Tuesday, April 27, 2010

ಅಡ್ವಾಣಿ ಹೇಳಿದ ಆ ಮಾತು!! - ೧

      ಅ೦ದು ಅಡ್ವಾಣಿಯವರು ಹೇಳಿದ ಆ ಮಾತು ಭಾರತ ರಾಜಕೀಯ ರ೦ಗದಲ್ಲಿ ತೀವ್ರ ಸ೦ಚಲನವನ್ನೇ ಉ೦ಟುಮಾಡಿತ್ತು.  `` ಪಾಕಿಸ್ತಾನ ದ ಜನಕ ಮುಹಮದ್ ಅಲಿ ಜಿನ್ನ ಒಬ್ಬ ಜಾತ್ಯತೀತ ನಾಯಕನಾಗಿದ್ದರು ` ಎ೦ಬ ಅವರ ಹೇಳಿಕೆ `ಅಡ್ವಾನಿಯವರನ್ನು ನೋಡುವ ಜನರ ಭಾವನೆಗಳಿಗೆ ಧಕ್ಕೆ ಉ೦ಟು ಮಾಡಿದ ಆ ಹೇಳಿಕೆ ಅಡ್ವಾಣಿಯವರನ್ನೇ ಸ್ವತ: ಅಲ್ಲಾಡಿಸಿತು ಕೂಡ. ಅದರ ಸ್ಪಷ್ಟ ಪರಿಣಾಮವನ್ನು ನ೦ತರದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪಡೆದ ಶೋಚನೀಯ ಫಲಿತಾ೦ಶದಲ್ಲಿ ಗಮನಿಸಬಹುದು. ಒ೦ದೆಡೆ ಅಲ್ಲಿಯವರೆಗೂ ಬಾ.ಜ.ಪಾ.ದ ಟ್ರ೦ಪ್ ಕಾರ್ಡ್ ಆಗಿದ್ದ ರಾಜಕೀಯ ಭೀಷ್ಮ ಅಟಲ್ ಜೀ ಯವರ ಗೈರು ಹಾಜರಾತಿ, ಅಡ್ವಾಣಿಯವರು ನೀಡಿದ್ದ ಆ ಹೇಳಿಕೆಗಳು ಸ್ವತ: ಭಾ.ಜ.ಪಾ.. ಶಕ್ತಿಯನ್ನೇ ಅರ್ಧ ಕು೦ದಿಸಿತ್ತು.ಅದರೊ೦ದಿಗೆ, ಭಾ.ಜ.ಪಾ. ನಾಯಕರ ``ತಾನೇ ಮು೦ದೆ ಬರಬೇಕು` ಎನ್ನುವ ಮಹತ್ವಾಕಾ೦ಕ್ಷೆ, ಗು೦ಪುಗಾರಿಕೆ ಮು೦ತಾದ ಕಾರಣಗಳು ಸೇರಿಕೊ೦ಡು ಭಾ.ಜ.ಪಾ. ನಿರ್ವೀರ್ಯಗೊ೦ಡಿತು.

     ನಿಜಕ್ಕೂ ಜಿನ್ನಾ ಒಬ್ಬ ಜಾತ್ಯತೀತ ನಾಯಕರಾಗಿದ್ದರೇ? ಎ೦ಬುದು ಪ್ರಶ್ನೆ. ``ಜಿನ್ನಾ ಜಾತ್ಯತೀತ ನಾಯಕನಾಗಿದ್ದರು`` ಎ೦ಬ ಹೇಳಿಕೆಯೇ ಒ೦ದು ದೊಡ್ಡ ಹಾಸ್ಯ. ಅಡ್ವಾಣಿಯವರ ಆ ಹೇಳಿಕೆಯಲ್ಲಿ ಅಡ್ವಾಣಿಯವರಿಗೆ ತಮ್ಮ ಮೇಲೆಯೇ ಅವರಿಗೆ ಸಾಮರ್ಥ್ಯದ ಮೇಲೆಯೇ ನ೦ಬಿಕೆ ಇಲ್ಲದ್ದಾಗಿರುವ ಸನ್ನಿವೇಶವನ್ನು ನಾವು ಕಾಣಬಹುದು. ಪ್ರಬಲ ಹಿ೦ದುತ್ವದ ಪ್ರತಿಪಾದಕ ರಾಗಿದ್ದ ಅಡ್ವಾನಿಯವರಲ್ಲಿ ಮು೦ಬರುವ ಚುನಾವಣೆಯಲ್ಲಿ ಅಟಲ್ ಜೀ ಯವರ ``ಅಜಾತ ಶತ್ರು``ಇಮೇಜನ್ನು ಗಳಿಸಿಕೊಳ್ಳುವ ಹಾಗೂ ಆಮೂಲಕ ಭಾರತೀಯ ರಾಜಕೀಯ ರ೦ಗದಲ್ಲಿ ತಾವೊಬ್ಬ ಜಾತ್ಯತೀತ ನಾಯಕರೆ೦ದು ತಮ್ಮನ್ನು ಪ್ರತಿಷ್ಟಾಪಿಸಿಕೊಳ್ಳುವ ಮತ್ತು ಅಲ್ಪಸ೦ಖ್ಯಾತರ ಗಮನವನ್ನು ಹಾಗೂ ಮತಗಳನ್ನು ಭಾ.ಜ.ಪಾ.ದತ್ತ ಸೆಳೆಯುವ ಹಪಾಹಪಿಉ೦ಟಾಗತೊಡಗಿತ್ತು. ಆದರೆ ಅದೇ ಬಾ.ಜ.ಪಾ.ದ ಶವಪೆಟ್ಟಿಗೆಗೆ ಹೊಡೆಯುವ ಮೊಳೆಯಾಗಬಹುದು ಎ೦ದು ಸ್ವತ: ಅವರಿಗೆ ಅರಿವಿರಲಿಲ್ಲವೇನೋ?

      ಜಿನ್ನಾರವರು ಜಾತ್ಯತೀತ ನಾಯಕರಾಗಿದ್ದರೇ ಎ೦ಬ ಪ್ರಶ್ನೆಗೆ ಅವರು ಆಗಸ್ಟ್ ೧೧ , ೧೯೪೭ ರ೦ದು ಲಾರ್ಡ್ ಮೌ೦ಟ್ ಬ್ಯಾಟನ್ ಹಾಗೂ ಉನ್ನತ ಬ್ರಿಟೀಷ್ ನಾಯರುಗಳು ಕಲೆತಿದ್ದ ಸ೦ವಿಧಾನ ಸಭೆಯಲ್ಲಿ ಮಾಡಿದ ಆ ಒ೦ದು ಭಾಷಣವೊ೦ದೇ ಉತ್ತರವಾಗಿ ಸಾಕು. ಆ ಭಾಷಣದಲ್ಲಿ ಮುಹಮದ್ ಅಲಿ ಜಿನ್ನಾರವರು ಹೇಳಿದ ಮಾತು - `` ಭವಿಷ್ಯದ ಪಾಕಿಸ್ತಾನದಲ್ಲಿ ಪ್ರತಿಯೊಬ್ಬ ಪ್ರಜೆಯೂ ಧರ್ಮದ ಭೇಧ-ಭಾವ ವಿಲ್ಲದೆ ಸಮಾನವಾಗಿ ಕಾಣಲ್ಪಡುತ್ತಾನೆ ಮತ್ತು ಮುಸ್ಲಿಮರಲ್ಲದವರು ತಮ್ಮ ತಮ್ಮ ಧರ್ಮಗಳನ್ನು ಪಾಲಿಸಲು ಸ್ವತ೦ತ್ರರಾಗಿದ್ದಾರೆ`` ಇದಲ್ಲವೇ ಅವರ ಜಾತ್ಯತೀತತೆ?

ಜಾತ್ಯತೀತತೆ ಅ೦ದರೆ ಏನು?

     ವೆಬ್ ಸ್ಟಾರ್ ಅರ್ಥಕೋಶದಲ್ಲಿ ಜಾತ್ಯತೀತತೆ ಎ೦ದರೆ ``ಎಲ್ಲಾ ತರಹದ ದಾರ್ಮಿಕ ನ೦ಬಿಕೆಗಳು ಹಾಗೂ ಪೂಜೆ-ಪುನಸ್ಕಾರಗಳನ್ನು ನಿರಾಕರಿಸುವ ಒ೦ದು ತತ್ವ`` ಅಥವಾ `` ಧಾರ್ಮಿಕ ನ೦ಬಿಕೆಗಳು ರಾಜ್ಯದ ಯಾವುದೇ ನೀತಿಗಳಲ್ಲೂ ಅದರಲ್ಲಿಯೂ ಮುಖ್ಯವಾಗಿ ಸಾರ್ವಜನಿಕ ಶಿಕ್ಷಣದಲ್ಲಿ ಪ್ರವೇಶಿಸಲೇ ಕೂಡದು ಎ೦ಬ ನ೦ಬಿಕೆಯನ್ನು ಹೊ೦ದಿರುವ ತತ್ವ``

    ಆಕ್ಸ್ ಫರ್ಡ್ ಆ೦ಗ್ಲ ಅರ್ಥಕೋಶದಲ್ಲಿ ಜಾತ್ಯತೀತತೆ ಎ೦ದರೆ `` ದೇವರು ಎ೦ಬ ನ೦ಬಿಕೆಯಿ೦ದ ಉ೦ಟಾಗಬಹುದಾದ ಎಲ್ಲಾ ಆಚರಣೆಗಳನ್ನು , ತತ್ವಗಳನ್ನು ಬದಿಗಿರಿಸಿ, ವರ್ತಮಾನದಲ್ಲಿ ಕೇವಲ ಮಾನವ ಕಲ್ಯಾಣವನ್ನೇ ನೈತಿಕತೆಯನ್ನಾಗಿಸಿಕೊ೦ಡ ಅನುಕರಣೆಯ ತತ್ವ``.

    ``ಸೆಕ್ಯುಲರಿಸಮ್``( ಜಾತ್ಯತೀತತೆ) ಪದದ ಮೂಲ ಜನಕರು ಇ೦ಗ್ಲೆ೦ಡಿನಲ್ಲಿ ೧೯ ನೇ ಶತಮಾನದ ಮು೦ಚೂಣಿಯ ಜಾತ್ಯತೀತ ತತ್ವಗಳ ಪ್ರಚಾರಕರಾಗಿದ್ದ ಜಾರ್ಜ್ ಹೋಲಿಯೋಕ್ ಮತ್ತು ಚಾರ್ಲ್ಸ್ ಬ್ರಾಡ್ ಲಾಘ್. ಹಾಲಿಯೋಕ್ ಪ್ರಕಾರ `` ಮಾನವ ಕರ್ತವ್ಯಗಳ ಆಚರಣೆಗೆ ಯಾ ನಿರ್ವಹಣೆಗೆ ಜಾತ್ಯತೀತ ನಿಬ೦ಧನೆಗಳನ್ನು ಯಾ ಮಾರ್ಗದರ್ಶನಗಳನ್ನು ಪೂರೈಸುವ ಕಾರ್ಯವನ್ನು ಜಾತ್ಯತೀತತೆ ಮಾಡುತ್ತದೆ ಹಾಗೂ ಇದು ಎಲ್ಲರ ಉಧ್ಧಾರ ಹಾಗೂ ಕರ್ತವ್ಯಗಳ ಸಮರ್ಪಕ ನಿರ್ವಹಣೆಯನ್ನು ಒಳಗೊ೦ಡ ಒ೦ದು ಸರ್ವೋಪಯೋಗೀ ನೀತಿಯನ್ನು ಒಳಗೊ೦ಡಿರುತ್ತದೆ``.

     ಕೇವಲ `` ವಿವಿಧ ಧಾರ್ಮಿಕ ನ೦ಬಿಕೆಗಳನ್ನು ಅಚರಿಸುವ ಜನರನ್ನು ಸಮಾನತೆಯಿ೦ದ ನೋಡುವುದೊ೦ದೇ ಜಾತ್ಯತೀತತೆ ಅಲ್ಲ`` ಇದು ಯಾವುದೇ ಧಾರ್ಮಿಕ ನ೦ಬಿಕೆಗಳು ರಾಜಕೀಯ ನೀತಿಗಳನ್ನು ಯಾ ಜನೋಪಯೋಗೀ ಕಲ್ಯಾಣ ಯೋಜನೆಗಳಲ್ಲಿ ಮಧ್ಯೆ ಪ್ರವೇಶಿಸಕೂಡದು. ಇದರಥ೯ ಏನೆ೦ದರೆ, ರಾಜಕೀಯಕ್ಕೂ ಮತ್ತು ಧರ್ಮಕ್ಕೂ ನಡುವೆ ಸದಾ ಅ೦ತರವನ್ನು ಕಾಪಾಡಬೇಕು ಎ೦ಬುದಲ್ಲವೇ? ಆಡಳಿತ ಯ೦ತ್ರ ಜನಾ೦ಗೀಯವಾದವನ್ನು ನಿರಾಕರಿಸಬೇಕುಎ೦ದಲ್ಲವೇ?
     ಈ ಎಲ್ಲಾ ಅ೦ಶಗಳನ್ನು ಗಮನಿಸಿದರೆ ``ಬಾರತೀಯ ಉಪಖ೦ಡದಲ್ಲಿ ಮುಸ್ಲಿ೦ ರಾಷ್ಟ್ರವೊ೦ದರ ನಿರ್ಮಾಣಕ್ಕೆ ತನ್ನ ಜೀವನವನ್ನು ತ್ಯಾಗ ಮಾಡಿದ ಜಿನ್ನಾರವರು ಜಾತ್ಯತೀತ ನಾಯಕರಲ್ಲ ಎ೦ಬುದನ್ನು ನಾವು ಮನಗಾಣಬಹುದು.

ಮುಸ್ಲಿಮರು ಮತ್ತು ಜಾತ್ಯತೀತತೆ:

      ಇಸ್ಲಾ೦ ಕೂಡ ಜಾತ್ಯತೀತತೆಯನ್ನು ಪ್ರೋತ್ಸಾಹಿಸುವುದಿಲ್ಲ. ಇಸ್ಲಾ೦ ಧರ್ಮದ ಪ್ರಕಾರ- ಮಹಮ್ಮದ್ ಪೈಗ೦ಬರ್ ರವರು `` ಪ್ರಪ೦ಚವನ್ನು ಮುನ್ನಡೆಸುವ ಹಾಗೂ ನಿಯ೦ತ್ರಿಸುವ ಒ೦ದು ಕಾನೂನಿನ ಅಸ್ತಿತ್ವದ ಬಗ್ಗೆ ಹೇಳುತ್ತಾರೆ.ಇದು ಪ್ರಪ೦ಚದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಯೊ೦ದು ಜೀವಿಯ ಉಗಮ ಮತ್ತು ಅದರ ನಿರ೦ತರತೆಯ ಕಾರಣವಾದ ಕಾನೂನು. ಅದು ದೇವರು ಅ೦ದರೆ ``ಅಲ್ಲಾ`` ಪೈಗ೦ಬರರ ಪ್ರಕಾರ ದೇವರು ಮಾತ್ರವೇ ನಿಮ್ಮನ್ನು ಸತ್ಯದೆಡೆಗೆ ಮಾರ್ಗದರ್ಶಿಸುತ್ತಾನೆ. ಅವನಿ೦ದ ಕಳುಹಿಸಲ್ಪಟ್ಟ ಅನುಸರಿಸಲು ಅರ್ಹನಾದ ಯಾ ಉತ್ತಮನಾದ ವ್ಯಕ್ತಿಯು ನಿಮ್ಮನ್ನು ಸತ್ಯದೆಡೆಗೆ ಕರೆದೊಯ್ಯುತ್ತಾನೆ (ಖುರಾನ್` ೧೦:೩೫) ಹಾಗೂ ಆ ವ್ಯಕ್ತಿಗೆ ದೇವರು ಮಾರ್ಗದರ್ಶನವನ್ನು ನೀಡುತ್ತಾನೆ. ಅವನು ದೇವರ ಕಾರಣಗಳಿಗಾಗಿ ಹೋರಾಡುತ್ತಾನೆ, ದೇವರಿಗೆ ಯಾರ ಸಹಾಯದ ಅಗತ್ಯವಿಲ್ಲ. (`ಕುರಾನ್` 29:6).

    ಇಸ್ಲ್ಲಾ೦ ಧರ್ಮದ ಪ್ರಕಾರ ಈ ಪ್ರಪ೦ಚದಲ್ಲಿ `` ಅಲ್ಲಾ ನ ನೀತಿಯನ್ನು ಪಾಲಿಸುವುದು ಕಡ್ಡಾಯ ಹಾಗೂ ಮೂಲಭೂತ ರೀತಿ-ರಿವಾಜುಗಳು ಯಾ ಕಾನೂನುಗಳು ಬದಲಾವಣೆಗೆಗೊಳ್ಳುವುದಿಲ್ಲ.ಈ ರೀತಿ –ರಿವಾಜುಗಳು ಪೂಜೆ –ಪುನಸ್ಕಾರ, ಮಾನವ ಸ೦ಬ೦ಧಗಳ ನಿರ್ವಹಣೆಯನ್ನು ಒಳಗೊ೦ಡಿವೆ. ಆದರೆ ಈ ಕಾನೂನುಗಳ ಬಗ್ಗೆ ಜಾತ್ಯತೀತತೆ ಏನು ಹೇಳುತ್ತದೆ?

    ಜಾತ್ಯತೀತತೆಯು ಗ೦ಡು-ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾದ ನ೦ತರ ಅವರನ್ನು ಕೂಡಲೇ ವಯಸ್ಕರ ನೀತಿಯಡಿಯಲ್ಲಿ ತರಲಾಗುತ್ತದೆ. ಕೈಗಾರಿಕೆಗಳ ಮೂಲವಾದ ಬ೦ಡವಾಳವನ್ನು ಸಾಲವಾಗಿ ಪಡೆದು, ಅದಕ್ಕೆ ಬಡ್ದಿಯನ್ನು ಪಾವತಿಸಿವುದನ್ನು( ರೀಬಾ) ಖುರಾನ್ ಒಪ್ಪುವುದಿಲ್ಲ. ಜಾತ್ಯತೀತತೆಯು ಮದ್ಯಪಾನದ ಉಪಭೋಗವನ್ನು ಪ್ರೋತ್ಸಾಹಿಸಿ, ಅದರ ಮಾರಾಟವನ್ನು ಕಾಯಿದೆಯಡಿಯಲ್ಲಿಯೇ ತರುತ್ತದೆ. ಜಾತ್ಯತೀತೆಯು ಆಡಳಿತದಲ್ಲಿ ಹಾಗೂ ಸರ್ಕಾರದ ಯಾವುದೇ ಕಾನೂನುಗಳ ಜಾರಿ ಹಾಗೂ ನಿರ್ವಹಣೆಯಲ್ಲಿ ಧರ್ಮದ ಪ್ರವೆಶವನ್ನು ನಿರಾಕರಿಸುತ್ತದೆ.ಆದರೆ ಇಸ್ಲಾ೦ ಇದನ್ನು ವಿರೋಧಿಸುತ್ತದೆ ಹಾಗೂ ``ಅಲ್ಲಾ ನೇ ಸರ್ವಶಕ್ತ`` ಎನ್ನುತ್ತಾ, ಧರ್ಮಾಧಾರಿತ ರಾಜ್ಯದ ನಿರ್ಮಾಣದಲ್ಲಿ ಅಸಕ್ತಿಯನ್ನು ವಹಿಸುತ್ತದೆ.ಇಸ್ಲಾ೦ ಪ್ರಕಾರ ಜಾತ್ಯತೀತತೆಯನ್ನು ಒಪ್ಪುವುದೆ೦ದರೆ,ಶರಿಯತ್ ಕಾನೂನಿನ ನಿರಾಕರಣೆ ಯಾ ಅವಹೇಳನವೆ೦ದು. ಯಾರಾದರೂ ಜಿನ್ನ ಒಬ್ಬ ಜಾತ್ಯತೀತವಾದಿಯಾಗಿದ್ದನೆ೦ದು ಹೇಳಿದರೆ ಈ ಎಲ್ಲಾ ಅ೦ಶಗಳು ಅವನನ್ನು ಅಮುಸಲ್ಮಾನ ವ್ಯಕ್ತಿಯನ್ನಾಗಿ ಪರಿಗಣನೆಗೆ ತರುತ್ತವೆ.ಆದ್ದರಿ೦ದಲೇ ಜಿನ್ನಾರ ಜಾತ್ಯತೀತತೆಯ ಸ೦ಪೂರ್ಣತೆಯ ಅರಿವಾಗಲು ಇನ್ನಷ್ಟನ್ನು ನಾವು ವಿಮರ್ಶಿಸಲೇಬೇಕಿದೆ.
    ಜಿನ್ನಾ ರು ಆ ಕಾಲದ ಭಾರತೀಯ ಮುಸ್ಲಿಮ್ ರಾಜಕೀಯ ನಾಯಕರಲ್ಲಿಯೇ ಅತ್ಯ೦ತ ಹೆಚ್ಚಿನ ಪಾಶ್ಚಿಮಾತ್ಯ ವಿಚಾರಧಾರೆಗಳನ್ನು ಹೊ೦ದಿದ್ದ ನಾಯಕರಾಗಿದ್ದರು.ಅವರಷ್ಟು ಆಧುನಿಕತೆಯನ್ನು ಅಳವಡಿಸಿಕೊ೦ಡ ಹಾಗೂ ಆಧುನಿಕ ಹೊರಮುಖವನ್ನು ಹೊ೦ದಿದ ಯಾವುದೇ ಬೇರೆ ಮುಸ್ಲಿಮ್ ನಾಯಕರು ಆಗ ಯಾರೂ ಇರಲಿಲ್ಲವೆ೦ದರೆ ತಪ್ಪಾಗಲಿಕ್ಕಿಲ್ಲ.ಭಾರತದಲ್ಲಿ ಸ೦ಪೂರ್ಣವಾಗಿ ಬಾ೦ಬೆ ಮತ್ತು ಲ೦ಡನ್ ಗಳೆ೦ಬ ಮಹಾನಗರಗಳ ಎರಡೂ ಮುಖವನ್ನು ಹೊ೦ದಿದ ಆ೦ಗ್ಗ್ಲೋ-ಇ೦ಡಿಯನ್ ನಾಯಕರಾಗಿದ್ದರು ಅವರು. ಅವರ ರಾಜಕೀಯ ಜೀವನದ ಸುಮಾರು ೪೦ ದಶಕಗಳ ಕಾಲದವರೆಗೂ ಅತ್ಯ೦ತ ಹೆಚ್ಚು ಅಮುಸಲ ನಾಯಕರು ಹಾಗೂ ಆ೦ಗ್ಲ ನಾಯಕರುಗಳೊ೦ದಿಗೆ ಹೊ೦ದಿದ್ದ ಬಾ೦ಧವ್ಯ ಬೇರೆ ಯಾವುದೇ ಮುಸ್ಲಿಮ್ ನಾಯಕನೂ ಹೊ೦ದಿರಲಿಲ್ಲ.ಆದರೆ ಆ ಅವಧಿಯಲ್ಲಿಯೇ ಜಿನ್ನಾ ಜೊರಾಸ್ಟ್ರಿಯನ್ ಹೆಣ್ಣೊಬ್ಬಳನ್ನು ಇಸ್ಲಾ೦ ಧರ್ಮಕ್ಕೆ ಪರಿವರ್ತಿಸಿ ಮದುವೆಯಾದರು. .

     ೧೮೯೭ ರಿ೦ದಲೂ ಜಿನ್ನಾ ಅ೦ಜುಮಾನ್-ಇ-ಇಸ್ಲಾ೦ನೊ೦ದಿಗೆ ತನ್ನನ್ನು ಗುರುತಿಸಿಕೊ೦ಡಿದ್ದರು. ೧೯೧೦ ರಲ್ಲಿ ಮುಸ್ಲಿ೦ ಮೀಸಲು ಕ್ಷೇತ್ರದಿ೦ದ ಇ೦ಪೀರಿಯಲ್ ಕೌನ್ಸಿಲ್ ಗೆ ಆಯ್ಕೆಯಾದ ಜಿನ್ನಾ ಅ೦ದಿನಿ೦ದ ನಡ್ವಾ, ಅಲಿಘರ್ ಮತ್ತು ಅಖಿಲ ಬಾರತ ಮುಸ್ಲಿಮ್ ಲೀಗ್ ನೊ೦ದಿಗೆ ಹೆಚ್ಚೆಚ್ಚು ಸ೦ಪರ್ಕವಿರಿಸಿಕೊ೦ಡರು.೧೯೧೩ ರ ಅಕ್ಟೋಬರ್ ರಲ್ಲಿ ವಿದ್ಯುಕ್ತವಾಗಿ ಮುಸ್ಲಿಮ್ ಲೀಗ್ ಅನ್ನು ಸೇರಿದ ಜಿನ್ನಾ, ೧೯೧೬ ರಲ್ಲಿ ಅದರ ಅಧ್ಯಕ್ಷರೂ ಆದರು. ಅವರ ಅಧ್ಯಕ್ಷತೆಯಲ್ಲಿ ೧೯೧೬ ರ `` ಕಾ೦ಗ್ರೆಸ್-ಮುಸ್ಲಿಮ್ ಲೀಗ್ ಲಕ್ನೋ ಒಡ೦ಬಡಿಕೆ`` ನಡೆದು, ಅದು ಪ್ರತ್ಯೇಕ ಮುಸ್ಲಿಮ್ ಮತದಾರವರ್ಗದ ಉದಯಕ್ಕೆ ಕಾರಣವಾಗಿ, ಮು೦ದಿನ ಪಾಕಿಸ್ತಾನ ಉದಯಕ್ಕೆ ಮೂಲ ಹೇತುವಾಯಿತು. ಭಾರತದ ಸ್ವಾತ೦ತ್ರ್ಯಕ್ಕೆ ಹೋರಾಡುವುದೇ ಜಿನ್ನಾರ ಮೂಲ ಗುರಿಯಾಗಿದ್ದರೂ, ಮುಸ್ಲಿಮರಿಗೆ ರಾಜ್ಯಾಧಿಕಾರ ಕೊಡಿಸುವುದೇ ಅವರ ಕಟ್ಟಕೆಡೆಯ ಗುರಿಯಾಗಿತ್ತು. ೧೯೩೭ ರ ನ೦ತರ ಜಿನ್ನಾ, ಮೊಹಮದ್ ಇಕ್ಬಾಲ್ ರೊ೦ದಿಗೆ (`` ಪಾಕಿಸ್ತಾನ `` ವಿಚಾರದ ತಾತ್ವಿಕ ಜನಕ) ಹೆಚ್ಚಿನ ಸ್ನೇಹ ಬೆಳೆಸಿಕೊ೦ಡರು. ಇಕ್ಬಾಲ್ ರ ಸ್ನೇಹ ಜಿನ್ನಾರನ್ನು ಹೆಚ್ಚೆಚ್ಚು ಪ್ರಭಾವಿತಗೊಳಿಸ ತೊಡಗಿತು. ಜಿನ್ನ ಮುಸ್ಲಿಮ್ ರನ್ನು ಅವರ ಧರ್ಮ,ಸ೦ಸ್ಕ್ರುತಿ,ಭಾಷೆ ಮತ್ತು ನಾಗರೀಕತೆಗಳಿಗೆ ಹೆಚ್ಚೆಚ್ಚು ಒತ್ತುಕೊಟ್ಟು, ಒ೦ದು `` ರಾಷ್ಟ್ರ`` ವೆ೦ದು ಕರೆದರು. ಅವರು ಮುಸಲರಿಗೆ ``ಒ೦ದು ರಾಷ್ಟ್ರವಾಗಿ ಜೀವಿಸಿ ಇಲ್ಲವೇ ಸಾಯಿರಿ`` ಎ೦ದು ಕರೆ ನೀಡಿದರು. ಅವರು ಮುಸ್ಲಿಮ್ ಲೀಗ್ ನ ಬಾವುಟವನ್ನು ``ಇಸ್ಲಾ೦ ನ ಬಾವುಟ`` ವೆ೦ದು ಕರೆದರಲ್ಲದೆ ``ಇಸ್ಲಾ೦ ನಿ೦ದ ಮುಸ್ಲಿಮ್ ಲೀಗ್ ಅನ್ನು ಬೇರ್ಪಡೆಗೊಳಿಸಲು ಸಾಧ್ಯವೇ ಇಲ್ಲ`` ಎ೦ದೂ ಘೋಷಿಸಿದರು.

     ೧೯೩೮ ರ ಗಯಾ ಮುಸ್ಲಿಮ್ ಲೀಗ್ ಸಮಾವೇಶದಲ್ಲಿ ಜಿನ್ನಾ ತಮ್ಮ ಹೊಸ ನೋಟವೊ೦ದನ್ನು ಪ್ರಸ್ತುತ ಪಡಿಸುತ್ತಾ ಹೇಳಿದರು- `` ನಾವು ಯಾವಾಗ `` ಈ ಬಾವುಟವು ಇಸ್ಲಾ೦ ನ ಬಾವುಟವೆ೦ದು ಕರೆಯುತ್ತೇವೋ ಅವರು (ಹಿ೦ದೂಗಳು) ನಾವು ನಮ್ಮ ಹೆಮ್ಮೆಯಾದ ಧರ್ಮವನ್ನು ರಾಜಕೀಯದಲ್ಲಿ ಬೆರೆಸುತ್ತೇವೆ೦ದು ಹೇಳುತ್ತಾರೆ.ಇಸ್ಲಾ೦ ನಮಗೊ೦ದು ಸ೦ಪೂರ್ಣ ನೀತಿಯನ್ನು ನೀಡಿದೆ. ಇದು ಕೇವಲ ಧರ್ಮವಲ್ಲ, ಬದಲಾಗಿ ಕಾನೂನುಗಳು, ತತ್ವಗಳು ಹಾಗೂ ರಾಜಕೀಯವೆಲ್ಲ ವನ್ನೂ ಒಳಗೊ೦ಡಿದೆ.ನಿಜವಾಗಿ ಹೇಳುವುದಾದರೆ ಇದು ಮಾನವನ ಜೀವನದ ಮು೦ಜಾನೆಯಿ೦ದ ರಾತ್ರಿಯವರೆಗಿನ ಎಲ್ಲ ವಿಚಾರಗಳನ್ನೂ ಒಳಗೊ೦ಡಿದೆ``

    ೧೯೩೮ ರಲ್ಲಿ ಡಿಸೆ೦ಬರ್ ೨೬ ರಿ೦ದ ೨೯ ರವರೆಗೆ ಪಾಟ್ನಾದಲ್ಲಿ ನಡೆದ ಮುಸ್ಲಿಮ್ ಲೀಗ್ ನ ಸಮಾವೇಶದಲ್ಲಿ ಜಿನ್ನಾ ಘೋಷಿಸುತ್ತಾರೆ-``೧೯೩೫ ರ ಕಾನೂನಿನ೦ತೆ ಅಧಿಕಾರವನ್ನು ಪಡೆದ ೬-೭ ಪ್ರಾ೦ತ್ಯಗಳಲ್ಲಿನ ಕಾ೦ಗ್ರೆಸ್ ಮ೦ತ್ರಿಗಳ ನಡತೆಯನ್ನು ವೀಕ್ಷಿಸಿದರೆ, ಅವರುಗಳು ಮಕ್ಕಳನ್ನು ``ವ೦ದೇ ಮಾತರಮ್`` ಅನ್ನು ಅದು ಮುಸ್ಲಿಮರ ವಿರುಧ್ಧದ ಹಿ೦ದೂಗಳ ದ್ವೇಷವನ್ನು ತೋರ್ಪಡಿಸುವ ಗೀತೆಯ೦ತಿದ್ದರೂ ಅದನ್ನು ರಾಷ್ಟ್ರೀಯ ಗೀತೆಯೆ೦ದು ಬಲವ೦ತವಾಗಿ ಒಪ್ಪಿಕೊಳ್ಳುವ೦ತೆ ಮಾಡಲಾಗುತ್ತಿದೆ ಎ೦ದು ನನಗನ್ನಿಸುತ್ತದೆ``

    ೧೯೪೦ ರ ಮುಸ್ಲಿಮ್ ಲೀಗ್ ಸಮಾವೇಶದಲ್ಲಿ ಅವರ ``ಪಾಕಿಸ್ತಾನ`` ದ ಬಗ್ಗೆಗಿನ ಐತಿಹಾಸಿಕ ಘೋಷಣೆಯೊ೦ದರಲ್ಲಿ ಜಿನ್ನಾ ತಾವು ಪಾಕಿಸ್ತಾನದ ನಿರ್ಮಾಣದ ಬಗ್ಗೆ ತಳೆದ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ ಹೇಳುತ್ತಾರೆ- ಇಸ್ಲಾ೦ ಮತ್ತು ಹಿ೦ದೂಧರ್ಮ ಗಳು ಅವುಗಳ ಶಬ್ಧಗಳ ನೆಲೆಯಲ್ಲಿ ಧರ್ಮಗಳಲ್ಲ, ಆದರೆ ಅವು ಮಹತ್ವವಾದ ಮತ್ತು ಪರಸ್ಪರ ಭಿನ್ನವಾದ ಎರಡು ಸಾಮಾಜಿಕ ನೀತಿಗಳು.ಏಕೆ೦ದರೆ ಹಿ೦ದೂ ಮತ್ತು ಮುಸಲ್ಮಾನರಿಬ್ಬರೂ ಭಿನ್ನವಾದ ಧಾರ್ಮಿಕ ತತ್ವಗಳು,ಸಾಮಾಜಿಕ ರೀತಿ-ರಿವಾಜುಗಳು,ಲಿಪಿ ಗಳನ್ನು ಹೊ೦ದಿದ್ದು, `` ಎರಡು ಭಿನ್ನವಾದ ನಾಗರೀಕತೆಗಳು, ಹಾಗೂ ಎರಡೂ ಭಿನ್ನವಾದ ಇತಿಹಾಸಗಳಿ೦ದ, ಮಹಾಕಾವ್ಯಗಳಿ೦ದ, ಮಹಾ ನಾಯಕರುಗಳಿ೦ದ ಪ್ರಭಾವಿತವಾದ ಅ೦ಶಗಳನ್ನು ಹೊ೦ದಿದವರಾಗಿದ್ದಾರೆ``



೨ ನೇ ಭಾಗದಲ್ಲಿ ಮು೦ದುವರೆಯುವುದು ........

No comments: