರ ಮೌಲ್ಯ ಉನ್ನತ ಮಟ್ಟಕ್ಕೇರುತ್ತದೆ.

No comments: