Thursday, July 22, 2010

ಮಿ೦ಚು!

ಮಿ೦ಚು !


ನನ್ನ ಬದುಕಲ್ಲೆಲ್ಲಾ ಹೀಗೇ!

ಯಾವುದೂ ಬೇಕೆ೦ದಾಗ ಸಿಗದು,

ಬೇಡವೆ೦ದು ಸುಮ್ಮನಾದಾಗಲೇ

ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು

ನನಸಾಗಲು ಆರ೦ಭಿಸುತ್ತವೆ!

ತಳದಲ್ಲಿದ್ದ ಉತ್ಸಾಹ ಶಿಖರ

ಮುಟ್ಟಿದಾಗ ಇರದು.

ಶಿಖರ ತಲುಪಿದರೂ,

ಮೆಟ್ಟಿ ಬ೦ದ ನೆಲವ ನೋಡುವ

ಉತ್ಸಾಹ ನನ್ನದು.

ಜೇಡಿಮಣ್ಣು, ಬೆಣಚುಕಲ್ಲು, ಮುಳ್ಳಿನ ಗಿಡ,

ಒ೦ದೇ? ಎರಡೇ? ಎಲ್ಲಿ ಹೋದರೂ

ಬಿಟ್ಟರೂ ಬಿಡದ ಪಾಪಾಸುಕಳ್ಳಿ!

ಮುಳ್ಳುಗಳ ಮಧ್ಯದಲ್ಲಿನ ಸಪಾಟು ಮೇಲ್ ಮೈನ೦ತೆ!

ಶಿಖರದಿ೦ದ ಜಾರದ೦ತೆ,

ನೆಲವನ್ನು ತಬ್ಬಿಕೊ೦ಡಿದ್ದೇನೆ.

ಕಾಲ್ಬೆರಳುಗಳು ನೆಲವನ್ನು ತೂತು ಕೊರೆಯುವ೦ತಿವೆ,

ಕೆಳಗೆ ಬೀಳದ೦ತೆ.

ಕತ್ತಲೆಯೊ೦ದಿಗೆ ಸ೦ಭಾಷಣೆಗಿಳಿಯುವಷ್ಟರಲ್ಲಿಯೇ

ಕಣ್ಮು೦ದೆ ಮಿ೦ಚೊ೦ದು ಸುಳಿಯಿತು !

ಆಸೆಗಳೆಲ್ಲವನ್ನೂ ತೊರೆದು,

ಬದುಕಿನ ಅರ್ಥವನು ಅರಿಯುತ್ತಿದ್ದ೦ತೆಯೇ,

ಕನಸು ನನಸಾಗಲು ಆರ೦ಬಿಸಿದವು!

No comments: