Tuesday, June 29, 2010

ಬದುಕು-ಭ್ರಮೆ

ನಾ ಕ೦ಡ ಬದುಕಿನ ಕಲ್ಪನೆಯೇ ಅ೦ಥದ್ದು,


ಮೇರುತಿ ಪರ್ವತದ ತುದಿಯಲ್ಲೊಮ್ಮೆ


ಎರಡೂ ಕೈಗಳನ್ನೆತ್ತಿ, ಎಲ್ಲ ದು:ಖ ದುಮ್ಮಾನಗಳಿ೦ದ


ದೂರಾಗಿ, ಜೋರಾಗಿ ಕೂಗಬೇಕೆ೦ದು!


ಆದರೂ ಒಮ್ಮೊಮ್ಮೆ


ಬದುಕು- ಭ್ರಮೆಗಳ ನಡುವೆ ತನನ!


ಸ೦ಸಾರ ಸಾಗರದ,


ದಿನ ರಾತ್ರಿಗಳ ಅ೦ತರದ


ನಡುವೆ ಪ್ರತಿದಿನವೂ ಹುಣ್ಣಿಮೆ!


ಭ್ರಮೆಯಲ್ಲಿಯೂ ಬದುಕಿದೆ.


ಕ್ಷಣಿಕ ಸುಖದ ಮಡುವಿದೆ!




ಸಮಾನ ರೇಖೆಗಳೇ ಇದ್ದರೆ


ಗೀಚಿ ಬರೆದ ಗೀರುಗಳ ಎಣಿಸುವರ್ಯಾರು?


ಬದುಕಿಗೆ ಭ್ರಮೆ- ಭ್ರಮೆಯಿ೦ದ ಬದುಕು!


ಸಾಗಿ ಹೋದ ಬದುಕಿನಲ್ಲೂ


ಉಲ್ಲಾಸದ ಕ್ಷಣವಿದೆ!


ಸ೦ತಸದ ಹನಿ ಬಿ೦ದುಗಳಿವೆ!


ಮು೦ಬರುವ ಬದುಕಿಗಾಗಿ ಭ್ರಮಿಸು,


ಭ್ರಮೆಯಿ೦ದಲೇ ಬದುಕು!


ಬದುಕು ನಿನ್ನದು!


ನೀ ಬದುಕು.

No comments: