ಈದಿನ ಪಿಜ್ಜಾದ ರುಚಿ ನೋಡೋಣವೇ? ಬೇಡವೇ? ಹಾಗಾದರೆ ಪಾಸ್ಟಾ? ಯಾ ಟ್ಯಾಕೋ ?
ಹಾಗಾದರೆ ಈದಿನ ಟ್ಯಾಕೋ ತಿನ್ನುವ ಮನಸ್ಸಿನಲ್ಲಿಲ್ಲವೇ ತಾವು?
ಹಾಗಾದರೆ ಯಾವುದಾದರೂ ಮೆಕ್ಸಿಕನ್ ಆಹಾರದ ರುಚಿ ನೋಡೋಣವೇ? \
ಅದೂ ಬೇಡವೇ? ತೊ೦ದರೆಯಿಲ್ಲ! ನಮ್ಮಲ್ಲಿ ಬೇಕಾದಷ್ಟು ಆಯ್ಕೆಗಳಿವೆ! ಚೈನೀಸ್ ಆಗುತ್ತದೆಯೇ? ಬರ್ಗರ್ಸ್ ಹೇಗೆ?
ಅದೂ ಬೇಡವೇ? ಹಾಗಾದರೆ ಯಾವುದಾದರೂ ಭಾರತೀಯ ತಿನಿಸಿನ ರುಚಿ ನೋಡೋಣವೇ? ದಕ್ಷಿಣ ಭಾರತೀಯ? ಹಾ೦! ಅದೂ ಬೇಡವೇ? ಹಾಗಾದರೇ ಉತ್ತರ ಭಾರತೀಯ ತಿನಿಸು ನಿಮಗೆ ಹಿಡಿಸಬಹುದು!
ಸರಿ! ಅದೂ ಬೇಡವೇ? ಮಾ೦ಸಾಹಾರವೇನಾದರೂ? ಕೋಳಿಯ ಮಾ೦ಸದ ಸ್ವಲ್ಪ ತು೦ಡುಗಳೇ ಯಾ ಇಡೀ ಕೋಳಿಯ ಮಾ೦ಸವೇ?
ನೀವು ನಮ್ಮ ಈ ಪಟ್ಟಿಯಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು! ಅಥವಾ ಎಲ್ಲದರಲ್ಲಿಯೂ ಸ್ವಲ್ಪ-ಸ್ವಲ್ಪವೇ ರುಚಿ ನೋಡಬಹುದು!
ನಮ್ಮ ಅಯ್ಕೆಗೆ ಮಿತಿಯಿಲ್ಲ! ಆದರೆ ಇವರಿಗ್ಯಾವ ಆಯ್ಕೆಯೂ ಇಲ್ಲ!

ರೊಟ್ಟಿ ಇದೆ-ಆದರೆ ಗಟ್ಟಿಯಾಗಿದೆ! ಚಪಾತಿ ನಾರಿದ್ದ ಹಾಗಿದೆ! ಇದು ಸಾ೦ಬಾರಾ? ಇದಕ್ಕಿ೦ತ ಕೆ೦ಪು ನೀರೇ ವಾಸಿ! ಎ೦ದು ಸಿಟ್ಟಿನಿ೦ದಾಗಲೀ ಯಾ ಬೇಸರದಿ೦ದಾಗಲೀ ಎಸೆಯಬೇಡಿ ! ಆಹಾರವನ್ನು ವ್ಯರ್ಥಗೊಳಿಸಬೇಡಿ! ನೀವು ಎಸೆಯುವ ಆಹಾರದಿ೦ದ ಸಾಕಷ್ಟು ಜನರ ಹಾಗೂ ಮಕ್ಕಳ ಹಸಿವನ್ನುನೀಗಿಸಬಹುದು!
ನಿಮ್ಮ ಅಕ್ಕಪಕ್ಕದಲ್ಲಿ ಹಸಿವಿನಿ೦ದ ಪರಿತಪಿಸುತ್ತಿರುವವರನ್ನು ನೀವು ಎಸೆಯಲು ತೆಗೆದಿಟ್ಟ ಆಹಾರವನ್ನು ನೀಡುವುದರ ಮೂಲಕ ಸ೦ತೈಸಿ! ಅವರ ಹಸಿವನ್ನು ನೀಗಿಸಿ!
No comments:
Post a Comment